ಚಿತ್ರ; ಶೃಂಗೇರಿ ದೇಗುಲದಲ್ಲಿ ಚಿತ್ತ ಸೆಳೆಯುತ್ತಿದೆ ಈ ಬೃಹತ್ ರಂಗವಲ್ಲಿ...
ಚಿಕ್ಕಮಗಳೂರು, ನವೆಂಬರ್ 13: ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ಈಗ ಲಕ್ಷ ದೀಪೋತ್ಸವದ ಸಂಭ್ರಮ. ಲಕ್ಷ ದೀಪೋತ್ಸವದ ಬೆಳಕಿನಲ್ಲಿ ಮಿಂದು ಕಂಗೊಳಿಸುವ ಶೃಂಗೇರಿ ಶಾರದಾ ಪೀಠದ ಈ ದೇಗುಲ ನೋಡುವುದೇ ಸೊಬಗು.
ಈ ಸೊಬಗಿಗೆ ಮತ್ತೂ ಜೊತೆಯಾಗಿರುವುದು ಸುಂದರವಾದ ಬೃಹತ್ ರಂಗವಲ್ಲಿ. ಶೃಂಗೇರಿ ಶಾರದಾ ಮಠದಲ್ಲಿ ಭಕ್ತರು ಸೇರಿ ಬಿಡಿಸಿದ ಈ ರಂಗೋಲಿ ಎಲ್ಲರ ಮನ ಸೆಳೆಯುತ್ತಿದೆ. ಸತತ ನಾಲ್ಕು ಗಂಟೆಗಳ ಕಾಲ ಭಕ್ತರು ಈ ರಂಗೋಲಿಯನ್ನು ಬಿಡಿಸಿದ್ದಾರೆ.

ಈ ಪಾರಂಪರಿಕ ಪುರಾತನ ರಂಗೋಲಿಯನ್ನು 20 ಭಕ್ತರು ಸೇರಿಕೊಂಡು ಬಿಡಿಸಿದ್ದಾರೆ. ಬಣ್ಣಬಣ್ಣಗಳಿಂದ ಬೃಹತ್ತಾಗಿ ಕಂಗೊಳಿಸುತ್ತಿರುವ ಈ ರಂಗೋಲಿಯನ್ನು ಇಲ್ಲಿಗೆ ಭೇಟಿ ನೀಡುತ್ತಿರುವ ಸಾವಿರಾರು ಪ್ರವಾಸಿಗರು, ಭಕ್ತರು ಕಣ್ತುಂಬಿಕೊಂಡು ಮೆಚ್ಚುಗೆಯ ಸುರಿಮಳೆಗೈದಿದ್ದಾರೆ.












Click it and Unblock the Notifications