ಬೆಳಗಾವಿಯಲ್ಲಿ ಮತ್ತೆ ಶಿವಾಜಿ ಪ್ರತಿಮೆ ಲೋಕಾರ್ಪಣೆ: ಕಾಂಗ್ರೆಸ್‌ನವರಿಗೆ ನಾಚಿಕೆ ಆಗ್ಬೇಕು: ಸಿಎಂ ಆಕ್ರೋಶ
ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತೆ ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಬಸವರಾಜ ಬೊಮ್ಮಾಯಿ ಬಾಳೆಹೊನ್ನೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಚಿಕ್ಕಮಗಳೂರು, ಮಾರ್ಚ್, 05: ಬೆಳಗಾವಿಯಲ್ಲಿ ಕಾಂಗ್ರೆಸ್ ನಾಯಕರು ಮತ್ತೆ ಶಿವಾಜಿ ಪ್ರತಿಮೆಯನ್ನು ಲೋಕಾರ್ಪಣೆ ಮಾಡುತ್ತಿರುವುದು ಹಾಸ್ಯಾಸ್ಪದವಾಗಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಬಾಳೆಹೊನ್ನೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಮಾತಾನಾಡಿದ ಅವರು, ನಿಜವಾಗಿಯೂ ಇದು ಹಾಸ್ಯಾಸ್ಪದ, ಅದು ಸರ್ಕಾರದಿಂದ ನಿರ್ಮಾಣಗೊಂಡಿರುವ ಶಿವಾಜಿ ಪ್ರತಿಮೆಯಾಗಿದೆ. ಸರ್ಕಾರ ಈ ಪ್ರತಿಮೆಯನ್ನು ಅಧಿಕೃತವಾಗಿ ಉದ್ಘಾಟಿಸಿದೆ. ಈಗ ಅಲ್ಲಿಗೆ ಭೇಟಿ ಕೊಡಬಹುದು, ಗೌರವ ಸಮರ್ಪಣೆ ಮಾಡಬಹುದು. ಆದರೆ ಮತ್ತೆ ಉದ್ಘಾಟನೆ ಮಾಡುತ್ತಿರುವುದನ್ನು ಎಲ್ಲೂ ಕೇಳಿರಲಿಲ್ಲ, ನೋಡಿರಲ್ಲಿಲ್ಲ. ಇದರಿಂದ ಅಧಿಕಾರ ಚಲಾವಣೆ ಮಾಡಬೇಕು ಎಂಬ ಲಾಲಾಸೆ ಎಷ್ಟಿದೆ ಎಂಬುದು ಗೊತ್ತಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲೋಕಾಯುಕ್ತಕ್ಕೆ ಎಲ್ಲಾ ಪವರ್ ನೀಡಿದ್ದೇವೆ
ಇನ್ನು ಲೋಕಾಯುಕ್ತಕ್ಕೆ ನಾವು ಎಲ್ಲಾ ಪವರ್ ನೀಡಿದ್ದೇವೆ. ಅವರು ಸ್ವಾತಂತ್ರ್ಯವಾಗಿ ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬಹುದು. ಇನ್ನು ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆಯಲ್ಲಿ ವಿಧಾನಸಭೆಯ ಮಂತ್ರಿಗಳ ಕಛೇರಿಯಲ್ಲಿ 25 ಲಕ್ಷ ಹಣ ಸಿಕ್ಕಿತ್ತು. ಅದು ಪುಟ್ಟಲಿಂಗಶೆಟ್ಟಿ ಅವರಿಗೆ ಸೇರಿದ ಹಣವಾಗಿತ್ತು. ಅವತ್ತು ಸರಿಯಾದ ತನಿಖೆ ನಡೆಸಿದರಾ ಎಂದು ಪ್ರಶ್ನಿಸುವ ಮೂಲಕ ಹರಿಹಾಯ್ದರು.
ಕಾಂಗ್ರೆಸ್ ವಿರುದ್ದ ಸಿಎಂ ವಾಗ್ದಾಳಿ
ಆಗ ಸಿದ್ದರಾಮಯ್ಯನವರ ಸರ್ಕಾರ ಪ್ರಕರಣವನ್ನು ಮುಚ್ಚಿಹಾಕುವ ಕೆಲಸವನ್ನ ಮಾಡಿತ್ತು. ಅಂದು ಲೋಕಾಯುಕ್ತ ಇದ್ದಿದ್ದರೆ, ಅಂದೇ ಎಲ್ಲರ ಮೇಲೆ ಕೇಸ್ ಬೀಳುತ್ತಿತ್ತು. ಆದರೆ ಕಾಂಗ್ರೆಸ್‌ನವರು ಭ್ರಷ್ಟಾಚಾರವನ್ನು ರಕ್ಷಣೆ ಮಾಡಿ ಮುಚ್ವಿ ಹಾಕುವ ಕೆಲಸವನ್ನು ಮಾಡಿದ್ದರು. ಇಂದು ನಾವು ಲೋಕಾಯುಕ್ತಕ್ಕೆ ಎಲ್ಲಾ ಪವರ್ ನೀಡಿದ್ದೇವೆ. ನಮ್ಮ ಪಕ್ಷದವರೇ ತಪ್ಪು ಮಾಡಿದ್ದರೂ ಕ್ರಮ ಕೈಗೊಳ್ಳಲು ಮುಂದಾಗಿದ್ದೇವೆ. ಅದು ನಮ್ಮ ನೈತಿಕತೆ ಎಂದರು.

ಈ ಪ್ರಕರಣದ ಬಗ್ಗೆ ಮಾತಾನಾಡುವ ನೈತಿಕತೆ ಕಾಂಗ್ರೆಸ್ ನಾಯಕರಿಗಿಲ್ಲ ಎಂದರು. ಇನ್ನು ಇದೇ ವೇಳೆ ಸಂಸದೆ ಸಮಲತಾ ಬಿಜೆಪಿ ಸೇರುವ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಸಮಲತಾ ಅವರು ಇನ್ನು ಅಂತಿಮ ತೀರ್ಮಾನ ತೆಗೆದುಕೊಂಡಿಲ್ಲ ಎಂದರು.












Click it and Unblock the Notifications