Get Updates
Get notified of breaking news, exclusive insights, and must-see stories!

ಕಡೂರು ಜನರಿಗಾಗಿ ಬಾಂಡ್‌ ಪೇಪರ್ ಮೇಲೆ ವೈಎಸ್‌ವಿ ದತ್ತಾ ಪ್ರತಿಜ್ಞೆ

ಚಿಕ್ಕಮಗಳೂರು, ಮೇ 8; ಕರ್ನಾಟಕದ ವಿಧಾನಸಭೆ ಚುನಾವಣೆಯ ಮತದಾನಕ್ಕೆ 2 ದಿನ ಬಾಕಿ ಇದೆ. ಚುನಾವಣೆಯ ಬಹಿರಂಗ ಪ್ರಚಾರ ಸೋಮವಾರ ಸಂಜೆ 6 ಗಂಟೆಗೆ ಅಂತ್ಯಗೊಳ್ಳಲಿದೆ. ಬುಧವಾರ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯ ತನಕ ಮತದಾನ ನಡೆಯಲಿದೆ.

ಚಿಕ್ಕಮಗಳೂರು ಜಿಲ್ಲೆಯ ಕಡೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ವೈಎಸ್‌ವಿ ದತ್ತಾ ಚುನಾವಣೆ ಸಮಯದಲ್ಲಿ 'ನನ್ನ ಪ್ರತಿಜ್ಞೆ - ನನ್ನ ಶಪಥ' ಎಂದು ಬಾಂಡ್ ಪೇಪರ್‌ ಮೇಲೆ ಶಪಥ ಮಾಡಿದ್ದಾರೆ. ಇದು ನನ್ನ ಕಡೂರು ಜನರಿಗಾಗಿ ನಾನು ಮಾಡುವ ಪ್ರತಿಜ್ಞೆ ಮತ್ತು ಶಪಥ ಎಂದು ಹೇಳಿದ್ದಾರೆ.

JDS Candidate YVS Datta Oath For Kadur Voters

ಕಡೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ಕೆ. ಎಸ್. ಪ್ರಕಾಶ್‌, ಕಾಂಗ್ರೆಸ್‌ನಿಂದ ಆನಂದ್ ಕೆ. ಎಸ್. ಮತ್ತು ಜೆಡಿಎಸ್‌ನಿಂದ ವೈಎಸ್‌ವಿ ದತ್ತಾ ಅಭ್ಯರ್ಥಿಗಳು.

ಶಪಥದಲ್ಲಿ ಏನಿದೆ?; ನಾನು ವೈ.ಎಸ್.ವಿ. ದತ್ತಾ, ವಯಸ್ಸು 69, ಯಗಟಿ, ತಾ : ಕಡೂರು ಖಾಯಂ ರಹವಾಸಿಯಾಗಿದ್ದೇನೆ. ಕಡೂರು ಕ್ಷೇತ್ರವು ರಾಜ್ಯದ ಅತ್ಯಂತ ಎರಡನೇ ದೊಡ್ಡ ಕ್ಷೇತ್ರ. ನಾನು ಜಾತ್ಯತೀತ ಜನತಾದಳದಿಂದ (ಎಸ್) ಸ್ಪರ್ಧೆ ಮಾಡುತ್ತಿದ್ದೇನೆ, ನನ್ನ ಗುರುತು ತೆನೆ ಹೊತ್ತ ಮಹಿಳೆ 'ಕ್ರಮ ಸಂಖ್ಯೆ 2' ಎಂದು ತಿಳಿಸಲಾಗಿದೆ.

JDS Candidate YVS Datta Oath For Kadur Voters

* ನಾನು ಕಡೂರು ಕ್ಷೇತ್ರದ ಜನರಿಗೆ ಎಂದು ಕಪ್ಪು ಚುಕ್ಕೆ ತರುವುದಿಲ್ಲ,
* ನಾನು ಕಡೂರು ಕ್ಷೇತ್ರವನ್ನು ಭ್ರಷ್ಟಾಚಾರ ಮುಕ್ತ ಮಾಡುತ್ತೇನೆ, ಇದು ನನ್ನ ಸಂಕಲ್ಪ.
* ನಾನು ಪಾರದರ್ಶಕ, ಜನಸ್ನೇಹಿ ಆಡಳಿತ ಜೊತೆಗೆ ಯಾವುದೇ ಜಾತಿ ಬೇಧ ಭಾವ ಮಾಡುವುದಿಲ್ಲ.
* ನಾನು ಕ್ಷೇತ್ರದಲ್ಲಿ ಸಾಮರಸ್ಯ, ಜಾತೀಯತೆ, ಶಾಂತಿಯಿಂದ ನೆಲಸಲು ಕಟಿಬದ್ಧನಾಗಿದ್ದೇನೆ.
* ನಾನು ಬಿಡುಗಡೆ ಮಾಡಿರುವ ನನ್ನ ಮತ್ತು ಪಕ್ಷದ ಪ್ರಣಾಳಿಕೆಯಂತೆ 2023-ಹೊಸ ಕಡೂರು ನಿರ್ಮಾಣ ಮತ್ತು ಸಂಕಲ್ಪಕ್ಕೆ ಕಂಕಣ ಬದ್ಧವಾಗಿದ್ದೇನೆ.
* ನಾನು ರೈತರ ಕಷ್ಟಕ್ಕೆ ಸ್ಪಂದನೆ, ಕ್ಷೇತ್ರವನ್ನು ಸಂಪೂರ್ಣ ನೀರಾವರಿ ಮಾಡಲು, ರೈತರಿಗೆ ಉಚಿತ ಸಾಗುವಾಳಿ ಚೀಟಿ ನೀಡಲು ನಾನು ಬದ್ಧನಾಗಿದ್ದೇನೆ.
* ಕ್ಷೇತ್ರದ ಜನರ ಸಮಸ್ಯೆಗಳಿಗೆ ಹಗಳಿರುಳು, ಯಾವುದೇ ಜಾತಿ, ಬೇಧ, ಭಾವವಿಲ್ಲದೇ ದಿನದ 24 ಗಂಟೆ ಶ್ರಮಿಸಲು ಬದ್ಧನಾಗಿದ್ದೇನೆ.

ಮೇಲೆ ನಾನು ಶಪಥ ಮಾಡಿದಂತೆ, ನಾನು ಶಾಸಕನಾಗಿ ಆಯ್ಕೆ ಆದರೆ, ನಾನು ಕಂಕಣ ಬದ್ಧನಾಗಿ, ಕ್ಷೇತ್ರದ ಸಮಸ್ಯೆಗಳಿಗೆ ಸ್ಪಂದಿಸುತ್ತ, ಸಂವಿಧಾನ ಆಶಯದಂತೆ ಮೇಲೆ ಮಾಡಿರುವ ಶಪಥದಂತೆ ನಾನು ದೇವರ ಮೇಲೆ ಪ್ರಮಾಣ ಮಾಡುತ್ತೇನೆ ಎಂದು ವೈಎಸ್‌ವಿ ದತ್ತಾ ಹೇಳಿದ್ದಾರೆ.

ವೈಎಸ್‌ವಿ ದತ್ತಾ ಅಭ್ಯರ್ಥಿ; 2013ರ ಚುನಾವಣೆಯಲ್ಲಿ ಕಡೂರು ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದ್ದ ವೈಎಸ್‌ವಿ ದತ್ತಾ, 2018ರ ಚುನಾವಣೆಯಲ್ಲಿ ಸೋಲು ಕಂಡಿದ್ದರು. ಈ ಬಾರಿಯ ಚುನಾವಣೆ ದಿನಾಂಕ ಘೋಷಣೆಗೂ ಮುನ್ನ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದರು. ಕಡೂರು ಕ್ಷೇತ್ರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು.

ಆದರೆ ಕಾಂಗ್ರೆಸ್ ಪಕ್ಷ ಆನಂದ್ ಕೆ. ಎಸ್. ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು. ಟಿಕೆಟ್ ಕೈ ತಪ್ಪಿದ ದತ್ತಾ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಘೋಷಣೆ ಮಾಡಿದರು. ಚುನಾವಣಾ ಪ್ರಚಾರ ಆರಂಭಿಸಿದರು.

ಆದರೆ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಮತ್ತು ಮಾಜಿ ಸಚಿವ ಎಚ್. ಡಿ. ರೇವಣ್ಣ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವಂತೆ ವೈಎಸ್‌ವಿ ದತ್ತಾ ಮನವೊಲಿಸಿದರು. ಮೊದಲು ಜೆಡಿಎಸ್ ಸಿ. ಎಂ.ಧನಂಜಯ ಪಕ್ಷದ ಅಭ್ಯರ್ಥಿ ಎಂದು ಘೋಷಣೆ ಮಾಡಿತ್ತು.

ವೈಎಸ್‌ವಿ ದತ್ತಾ ಅಭಿಮಾನಿಗಳ ಜೊತೆ ಚರ್ಚಿಸಿದ ಬಳಿಕ ಜೆಡಿಎಸ್ ಅಭ್ಯರ್ಥಿಯಾಗಲು ಒಪ್ಪಿಗೆ ನೀಡಿದರು. ಪಕ್ಷ ಅಧಿಕೃತವಾಗಿ ವೈಎಸ್‌ವಿ ದತ್ತಾ ಅಭ್ಯರ್ಥಿ ಎಂದು ಘೋಷಣೆ ಮಾಡಿತು. ಸಿ. ಎಂ. ಧನಂಜಯ ಕ್ಷೇತ್ರವನ್ನು ಬಿಟ್ಟುಕೊಟ್ಟರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+