ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ಆಫರ್ ಕೊಟ್ಟ ರಾಷ್ಟ್ರೀಯ ನಾಯಕ

2023ರ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್‌ನಲ್ಲಿ ಹಾಸನ ಕ್ಷೇತ್ರದಲ್ಲಿ ಟಿಕೆಟ್‌ ವಾರ್‌ ಆರಂಭವಾಗಿದ್ದು, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಜೆಡಿಎಸ್‌ ನಾಯಕಿ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಜನವರಿ 27: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಲ್ಲಿ ಟಿಕೆಟ್‌ಗಾಗಿ ಪೈಪೋಟಿ ನಡೆಯುತ್ತಿದ್ದು, ಭವಾನಿ ರೇವಣ್ಣ ಜೆಡಿಎಸ್‌ನಿಂದ ನನ್ನನ್ನು ಅಭ್ಯರ್ಥಿ ಮಾಡಬೇಕು ಎಂದು ಎಲ್ಲರೂ ಮಾತನಾಡಿಕೊಂಡು ನಿರ್ಣಯ ತೆಗೆದುಕೊಂಡಿದ್ದಾರೆ. ಸ್ವಲ್ಪ ದಿನದಲ್ಲಿಯೇ ನನ್ನ ಹೆಸರು ಘೋಷಣೆಯಾಗಲಿದೆ ಎಂದಿದ್ದರು.

ಆದರೆ ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿ ಎಲ್ಲರಿಗೂ ಚುನಾವಣೆಯಲ್ಲಿ ನಿಲ್ಲಬೇಕು ಎಂಬ ಆಸೆ ಇರುತ್ತದೆ. ಹಾಸನದಲ್ಲಿ ಅನಿವಾರ್ಯ ಇದ್ದಿದ್ದರೇ ನಾನೇ ನಿಲ್ಲಿಸುತ್ತಿದ್ದೆ, ಆದರೆ ಅಲ್ಲಿ ಸಮರ್ಥವಾದ ಅಭ್ಯರ್ಥಿ ಇದ್ದಾರೆ ಎಂದು ಹೇಳುವ ಮೂಲಕ ಭವಾನಿ ರೇವಣ್ಣ ಹಾಸನದಲ್ಲಿ ಸ್ಪರ್ಧೆಯ ಆಸೆಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಣ್ಣೀರು ಎರಚಿದ್ದರು.

ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?ಬಿಜೆಪಿ ಬೆಳೆಯಲು ಕಾರಣವೇ ಮಿಸ್ಟರ್ ಕುಮಾರಸ್ವಾಮಿ. ಹೀಗೆ ಸಿದ್ದರಾಮಯ್ಯ ಹೇಳಿದ್ಯಾಕೆ.?

ಜೆಡಿಎಸ್‌ನಲ್ಲಿ ಈ ಬೆಳವಣಿಗೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಜೆಡಿಎಸ್‌ ನಾಯಕಿ ಭವಾನಿ ರೇವಣ್ಣ ಅವರನ್ನು ತಮ್ಮ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

JDS Ticket For : CT Ravi Invites Bhavani Revanna To Contest On A BJP Ticket From Holenarasipura

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆಯನ್ನು ಹಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಬೇಕು ಎನ್ನುವುದು ಎನ್ನುವ ಅಚ್ಚರಿ ಹೇಳಿಕೆ ನೀಡಿದ್ದಾರೆ.

ಭವಾನಿ ಹೊಳೆನರಸೀಪುರದಿಂದ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಲಿ ಭವಾನಿ ಅವರಿಗಿಂದ ಉತ್ತಮ ಅಭ್ಯರ್ಥಿ ಹೊಳೆನರಸೀಪುರಕ್ಕೆ ಬೇರೊಬ್ಬರಿಲ್ಲ. ಹಾಸನ‌ ಜಿಲ್ಲೆ‌ಯ ರಾಜಕಾರಣವನ್ನು ಹತ್ತಿರದಿಂದ ಗಮನಿಸಿದ್ದೇನೆ. ಆದರೆ ರೇವಣ್ಣ ಮತ್ತು ಭವಾನಿ ಅವರ ನಡುವೆ ಜಗಳ ಹಚ್ಚುವ ಕೆಲಸ ಮಾಡಲು ನನಗೆ ಇಷ್ಟವಿಲ್ಲ ಎಂದರು.

ರಾಜ್ಯದ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆ ವಿಚಾರವಾಗಿ ಮಾತನಾಡಿದ ಸಿ.ಟಿ ರವಿ, ಪಕ್ಷದ ನೀತಿಯನ್ನು ಒಪ್ಪಿಕೊಂಡು ಯಾರ್ಯಾರು ಬರ್ತಾರೆ ಬರಬಹುದು. ಸಂಸದೆ ಸುಮಲತಾ ಅತ್ಯಂತ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರು. ಅವರು ಪಕ್ಷೇತರ ಅಭ್ಯರ್ಥಿಯಾಗಿ ಘಟಾನುಘಟಿ ಎದುರು ಗೆದ್ದು ಬಂದವರು. ಅವರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆದರೆ ತುಂಬಾ ಸಂತೋಷ. ಅವರು ಪಕ್ಷಕ್ಕೆ ಸೇರ್ಪಡೆ ಆದರೆ ಪಕ್ಕಕ್ಕೆ ಬಲ ಬರುತ್ತದೆ ಎಂದರು.

ಒಬ್ಬ ಸಿದ್ದರಾಮಯ್ಯ, ನಾಮ ಹಲವು ಪೋಸ್ಟರ್ ವಿಚಾರವಾಗಿ ಮಾತನಾಡಿದ ಅವರು, ಉದರನಿಮಿತ್ತಂ, ಬಹುಕೃತವೇಷಂ, ಓಟು ನಿಮಿತ್ತಂ, ಬಹುಕೃತನಿಮಿತ್ತಂ. ಓಟಿಕೋಸ್ಕರ ಹಲವು ವೇಷ ಹಾಕುತ್ತಿದ್ದಾರೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಗಳಿಗೆಗೊಂದು ಬದಲಾಗಬಾರದು, ನಿಯತ್ತು ಮತ್ತು ನೀತಿ ಒಂದೇ ಇರಬೇಕು. ನಿಯತ್ತು ಬದಲಾಗೋದು ನೀತಿ ಬದಲಾಗೋದು ಒಳ್ಳೆಯ ನೇತೃತ್ವದ ಲಕ್ಷಣ ಅಲ್ಲ. ಜಾತಿ ಸಭೆಯಲ್ಲಿ ಜಾತಿವಾದಿ ತರ, ಹೊರಗಡೆ ಜಾತ್ಯಾತೀತರ ಮಾತಾನಾಡುವುದು. ಹಿಂದುತ್ವದ ವಿರುದ್ಧ ಮಾತಾನಾಡುವುದು ಹೊರಗಡೆ ಬಂದು ಹಿಂದೂ ಎನ್ನುವುದು ಅದು ನೀತಿ, ನಿಯತ್ತು ಇಲ್ಲದಿರುವುದನ್ನು ತೋರಿಸುತ್ತದೆ.

English summary
Amid the tussle within the JDS over Hassan ticket, CT Ravi invites Bhavani Revanna to contest on a BJP ticket from Holenarasipura. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X