ಹಡ್ಲುಗದ್ದೆಯಲ್ಲಿ ಭಾರೀ ಮಳೆಗೆ ಭೂ ಕುಸಿತ, ಮನೆ ನೆಲಸಮ
ಚಿಕ್ಕಮಗಳೂರು, ಅಕ್ಟೋಬರ್.17: ಚಿಕ್ಕಮಗಳೂರಿನಲ್ಲಿ ರಾತ್ರಿಯಿಡೀ ವರುಣ ಆರ್ಭಟ ಹೆಚ್ಚಾಗಿದ್ದು, ಭಾರೀ ಮಳೆಗೆ ಜಿಲ್ಲೆಯಲ್ಲಿ ಅವಾಂತರ ಸೃಷ್ಠಿಯಾಗಿದೆ.
ಅಷ್ಟೇ ಅಲ್ಲ, ಕೊಪ್ಪ ತಾಲೂಕಿನ ಹಡ್ಲುಗದ್ದೆ ಗ್ರಾಮದಲ್ಲಿ ಭಾರೀ ಭೂ ಕುಸಿತವುಂಟಾಗಿದ್ದು, 70 ಅಡಿಯಷ್ಟು ಆಳಕ್ಕೆ ಭೂಮಿ ಸರಿದಿದೆ. ಮತ್ತಷ್ಟು ಸ್ವಲ್ಪ ಸ್ವಲ್ಪವೇ ಭೂಮಿ ಜರುಗುತ್ತಿದ್ದು, ಭೂಮಿ ಜರುಗಿದ ಪರಿಣಾಮ ಸಂಪೂರ್ಣ ಮನೆಯೊಂದು ನೆಲಸಮವಾಗಿದೆ. ಮನೆಯಲ್ಲಿದ್ದ ಪೀಠೋಪಕರಣಗಳು ಸಂಪೂರ್ಣ ಜಖಂ ಆಗಿದ್ದು, ರಾತ್ರಿ ಸುರಿದ ಮಳೆಗೆ ಕುಟುಂಬ ಬೀದಿಗೆ ಬಿದ್ದಿದೆ.
ಮತ್ತೆರೆಡು ಮನೆಗಳ ಗೋಡೆ ಬಿರುಕು ಬಿಟ್ಟಿದ್ದು, ಕುಸಿವ ಭೀತಿ ಎದುರಾಗಿದೆ. ಈ ಸ್ಥಳದಲ್ಲಿ ಆತಂಕ ಮನೆ ಮಾಡಿದ್ದು, ಸದ್ಯಕ್ಕೆ ಗ್ರಾಮ ತೊರೆದು ಬೇರೆಡೆ ನೆಲೆಸಲು ಜನ ನಿರ್ಧರಿಸಿದ್ದಾರೆ.

ಗ್ರಾಮದ 30 ಕಡೆ ಧರೆ ಬಿರುಕು ಬಿಟ್ಟಿದ್ದು, ಭೂಮಿಯಲ್ಲಿ ಕಾಫಿ, ಅಡಿಕೆ, ಬಾಳೆ ಊತು ಹೋಗಿವೆ.












Click it and Unblock the Notifications