Get Updates
Get notified of breaking news, exclusive insights, and must-see stories!

ಕಡೂರು: ಪಟಾಕಿ ವ್ಯಾಪಾರಸ್ಥರ ಮನೆಗಳ ಮೇಲೆ ಪುರಸಭಾ ಅಧಿಕಾರಿಗಳ ದಾಳಿ

ಚಿಕ್ಕಮಗಳೂರು, ಅಕ್ಟೋಬರ್‌, 13: ರಾಜ್ಯ ಸರ್ಕಾರ ಕಳೆದ ಕೆಲ ದಿನಗಳ ಹಿಂದೆ ನಡೆದ ಪಟಾಕಿ ಅವಗಡ ದುರಂತವನ್ನು ಮನಗಂಡು ಯಾವುದೇ ಪಟಾಕಿ ಮಾರಾಟಗಾರರು ಪರವಾನಗಿ ಇಲ್ಲದೆ ಪಟಾಕಿ ಸಂಗ್ರಹಿಸಿದರೆ ಅಂತಹವರ ವಿರುದ್ದ ಶಿಸ್ತು ಕ್ರಮವನ್ನು ಜರುಗಿಸುವಂತೆ ಸೂಚನೆ ನೀಡಿದೆ. ಈ ಹಿನ್ನಲೆಯಲ್ಲಿ ಜಿಲ್ಲೆಯ ಕಡೂರು, ಬೀರೂರು ಪುರಸಭಾ ಅಧಿಕಾರಿಗಳು ಬೀರೂರು ಪಟ್ಟಣದ ವಿವಿಧ ಅಂಗಡಿ ಮತ್ತು ಮನೆಗಳ ಮೇಲೆ ದಾಳಿ ನಡೆಸಿದರು.

ದಾಳಿ ಬಳಿಕ ಮಾತನಾಡಿದ ಬೀರೂರು ಪುರಸಭೆ ಮುಖ್ಯಾಧಿಕಾರಿ ವಿ.ಡಿ.ಶಾಂತಲ, ಸರ್ಕಾರದ ಆದೇಶ ಪಾಲನೆ ಮಾಡುವ ನಿಟ್ಟಿನಲ್ಲಿ ಪಟಾಕಿ ವ್ಯಾಪಾರಸ್ಥರ ಮನೆಗಳಿಗೆ ದಾಳಿ ನಡೆಸಲಾಗಿದೆ. ಬೀರೂರು ಪಟ್ಟಣದಲ್ಲಿ ಒಟ್ಟು 5 ಜನ ಪಟಾಕಿ ವ್ಯಾಪಾರ ನಡೆಸುತ್ತಿದ್ದಾರೆ. ಯಾರ ಮನೆಯಲ್ಲೂ ಪಟಾಕಿ ದಾಸ್ತಾನು ಮಾಡಲಾಗಿಲ್ಲ. ಅವರಿಗೆ ಪಟಾಕಿ ಅವಗಡದ ಬಗ್ಗೆ ತಿಳಿಸಿದರು.

kadur-municipal-officials-raid

ಇನ್ನು ಪಟಾಕಿ ಗೋಡನ್‌ಗಳನ್ನು ಆದಷ್ಟು ಜನವಸತಿ ಪ್ರದೇಶದಿಂದ ದೂರದಲ್ಲಿ ಇರಿಸುವಂತೆ ತಿಳಿಸಲಾಗಿದೆ. ಪುರಸಭೆಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಅಕ್ರಮವಾಗಿ ದಾಸ್ತಾನು ಸಂಗ್ರಹಿಸಿದರೆ ಅಂತಹವರ ವಿರುದ್ದ ಕಠಿಣ ಕ್ರಮ ಜರುಗಿಸಲಾಗುವುದು ಎಂದರು.

ಪಟಾಕಿ ಮಳಿಗೆಗಳಲ್ಲಿ ಸುರಕ್ಷತಾ ಕ್ರಮಗಳ ಪರಿಶೀಲನೆ

ಬೆಂಗಳೂರಿನ ಅತ್ತಿಬೆಲೆಯ ಪಟಾಕಿ ಗೋದಾಮಿನಲ್ಲಿ ಸಂಭವಿಸಿದ ಅಗ್ನಿ ದುರಂತದಿಂದ ಎಚ್ಚೆತ್ತಕೊಂಡಿರುವ ಅಧಿಕಾರಿಗಳು ನಗರದ ಪಟಾಕಿ ಮಳಿಗೆಗಳಿಗೆ ಭೇಟಿ ನೀಡಿ ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿದರು.

ತಹಶೀಲ್ದಾರ್ ಕಲಗೌಡ ಆರ್‌. ಪಾಟೀಲ ನೇತೃತ್ವದಲ್ಲಿ ಹುಬ್ಬಳ್ಳಿ ಉತ್ತರ ಮತ್ತು ದಕ್ಷಿಣ ವಿಭಾಗದ ಎಸಿಪಿಗಳಿ, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಕಂದಾಯ ನಿರೀಕ್ಷಕರನ್ನೊಳಗೊಂಡ ತಂಡ 12 ಮಳಿಗೆಗಳು ಮತ್ತು 3 ಗೋದಾಮುಗಳಿಗೆ ಭೇಟಿ ನೀಡಿ ಪರಿಶೀಲಿಸಿತು. ಕೆಲವು ಮಾರಾಟಗಾರರು ಪಟಾಕಿ ಸಂಗ್ರಹ ಸ್ಥಳದಲ್ಲಿ ಅಗತ್ಯ ಸೂಚನಾ ಫಲಕಗಳನ್ನು ಅಳವಡಿಸದಿರುವುದು, ಸ್ಫೋಟಕ ಸಂಗ್ರಹಣಾ ಸ್ಥಳ ಜನವಸತಿ ಪ್ರದೇಶದಲ್ಲಿರುವುದು ಕಂಡುಬಂದಿದೆ. ಕೂಡಲೇ ಸೂಚನಾ ಫಲಕಗಳನ್ನು ಅಳವಡಿಸಲು ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

"ನಿಯಮ ಉಲ್ಲಂಘನೆ, ಸುರಕ್ಷತಾ ಕ್ರಮಗಳನ್ನು ಪಾಲನೆ ಮಾಡದ ಕೆಲವು ಅಂಗಡಿಗಳಿಗೆ ನೋಟಿಸ್‌ ನೀಡಲಾಗಿದೆ. 100 ಕೆ.ಜಿ ಪಟಾಕಿ ದಾಸ್ತಾನು ಮಾಡಿದ್ದರೆ ಅದರಲ್ಲಿ 8 ಅಗ್ನಿನಿರೋಧಕ ಸಿಲಿಂಡರ್‌ ಇರಬೇಕು. ಸ್ಥಳದಲ್ಲಿ 400 ಲೀಟರ್ ನೀರಿನ ಸಂಗ್ರಹ ಇರಬೇಕು. ಕೆಲವು ಅಂಗಡಿಗಳು ಇದನ್ನು ಪಾಲನೆ ಮಾಡದಿರುವುದು ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ" ಎಂದು ತಹಶೀಲ್ದಾರ್‌ ಕಲಗೌಡ ಆರ್.ಪಾಟೀಲ ಹೇಳಿದರು.

24 ಗಂಟೆಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ. ಕೆಲವರು ಈಗಾಗಲೇ ಸುರಕ್ಷತಾ ಕ್ರಮಗಳನ್ನು ಅಳವಡಿಸಿಕೊಂಡಿದ್ದಾರೆ. ಪರಿಶೀಲನೆ ವೇಳೆ ಕಂಡುಬಂದ ಲೋಪಗಳ ಕುರಿತು ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ಕಮಿಷನರ್‌ಗೆ ವರದಿ ಸಲ್ಲಿಸಲಾಗುವುದು. ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಅಗ್ನಿ ಅನಾಹುತಗಳನ್ನು ತಪ್ಪಿಸಲು ಅನುಸರಿಸಬೇಕಾದ ಸುರಕ್ಷತಾ ಕ್ರಮಗಳ ಕುರಿತು ಮಳಿಗೆಗಳ ಮಾಲೀಕರಿಗೆ ಕೆಲವು ಸೂಚನೆಗಳನ್ನು ನೀಡಲಾಗಿದೆ ಎಂದು ಹೇಳಿದರು.

ಅಗ್ನಿ ಶಮನ ವ್ಯವಸ್ಥೆಗೆ ಕೈಗೊಳ್ಳಬೇಕಾದ ಕ್ರಮಗಳು

1. ಪ್ರತಿ ಮಳಿಗೆಯಲ್ಲಿ 9 ಲೀಟರ್ ಸಾಮರ್ಥ್ಯದ ವಾಟರ್ ಪ್ರೆಜರ್ ಮಾದರಿ ಅಗ್ನಿನಂದಕ ಇರಬೇಕು.

2. ಎರಡು ಬಕೆಟ್‌ಗಳಲ್ಲಿ ನೀರು ಇಟ್ಟಿರಬೇಕು

3. ಮಳಿಗೆಗಳಲ್ಲಿ ಅಡುಗೆ, ಧೂಮಪಾನಕ್ಕೆ ಅವಕಾಶ ಕೊಡಬಾರದು.

4. ಹಗಲು ವೇಳೆ ಮಾತ್ರ ಪಟಾಕಿ ಮಾರಾಟ ಮಾಡಬೇಕು.

ರಾತ್ರಿ ವೇಳೆ ಮಳಿಗೆಯಲ್ಲಿ ಯಾರೂ ಮಲಗಬಾರದು ಎಂದು ಸೂಚಿಸಲಾಗಿದೆ. ಇನ್ನು ಈ ಬಗ್ಗೆ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮಿಷನರ್ ರೇಣುಕಾ ಸುಕುಮಾರ ಅವರು ಮಾಹಿತಿ ನೀಡಿದ್ದು, ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಪರವಾನಗಿ ಪಡೆದ 17 ಪಟಾಕಿ ಸಂಗ್ರಹ ಗೋದಾಮುಗಳಿವೆ. ಈ ಬಗ್ಗೆ ಅಧಿಕಾರಿಗಳು ಜಂಟಿ ಪರಿಶೀಲನೆ ಮಾಡಿದ್ದಾರೆ. ಜನವಸತಿ ಪ್ರದೇಶದಲ್ಲಿ ಗೋದಾಮುಗಳಿದ್ದರೆ ಅವುಗಳ ಸ್ಥಳಾಂತರಕ್ಕೆ ನೋಟಿಸ್‌ ನೀಡಲಾಗುವುದು ಎಂದರು.

ಮಳಿಗೆ ನಿರ್ಮಾಣ ಹೇಗಿರಬೇಕು?

1. ಗೋದಾಮುಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು.

2. ನಿರ್ಮಾಣಕ್ಕೆ ಬಳಸುವ ವಸ್ತುಗಳು ಸುಲಭವಾಗಿ ಬೆಂಕಿ ನಂದಿಸುವಂತಿರಬೇಕು.

3. ಪ್ರತಿ ಮಳಿಗೆಗೆ ಹಿಂದಿನಿಂದ ಮತ್ತು ಮುಂದಿನಿಂದ ಪ್ರವೇಶಕ್ಕೆ ವ್ಯವಸ್ಥೆ ಇರಬೇಕು.

4. ಮಳಿಗೆಗಳ ಗಾತ್ರ 10X10ಗೆ ಸೀಮಿತಗೊಳಿಸಬೇಕು, ಹೆಚ್ಚಿನ ದಾಸ್ತಾನು ಮಾಡಬಾರದು.

5. ಮಳಿಗೆಯಿಂದ ಮಳಿಗೆಗೆ 10 ಮೀಟರ್ ಅಂತರ ಕಾಯ್ದುಕೊಳ್ಳಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+