ತುಂಗಾ ನದಿ ದಡದಲ್ಲಿ ನಾಪತ್ತೆಯಾಗಿದ್ದ ಇಂಜಿನಿಯರ್ ಮುಂಬೈನಲ್ಲಿ ಪ್ರೇಯಸಿ ಜೊತೆ ಪ್ರತ್ಯಕ್ಷ
ಚಿಕ್ಕಮಗಳೂರು, ಡಿಸೆಂಬರ್ 27: ಕೇರಳ ಮೂಲದ ಇಂಜಿನಿಯರ್ ಸಂದೀಪ್ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ನಾಪತ್ತೆಯಾಗಿದ್ದ ಇಂಜಿನಿಯರ್ ಮುಂಬೈನ ಲಾಡ್ಜ್ ವೊಂದರಲ್ಲಿ ತನ್ನ ಪ್ರೇಯಸಿ ಜೊತೆ ಪ್ರತ್ಯಕ್ಷವಾಗಿದ್ದಾನೆ. ಹೌದು, ಕಳೆದ ತಿಂಗಳು ಕೊಪ್ಪ ತಾಲೂಕಿನ ಹರಿಹರಪುರದ ತುಂಗಾ ನದಿ ದಡದಲ್ಲಿ ಸಂದೀಪ್ ಬೈಕ್ ಪತ್ತೆಯಾಗಿತ್ತು.ಆಗ ಸಂದೀಪ್ ನದಿಯಲ್ಲಿ ಮುಳುಗಿ ಸಾವನಪ್ಪಿರುವ ಶಂಕೆ ವ್ಯಕ್ತವಾಗಿತ್ತು.
ಸಂದೀಪ್ ಕೇರಳದ ಖಾಸಗಿ ಜಾಹೀರಾತು ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಇದೀಗ ಕೇರಳ ಪೊಲೀಸರಿಗೆ ಮುಂಬೈ ನಲ್ಲಿ ಸಿಕ್ಕಿಬಿದ್ದಿದ್ದಾರೆ.

ಸಂದೀಪ್ ಪ್ರೇಯಸಿ ಸಹ ನಾಪತ್ತೆಯಾಗಿರೋ ಬಗ್ಗೆ ಕೇರಳದಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ನಾಪತ್ತೆಯಾಗಿರೋ ಬಗ್ಗೆ ಕೇರಳದಲ್ಲಿಯೇ ಪ್ರಕರಣ ದಾಖಲಾಗಿತ್ತು.












Click it and Unblock the Notifications