ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಿನಲ್ಲಿ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಶಂಕುಸ್ಥಾಪನೆ, ವಿಸ್ತೀರ್ಣದ ವಿವರ ಇಲ್ಲಿದೆ

ಚಿಕ್ಕಮಗಳೂರಿನ ನೂತನ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಕಂದಾಯ ಆರ್.ಅಶೋಕ್ ಶಂಕುಸ್ಥಾಪನೆ ಮಾಡಿದರು.

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಫೆಬ್ರವರಿ, 05: ಜಿಲ್ಲಾಧಿಕಾರಿ ಕಟ್ಟಡ ಮಾದರಿಯಾಗುವ ಜೊತೆಗೆ ಜನರಿಗೆ ಸೌಕರ್ಯಗಳನ್ನು ನೀಡುವಂತಾಗಬೇಕು ಎಂದು ಕಂದಾಯ ಆರ್.ಅಶೋಕ್ ಚಿಕ್ಕಮಗಳೂರಿನಲ್ಲಿ ಹೇಳಿದರು.

ಚಿಕ್ಕಮಗಳೂರು ದಂಟರಮಕ್ಕಿ ತೋಟಗಾರಿಕಾ ಕ್ಷೇತ್ರದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಲೋಕೋಪಯೋಗಿ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಚಿಕ್ಕಮಗಳೂರು ಜಿಲ್ಲೆಯ ನೂತನ ಜಿಲ್ಲಾ ಕಚೇರಿಗಳ ಸಂಕೀರ್ಣ ಕಟ್ಟಡ ಶಂಕುಸ್ಥಾಪನೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲಾಧಿಕಾರಿ ಕಚೇರಿಯ ಸಂಕೀರ್ಣ ಕಟ್ಟವು ಶತಮಾನ ಕಾಲ ಉಳಿಯುವಂತಾಗಬೇಕು. ಆ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಕಟ್ಟಡ ಕಟ್ಟುವುದಕ್ಕೆ 8 ಹೆಕ್ಟೇರ್‌ ಜಾಗವನ್ನು ತೋಟಗಾರಿಕೆ ಇಲಾಖೆಯಿಂದ ಪಡೆದುಕೊಂಡಿದ್ದು, ಆ ಜಾಗದ ಬದಲಾಗಿ ಬೇರೆ ಕಡೆ 16 ಹೆಕ್ಟೇರ್‌ ಕಂದಾಯ ತೋಟಗಾರಿಕೆ ಇಲಾಖೆಗೆ ಜಾಗವನ್ನು ನೀಡಲಾಗಿದೆ ಎಂದರು.

ಚುನಾವಣೆಗೆ ಚೀನಾ, ಪಾಕಿಸ್ತಾನ ಬೆಂಬಲ ಕೋರುವುದು ಕಾಂಗ್ರೆಸ್: ಒನ್ ಇಂಡಿಯಾ ಸಂದರ್ಶನದಲ್ಲಿ ಸಿ ಟಿ ರವಿ ಹೇಳಿದ್ದೇನು?ಚುನಾವಣೆಗೆ ಚೀನಾ, ಪಾಕಿಸ್ತಾನ ಬೆಂಬಲ ಕೋರುವುದು ಕಾಂಗ್ರೆಸ್: ಒನ್ ಇಂಡಿಯಾ ಸಂದರ್ಶನದಲ್ಲಿ ಸಿ ಟಿ ರವಿ ಹೇಳಿದ್ದೇನು?

30 ಕೋಟಿ ರೂ. ವೆಚ್ಚದಲ್ಲಿ ಕಟ್ಟಡ ನಿರ್ಮಾಣ

ಈಗ ಜಿಲ್ಲಾಧಿಕಾರಿ ಸಂಕೀರ್ಣ ಕಟ್ಟಡ ಕಟ್ಟುವುದಕ್ಕೆ ಯಾವುದೇ ಸಮಸ್ಯೆಯಿಲ್ಲ. ಹೀಗಾಗಲೇ 30 ಕೋಟಿ ರೂಪಾಯಿ ಹಣ ನೀಡಲಾಗಿದೆ. ಇನ್ನೂ ಕೆಲಸವೇ ಪ್ರಾರಂಭವಾಗಿಲ್ಲ, ಆಗಲೇ 30 ಕೋಟಿ ರೂಪಾಯಿ ನೀಡಲಾಗಿದೆ. ಈ ಹಣವನ್ನು ಆರು ತಿಂಗಳ ಒಳಗಾಗಿಯೇ ಬಿಡುಗಡೆ ಮಾಡುತ್ತೇವೆ. ಪ್ರಸ್ತುತ ಇರುವ ಜಿಲ್ಲಾಧಿಕಾರಿ ಕಟ್ಟಡದಲ್ಲಿ ಸೌಕರ್ಯಗಳ ಕೊರತೆ, ಎಲ್ಲಾ ಇಲಾಖೆಗಳು ಕಾರ್ಯನಿರ್ವಹಿಸುವುದಕ್ಕೆ ಸಾಧ್ಯವಾಗದ ಹಿನ್ನೆಲೆಯಲ್ಲಿ ಹೊಸ ಕಟ್ಟಡವನ್ನು ಪ್ರಾರಂಭಿಸಲಾಗಿದೆ.

Foundation stone for new New district admistration building in Chikkamagaluru

ಹೊಸ ಕಟ್ಟಡದಿಂದ ಜನರಿಗೆ ಹೆಚ್ಚಿನ ಸೌಕರ್ಯಗಳು ದೊರೆಯುವಂತಾಗಬೇಕು. ಅಧಿಕಾರಿಗಳು ಸುಲಲಿತವಾಗಿ ಕೆಲಸ ಮಾಡಬೇಕು. ಕಚೇರಿಗೆ ಬರುವಂತಹ ಜನರಿಗೆ ಗೌರವಯುತವಾಗಿ ಕಾಣುವುದರೊಂದಿಗೆ ಅವರ ಸೌಲಭ್ಯಗಳನ್ನು ನೀಡುವಂತಾಗಬೇಕು ಎಂದು ಹೇಳಿದರು.

ಸೌಲಭ್ಯಗಳನ್ನ ಸರಳೀಕರಣ ಮಾಡುತ್ತಿದ್ದೇವೆ

ಇನ್ನು ಕಂದಾಯ ಇಲಾಖೆಗಳ ಸೌಲಭ್ಯಗಳನ್ನು ಸರಳೀಕರಣ ಮಾಡುತ್ತಿದ್ದೇವೆ. ಗ್ರಾಮ ವಾಸ್ತವ್ಯದ ಮೂಲಕ ಸ್ಥಳದಲ್ಲಿಯೇ ಸವಲತ್ತುಗಳನ್ನು ನೀಡುವಂತಹ ಕೆಲಸ ಆಗಬೇಕು. ಈ ನಿಟ್ಟಿನಲ್ಲಿಯೇ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸೇರಿ ಒಂದು ಸಭೆ ನಡೆಸಿ ಮಾತನಾಡಲಾಗಿದೆ. ಜನರ ಹತ್ತಿರ ಹೋಗಿ ವಾಸ್ತವ ಏನು ಎನ್ನುವುದು ಗೊತ್ತಾಗುತ್ತದೆ. ಈ ನಿಟ್ಟಿನಲ್ಲಿಯೇ ಗ್ರಾಮ ವಾಸ್ತವ್ಯ ಮಾಡಲಾಗುವುದು ಎಂದು ತಿಳಿಸಿದರು.

Foundation stone for new New district admistration building in Chikkamagaluru

ಕಚೇರಿ ಜನರಿಗೆ ಹತ್ತಿರವಾಗಿರಬೇಕು

ನಂತರ ಶಾಸಕ ಸಿ.ಟಿ.ರವಿ ಮಾತನಾಡಿ, ಚಿಕ್ಕಮಗಳೂರು ಜಿಲ್ಲಾಧಿಕಾರಿ ಕಚೇರಿಗೆ ಸಂಕೀರ್ಣ ಬೇಕು ಎನ್ನುವುದು ಬಹು ವರ್ಷಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ 2017ರಲ್ಲಿ ತಾಜ್‌ ಹೋಟೆಲ್ ಹತ್ತಿರ ಶಂಕುಸ್ಥಾಪನೆ ನೆರವೇರಿಸಲಾಯಿತು. ನಂತರ ನ್ಯಾಯಾಲಯಕ್ಕೆ ಹೋಗಿ ಆ ಜಾಗಕ್ಕೆ ಸಂಬಂಧಿಸಿದಂತೆ ಅಡೆತಡೆ ಬಂದಾಗ ಮತ್ತು ಸ್ಥಳೀಯರು ಆ ಜಾಗ ದೂರವಾಯಿತು ಎನ್ನುವ ಮಾತು ಇತ್ತು ಎಂದರು. ಜಿಲ್ಲಾಡಳಿತ ಕಚೇರಿ ಸಂಕೀರ್ಣ ಜಿಲ್ಲೆಯ ಆಡಳಿತ ಹೃದಯವಿದ್ದಂತೆ. ಅದು ಯಾವಾಗಲೂ ಜನರಿಗೆ ಹತ್ತಿರವಾಗಿಯೇ ಇರಬೇಕು. ಈ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಕಚೇರಿಗೆ ಸೇರಿದ ಜಾಗವನ್ನು ಪಡೆದುಕೊಂಡು ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣ ಕಟ್ಟುವ ಸಂಕಲ್ಪ ಮಾಡಿದ್ದೇವೆ. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್‌ಗೆ ಮನವೊಲಿಸಿ, ಅದಕ್ಕೆ ಇದ್ದಂತಹ ತಾಂತ್ರಿಕ ಅಡೆತಡೆಗಳನ್ನು ಎದುರಿಸಿ ಶಂಕುಸ್ಥಾಪನೆ ನೆರವೇರಿಸಿದ್ದೇವೆ. ಇದು ಸಂತೋಷ ತಂದಿದೆ ಎಂದರು.

English summary
Foundation stone for new New district admistration building in Chikkamagaluru, Here see detlais, know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X