ರಸ್ತೆ ಸಂಚಾರಕ್ಕೆ ಅಡ್ಡಿಯಾದ ಕೊಳಚೆ ನೀರು, ಕೋಡಿಹಳ್ಳಿ ಗ್ರಾಮಸ್ಥರು ಹೈರಾಣ
ಚಿಕ್ಕಮಗಳೂರು, ಅಕ್ಟೋಬರ್, 18: ಜಿಲ್ಲೆಯ ಕಡೂರು ತಾಲೂಕಿನ ಬೀರೂರಿನಿಂದ ಕೋಡಿಹಳ್ಳಿ ಮಾರ್ಗವಾಗಿ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಪಟ್ಟಣದ ರೈಲ್ವೆ ಅಂಡರ್‌ಬ್ರಿಡ್ಜ್ ಸಮೀಪ ಕೊಳಚೆ ನೀರು ಹರಿಯುತ್ತಿರುವುದರಿಂದ ಈ ಮಾರ್ಗವಾಗಿ ಸಂಚರಿಸಲು ಗ್ರಾಮಸ್ಥರು ಹರಸಾಹಸ ಪಡುವಂತಾಗಿದೆ.
ಬಿ.ಕೋಡಿಹಳ್ಳಿ, ಹೂವಿನಹಳ್ಳಿ, ಮುಂಡ್ರೆಗೆ ಸಂಪರ್ಕ ಕಲ್ಪಿಸುವ ಈ ರಸ್ತೆಗೆ ಪಟ್ಟಣದ ಮಾರ್ಗದ ಕ್ಯಾಂಪ್, ಸಜ್ಜನ್‌ರಾವ್ ಬಡಾವಣೆ, ಪುರಿಭಟ್ಟಿ, ಉಪ್ಪಾರ ಕ್ಯಾಂಪ್ ಬಡಾವಣೆಗಳ ಚರಂಡಿ ನೀರು ಬರುತ್ತಿದೆ. ರಸ್ತೆಗೆ ಡಕ್ ನಿರ್ಮಿಸದಿರುವುದರಿಂದ ಕೊಳಚೆ ನೀರು ಮುಂದಕ್ಕೆ ಸಾಗದೆ ಅಂಡರ್‌ಬ್ರಿಡ್ಜ್ ಒಳಗೆ ಬರುತ್ತಿದ್ದು, ದುರ್ವಾಸನೆ ಹಾಗೂ ಕೊಳಚೆ ತುಳಿಯುವ ಜೊತೆಗೆ ದ್ವಿ ಚಕ್ರ ಹಾಗೂ ಸೈಕಲ್ ಸವಾರರು ಜೀವ ಭಯದಲ್ಲಿಯೇ ಸಂಚರಿಸುತ್ತಿದ್ದಾರೆ.

ನೀರು ಹರಿಯದಂತೆ ಕ್ರಮಕೈಗೊಳ್ಳುವಂತೆ ಹಲವಾರು ಬಾರಿ ಮನವಿ ಮಾಡಿದರೂ ಪ್ರಯೋಜನ ಆಗಿಲ್ಲ. ನಮ್ಮ ಗ್ರಾಮಗಳಿಗೆ ತೆರಳಲು ಬೇರೆ ಯಾವುದೇ ರಸ್ತೆಯಿಲ್ಲ. ಅಲ್ಲದೆ ದೊಡ್ಡ ವಾಹನಗಳು ಇಲ್ಲಿ ಬರದಂತೆ ಅಂಡರ್‌ಬ್ರಿಡ್ಜ್ ಇರುವುದರಿಂದ ಬಳ್ಳಿಗನೂರು ಗ್ರಾಮದ ಮಾರ್ಗವಾಗಿ ಸಂಚರಿಸಬೇಕಾಗಿದೆ. 8 ಕಿಲೋ ಮೀಟರ್ ಸುತ್ತಿ ನಮ್ಮ ಗ್ರಾಮ ತಲುಪಬೇಕಿದೆ. ಅಲ್ಲದೆ ಇಲ್ಲಿನ ರಸ್ತೆಯೂ ಸಂಪೂರ್ಣ ಹಾಳಾಗಿದೆ ಎನ್ನುತ್ತಾರೆ ಕೋಡಿಹಳ್ಳಿ ಗ್ರಾಮದ ನಿವಾಸಿ ಸಂತೋಷ್.
ಈ ಸಾರಿಗೆ ಬಸ್‌ನ ಚಕ್ರದಲ್ಲಿ ಇರೋದು ಬರೀ ಮೂರೇ ನಟ್
ಚಿಕ್ಕಮಗಳೂರು-ಆಲ್ದೂರು ಮಾರ್ಗದ ಮಾರ್ಗದಲ್ಲಿ ಸಂಚರಿಸುವ ಸಾರಿಗೆ (KSRTC) ಬಸ್‌ನ ಚಕ್ರಕ್ಕೆ ನಟ್‌ಗಳೇ ಇಲ್ಲದಂತಾಗಿದ್ದು, ಇದು ಸಾರಿಗೆ ಇಲಾಖೆಯ ಬೇಜವಾಬ್ದಾರಿ ಎತ್ತಿ ತೋರಿಸಿದಂತಿದೆ.
ಚಿಕ್ಕಮಗಳೂರು ಡಿಪೋಗೆ ಸೇರಿದ ಈ ಸಾರಿಗೆ ಬಸ್‌ನ ಚಕ್ರದಲ್ಲಿ 8 ನಟ್ ಬದಲಿಗೆ ಬರೀ 3 ನಟ್‌ಗಳಷ್ಟೇ ಇದ್ದು, ಚಾಲಕರು ಅದೇ ಸ್ಥಿತಿಯಲ್ಲಿ ಬಸ್ಸನ್ನು ಓಡಿಸುತ್ತಿದ್ದಾರೆ. ಇದರಲ್ಲೇ ಪ್ರಯಾಣಿಕರು ಪ್ರತಿನಿತ್ಯ ಜೀವವನ್ನು ಕೈಯಲ್ಲಿ ಹಿಡಿದು ಪ್ರಯಾಣ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ಈ ಬಸ್‌ನಲ್ಲಿ ನಿತ್ಯ ನೂರುರು ಮಕ್ಕಳು ಶಾಲಾ-ಕಾಲೇಜಿಗೆ ಓಡಾಡುತ್ತಿರುತ್ತಾರೆ. ಆದ್ದರಿಂದ ಇದಕ್ಕೆ ಸಬಂಧಪಟ್ಟ ಅಧಿಕಾರಿಗಳು ಮುಂದೆ ಯಾವುದೇ ಅನಾಹುತಗಳು ಆಗದಂತೆ ಈಗಲೇ ಎಚ್ಚೆತ್ತುಕೊಂಡು ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.












Click it and Unblock the Notifications