ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾನಿಲ್ಲಿ ರಾಜಕೀಯ ಮಾತಾಡಲ್ಲ; ಗರಂ ಆದ ಸಿಎಂ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 27: ಚಿಕ್ಕಮಗಳೂರಿನ ಪ್ರವಾಹಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಸಂದರ್ಭ ಸಿಎಂ ಯಡಿಯೂರಪ್ಪ ಮಾಧ್ಯಮದವರ ಮೇಲೆ ಗರಂ ಆಗಿದ್ದಾರೆ.

ಸಚಿವ ಸಿ.ಟಿ.ರವಿ, ಸಂಸದೆ ಶೋಭಾ ಕರಂದ್ಲಾಜೆ ಮತ್ತಿತರರ ಜೊತೆ ಪ್ರವಾಹ ಪೀಡಿತ ಪ್ರದೇಶಗಳ ಪರಿಶೀಲನೆಯಲ್ಲಿ ತೊಡಗಿದ್ದ ಯಡಿಯೂರಪ್ಪನವರನ್ನು ಖಾತೆ ಹಂಚಿಕೆ ಕುರಿತು ಪ್ರಶ್ನಿಸಿದ ಸಂದರ್ಭದಲ್ಲಿ, "ನಾನು ಇಲ್ಲಿಗೆ ಖಾತೆ ವಿಷಯ ಮಾತನಾಡಲು ಬಂದಿಲ್ಲ. ಪ್ರವಾಹ ಪೀಡಿತ ಪ್ರದೇಶಗಳ ಸ್ಥಿತಿಗತಿ ನೋಡಿಕೊಂಡು ಪರಿಹಾರ ನೀಡಲು ಬಂದಿದ್ದೇನೆ ಅಷ್ಟೆ" ಎಂದು ಗರಂ ಆದರು.

 ನಮ್ಮ ಸ್ಥಿತಿ ನೋಡಿ ಎಂದು ಗೋಳಾಡಿದ ಸಂತ್ರಸ್ತ; ತುಟಿ ಬಿಚ್ಚಲಿಲ್ಲ ಸಿಎಂ ನಮ್ಮ ಸ್ಥಿತಿ ನೋಡಿ ಎಂದು ಗೋಳಾಡಿದ ಸಂತ್ರಸ್ತ; ತುಟಿ ಬಿಚ್ಚಲಿಲ್ಲ ಸಿಎಂ

"ಅತಿವೃಷ್ಟಿ ಬಂದು ಜನ ಸಂಕಷ್ಟದಲ್ಲಿದ್ದಾರೆ. ಅವರಿಗೆ ಮೊದಲು ಪರಿಹಾರ ನೀಡಬೇಕು. ಆ ವಿಷಯವನ್ನಷ್ಟೇ ನಾನು ಮಾತನಾಡುವುದು. ಅದು ಬಿಟ್ಟು ರಾಜಕೀಯ ಮಾತನಾಡಲ್ಲ" ಎಂದು ಕೋಪಗೊಂಡರು.

I Dont Speak Politics Here Said CM Yediyurappa In Chikkamagaluru

ಇದೇ ಸಂದರ್ಭ, ಅತಿವೃಷ್ಟಿ, ಬರಕ್ಕೆ ಸಂಬಂಧಿಸಿದಂತೆ ವಿಶೇಷ ಅಧಿವೇಶನದ ಕುರಿತು ಮುಂದೆ ಚರ್ಚಿಸಲಾಗುವುದು ಎಂದು ತಿಳಿಸಿದರು.

ಅಧಿಕಾರದ ಕಿತ್ತಾಟ... ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ...!ಅಧಿಕಾರದ ಕಿತ್ತಾಟ... ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ...!

ಈ ಮುನ್ನ ಖಾತೆ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತವಾಗಿರುವ ವಿಷಯಕ್ಕೆ ಕುರಿತಂತೆ, "ಅತೃಪ್ತಿ ಎಲ್ಲಾ ಕಾಲದಲ್ಲಿಯೂ ಇದ್ದೇ ಇರುತ್ತೆ. ನಾವು ಹಂಚಿಕೆ ಮಾಡಿರುವ ಖಾತೆಯಲ್ಲಿ ಯಾರಿಗೂ ಅಸಮಾಧಾನ ಇಲ್ಲ. ಎಲ್ಲೋ ಒಬ್ಬರು ಇಬ್ಬರು ಒಡಕು ಮಾತನಾಡಿದ್ದಾರೆ. ಈಗ ಅವರಿಗೆ ಮನವರಿಕೆ ಆಗಿದೆ" ಎಂದು ಉತ್ತರಿಸಿದ್ದರು.

English summary
"People are suffering from flood. They need to be compensated. I Came here to see the flood affected areas. I dont speak politics here" angered CM Yeddyurappa on media people in chikkamagaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X