ಬಯಲಾಯ್ತು ಕಳಸ ಅರಣ್ಯಾಧಿಕಾರಿಯ ಬಣ್ಣ, ಅರಣ್ಯ ರಕ್ಷಕನ ಮೇಲೆಯೇ ಹಲ್ಲೆ!

ಚಿಕ್ಕಮಗಳೂರು, ಫೆಬ್ರವರಿ 15: ಸಮವಸ್ತ್ರದಲ್ಲಿದ್ದ ಅರಣ್ಯ ರಕ್ಷಕನಿಗೆ ಕಚೇರಿಯಲ್ಲಿಯೇ ಅರಣ್ಯಾಧಿಕಾರಿ ಹಲ್ಲೆ ನಡೆಸಿರುವ ಘಟನೆ ಮೂಡಿಗೆರೆ ತಾಲೂಕಿನ ಕಳಸ ವಲಯ ಅರಣ್ಯಾಧಿಕಾರಿ ಕಚೇರಿಯಲ್ಲಿ ನಡೆದಿದೆ.

ನಕಲಿ ದಾಖಲೆಗಳಗೆ ಸಹಿ ಮಾಡಲು ನಿರಾಕರಿಸಿದ್ದಕ್ಕೆ ಉಪ ವಲಯ ಅರಣ್ಯಾಧಿಕಾರಿ ಎಂ ವೀರಭದ್ರಪ್ಪ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕಚೇರಿಯಲ್ಲಿಯೇ ಶರ್ಟ್ ಕಾಲರ್ ಹಿಡಿದು ಹಲ್ಲೆ ನಡೆಸಿರುವ ವೀಡಿಯೋವನ್ನು ಮೊಬೈಲ್ ನಲ್ಲಿ ಸೆರೆ ಹಿಡಿಯಲಾಗಿದ್ದು, ಅರಣ್ಯಾಧಿಕಾರಿಯ ಬಣ್ಣ ಈ ಮೂಲಕ ಬಯಲಾಗಿದೆ.

ಇನ್ನು ಹಲ್ಲೆಗೊಳಗಾದ ಕೀರ್ತನ್ ಕಳಸ ಪ್ರಾಥಮಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಹಲ್ಲೆಗೊಳಗಾದ ಕೀರ್ತನ್ ಕಳಸ ವಲಯದ ಬಾಳೆಹೊಳೆ ಶಾಖೆಯ ತೋಟದೂರು ಬೀಟ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದರು.

Kalasa zone forest officer attacked on forest defender

ನಿನ್ನೆ ಗುರುವಾರ (ಫೆ14) ಸರ್ಕಾರಿ ಜಮೀನು ಅಕ್ರಮ ಸಕ್ರಮ ಕುರಿತಂತೆ 94 (ಸಿ) ಪ್ರಕರಣದಡಿಯಲ್ಲಿ ಇಲಾಖೆ ಅಭಿಪ್ರಾಯ ಕುರಿತು ಪಂಚನಾಮೆ, ನಕಾಶೆಗಳನ್ನು ವೀರಭದ್ರಪ್ಪ ತಾವೇ ತಯಾರಿಸಿ ಅವುಗಳನ್ನು ತೋರಿಸದೇ ದಾಖಲೆಗಳನ್ನು ಮುಚ್ಚಿಟ್ಟು ಅರಣ್ಯ ರಕ್ಷಕರಿಗೆ ಸಹಿ ಹಾಕಲು ಒತ್ತಾಯ ಮಾಡಿದ್ದು, ಸಹಿ ಮಾಡಲು ನಿರಾಕರಿಸಿದಾಗ ಅರಣ್ಯ ರಕ್ಷಕರ ಮೇಲೆ ಹಲ್ಲೆ ಮಾಡಿರುವುದಾಗಿ ಆರೋಪಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+