ಬಿಜೆಪಿ ಪಕ್ಷ ನೈತಿಕವಾಗಿ ಗೆದ್ದಿದೆ: ಶಾಸಕ ಸಿಟಿ ರವಿ
ಚಿಕ್ಕಮಗಳೂರು, ನವೆಂಬರ್.06: ಬಿಜೆಪಿ ಪಕ್ಷ ನೈತಿಕವಾಗಿ ಗೆದ್ದಿದೆ. ಮೈತ್ರಿ ಕೂಟದ ವಿರುದ್ಧ ಬಿಜೆಪಿ ಚುನಾವಣೆ ಎದುರಿಸಿದ್ದು ನಮಗೆ ಪಾಠ. ಅಧಿಕಾರ, ಹಣದ ನಡುವೆ ಬಿಜೆಪಿ ಪಕ್ಷ ಪಂಚ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯ ತೋರಿಸಿದೆ ಎಂದು ಶಾಸಕ ಸಿಟಿ ರವಿ ಹೇಳಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನೈತಿಕವಾಗಿ ಬಿಜೆಪಿ ಗೆದ್ದರೂ ಮುಂಬರುವ ಲೋಕಸಭಾ ಚುನಾವಣಾ ಹೋರಾಟಕ್ಕೆ ಇದು ಪ್ರೇರಣೆ. ರಾಮನಗರದಲ್ಲಿ ಬಿಜೆಪಿ ಅಭ್ಯರ್ಥಿ ಚುನಾವಣೆ ಕಣದಿಂದ ಹಿಂದೆ ಹೋಗುವ ಮೂಲಕ ಬಿಜೆಪಿಗೆ ಅವಮಾನ ಮಾಡಿದ್ದರು.
ಇದರ ನಡುವೆಯೂ ರಾಮನಗರದಲ್ಲಿ ಬಿಜೆಪಿ ತನ್ನ ಶಕ್ತಿ ಪ್ರದರ್ಶನ ಮಾಡಿದೆ. ಉಪ ಚುನಾವಣೆಯ ಫಲಿತಾಂಶ ಮುಂಬರುವ ಯಾವುದೇ ಚುನಾವಣೆಗೆ ದಿಕ್ಸೂಚಿ ಅಲ್ಲ. ಪಕ್ಷ ಸಂಘಟನ್ಮಾತಕವಾಗಿ ಬೆಳೆಯುಲು ಇದು ವೇದಿಕೆ.

ಪಕ್ಷದ ಸಿದ್ಧಾಂತ ಹೊಂದಿದವರಿಗೆ ಮಾತ್ರ ಟಿಕೆಟ್ ನೀಡಬೇಕು. ಇದು ನಮಗೆ ಒಂದು ಪಾಠ ಅನ್ನುವುದನ್ನು ಈ ಚುನಾವಣೆ ಕಲಿಸಿದೆ ಎಂದು ತಿಳಿಸಿದರು.












Click it and Unblock the Notifications