ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷ: ಅಕ್ರಮ ಹೋಂ ಸ್ಟೇ, ರೆಸಾರ್ಟ್ ತೆರವಿಗೆ ಅರಣ್ಯ ಇಲಾಖೆ ನೋಟೀಸ್
ಚಿಕ್ಕಮಗಳೂರು ಸೆಪ್ಟೆಂಬರ್ 10: ಚಿಕ್ಕಮಗಳೂರಿನ ಚಾರ್ಮಾಡಿ ಘಾಟ್‌ನಲ್ಲಿ ಮತ್ತೆ ಒಂಟಿ ಸಲಗ ಪ್ರತ್ಯಕ್ಷವಾಗಿದೆ. ರಸ್ತೆಯಲ್ಲಿ ಬಿಂದಾಸ್ ಆಗಿ ಓಡಾಡುತ್ತಿದ್ದ ಆನೆ ಕಂಡು ವಾಹನ ಸವಾರರು ಆತಂಕಗೊಂಡಿದ್ದಾರೆ. ನಿತ್ಯ ರಸ್ತೆ ಬದಿ ಕತ್ತಲಲ್ಲಿ ಆನೆ ನಿಂತಿರುವುದನ್ನು ಕಂಡು ಪ್ರಯಾಣಿಕರು ಆತಂಕದಲ್ಲಿ ಪ್ರಯಾಣಿಸುವಂತಾಗಿದೆ.
ಹೌದು... ಚಿಕ್ಕಮಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯನ್ನು ಸಂಪರ್ಕಿಸುವ ಚಾರ್ಮಾಡಿ ಘಾಟ್‌ನಲ್ಲಿ ಆನೆಗಳು ಸರ್ವೇ ಸಾಮಾನ್ಯವಾಗಿವೆ. ಆದರೆ ಕತ್ತಲಲ್ಲಿ ಏಕಾಏಕಿ ರಸ್ತೆಯ ಮೇಲೆ ಆನೆಗಳು ಕಾಣಿಸಿಕೊಳ್ಳುತ್ತಿರುವುದರಿಂದ ವಾಹನ ಸವಾರರಲ್ಲಿ ಅಪಘಾತದ ಆತಂಕ ಶುರುವಾಗಿದೆ. ಆನೆಗಳು ರಸ್ತೆಯ ತಿರುವಿನಲ್ಲಿ ನಿಂತುಕೊಳ್ಳುತ್ತವೆ. ಇದರಿಂದಾಗಿ ವಾಹನ ಸವಾರರಿಗೆ ರಸ್ತೆ ಕಾಣದೆ ವಾಹನ ಸಂಚಾರ ಮಾಡಲು ಕಷ್ಟವಾಗಿದೆ. ಇದರಿಂದ ರಸ್ತೆ ದಾಟುವುದು ಕಷ್ಟವಾಗಿದೆ ಎಂದು ವಾಹನ ಸವಾರರು ಆತಂಕ ವ್ಯಕ್ತಪಡಿಸಿದ್ದಾರೆ.

ವಾಹನಗಳ ಸಮೀಪವೇ ಆನೆಯ ಓಡಾಟದ ದೃಶ್ಯ ವೈರಲ್ ಆಗಿದೆ. ಆದರೆ ಅದೃಷ್ಟವಶಾತ್ ಆನೆ ಯಾರಿಗೂ ಕೂಡ ತೊಂದರೆಯನ್ನು ನೀಡಲ್ಲ. ಕಾಡಾನೆ ಕಂಡು ವಾಹನಗಳನ್ನ ನಿಲ್ಲಿಸಿ ನಿಧಾನವಾಗಿ ವಾಹನಗಳು ಮುಂದೆ ಸಾಗಿವೆ. ಘಾಟ್‌ನ ತಿರುವಿನಲ್ಲಿ ರಾತ್ರಿ ಏಕಾಏಕಿ ಆನೆ ಕಾಣಿಸಿಕೊಂಡಿದ್ದು ಕಳೆದ ಮೂರ್ನಾಲ್ಕು ತಿಂಗಳಿಂದಲೂ ಆನೆಗಳು ನಡು ರಸ್ತೆಯಲ್ಲಿ ಕಾಣಿಸಿಕೊಳ್ತಿದೆ. ಇದರಿಂದ ಪ್ರಯಾಣಿಕರು ಅಪಘಾತದ ಆತಂಕ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿದ ಟಾಟಾ ಏಸ್ ವಾಹನ
ಹಂಪ್ಸ್‌ನಲ್ಲಿ ನಿಯಂತ್ರಣ ತಪ್ಪಿದ ಟಾಟಾ ಏಸ್ ವಾಹನವೊಂದು ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಈ ಅಪಘಾತದಲ್ಲಿ ಮೂವರು ಮಹಿಳೆಯರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಚಿಕ್ಕಮಗಳೂರು ಹೌಸಿಂಗ್ ಬೋರ್ಡ್ ಸಮೀಪ ಸಾಲುಮರದ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಗಾಯಳುಗಳನ್ನ ಹಾಸನ ಅಸ್ಪತ್ರೆಗೆ ರವಾನೆ ಮಾಡಲಾಗಿದೆ. ಹಂಪ್ಸ್ ಕಾಣಿಸದೇ ಟಾಟಾಏಸ್ ವಾಹನ ಏಕಾಏಕಿ ಚಲಾಯಿಸಿದಾಗ ನಿಯಂತ್ರಣ ತಪ್ಪಿದೆ. ಇದರಿಂದ ಡಿವೈಡರ್‌ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ವಾಹನದಲ್ಲಿ ಇದ್ದ ಮೂವರ ಸ್ಥಿತಿ ಚಿಂತಾಜನಕವಾಗಿದೆ.
ಗಾಯಳುಗಳನ್ನ ಖಾಸಗಿ ವಾಹನದಲ್ಲಿ ಸ್ಥಳೀಯರು ಸಾಗಿಸಿದ್ದ, ಕರೆಗೆ ಸ್ಪಂದಿಸದೆ ತಕ್ಷಣ ಸ್ಥಳಕ್ಕೆ ಬಾರದ ಪೊಲೀಸರ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು: ಅರಣ್ಯ ಇಲಾಖೆ ಹೈ ಅಲರ್ಟ್
ಅರಣ್ಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಹೋಂ ಸ್ಟೇ, ರೆಸಾರ್ಟ್ ತೆರವಿಗೆ ಅರಣ್ಯ ಸಚಿವರ ಖಡಕ್ ಆದೇಶದ ಬೆನ್ನಲ್ಲೆ ಚಿಕ್ಕಮಗಳೂರಿನಲ್ಲಿ ಅರಣ್ಯ ಇಲಾಖೆ ಹೈ ಅಲರ್ಟ್ ಆಗಿದೆ. ಅರಣ್ಯ, ಡೀಮ್ಡ್ ಫಾರೆಸ್ಟ್ ವ್ಯಾಪ್ತಿಯ ಜನರಿಗೆ ನೋಟೀಸ್ ನೀಡಲಾಗಿದೆ. ಅರಣ್ಯ ವ್ಯಾಪ್ತಿಯ ಒಳಗೆ ರೆಸಾರ್ಟ್, ಹೋಂ ಸ್ಟೇ ನಿರ್ಮಾಣದ ಬಗ್ಗೆ ಸಂಶಯಗೊಂಡು ಹೋಂ ಸ್ಟೇ, ರೆಸಾರ್ಟ್ ಮಾಲೀಕರಿಗೆ ಅರಣ್ಯ ಇಲಾಖೆಯಿಂದ ನೋಟೀಸ್ ನೀಡಲಾಗಿದೆ.

ಸೂಕ್ತ ದಾಖಲೆಗಳನ್ನು ಹಾಜರುಪಡಿಸುವಂತೆ ಅರಣ್ಯ ಇಲಾಖೆ 40 ಜನ ರೆಸಾರ್ಟ್, ಹೋಂಸ್ಟೇ ಮಾಲೀಕರಿಗೆ ನೋಟಿಸ್ ನೀಡಲಿದೆ. ಮೂಡಿಗೆರೆ, ಮುತ್ತೋಡಿ, ಮುಳ್ಳಯ್ಯನಗಿರಿ, ಚಿಕ್ಕಮಗಳೂರು ಭಾಗದ ರೆಸಾರ್ಟ್, ಹೋಂಸ್ಟೇ ಮಾಲೀಕರಿಗೆ ಸಚಿವರ ಆದೇಶದನ್ವಯ ಅರಣ್ಯ ಇಲಾಖೆ ನೋಟಿಸ್ ನೀಡಿದೆ. ಚಿಕ್ಕಮಗಳೂರು ಡಿ.ಎಫ್.ಓ ರಮೇಶ್ ಬಾಬುರಿಂದ ಒಂದು ವಾರದ ಒಳಗೆ ಸೂಕ್ತ ದಾಖಲೆ ನೀಡುವಂತೆ ನೋಟೀಸ್ ನೀಡಲಾಗಿದೆ.












Click it and Unblock the Notifications