ಕಸ ಗುಡಿಸಲು ಬಳಸುತ್ತಿದ್ದ ಮಲೆನಾಡಿನ ಕಾಡು ಕಡಲೆ ಗಿಡದಲ್ಲಿದೆಯಂತೆ ಔಷಧ ಗುಣ, ಡಿಮ್ಯಾಂಡೋ, ಡಿಮ್ಯಾಂಡ್..
ಚಿಕ್ಕಮಗಳೂರು. ಸೆಪ್ಟೆಂಬರ್, 28: ಮಲೆನಾಡಿನ ರಸ್ತೆಯ ಇಕ್ಕೆಲಗಳಲ್ಲಿ ಬೆಳೆಯುವ ಕಾಡು ಕಡಲೆ ಗಿಡಕ್ಕೆ ಈಗ ಕೇರಳದಲ್ಲಿ ಬೇಡಿಕೆ ಹೆಚ್ಚಿದೆ. ಒಂದು ಕಾಲದಲ್ಲಿ ಕಸ ಪೊರಕೆ ತಯಾರಿಸಲು ಬಳಕೆಯಾಗುತ್ತಿದ್ದ ಗಿಡ ಈಗ ಔಷಧಿ ಬಳಕೆಗೆ ಉಪಯುಕ್ತವಾಗುತ್ತಿರುವುದು ಮಲೆನಾಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ.
ಕೇರಳದಲ್ಲಿ 30 ರೂಪಾಯಿಗೆ ಮಾರಾಟ
ಕರಾವಳಿ ಹಾಗೂ ಕೇರಳದಿಂದ ಬಂದ ಹಲವಾರು ಜನರು ತಮ್ಮ ದ್ವಿಚಕ್ರ ವಾಹನಗಳಲ್ಲಿ ಕಾಫಿನಾಡಿಗೆ ಬಂದು ರಸ್ತೆಯ ಇಕ್ಕೆಲಗಳಲ್ಲಿ ಬೆಳೆಯುವ ಕಾಡು ಕಡಲೆ ಗಿಡವನ್ನು ಬೇರು ಸಮೇತ ಕಿತ್ತುಕೊಂಡು ಹೋಗುತ್ತಿದ್ದಾರೆ. ನಂತರ ಇದನ್ನು ಕರಾವಳಿ ಹಾಗೂ ಕೇರಳದಲ್ಲಿ 30 ರೂಪಾಯಿಗಳಿಗೆ ಮಾರಾಟ ಮಾಡುತ್ತಿದ್ದಾರೆ.

ಹೊರ ರಾಜ್ಯದಲ್ಲಿ ಕಾಡು ಕಡಲೆ ಗಿಡಕ್ಕೆ ಭಾರೀ ಬೇಡಿಕೆ
ಈ ಕಾಡು ಕಡಲೆ ಗಿಡವನ್ನು ಒಂದು ಕಾಲದಲ್ಲಿ ಮಲೆನಾಡಿನಲ್ಲಿ ಕಸ ಗೂಡಿಸಲು ಬಳಸುತ್ತಿದ್ದರು. ಮಲೆನಾಡಿನ ಭತ್ತ ನಾಟಿ ಸಮಯದಲ್ಲಿ ಈ ಗಿಡವನ್ನು ಚೆನ್ನಾಗಿ ಒಣಗಿಸಿ ಪೊರಕೆ ಮಾಡಿಕೊಂಡು ಕಸ ಗುಡಿಸುತ್ತಿದ್ದರು. ಈಗ ಈ ಗಿಡವನ್ನು ಔಷಧಿಗೆ ಬಳಕೆ ಮಾಡುತ್ತಿದ್ದು, ಇದಕ್ಕೆ ಭಾರೀ ಬೇಡಿಕೆ ಬಂದಿದೆ.












Click it and Unblock the Notifications