ಚಿಕ್ಕಮಗಳೂರಿನಲ್ಲಿ ಗಿಡ ನೆಟ್ಟು ನಿಶ್ಚಿತಾರ್ಥ ಮಾಡಿಕೊಂಡ ಜೋಡಿ
ಚಿಕ್ಕಮಗಳೂರು : ಹೊಸ ಜೀವನಕ್ಕೆ ಕಾಲಿಡಲು ಅಣಿಯಾದ ಹುಡುಗ ಹುಡುಗಿ, ಉಂಗುರ, ಹೂವಿನ ಹಾರ ಹಾಕಿ ನಿಶ್ಚಿತಾರ್ಥ ಮಾಡಿಕೊಳ್ಳುವುದು ರೂಢಿ. ನಿಶ್ಚಿತಾರ್ಥಕ್ಕೆ, ಮದುವೆಗೆ ಅಥವಾ ಇನ್ನಿತರ ಕಾರ್ಯಕ್ರಮಕ್ಕೆ ಬಂದವರಿಗೆ ಗಿಡವನ್ನು ಉಡುಗೊರೆಯಾಗಿ ಕೊಡುವ ಪರಿಪಾಠವೂ ಈಗೀಗ ಬೆಳೆಯುತ್ತಿದೆ. ಆದರೆ ಚಿಕ್ಕಮಗಳೂರಿನಲ್ಲಿ ಜೋಡಿಯೊಂದು ಗಿಡ ನೆಡುವ ಮೂಲಕ ನಿಶ್ಚಿತಾರ್ಥ ಮಾಡಿಕೊಂಡಿದೆ. ಈ ಮೂಲಕ ತಮ್ಮ ನೂತನ ಜೀವನವು ಹಸಿರಾಗಿರಲಿ ಎಂದು ಅಡಿಯಿಟ್ಟಿದೆ.
ಚಿಕ್ಕಮಗಳೂರು ನಗರದ ಕಾವ್ಯಾ ಹಾಗೂ ರಂಜು ಮಾವಿನ ಗಿಡ ನೆಡುವ ಮೂಲಕ ನಿಶ್ಚಿತಾರ್ಥವನ್ನ ಮಾಡಿಕೊಂಡು ಇತರರಿಗೂ ಮಾದರಿಯಾಗಿದ್ದಾರೆ. ಕೇವಲ ಉಂಗುರ ಹಾಗೂ ಹಾರ ಬದಲಿಸಿಕೊಳ್ಳುವ ಬದಲು ಗಿಡ ನೆಟ್ಟು ಪರಿಸರ ಕಾಳಜಿ ತೋರಿದ್ದಾರೆ.

ಗಿಡ ನೆಡುವುದು ಮಾತ್ರವಲ್ಲದೇ, ಗಿಡವನ್ನ ಸಂರಕ್ಷಿಸಿ, ಪೋಷಿಸುವ ಜವಾಬ್ದಾರಿಯನ್ನೂ ನವ ಜೋಡಿಗಳು ಹೊತ್ತಿರುವುದು ವಿಶೇಷ. ಹಸಿರು ಬೆಳೆಸುವುದರೊಂದಿಗೆ ಜೀವನವನ್ನೂ ಹಸಿರು, ಹಸನುಗೊಳಿಸೋಣ ಎಂಬ ಸಂದೇಶವೂ ಈ ಕಾರ್ಯದಲ್ಲಿ ಅಡಗಿದೆ.












Click it and Unblock the Notifications