ಶೃಂಗೇರಿ ಸಾಹಿತ್ಯ ಜಾತ್ರೆಯಲ್ಲಿ ಕನ್ನಡದ ಬಗ್ಗೆ ಸಮ್ಮೇಳನಾಧ್ಯಕ್ಷರ ಭಾವುಕ ನುಡಿ

ಚಿಕ್ಕಮಗಳೂರು, ಜನವರಿ 10: ಶೃಂಗೇರಿಯಲ್ಲಿ ಗೊಂದಲದ ನಡುವೆಯೇ ಚಿಕ್ಕಮಗಳೂರು ಜಿಲ್ಲಾ ನುಡಿಹಬ್ಬ ಆರಂಭವಾಗಿದೆ. ಬಿಜಿಎಸ್ ಸಮುದಾಯ ಭವನದ ಆವರಣದಲ್ಲಿ ಇಂದು ಮತ್ತು ನಾಳೆ ಹಮ್ಮಿಕೊಳ್ಳಲಾದ ಜಿಲ್ಲಾ ಸಾಹಿತ್ಯ ಸಮ್ಮೇಳನವನ್ನು ಸಾಹಿತಿ ಕುಂ. ವೀರಭದ್ರಪ್ಪ ಅವರು ಉದ್ಘಾಟಿಸಿದರು. ಸಮ್ಮೇಳನ ಪ್ರಾರಂಭವಾದ ನಂತರವೂ ವಿರೋಧ ವ್ಯಕ್ತವಾಯಿತು.

ಈ ನಡುವೆ ಸಮ್ಮೇಳನವನ್ನು ಉದ್ದೇಶಿಸಿ ಜಿಲ್ಲಾ ಸಮ್ಮೇಳನಾಧ್ಯಕ್ಷರಾದ ಕಲ್ಕುಳಿ ವಿಠಲ ಹೆಗ್ಡೆ ಅವರು ಭಾವುಕ ನುಡಿಗಳನ್ನು ಆಡಿದ್ದಾರೆ.

ಸಮ್ಮೇಳನದಲ್ಲಿ ಮಾತನಾಡಿದ ಅವರು, "ಇಂದು ಜಾತಿವಾದಿಗಳು ಗೆದ್ದಿಲ್ಲ, ಕೋಮುವಾದಿಗಳು ಗೆದ್ದಿಲ್ಲ, ಕನ್ನಡ ಗೆದ್ದಿದೆ. ನಾವು ಆಹ್ವಾನಿಸಿದ ಜನರು ಬಂದಿಲ್ಲ. ಆದರೆ ಕನ್ನಡದ ಅಭಿಮಾನಿಗಳು ಬಂದಿದ್ದಾರೆ. ಇದೊಂದು ಸವಾಲಿನ ಸಮ್ಮೇಳನ. ಯಶಸ್ವಿಯಾಗಿದೆ. ಇದೇ ಕನ್ನಡದ ಶಕ್ತಿ" ಎಂದು ಭಾವುಕವಾಗಿ ಮಾತನಾಡಿದರು.

Emotional Speech Of Kalkuli Vittala Hegde In Sringeri literature Fest

"ಕನ್ನಡಿಗರಾಗಿ ಕೆಲವರು ಪ್ರತಿಭಟಿಸಿದ್ದು ಅಕ್ಷಮ್ಯ ಅಪರಾಧ. ಇದು ಯಾವ ವ್ಯಕ್ತಿಯ ಹಬ್ಬವೂ ಅಲ್ಲ. ಕನ್ನಡದ ಹಬ್ಬ, ಸಾಹಿತ್ಯದ ಹಬ್ಬ. ಕೆಲವರು ಕಿರುಕುಳ ನೀಡುವಂತೆ ಪ್ರತಿಭಟನೆ ನಡೆಸಿದ್ದಾರೆ. ಆದರೆ ಪ್ರತಿಭಟನೆ ನಡೆಸಿದವರಿಗೆ ಅದೇ ತಿರುಗುಬಾಣವಾಗಲಿದೆ" ಎಂದು ಹೇಳಿದರು.

"ಸಮ್ಮೇಳನದಲ್ಲಿ ವಿನಾಕಾರಣ ಗೊಂದಲ ಸೃಷ್ಟಿ ಮಾಡಬೇಡಿ" ಎಂದು ಬೇಸರ ವ್ಯಕ್ತಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+