ಕಡೂರು: ಕ್ಯಾಂಟೀನ್ ಮಾಲೀಕನಿಂದ ಉಚಿತ ಆ್ಯಂಬುಲೆನ್ಸ್ ಸೇವೆ: ಇದರ ಹಿಂದಿನ ಉದ್ದೇಶ ಏನು?
ಚಿಕ್ಕಮಗಳೂರು ಜಿಲ್ಲೆ ಕಡೂರಿನ ಕ್ಯಾಂಟೀನ್ ಮಾಲೀಕರೊಬ್ಬರು ಜನರಿಗೆ ಉಚಿತ ಆಂಬ್ಯುಲೆನ್ಸ್ ಸೇವೆ ನೀಡಿ ಗಮನ ಸೆಳೆದಿದ್ದಾರೆ. ಹಾಗಾದರೆ ಇದರ ಹಿಂದಿನ ಉದ್ದೇಶ ಏನೆಂದು ತಿಳಿಯಿರಿ.
ಚಿಕ್ಕಮಗಳೂರು, ಮಾರ್ಚ್, 05: ಕಡೂರಿನಲ್ಲಿ ಮಂಜುನಾಥ್ ಎನ್ನುವವವರು ಕ್ಯಾನ್ಸರ್‌ನಿಂದ ಬಳಲುತ್ತಿದ್ದ ತನ್ನ ತಂದೆಯನ್ನು ಹೊತ್ತುಕೊಂಡು ಊರೂರು ಅಲೆದಿದ್ದರು. ಆದರೆ ಒಂದು ದಿನ ತನ್ನ ಅಪ್ಪನ ಪರಿಸ್ಥಿತಿ ಚಿಂತಾಜನಕವಾಗಿದ್ದು, ಮಂಜುನಾಥ್ ಆತ ಕೂಡಲೇ ತನ್ನ ಅಪ್ಪನನ್ನು ಆಸ್ಪತ್ರೆಗೆ ಕರೆತಂದಿದ್ದ.
ಆಸ್ಪತ್ರೆಗೆ ಕರೆ ಮಾಡಿದರೆ ಅಲ್ಲಿ ಆ್ಯಂಬುಲೆನ್ಸ್ ಇರಲಿಲ್ಲ. ಖಾಸಗಿ ಆ್ಯಂಬುಲೆನ್ಸ್ಗಳಿಗೆ ಕರೆ ಮಾಡಿದರೆ 8-10 ಸಾವಿರ ರೂಪಾಯಿ ಆಗುತ್ತದೆ ಎಂದು ಹೇಳಿದ್ದರು. ಆಗ ಯಾವುದೇ ಪರ್ಯಾಯ ದಾರಿ ಇಲ್ಲದೆ ಮಂಜುನಾಥ್ ತನ್ನ ತಂದೆಯನ್ನು ಖಾಸಗಿ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದ. ಆದರೆ ಐದೇ ದಿನಕ್ಕೆ ಅಪ್ಪ ತೀರಿಕೊಂಡರು. ಆಗಿನಿಂದ ಮಂಜುನಾಥ್ ಬೇರೆ ಜೀವಗಳಿಗೆ ತೊಂದರೆ ಆಗಬಾರದು ಎನ್ನುವ ಉದ್ದೇಶದಿಂದ ತನ್ನ ಅಂಗಡಿ ಮುಂದೆಯೇ ಐದೂವರೆ ಲಕ್ಷ ರೂಪಾಯಿಯ ಆ್ಯಂಬುಲೆನ್ಸ್ ಅನ್ನು ತಂದು ನಿಲ್ಲಿಸಿಕೊಂಡಿದ್ದಾನೆ.
ಆಗಿನಿಂದ ಈತ ಕ್ಯಾಂಟೀನ್ ಮಂಜಣ್ಣ ಎಂದೇ ಚಿರಪಚಿತನಾಗಿದ್ದಾನೆ. ಈತ ಚಿಕ್ಕಮಗಳೂರು ಜಿಲ್ಲೆ ಕಡೂರು ಪಟ್ಟಣದ ನಿವಾಸಿಯಾಗಿದ್ದಾನೆ. ಮೂರ್ನಾಲ್ಕು ವರ್ಷದ ಹಿಂದೆ ಇವರ ತಂದೆ ಕ್ಯಾನ್ಸರ್ ಹಾಗೂ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು. ಆಗ ನಮ್ಮ ತಂದೆಗೆ ಕರ್ನಾಟಕದಲ್ಲಿ ತೋರಿಸದ ಆಸ್ಪತ್ರೆಯೇ ಇಲ್ಲ. ಆದರೆ ತಂದೆಗೆ ತೀರಾ ಹುಷಾರಿಲ್ಲದ ಕಾರಣ ಆಸ್ಪತ್ರೆಗೆ ಹೋದಾಗ ಆಸ್ಪತ್ರೆಯಲ್ಲಿ ಆ್ಯಂಬುಲೆನ್ಸ್ ಇರಲಿಲ್ಲ.

ಕೆಲವೇ ದಿನಗಳಲ್ಲಿ ಮಂಜುನಾಥ್ ತಂದೆ ಸಾವು
ಆಗ ಖಾಸಗಿ ಆ್ಯಂಬುಲೆನ್ಸ್‌ನವರು ಬಾಯಿಗೆ ಬಂದ ಹಾಗೆ ಹಣವನ್ನು ಕೇಳಿದ್ದರು. ಹೇಗೋ ತಂದೆಯನ್ನು ಆಸ್ಪತ್ರೆಗೆ ಸೇರಿಸಿದ್ದರು. ಆದರೆ ಅವರು ಕೆಲವೇ ದಿನಗಳಲ್ಲಿ ಸಾವನ್ನಪ್ಪಿದರು. ಅದೇ ನೋವಿನಲ್ಲಿ ನನಗೆ ಬಂದ ಪರಿಸ್ಥಿತಿ ಯಾರಿಗೂ ಬರಬಾರದು ಎಂದು ತಾನೇ ಒಂದು ಆ್ಯಂಬುಲೆನ್ಸ್ ತಂದು ಕ್ಯಾಂಟೀನ್ ಮುಂದೆ ನಿಲ್ಲಿಸಿಕೊಂಡಿದ್ದಾರೆ.

ಉಚಿತವಾಗಿ ಆ್ಯಂಬುಲೆನ್ಸ್ ಸೇವೆ
ಯಾವುದೇ ಹೊತ್ತಲ್ಲಿ, ಯಾರೇ ಬಂದು ಸಹಾಯ ಕೇಳಿದರೂ ಒಂದು ರೂಪಾಯಿ ಹಣವಿಲ್ಲದೆ ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಅಂತಾ ಕಳಿಹಿಸುತ್ತಾರೆ. ಅಂದು ನನ್ನ ತಂದೆಗೆ ಆರೋಗ್ಯ ಸಮಸ್ಯೆ ಇದ್ದಾಗ ಆ್ಯಂಬುಲೆನ್ಸ್ ಸಿಗಲಿಲ್ಲ. ಇಂದು ನಾನು ಆ್ಯಂಬುಲೆನ್ಸ್ ಕೇಳಿದವರಿಗೆ ಇಲ್ಲ ಅನ್ನಲ್ಲ. ಪೆಟ್ರೋಲ್‍ಗೂ ಹಣ ಇಲ್ಲ ಅಂದರೆ ನಾವೇ ಹಾಕಿಸಿ ಕಳಿಹಿಸುತ್ತೇವೆ. ಈ ಕೆಲಸ ನನ್ನ ಮನಸ್ಸಿಗೆ ತುಂಬಾ ಸಂತೋಷ ಕೊಡುತ್ತದೆ ಎಂದರು.

5.6 ಲಕ್ಷ ರೂ. ಕೊಟ್ಟು ಆ್ಯಂಬುಲೆನ್ಸ್ ಖರೀದಿ
ಕೊರೊನಾ ಸಂದರ್ಭದಲ್ಲೂ ಸರಿಯಾದ ಸಮಯಕ್ಕೆ ಆ್ಯಂಬುಲೆನ್ಸ್ ಸಿಗದೆ ಎಷ್ಟೋ ಜನ ಸಾವನ್ನಪ್ಪಿದ್ದಾರೆ. ಆದ್ದರಿಂದ ನಾನೇ ಐದೂರವರೆ ಲಕ್ಷದ ಆ್ಯಂಬುಲೆನ್ಸ್ ತಂದು ಕ್ಯಾಂಟೀನ್ ಮುಂದೆಯೇ ನಿಲ್ಲಿಸಿಕೊಂಡಿದ್ದೇನೆ ಎಂದರು. ಈ ಆ್ಯಂಬುಲೆನ್ಸ್‌ನಲ್ಲಿ ಆಕ್ಸಿಜನ್, ಟ್ರೀಟ್‍ಮೆಂಟ್ ಕಿಟ್ ಎಲ್ಲವೂ ಇದೆ. ಯಾರೇ ಬಂದು ಕೇಳಿದರೂ ಇದನ್ನು ಇಲ್ಲ ಅನ್ನಲ್ಲ. ಪೆಟ್ರೋಲ್ ಹಾಕಿಸಿಕೊಂಡು ಹೋಗಿ ಅಂತಾ ಡ್ರೈವರ್ ಜೊತೆ ಕಳಿಹಿಸುತ್ತಾರೆ.

30ಕ್ಕೂ ಹೆಚ್ಚು ಡ್ರೈವರ್‌ಗಳಿದ್ದಾರೆ
ಡ್ರೈವರ್ ಬ್ಯಾಟ ಕೂಡ ಕೇಳುವುದಿಲ್ಲ. ಅವರೇ ಪ್ರೀತಿಯಿಂದ ಕೊಟ್ಟರೆ ಮಾತ್ರ ಹಣವನ್ನು ಪಡೆಯುತ್ತಾರೆ. ಈ ಕ್ಯಾಂಟೀನ್ ಮಂಜಣ್ಣನವರು ಸ್ಲಂನಲ್ಲಿ ವಾಸವಾಗಿದ್ದಾರೆ. ಅದೇ ಸ್ಲಂನಲ್ಲಿ ಸುಮಾರು 30ಕ್ಕೂ ಹೆಚ್ಚು ಡ್ರೈವರ್‌ಗಳು ಇದ್ದಾರೆ. ಅವರು ಕೂಡ ಯಾವುದೇ ಹೊತ್ತಲ್ಲಿ ಹೋಗಿ ಸಹಾಯ ಕೇಳಿದರೂ ಇಲ್ಲ ಅನ್ನುವುದಿಲ್ಲ.
ಕಳೆದ ಆರು ತಿಂಗಳಿನಿಂದ ತಂದೆ ಹೆಸರಿನಲ್ಲಿ ಆ್ಯಂಬುಲೆನ್ಸ್ ಬಿಟ್ಟಿರುವ ಇವರು ಈವರೆಗೆ 35ಕ್ಕೂ ಹೆಚ್ಚು ಜನರಿಗೆ ಉಚಿತವಾಗಿ ಕಳಿಸಿದ್ದಾರೆ. ಚಿಕ್ಕ ಕ್ಯಾಂಟೀನ್ ಜೊತೆ ಟ್ರ್ಯಾಕ್ಟರ್ ಹಾಗೂ ಲಾರಿ ಇದೆ. ಅದರಲ್ಲಿ ಬಂದಂತಹ ಲಾಭದ ಹಣ ಹಾಗೂ ಕ್ಯಾಂಟೀನ್‍ನಲ್ಲಿ ಬಂದ ಹಣವನ್ನ ಕೂಡಿಟ್ಟು ಆ್ಯಂಬುಲೆನ್ಸ್ ತಂದು ಸಾರ್ವಜನಿಕ ಸೇವೆಗೆ ಬಿಟ್ಟಿದ್ದಾರೆ. ಇವರ ಈ ಕೆಲಸಕ್ಕೆ ಸ್ಥಳೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆ, ಸೇವಾ ಮನೋಭಾವಕ್ಕೆ ಹಣ ಬೇಡ. ಮನಸ್ಸು ಬೇಕಷ್ಟೇ. ಕೆಲವರು ತಮ್ಮ ಮನೆಯಲ್ಲಿ ಕೋಟಿ-ಕೋಟಿ ಕೊಳೆಯುತ್ತಿದರೂ ನೂರು ರೂಪಾಯಿ ಕೊಡುವುದಕ್ಕೆ ಮೀನಾಮೇಷ ಎಣಿಸುತ್ತಾರೆ. ಆದರೆ ಕಡೂರಿನ ಮಂಜುನಾಥ್ ಮಾತ್ರ ಆ್ಯಂಬುಲೆನ್ಸ್ ಅನ್ನು ಉಚಿತವಾಗಿ ಬಿಡುವ ಮೂಲಕ












Click it and Unblock the Notifications