CT Ravi Dance: ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ: ಸಿ.ಟಿ.ರವಿ ಭರ್ಜರಿ ಡ್ಯಾನ್ಸ್- ವಿಡಿಯೋ ವೈರಲ್

ಚಿಕ್ಕಮಗಳೂರು ಸೆಪ್ಟೆಂಬರ್ 7: ಇಂದು ಗಣೇಶ ಚತುರ್ಥಿ ಹಬ್ಬ. ದೇಶದೆಲ್ಲೆಡೆ ಜನ ವಿನಾಯಕ ಚತುರ್ಥಿ ಹಬ್ಬವನ್ನು ಅತ್ಯಂತ ಸಂಭ್ರಮ ಸಡಗರದಿಂದ ಆಚರಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಚೌತಿ ಆಚರಣೆ ಜೋರಾಗಿದ್ದು ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಭರ್ಜರಿ ಡ್ಯಾನ್ಸ್ ಮಾಡಿದ್ದಾರೆ.

ಹೌದು.. ಇಂದು ಚಿಕ್ಕಮಗಳೂರು ನಗರದ ಹನುಮಂತಪ್ಪ ವೃತ್ತದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ವೇಳೆ ಡ್ರಮ್ ಸೆಟ್ ಶಬ್ಧಕ್ಕೆ ಸಿ.ಟಿ.ರವಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ. ಗಣಪತಿ ತರುವಾಗ ಚಿಕ್ಕಮಗಳೂರು ನಗರದ ಬಸವನಹಳ್ಳಿ ಮುಖ್ಯ ರಸ್ತೆ ಮಧ್ಯೆ ಸಿ.ಟಿ.ರವಿ ಕುಣಿದು ಕುಪ್ಪಳಿಸಿದ್ದಾರೆ. ಸಿ.ಟಿ.ರವಿ ನೃತ್ಯ ಮಾಡುತ್ತಿದ್ದಂತೆ ಖುಷಿಯಾದ ಹುಡುಗರು ತಾವೂ ಕೂಡ ಅವರೊಂದಿಗೆ ಜೋಷ್ ಆಗಿ ಡ್ಯಾನ್ಸ್ ಮಾಡಿದ್ದಾರೆ.

Hindu Mahasabha Ganapati Pratishthapana at Chikkamagaluru CT Ravi Dance video viral

ಇಂದು ಕಾಫಿನಾಡಿನ ಪ್ರತಿಷ್ಠಿತ ಹಿಂದೂ ಮಹಾ ಗಣಪತಿಯನ್ನು ಪ್ರತಿಷ್ಠಾಪನೆ ಮಾಡಲಾಯಿತು. ಗಣಪತಿಯನ್ನು ತರುವಾಗ ಮೆರವಣಿಗೆಯಲ್ಲಿ ಯುವಕರು ಕುಣಿದು ಕುಪ್ಪಳಿಸಿದರು. ಕಳೆದ ಹತ್ತು ವರ್ಷದಿಂದ ಚಿಕ್ಕಮಗಳೂರು ನಗರದಲ್ಲಿ ಹಿಂದೂ ಮಹಾಸಭಾ ಗಣಪತಿ ಪ್ರತಿಷ್ಠಾಪನೆ ಮಾಡಿಕೊಂಡು ಬರಲಾಗಿದೆ.

ಈ ಬಾರಿಯೂ ಅದೇ ಉತ್ಸಾಹದಲ್ಲಿ ಪುಟಾಣಿ ಮಕ್ಕಳು, ಯುವಕ, ಯುವತಿಯರು ನೃತ್ಯ ಮಾಡಿ ಗಜಾನನ್ನು ಸ್ವಾಗತಿಸಿದರು. ಗಣೇಶನನ್ನು ಕರೆತರುವ ದಾರಿಯುದ್ದಕ್ಕೂ ಗಣೇಶನಿಗೆ ವಿಶೇಷ ಪೂಜೆ, ಮಂಗಳಾರತಿ ಮಾಡಿಸಿ ಸಂಭ್ರಮಿಸಿದರು. ಅಲಂಕೃತಗೊಂಡ ಗಣಪನನ್ನು ಮಂಗಳವಾದ್ಯದೊಂದಿಗೆ ಮೆರವಣಿ ಮಾಡಿಕೊಂಡು ಸ್ವಾಗತ ಮಾಡಲಾಯಿತು.

Hindu Mahasabha Ganapati Pratishthapana at Chikkamagaluru CT Ravi Dance video viral

ಬಿಳಿ ಬಣ್ಣದ ಸಾಂಪ್ರದಾಯಿಕ ಬಟ್ಟೆ ಧರಿಸಿದ ಹಿಂದೂ ಮಹಾ ಗಣಪತಿ ಸಮಿತಿ ಸದಸ್ಯರು ಕೇಸರಿ ಶಾಲು ಹಾಕಿಕೊಂಡು ಮೆರವಣಿಗೆಗೆ ವಿಶೇಷ ಕಳೆ ತಂದಿದ್ದರು. ಅಲ್ಲದೆ ಸಂಭ್ರಮದ ಮೆರವಣಿಗೆಗೆ ಭಕ್ತಿ ಭಾವವನ್ನು ತುಂಬಿದ್ದರು. ಅದರೊಂದಿಗೆ ದಾರಿ ಉದ್ದಕ್ಕೂ ಡಿಜೆ ಸದ್ದಿಗೆ ಸಹಸ್ರಾರು ಮಂದಿ ಏಕ ಕಾಲದಲ್ಲಿ ಹೆಜ್ಜೆ ಹಾಕಿದ ದೃಶ್ಯ ಆಕರ್ಷಕವಾಗಿತ್ತು. ಗಣಪತಿ ಬಪ್ಪ ಮೋರಯಾ, ವಿನಾಯಕನಿಗೆ ಜಯವಾಗಲಿ ಎನ್ನುವ ಘೋಷಣೆಗಳು ಮುಗಿಲು ಮುಟ್ಟಿದ್ದವು.

ಇದೇ ವೇಳೆ ಹಿಂದೂ ಮಹಾಸಭಾ ಗಣಪತಿ ಮೂರ್ತಿ ಸ್ವಾಗತ ವೇಳೆ ಚಿಕ್ಕಮಗಳೂರು ಶಾಸಕ ಸಿಟಿ ರವಿ ಯುವಕರೊಂದಿಗೆ ಕುಣಿಯುವ ಮೂಲಕ ಎಲ್ಲರ ಗಮನ ಸೆಳೆದರು. ಸಿಟಿ ರವಿ ಅವರು ನೃತ್ಯ ಮಾಡಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಿಂದೂ ಮಹಾಗಣಪತಿ ವಿಸರ್ಜನೆ ಮೆರವಣಿಗೆ ವೇಳೆ ಹಲವಾರು ಬಾರಿ ನೃತ್ಯ ಮಾಡಿದ್ದಾರೆ.

ಇಂದಿನ ಗಣಪನನ್ನು ಸ್ವಾಗತಿಸುವ ವೇಳೆ ಬಿಗಿ ಪೊಲೀಸ್ ಬಂದೋಬಸ್ತ್‌ ಏರ್ಪಡಿಸಲಾಗಿತ್ತು. ಮೆರವಣಿಗೆ ಉದ್ದಕ್ಕೂ ದಾರಿಗಳಲ್ಲಿ ಪೊಲೀಸ್ ಸಿಬ್ಬಂದಿ ಕಟ್ಟೆಚ್ಚರ ವಹಿಸಿದ್ದರು. ಮುಂಜಾಗ್ರತೆಗಾಗಿ ಗಣೇಶ ಸಾಗಿ ಬರುವ ದಾರಿಯಲ್ಲಿ ಪಥಸಂಚಲನ ಮಾಡಲಾಗಿತ್ತು.

ಹೀಗೆ ಚಿಕ್ಕಮಗಳೂರಿನಲ್ಲಿ ಮಹಾಸಭಾ ಗಣಪತಿ ಮೂರ್ತಿಯನ್ನು ಸ್ವಾಗತ ಮಾಡಲಾಗಿದ್ದು ಅದರಲ್ಲೂ ಬಿಜೆಪಿ ನಾಯಕರು ಡಿಜೆ ಸೌಂಡ್‌ಗೆ ಸ್ಟೆಪ್ ಹಾಕಿರುವುದು ಹೆಚ್ಚಾಗಿ ಗಮನ ಸೆಳೆದಿದೆ. ಅಲ್ಲದೇ ಯುವಕರು, ಮಕ್ಕಳು ಹೆಜ್ಜೆ ಹಾಕಿ ಗಣೇಶನ ಸ್ವಾಗತಿ ಮೆರವಣಿಗೆಯ ರಂಗನ್ನು ಹೆಚ್ಚಿಸಿದರು.

ಗಣೇಶನ ವಿಸರ್ಜಯಂದು ಬಸವನಹಳ್ಳಿ ಓಂಕಾರೇಶ್ವರ ದೇವಸ್ಥಾನ, ಆಶೀರ್ವಾದ ಸರ್ಕಲ್, ವಿಜಯಪುರ ಮುಖ್ಯ ರಸ್ತೆ, ಮಲ್ಲಂದೂರು ರಸ್ತೆ, ಉಪ್ಪಳ್ಳಿ ವೃತ್ತದವರೆಗೆ ತೆರಳಿ, ಐಜಿ ರಸ್ತೆ, ರಾಘವೇಂದ್ರ ಸ್ವಾಮಿ ಮಠದ ರಸ್ತೆ, ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಕೆಎಂ ರಸ್ತೆ ಮೂಲಕ ಸಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+