ಸಿ.ಟಿ.ರವಿ ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ-ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು, ಮೇ 30: ಸಿ.ಟಿ.ರವಿ ಅವರು ಅಧಿಕಾರ ಕಳೆದುಕೊಂಡು ವಿಲವಿಲ ಒದ್ದಾಡುತ್ತಿದ್ದಾರೆ. ಮೀನನ್ನು ನೀರಿನಿಂದ ನೀರಿನಿಂದ ಹೊರತಗೆದಂತಾಗಿದೆ ಎಂದು ಶಾಸಕ ಎಚ್.ಡಿ.ತಮ್ಮಯ್ಯ ವ್ಯಂಗ್ಯವಾಡಿದರು.

ಮಂಗಳವಾರ ಗ್ರಾಮೀಣ ಪ್ರದೇಶಗಳ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಗ್ರಾಮಗಳಿಗೆ ತೆರಳಿದ ವೇಳೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಿ.ಟಿ.ರವಿ ಅವರು 20ವರ್ಷದಿಂದ ಅಂಡಾ-ಬಂಡಾ ಅಧಿಕಾರದಲ್ಲಿ ಇದ್ದರು. ಈಗ ಅಧಿಕಾರ ಕಳೆದುಕೊಂಡು ವಿಲವಿಲ ಅಂತ ಒದ್ದಾಡುತ್ತಿದ್ದಾರೆ. ಅಧಿಕಾರ ಇದ್ದಾಗ ಅವರು ಭೂಮಿ ಮೇಲೆ ನಡೆಯುತ್ತಿರಲಿಲ್ಲ. ಆಕಾಶದ ಮೇಲೆ ಹಾರಾಡುತ್ತಿದ್ದರು. ಈಗ ಅಧಿಕಾರವಿಲ್ಲ ಹಾಗಾಗೀ ಅವರು ಮಾತನಾಡುತ್ತಿದ್ದಾರೆ ಎಂದರು.

Congress MLA H.D thammaiah Sarcasm Against BJP Leader CT Ravi

ಸಿ.ಟಿ.ರವಿಯವರು ಬಹಿರಂಗ ಪತ್ರ ಬರೆದಿದ್ದಾರೆ. ನನಗೆ ಖುಷಿ ಇದೆ. ಸಾಮಾನ್ಯ ಜನರು, ಹಿಂದುಳಿದ ವರ್ಗದವರು, ದೀನ ದಲಿತರು ಬಡವರ ಬದುಕಿನ ಬಗ್ಗೆ ಅವರಿಗೆ ನೆನಪಿರಲಿಲ್ಲ. 19 ವರ್ಷ ಬಳಿಕ ಜನರ ಬದುಕಿನ ಬಗ್ಗೆ ಎಚ್ಚರವಾಗಿದ್ದಾರೆ. ಅದಕ್ಕೆ ನನಗೆ ಸಂತೋಷವಿದೆ ಎಂದು ಹೇಳಿದರು.

ನಾನು ಕಾಫಿತೋಟದ ಶ್ರೀಮಂತ ಕುಟುಂಬದಲ್ಲಿ ನಾನು ಹುಟ್ಟಿಲ್ಲ. ನಾನು ಸಾಮಾನ್ಯ ರೈತನ ಮಗನಾಗಿದ್ದು, ಜನರ ಬಗ್ಗೆ ಅವರಿಗಿಂತ ಜಾಸ್ತಿ ನನಗೆ ಕಾಳಜಿ ಇದೆ ಎಂದ ಅವರು, ಕೆಲಸ ಚೆನ್ನಾಗಿದ್ದರೇ ಯಾರೇ ಕಂಟ್ರಾಕ್ಟರ್ ಆಗಿದ್ದರೂ ನನ್ನ ತಕರಾರಿಲ್ಲ. ಕಾಮಗಾರಿ ಚೆನ್ನಾಗಿಲ್ಲ ಎಂದರೆ ಸಂಬಂಧಿಕರೇ ಆದರೂ ನಾನು ಒಪ್ಪುವುದಿಲ್ಲ. ಕಾಮಗಾರಿ ಕಳಪೆಯಾಗಿದ್ದರೇ ಎಷ್ಟೇ ದೊಡ್ಡ ವ್ಯಕ್ತಿಯಾಗಿದ್ದರೂ ಬಿಡುವುದಿಲ್ಲ ಎಂದರು.

ಬೈಕಿನಲ್ಲಿ ಹಳ್ಳಿ-ಹಳ್ಳಿ ಸುತ್ತುತ್ತಿರುವ ಶಾಸಕ ಹೆಚ್.ಡಿ.ತಮ್ಮಯ್ಯ

ಚಿಕ್ಕಮಗಳೂರು: ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರನ್ನು ಸೋಲಿಸಿ ಶಾಸಕರಾಗಿರುವ ಅವರ ಆಪ್ತ ಎಚ್.ಡಿ.ತಮ್ಮಯ್ಯ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬೈಕ್ ಏರಿ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ.

Congress MLA H.D thammaiah Sarcasm Against BJP Leader CT Ravi

ಬೈಕ್‍ನಲ್ಲಿ ಹಳ್ಳಿ ಹಳ್ಳಿಗಳಿಗೆ ಭೇಟಿ ನೀಡುತ್ತಿರುವ ನೂತನ ಶಾಸಕ ಎಚ್.ಡಿ.ತಮ್ಮಯ್ಯ ಅವರಿಗೆ ಗ್ರಾಮೀಣ ಪ್ರದೇಶದ ಯುವಕರು ಸಾಥ್ ನೀಡುತ್ತಿದ್ದಾರೆ. ಗ್ರಾಮೀಣ ಪ್ರದೇಶಕ್ಕೆ ತೆರಳುತ್ತಿದ್ದಂತೆ ಗ್ರಾಮಸ್ತರು ಎಚ್.ಡಿ.ತಮ್ಮಯ್ಯ ಅವರನ್ನು ಆತ್ಮೀಯವಾಗಿ ಬರ ಮಾಡಿಕೊಳ್ಳುತ್ತಿದ್ದು ಹೃದಯಪೂರ್ವಕ ಸ್ವಾಗತ ಕೋರುತ್ತಿದ್ದಾರೆ.

ಬಿಜೆಪಿ ಪಕ್ಷದಲ್ಲಿದ್ದಾಗ ಎಚ್.ಡಿ ತಮ್ಮಯ್ಯ ಸಿ.ಟಿ.ರವಿಗೆ ಆಪ್ತರಾಗಿದ್ದರೂ. ಬಿಜೆಪಿಯಲ್ಲಿದ್ದಾಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದರು. ಆದರೆ, ಎಚ್.ಡಿ.ತಮ್ಮಯ್ಯ ಅವರಿಗೆ ಅಧ್ಯಕ್ಷ ಸ್ಥಾನ ನೀಡದೆ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಆನಂದ್ ಅವರನ್ನು ಮುಂದುವರೆಸಲಾಯಿತು. ಇದರಿಂದ ಅಸಮಾಧಾನಗೊಂಡ ಎಚ್.ಡಿ.ತಮ್ಮಯ್ಯ 2023ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಮಗಳೂರು ಕ್ಷೇತ್ರದಿಂದ ಬಿಜೆಪಿ ಟಿಕೆಟ್ ನೀಡುವಂತೆ ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮುರಡಪ್ಪ ಅವರಿಗೆ ಮನವಿ ಮಾಡಿದ್ದರು.

ಬಿಜೆಪಿ ಟಿಕೆಟ್ ಖಾತ್ರಿಗೊಳ್ಳದ ಹಿನ್ನಲೆಯಲ್ಲಿ ತಮ್ಮ ಬೆಂಬಲಿಗರೊಂದಿಗೆ ಬೇಷರತ್ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂದ್ದರು. ಆಗಲೇ ಕಾಂಗ್ರೆಸ್ ಪಕ್ಷದ ಟಿಕೆಟ್‍ಗಾಗಿ ಹಲವು ಮಂದಿ ಆಕಾಂಕ್ಷಿಗಳು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದರು. ಕಾಂಗ್ರೆಸ್ ಸೇರಿದ ತಮ್ಮಯ್ಯ ಒಂದೇ ತಿಂಗಳಲ್ಲಿ ವಿಧಾನಸಭಾ ಚುನಾವಣೆಯ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ತರುವಲ್ಲಿ ಯಶಸ್ವಿಯಾಗಿದ್ದರು.

ಟಿಕೆಟ್ ಘೋಷಣೆಯಾಗಿ 20 ದಿನದಲ್ಲೇ ವಿಧಾನಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡರ ನೇತೃತ್ವದಲ್ಲಿ ತಂಡವನ್ನು ಕಟ್ಟಿಕೊಂಡು ಪಕ್ಷದ ಮುಖಂಡರ ಸಹಕಾರದೊಂದಿಗೆ ಕಾಲಿಗೆ ಚಕ್ರಕಟ್ಟಿಕೊಂಡು ಹಳ್ಳಿಗಳನ್ನು ಸುತ್ತಾಡಿದ್ದರು. ಕ್ಷೇತ್ರ ಸಮಿತಿ ಅಧ್ಯಕ್ಷರಾಗಿರುವ ಹಂಪಾಪುರ ಮಂಜೇಗೌಡ ಅವರ ಪೂರ್ಣಪ್ರಮಾಣದ ಸಹಕಾರ ನೀಡಿದ್ದು, ಹಗಲು, ರಾತ್ರಿ ದುಡಿದ ಪರಿಣಾಮ 5ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಗೆಲುವನ್ನು ತನ್ನದಾಗಿಸಿಕೊಂಡರು.

ಗೆಲುವು ಸಾಧಿಸಿದ ಎಚ್.ಡಿ.ತಮ್ಮಯ್ಯ ಅವರು ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ್ದು, ಸರ್ಕಾರ ರಚನೆಯಾಗುವವರೆಗೂ ರಾಜಧಾನಿಯಲ್ಲಿದ್ದ ಅವರು ಸದ್ಯ ಚಿಕ್ಕಮಗಳೂರಿನಲ್ಲಿ ಇದ್ದು ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಮತದಾರರಿಗೆ ಕೃತಜ್ಞತೆ ಸಲ್ಲಿಸಲು ಬೈಕ್‍ನಲ್ಲಿ ಹಳ್ಳಿಗಳಿಗೆ ತೆರಳುತ್ತಿದ್ದು, ನೂತನ ಶಾಸಕರ ಈ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಗ್ರಾಮೀಣ ಪ್ರದೇಶದ ಯುವಕರು ಸಾಥ್ ನೀಡುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+