• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"14 ತಿಂಗಳ ಅಧಿಕಾರಾವಧಿಯಲ್ಲಿ ಈ ರೀತಿ ಆಗಲು ಬಿಟ್ಟಿರಲಿಲ್ಲ ನಾನು"; ಎಚ್ ಡಿಕೆ

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜನವರಿ 21: "ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಸಮಾಜದಲ್ಲಿ ಅಶಾಂತಿಯ ವಾತಾವರಣ ಉಂಟಾಗುತ್ತಿದೆ. ನನ್ನ ಅಧಿಕಾರಾವಧಿಯಲ್ಲಿ ಈ ರೀತಿಯ ಪ್ರಕರಣಗಳು ನಡೆದಿರಲಿಲ್ಲ. 14 ತಿಂಗಳ ಅಧಿಕಾರದ ವೇಳೆ ಈ ರೀತಿ ಬೆಳವಣಿಗೆಗಳು ಆಗಿರಲಿಲ್ಲ" ಎಂದು ಹೇಳಿದ್ದಾರೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ. "ಅದು ಕೂಡ ಮಂಗಳೂರಿನಲ್ಲೇ ಯಾಕೆ ಈ ರೀತಿ ಪ್ರಕರಣಗಳು ನಡೀತಿವೆ?" ಎಂದೂ ಪ್ರಶ್ನಿಸಿದ್ದಾರೆ.

"ಇಂದು ಎಲ್ಲಾದರೂ ಮಂಗಳೂರು ಪೊಲೀಸ್ ಕಮಿಷನರ್ ಬಾಂಬ್ ಹಾಕಿಸಿದ್ರಾ" ಎಂದು ವ್ಯಂಗ್ಯವಾಗಿಯೇ ಮಾತು ಆರಂಭಿಸಿದ ಕುಮಾರಸ್ವಾಮಿ ಅವರು, "14 ತಿಂಗಳುಗಳ ಅಧಿಕಾರದಲ್ಲಿ ಇಂತಹ ಬೆಳವಣಿಗೆ ನಡೆಯಲು ನಾನು ಬಿಟ್ಟಿರಲಿಲ್ಲ, ಅದು ಮಂಗಳೂರಿನಲ್ಲೇ ಯಾಕೆ ಈ ರೀತಿಯ ಪ್ರಕರಣ ನಡೀತಿವೆ" ಎಂದು ಅನುಮಾನ ವ್ಯಕ್ತಪಡಿಸಿದರು.

ಮಂಗಳೂರು ಬಾಂಬ್ ಪತ್ತೆ: ಶೃಂಗೇರಿಯಲ್ಲಿ ಕುಮಾರಸ್ವಾಮಿ ಸ್ಪೋಟಕ ಹೇಳಿಕೆ

ನಿನ್ನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿರುವ ಘಟನೆಯನ್ನು ಅಣುಕು ಪ್ರದರ್ಶನಕ್ಕೆ ಹೋಲಿಸಿ ಮಾತನಾಡುತ್ತಾ, ಮೇಲ್ನೋಟಕ್ಕೆ ಕೆಲವು ಬಾರಿ ಅಣುಕು ಪ್ರದರ್ಶನ ಮಾಡಿದ್ದಾರೆ ಅನ್ನೋ ಭಾವನೆ ನನ್ನದು. ಬಾಂಬ್ ನಿಷ್ಕ್ರಿಯ ಮಾಡಲು ದೊಡ್ಡ ಕಂಟೈನರ್ ತಂದು ಶ್ರಮಪಟ್ಟಿದ್ದನ್ನು ಐದು ಗಂಟೆ ತೋರಿಸಿದ್ರಿ. ಈ ರೀತಿ ಜನರಲ್ಲಿ ಭಯ ಹುಟ್ಟಿಸಬೇಡಿ, ಕರಾವಳಿ ಆರ್ಥಿಕತೆಯನ್ನು ಕುಂಠಿತ ಮಾಡಬೇಡಿ, ಮಂಗಳೂರು ಜನತೆಯನ್ನು ಭಯಭೀತರನ್ನಾಗಿಸಬೇಡಿ" ಎಂದು ಹೇಳಿದರು.

ಶೃಂಗೇರಿಯಲ್ಲಿ ದೇವೇಗೌಡರಿಂದ ಸಹಸ್ರ ಚಂಡಿಕಾ ಯಾಗ: ಪಕ್ಷದ ಬಲವರ್ಧನೆಗೆ ಮುಂದಾದರಾ ಎಚ್ ಡಿಡಿ

"ಇದು ವಿಶ್ವಹಿಂದೂ ಪರಿಷತ್ ಹಾಗೂ ಆರ್ಎಸ್ಎಸ್ ಸರ್ಕಾರವೋ ಎಂಬ ಅನುಮಾನ ಇದೆ. ಅಧಿಕಾರಿಗಳು ಯಾರ ಮುಲಾಜಿಲ್ಲದೆ ಕೆಲಸ ಮಾಡಬೇಕು, ನೀವು ಹುಡುಗಾಟ ಆಡಿದ್ದೀರಾ ಅನ್ನೋ ಅನುಮಾನವಿದೆ" ಎಂದರು.

English summary
"There has been no such case in my tenure. There have been no such incidents happened in 14 months of my power," said former CM HD Kumaraswamy
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X