ಬಾರ್ ಬಂದ್ ಮಾಡ್ಸಿ ಸರ್, ಚಿಕ್ಕ ಮಕ್ಕಳು ಹಾಳಾಗುತ್ತಿದ್ದಾರೆ- ಸಚಿವರ ಮುಂದೆ ಬೇಡಿಕೊಂಡ ಮಹಿಳೆ

ಚಿಕ್ಕಮಗಳೂರು ಜುಲೈ 7: ಆಟವಾಡೊ ಮಕ್ಕಳೆಲ್ಲ ಬಾರಿಗೆ ಹೋಗ್ತಿದ್ದಾರೆ ಸರ್ ಬಾರ್ ಬಂದ್ ಮಾಡ್ಸಿ ಸರ್' ಎಂದು ಸಚಿವರ ಮುಂದೆ ಮಹಿಳೆಯೊಬ್ಬರು ಕೈ ಮುಗಿದು ಬೇಡಿಕೊಂಡಿದ್ದಾರೆ.

ನಗರದ ನಿರ್ಮಾಣವಾಗುತ್ತಿರುವ ಮೆಡಿಕಲ್ ಕಾಲೇಜಿಗೆ ವೈದ್ಯಕೀಯ ಸಚಿವ ಶರಣ ಪ್ರಕಾಶ್ ಪಾಟೀಲ್ ಅವರು ಭೇಟಿ ನೀಡಿ ಪರಶೀಲನೆ ನಡೆಸಿದರು. ಬಳಿಕ ಅವರು ಮರ್ಲೆ ಗ್ರಾಮದ ಮೂಲಕ ಮರಳಿ ಹೋಗುವ ವೇಳೆ ಕಾರಿನ ಬಳಿ ಬಂದ ಮಹಿಳೆ, 'ನಮ್ಮೂರಲ್ಲಿ ಕದ್ದು ಕದ್ದು ಎಣ್ಣೆ ಮಾರುತಿದ್ದಾರೆ ಸರ್. ಆಟವಾಡೊ ಮಕ್ಕಳೆಲ್ಲ ಕುಡಿದು ಸತ್ತು ಹೋಗ್ತಿದ್ದಾರೆ. ಬಾರ್ ಬಂದ್ ಮಾಡ್ಸಿ ಸರ್..' ಎಂದು ಅಳಲು ತೋಡಿಕೊಂಡಿದ್ದಾರೆ.

Close the bar sir A woman begged in front of the minister

ಸಚಿವ ಶರಣಪ್ರಕಾಶ್ ಪಾಟೀಲ್ ಬಳಿ ಕೈಮುಗಿದು ಬೇಡಿದ ಮಹಿಳೆ ಮರ್ಲೆ ಗ್ರಾಮದಲ್ಲಿ ವೈನ್ ಶಾಪ್ ನಿಂದ ಆಗುತ್ತಿರೋ ಅನಾಹುತ ಬಗ್ಗೆ ಹೇಳಿಕೊಂಡಿದ್ದಾರೆ.. ಚಿಕ್ಕ ಚಿಕ್ಕ ಮಕ್ಕಳೆಲ್ಲ ಮಧ್ಯವಸನಿಗಳಾಗಿದ್ದಾರೆ. ದಯಮಾಡಿ ವೈನ್ ಶಾಪ್ ಕ್ಲೋಸ್ ಮಾಡ್ಸಿ ಎಂದು ಮಹಿಳೆ ಮನವಿ ಮಾಡಿದ್ದಾರೆ.

ಡಿಸಿ ಕಚೇರಿ ಮುಂದೆ ಪ್ರತಿಭಟನೆ ಮಾಡಿ ಮನವಿ ಕೊಟ್ಟಿದ್ದೇವೆ. ಆದರೂ ಪ್ರಯೋಜನವಾಗಿಲ್ಲ ಎಂದು ಸಚಿವರ ಬಳಿ ಗ್ರಾಮಸ್ಥರ ಅಳಲು ತೋಡಿಕೊಂಡಿದ್ದಾರೆ. ಮಕ್ಕಳ ಹಾಸ್ಟರ್ ಎದುರುಗಡೆನೇ ವೈನ್ ಶಾಪ್ ಇದೆ. ಇದರಿಂದ ಮಕ್ಕಳು ಹಾಳಾಗದೇ ಏನಾಗ್ತಾರೆ ಅಂತ ಸ್ಥಳೀಯರು ಆಕ್ರೋಶಗೊಂಡಿದ್ದಾರೆ.

ಚಿಕ್ಕಮಗಳೂರು ಮದ್ಯ ಮಾರಾಟ

ಚಿಕ್ಕಮಗಳೂರಿನಲ್ಲಿ ಚುನಾವಣೆ ಜಾತ್ರೆ ಮಹೋತ್ಸವಗಳು ಇದ್ದಾಗ ಮದ್ಯಮಾರಾಟ ಬಂದ್ ಮಾಡಲಾಗುತ್ತದೆ. ಬಳಿಕ ಮದ್ಯದ ಅಂಗಡಿಗಳು ಚಿಕ್ಕಪುಟ್ಟ ಮಕ್ಕಳಿಗೆ ಮದ್ಯ ವಿತರಿಸುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದಿವೆ. ಮದ್ಯ ವಿತರಿಸುವಾಗ ಚಿಕ್ಕಮಕ್ಕಳಿಗೂ ಮಾರಾಟಗಾರರು ಮದ್ಯದ ಬಾಟಲಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಹೀಗಾಗಿ ಶಾಲೆಗೆ ಹೋಗುವ ಮಕ್ಕಳು ಕೂಡ ಮದ್ಯವ್ಯಸನಿಗಳಾಗಿದ್ದಾರೆ ಎಂದು ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.

Close the bar sir A woman begged in front of the minister

ಅದನ್ನು ಖರೀದಿಸಲು ಮನೆಯಲ್ಲಿ ದುಡ್ಡಿ ನೀಡಿಲ್ಲ ಅಂತಾದರೆ ಕಳ್ಳತನಕ್ಕೆ ಮುಂದಾಗಿದ್ದಾರೆ. ಜೊತೆಗೆ ಮನೆಯವರಿಗೆ ಬೆದರಿಕೆ ಹಾಕಿ ಮದ್ಯ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಮದ್ಯ ಮಾರಾಟವೇ ನಿಲ್ಲಿಸಬೇಕು ಎಂದು ಜನ ಮನವಿ ಮಾಡಿದ್ದಾರೆ.

ಮದ್ಯದಂಗಡಿಗಳಲ್ಲಿ ಕುಡಿದು ಹಣ ನೀಡದೇ ಮಕ್ಕಳು ಮನೆಗೆ ವಾಪಾಸ್ ಆಗಿ ಪೋಷಕರಿಗೆ ಸಂಕಷ್ಟಕ್ಕೆ ತಂದೊಡ್ಡುತ್ತಿದ್ದಾರೆ. ಸಾಲ ಮಾಡಿಕೊಳ್ಳುತ್ತಿದ್ದಾರೆ ಎನ್ನುವ ಆರೋಪಗಳು ಕೇಳಿ ಬಂದಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+