Y.S.V.Datta: ಕಡೂರು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿದತ್ತಾ ಆಸ್ತಿ ವಿವರ ಇಲ್ಲಿದೆ
ಚಿಕ್ಕಮಗಳೂರು, ಏಪ್ರಿಲ್, 18: ರಾಜ್ಯ ವಿಧಾನಸಭೆ ಚುನಾವಣ ದಿನಾಂಕ ಸಮೀಪಿಸುತ್ತಲೇ ಇದ್ದು, ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಸುವ ಮೂಲಕ ಆಸ್ತಿಯ ವಿವರವನ್ನು ಸಹ ಘೋಷಣೆ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾದ ವೈ.ಎಸ್.ವಿ ದತ್ತಾ ಅವರ ಆಸ್ತಿಯ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಕಡೂರು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದತ್ತಾ ಅವರು ನಾಮಪತ್ರ ಸಲ್ಲಿಸುವ ವೇಳೆ ತಮ್ಮ ಆಸ್ತಿ ವಿವರವನ್ನು ಘೋಷಿಸಿದ್ದು, ಈ ವೇಳೆ ದತ್ತಾ ಅವರ ಬಳಿ ಯಾವುದೇ ವಾಹನ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ದತ್ತ ಅವರು 2 ಲಕ್ಷ ನಗದು, 17.89 ಲಕ್ಷ ಮೌಲ್ಯದ ಚರಾಸ್ತಿ, 2ಕೋಟಿ 94 ಲಕ್ಷ ಸ್ಥಿರಾಸ್ತಿಯನ್ನು ಹೊಂದಿದ್ದಾರೆ.

ಅಲ್ಲದೇ ಬಿಜೆಪಿ ಪಕ್ಷದ ಮಾಜಿ ಸಚಿವ. ಡಿ.ಎನ್. ಜೀವರಾಜ್ ಬಳಿ 8 ಲಕ್ಷ ರೂಪಾಯಿ, ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ 93 ಲಕ್ಷದ 19 ಸಾವಿರ ರೂಪಾಯಿ ಸಾಲ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಜನಾರ್ದನ ರೆಡ್ಡಿ ಆಸ್ತಿಯ ವಿವರ
ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಬಳ್ಳಾತಿ ನಗರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಲಕ್ಷ್ಮೀ ಅರುಣಾ ಸೋಮವಾರ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಅಫಿಡೆವಿಟ್ ಪ್ರಕಾರ ಇವರ ಹೆಸರಿನಲ್ಲಿ ಯಾವುದೇ ಕಾರಿಲ್ಲ. ಹೌದು, ಲಕ್ಷ್ಮೀದೇವಿ ಕಾಲು ಮುರಿದುಕೊಂಡು ಇವರ ಮನೆಯಲ್ಲಿದ್ದರೂ ದಂಪತಿ ಹೆಸರಿನಲ್ಲಿ ಯಾವುದೇ ಕಾರಿಲ್ಲವಂತೆ.
ಬಳ್ಳಾರಿ ನಗರದಿಂದ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಅಭ್ಯರ್ಥಿಯಾಗಿ ಸೋಮವಾರ ನಾಮಪತ್ರ ಸಲ್ಲಿಸಿದ ಬಳಿಕ ಲಕ್ಷ್ಮೀ ಅರುಣಾ, ತಮ್ಮ ಪತಿ ಮತ್ತು ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ನಾಮಪತ್ರ ಸಲ್ಲಿಕೆ ವೇಳೆ ಬರದಿದ್ದಕ್ಕೆ ದುಃಖ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸಲ್ಲಿಸಿರುವ ಮಾಹಿತಿ ಪ್ರಕಾರ, ಗಣಿ ಉದ್ಯಮಿ ಜನಾರ್ದನ ರೆಡ್ಡಿ ದಂಪತಿಯ ಹೆಸರಿನಲ್ಲಿ ಹೆಲಿಕಾಪ್ಟರ್ ಇದ್ದರೂ ಕೂಡ ತಮ್ಮ ಹೆಸರಿನಲ್ಲಿ ಯಾವುದೇ ವಾಹನ ಖರೀದಿಸಿಲ್ಲ.
ಮಾಜಿ ಸಚಿವ ಜನಾರ್ದನ ರೆಡ್ಡಿ ಅವರಿಗಿಂತ ಅವರ ಪತ್ನಿ ಲಕ್ಷ್ಮೀ ಅರುಣಾ ಶ್ರೀಮಂತೆ. ಲಕ್ಷ್ಮೀ ಅರುಣಾ ಅವರ ಚರಾಸ್ತಿ ಮೌಲ್ಯ 96.23 ಕೋಟಿ ರೂಪಾಯಿಗಳು. ಜನಾರ್ದನ ರೆಡ್ಡಿ 29.20 ಕೋಟಿ ರೂ.ಗಳ ಮೌಲ್ಯದ ಚರಾಸ್ತಿ, ಮಗ ಕಿರೀಟಿ ರೆಡ್ಡಿ 7.24 ಕೋಟಿ ರೂ.ಗಳ ಚರಾಸ್ತಿ ಹೊಂದಿದ್ದಾರೆ. ಅವರು 1.76 ಲಕ್ಷ ರೂ. ನಗದು ಹೊಂದಿದ್ದರೆ, ಅವರ ಪತಿ 1.33 ಲಕ್ಷ ರೂ. ಹೊಂದಿದ್ದಾರೆ.
ಇನ್ನು, ಲಕ್ಷ್ಮೀ ಅರುಣಾ 104.38 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ, ಜನಾರ್ದನ ರೆಡ್ಡಿ ಹೆಸರಿನಲ್ಲಿ 8 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಮತ್ತು ಮಗ ಕಿರೀಟಿ ರೆಡ್ಡಿ 1.24 ಕೋಟಿ ರೂ.ಗಳ ಮೌಲ್ಯದ ಸ್ಥಿರಾಸ್ತಿ ಹೊಂದಿದ್ದಾರೆ ಎಂದು ಅಫಿಡವಿಟ್‍ನಲ್ಲಿ ತಿಳಿಸಲಾಗಿದೆ. ಆಸ್ತಿಯಲ್ಲೂ ಪತಿಗಿಂತ ಪತ್ನಿಯೇ ಹೆಚ್ಚು ಹೊಂದಿದ್ದು, ವಿವಿಧ ಕಂಪನಿಗಳಲ್ಲಿ ಕೋಟ್ಯಂತರ ರೂ. ಹೂಡಿಕೆ ಮಾಡಿದ್ದಾರೆ.
ಲಕ್ಷ್ಮೀ ಅರುಣಾ ಅವರು ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 29.55 ಕೋಟಿ ರೂ.ಗಳನ್ನು, ಬ್ರಾಹ್ಮಣಿ ಇಂಡಸ್ಟ್ರೀಸ್‍ನಲ್ಲಿ 25.08 ಕೋಟಿ ರೂ., ಮುದಿತಾ ಪ್ರಾಪರ್ಟಿಸ್‍ನಲ್ಲಿ 18.27 ಕೋಟಿ ರೂ., ಟುಲ್ಲರ್ ರಿವಿಟ್ಸ್ ಕಂಪನಿಯಲ್ಲಿ 1 ಕೋಟಿ ರೂ.ಗಳು, ಕಿರೀಟಿ ಏವಿಯೇಷನ್ ಪ್ರೈ.ಲಿ.ನಲ್ಲಿ 1 ಕೋಟಿ ರೂ., ಓಡಿಸ್ಸಿ ಕಾರ್ಪೋರೇಷನ್ ಲಿಮಿಟೆಡ್‍ನಲ್ಲಿ 3.42 ಕೋಟಿ ರೂ.ಗಳು, ಆದಿತ್ಯ ಬಿರ್ಲಾ ವಿಮಾ ಕಂಪನಿಯಲ್ಲಿ 44 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ.
ಚಿನ್ನಾಭರಣದಲ್ಲೂ ಪತಿಗಿಂತ ಪತ್ನಿ ಲಕ್ಷ್ಮೀ ಅರುಣಾ ಮೇಲುಗೈ ಸಾಧಿಸಿದ್ದಾರೆ. ಲಕ್ಷ್ಮೀ ಅರುಣಾ ಅವರು 77.20 ಲಕ್ಷ ರೂ. ಮೌಲ್ಯದ 2,58,237 ಗ್ರಾಂ ಬೆಳ್ಳಿ ಆಭರಣ, 16. 44 ಕೋಟಿ ರೂ. ಮೌಲ್ಯದ 38,486 ಗ್ರಾಂ ಚಿನ್ನ ಹಾಗೂ ಡೈಮಂಡ್ ಆಭರಣಗಳನ್ನು ಹೊಂದಿದ್ದಾರೆ. ಜನಾರ್ದನ ರೆಡ್ಡಿ ಅವರು 32.18 ಲಕ್ಷ ರೂ. ಮೌಲ್ಯದ 1,78,741 ಗ್ರಾಂ ಬೆಳ್ಳಿ ಆಭರಣ, 7.93 ಕೋಟಿ ರೂ. ಮೌಲ್ಯದ 46,258 ಗ್ರಾಂ ಚಿನ್ನಾಭರಣ ಹಾಗೂ ಡೈಮಂಡ್ ಹೊಂದಿದ್ದಾರೆ.
ಲಕ್ಷ್ಮೀ ಅರುಣಾ ಅವರಂತೆಯೇ ಜನಾರ್ದನ ರೆಡ್ಡಿ ಓಬಳಾಪುರಂ ಮೈನಿಂಗ್ ಕಂಪನಿಯಲ್ಲಿ 19.58 ಕೋಟಿ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಲಕ್ಷ್ಮೀ ಅರುಣಾ ಆಕ್ಸಿಜನ್ ಕೋ.ಪ್ರೈ.ಲಿ.ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಪವರ್ ಕಾರ್ಪೋರೇಷನ್ ಲಿಮಿಟೆಡ್‌ನಲ್ಲಿ 2.50 ಲಕ್ಷ ರೂ.ಗಳು, ಕಿರೀಟಿ ಏವಿಯೇಷನ್ ಪ್ರೈ.ಲಿ.ನಲ್ಲಿ ಒಂದು ಕೋಟಿ ರೂ. ವ್ಯಯಿಸಿದ್ದಾರೆ.
ಅಭ್ಯರ್ಥಿ ಲಕ್ಷ್ಮೀ ಅರುಣಾ ಅವರು ಚರಾಸ್ತಿ ಮೇಲೆ 96.23 ಕೋಟಿ ರೂ, ಮತ್ತು ಸ್ಥಿರಾಸ್ತಿ ಮೇಲೆ 74.89 ಕೋಟಿ ರೂ. ಸಾಲ ಹೊಂದಿದ್ದಾರೆ. ಜನಾರ್ದನ ರೆಡ್ಡಿ ಒಟ್ಟು 34.61 ಕೋಟಿ ರೂ., ಮಗ ಕಿರೀಟಿ ರೆಡ್ಡಿ 7.66 ಕೋಟಿ ರೂ.ಗಳ ಸಾಲ ಹೊಂದಿದ್ದಾರೆ.
-
Bengaluru: ಬೆಳ್ಳಂಬೆಳಗ್ಗೆ ಬೆಂಗಳೂರಿನ ಸಮಸ್ಯೆಗಳು: ಬೇರೆ ಊರುಗಳಿಂದ ಬಂದ ಮೆಜೆಸ್ಟಿಕ್ನಲ್ಲಿ ಸಂಕಷ್ಟ, 7 ಪ್ರಮುಖ ಸಂಕಷ್ಟಗಳು -
Karnataka Weather: ಇಂದು ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆ -
Jobs: ಕಂದಾಯ ಇಲಾಖೆಯಲ್ಲಿ 500 ಹೊಸ ಗ್ರಾಮ ಆಡಳಿತ ಅಧಿಕಾರಿ ಹುದ್ದೆಗಳಿಗೆ ಶೀಘ್ರದಲ್ಲೇ ನೇಮಕಾತಿ -
March 24 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
ಕೂಲಿಗೆ ಹೋಗಿದ್ದ ವಿದ್ಯಾರ್ಥಿನಿಯನ್ನು ದ್ರಾಕ್ಷಿ ತೋಟದಿಂದಲೇ ಕರೆತಂದು SSLC ಪರೀಕ್ಷೆ ಬರೆಸಿದ ಗದಗ ಬಿಇಒ -
Bengaluru Land: ಕಾಡುಗೋಡಿಯಲ್ಲಿ 78 ಜಾಗ ಹಿಂತಿರುಗಿಸುವಂತೆ ಎಂಬೆಸ್ಸಿಗೆ ಕೆಐಎಸಿಬಿ ಆದೇಶ -
Train Ticket: ರೈಲು ಟಿಕೆಟ್ ರದ್ದತಿ, ಮರುಪಾವತಿ ರೂಲ್ಸ್ ಬದಲಾವಣೆ: ಏಪ್ರಿಲ್ನಿಂದ ಹೊಸ ನಿಯಮ -
Mutton: ಕುಕ್ಕರ್ 20 ಬಾರಿ ಕೂಗಿದರೂ ಬೇಯದ ತಲೆ ಮಟನ್: ಪೊಲೀಸ್ ಠಾಣೆಗೆ ಪಾತ್ರೆ ಹಿಡಿದು ಬಂದು ರಾದ್ಧಾಂತ -
Viral Post: 'ಬೆಂಗಳೂರು ಟ್ರಾಫಿಕ್' ಕಿರಿಕಿರಿ ತಪ್ಪಿಸಲು ಆಫೀಸ್ನಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವ ಮಹಿಳೆ -
Gas: ಬೆಳಗಾವಿಯಲ್ಲಿ ಸಿಲಿಂಡರ್, ಇಂಧನ ಲಭ್ಯತೆಯ ಬಗ್ಗೆ: ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅಪ್ಡೇಟ್ಸ್ -
Liquor Ban: ಬೆಂಗಳೂರಲ್ಲಿ 48 ಗಂಟೆಗಳ ಕಾಲ ಮದ್ಯ ಮಾರಾಟ ನಿಷೇಧ, ಎಲ್ಲೆಲ್ಲಿ - ಯಾಕೆ ಇಲ್ಲಿದೆ ಮಾಹಿತಿ -
Bengaluru property: ಬೆಂಗಳೂರು ಆಸ್ತಿ ತೆರಿಗೆ ಬಾಕಿದಾರರಿಗೆ ಇದೀಗ ಬಿಗ್ ಶಾಕ್: ಪಾಲಿಕೆಗಳೇ ಆಸ್ತಿ ಖರೀದಿ












Click it and Unblock the Notifications