ಡಾ. ರೇವಂತ್‌ಗೆ ಪತ್ನಿ ಕೊಲೆಯ ಐಡಿಯಾ ಕೊಟ್ಟಿದ್ದು ಹರ್ಷಿತಾ!

ಚಿಕ್ಕಮಗಳೂರು, ಫೆಬ್ರವರಿ 26 : ರಾಜ್ಯಾದ್ಯಂತ ಚರ್ಚೆಗೆ ಕಾರಣವಾಗಿರುವ ಡಾ. ರೇವಂತ್ ಪತ್ನಿ ಕವಿತಾ ಕೊಲೆ ಪ್ರಕರಣದ ಬಗ್ಗೆ ಚಿಕ್ಕಮಗಳೂರು ಪೊಲೀಸರು ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ. ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ ಎಂದು ಹೇಳಿದ್ದಾರೆ.

ಬುಧವಾರ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಕಡೂರು ಪೊಲೀಸ್ ಠಾಣೆಯಲ್ಲಿ ಕವಿತಾ ಕೊಲೆ ಪ್ರಕರಣದ ಕುರಿತು ಪ್ರಕರಣ ದಾಖಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೊಲೀಸರು ಚಿನ್ನದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿಸಿದ್ದಾರೆ.

ಡಾ. ರೇವಂತ್ ತನ್ನ ಪ್ರೇಯಸಿ ಹರ್ಷಿತಾಳಿಗೆ ಬೀರೂರಿನಿಂದ ಕೋರಿಯರ್ ಒಂದರ ಮೂಲಕ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕಳುಹಿಸಿದ ಬಗ್ಗೆ ಮಾಹಿತಿ ಸಂಗ್ರಹಿಸಿದ ತನಿಖಾ ತಂಡ ಬೆಂಗಳೂರಿಗೆ ತೆರಳಿ ಹರ್ಷಿತಾ ಮನೆಯಲ್ಲಿ ಸುಮಾರು 4,50000 ಲಕ್ಷ ಮೌಲ್ಯದ ಚಿನ್ನದ ಆಭರಣ ಹಾಗೂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದ್ದಾರೆ.

ಫೆಬ್ರವರಿ 17ರಂದು ಕವಿತಾಳನ್ನು ಹತ್ಯೆ ಮಾಡಿದ್ದ ಡಾ. ರೇವಂತ್ ಐದು ದಿನಗಳ ಬಳಿಕ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಡಾ. ರೇವಂತ್ ಆತ್ಮಹತ್ಯೆ ವಿಚಾರ ತಿಳಿಯುತ್ತಿದ್ದಂತೆ ಫೆಬ್ರವರಿ 22ರಂದು ಹರ್ಷಿತಾ ಬೆಂಗಳೂರಿನ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.

ಹರ್ಷಿತಾ ಕುಮ್ಮಕ್ಕಿನಿಂದ ಕೊಲೆ

ಹರ್ಷಿತಾ ಕುಮ್ಮಕ್ಕಿನಿಂದ ಕೊಲೆ

ಪೊಲೀಸರು ಹೇಳುವ ಪ್ರಕಾರ ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ವಾಸವಾಗಿದ್ದ ಹರ್ಷಿತಾಳೊಂದಿಗೆ ಅಕ್ರಮ ಸಂಬಂಧವಿದ್ದು ತನ್ನ ಹೆಂಡತಿ ಕವಿತಾ ಅಡ್ಡಿಪಡಿಸುತ್ತಾಳೆಂಬ ಉದ್ದೇಶದಿಂದ ತನ್ನ ಪ್ರೇಯಸಿ ಹರ್ಷಿತಾ ಕುಮ್ಮಕ್ಕಿನಿಂದ ಸಂಚು ಸೃಷ್ಠಿಸಿ ಹತ್ಯೆ ಮಾಡಿದ್ದಾನೆ.

ತನಿಖೆಯ ದಿಕ್ಕನ್ನು ತಪ್ಪಿಸಿದ್ದಾರೆ

ತನಿಖೆಯ ದಿಕ್ಕನ್ನು ತಪ್ಪಿಸಿದ್ದಾರೆ

ಡಾ. ರೇವಂತ್ ಹರಿತವಾದ ಆಯುಧದಿಂದ ಕವಿತಾರ ಕುತ್ತಿಗೆಯನ್ನು ಸೀಳಿ ಕೊಲೆ ಮಾಡಿ ತನಿಖೆಯ ದಿಕ್ಕನ್ನು ತಪ್ಪಿಸಲು ತನ್ನ ಮನೆಯ ಹಿಂಬಾಗಿಲ ಡೋರ್‌ಅನ್ನು ತಾನೇ ಒಡೆದು ಮನೆಯೊಳಗಿದ್ದ ಗಾಡ್ರೇಜ್ ಬೀರ್‌ ಅನ್ನು ಮೀಟಿ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ತಾನೇ ತೆಗೆದುಕೊಂಡು ಹೋಗಿ ಕಳುವಾಗಿರುತ್ತದೆ ಎಂದು ಬಿಂಬಿಸಿದ್ದಾನೆ.

ಆಭರಣಗಳನ್ನು ಕಳಿಸಿದ್ದಾನೆ

ಆಭರಣಗಳನ್ನು ಕಳಿಸಿದ್ದಾನೆ

ಡಾ. ರೇವಂತ್ ಬೀರೂರಿನ ಕೋರಿಯರ್ ಮೂಲಕ ತನ್ನ ಪ್ರೇಯಸಿ ಹರ್ಷಿತಾಳಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳನ್ನು ಕಳಿಸಿದ್ದ. ತನಿಖಾ ತಂಡ ಈ ಬಗ್ಗೆ ಮಾಹಿತಿ ಪಡೆದುಕೊಂಡು ಆಭರಣಗಳನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಈ ಪ್ರಕರಣ ತನಿಖೆ ಇನ್ನೂ ನಡೆಯುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

ಕವಿತಾ ಕೊಲೆಗೆ ಅಂತಿಮ ರೂಪರೇಷೆ ಸಿಕ್ಕಿದೆ

ಕವಿತಾ ಕೊಲೆಗೆ ಅಂತಿಮ ರೂಪರೇಷೆ ಸಿಕ್ಕಿದೆ

ಕವಿತಾಳನ್ನು ಪತಿ ಡಾ. ರೇವಂತ್ ಹರಿತವಾದ ಆಯುಧದಿಂದ ಕೊಲೆ ಮಾಡಿದ್ದು, ಈ ಘಟನೆಗೆ ಅಂತಿಮ ರೂಪರೇಷೆ ಸಿಕ್ಕಿರುತ್ತದೆ. ಇದರಿಂದ ಕಡೂರು ಜನತೆಯಲ್ಲಿ ಮೂಡಿದ್ದ ಆತಂಕ-ಅನುಮಾನಗಳು ದೂರವಾಗಿವೆ ಎಂದು ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+