ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರು ನಗರಸಭೆಯಲ್ಲಿ ಬಿಜೆಪಿಗೆ ಬಹುಮತ: ಖಾತೆ ತೆರೆದ ಎಸ್‌ಡಿಪಿಐ

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಡಿಸೆಂಬರ್ 30: ರಾಜ್ಯದಲ್ಲಿ ಡಿಸೆಂಬರ್ 27ರಂದು ನಡೆದಿದ್ದ 19 ಜಿಲ್ಲೆಗಳ ಐದು ನಗರಸಭೆ ಸೇರಿದಂತೆ 58 ನಗರ ಸ್ಥಳೀಯ ಸಂಸ್ಥೆ ಚುನಾವಣೆಯ ಫಲಿತಾಂಶ ಪ್ರಕಟವಾಗಿದೆ.

ಐದು ನಗರಸಭೆ, 19 ಪುರಸಭೆ ಹಾಗೂ 34 ಪಟ್ಟಣ ಪಂಚಾಯಿತಿಗಳ ಭವಿಷ್ಯ ತೀರ್ಮಾನವಾಗಿದೆ. ಒಟ್ಟು 1185 ವಾರ್ಡ್‌ಗಳಲ್ಲಿ ಒಟ್ಟು 4ಸಾವಿರದ 961 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಎಲ್ಲರ ಭವಿಷ್ಯ ಪ್ರಕಟಗೊಂಡಿದೆ.

ಇನ್ನು ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ಚಿಕ್ಕಮಗಳೂರು ನಗರಸಭೆ ಚುನಾವಣೆಯ ಫಲಿತಾಂಶ ಹೊರ ಬಿದ್ದಿದ್ದು, ಬಿಜೆಪಿ ಪಕ್ಷ ಸರಳ ಬಹುಮತ ಗಳಿಸಿ ಮೂರನೇ ಬಾರಿಗೆ ಅಧಿಕಾರಕ್ಕೇರಿದೆ.

Chikkamagaluru Nagarasabha Election Result 2021: BJP Gets Majority

ಚಿಕ್ಕಮಗಳೂರು ನಗರಸಭೆಯ 35 ವಾರ್ಡ್‌ಗಳಿಗೆ ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಬಿಜೆಪಿ ಸರಳ ಬಹುಮತ ಗಳಿಸಿದೆ. ಈ ಮೂಲಕ ನಗರಸಭೆ ಅಧಿಕಾರದ ಗದ್ದುಗೆ ಬಿಜೆಪಿ ಪಾಲಾಗಿದೆ.

ಬಿಜೆಪಿ 18, ಕಾಂಗ್ರೆಸ್ 12, ಜೆಡಿಎಸ್ 2, ಪಕ್ಷೇತರ ಅಭ್ಯರ್ಥಿಗಳು 2 ಮತ್ತು ಎಸ್‌ಡಿಪಿಐ 1 ಸ್ಥಾನದಲ್ಲಿ ಜಯ ಗಳಿಸಿದೆ. ನಗರಸಭೆಯಲ್ಲಿ ಹಿಂದಿನ‌ ಎರಡು ಅವಧಿಗೆ ಅಧಿಕಾರ ಹಿಡಿದಿದ್ದ ಬಿಜೆಪಿ ಮೂರನೇ ಅವಧಿಗೂ ಸರಳ ಬಹುಮತ ಪಡೆಯುವುದರೊಂದಿಗೆ ಮತ್ತೆ ಪ್ರಾಬಲ್ಯ ಮೆರೆದಿದೆ. ಎಸ್‌ಡಿಪಿಐ ಇದೇ ಮೊದಲ ಬಾರಿಗೆ ತನ್ನ ಖಾತೆಯನ್ನು ತೆರೆದಿದೆ.

Chikkamagaluru Nagarasabha Election Result 2021: BJP Gets Majority

ಚಿಕ್ಕಮಗಳೂರು ನಗರಸಭೆಯಲ್ಲಿ ಗೆಲುವು ಸಾಧಿಸಿದವರು
1. ಕವಿತಾ ಶೇಖರ್- ಬಿಜೆಪಿ
2. ಸಿ.ಎ ಇಂದಿರಾ- ಕಾಂಗ್ರೆಸ್
3. ಅರುಣ್ ಕುಮಾರ್- ಬಿಜೆಪಿ
4. ವಿದ್ಯಾ ಬಸವರಾಜ್- ಬಿಜೆಪಿ
5. ಮಧುಕುಮಾರ್- ಬಿಜೆಪಿ
6. ಸುಜಾತಾ ಶಿವಕುಮಾರ್- ಬಿಜೆಪಿ
7. ಕುಮಾರ್- ಬಿಜೆಪಿ
8. ಎ. ಕುಮಾರ್- ಜೆಡಿಎಸ್
9. ಪರಮೇಶ್ ರಾಜ್ ಅರಸ್- ಕಾಂಗ್ರೆಸ್
10. ರೂಪ ಕುಮಾರ್- ಬಿಜೆಪಿ
11. ಉಮಾದೇವಿ- ಬಿಜೆಪಿ
12. ಜಾವಿದ್- ಕಾಂಗ್ರೆಸ್
13. ಗೋಪಿ- ಜೆಡಿಎಸ್
14. ಅನು ಮಧುಕರ್- ಬಿಜೆಪಿ
15. ಶಿಲ್ಪಾ ದಿನೇಶ್- ಪಕ್ಷೇತರ
16. ಎ. ಖಲಂದರ್ ಮೋಣು- ಕಾಂಗ್ರೆಸ್
17. ಮುನೀರ್ ಅಹಮ್ಮದ್- ಪಕ್ಷೇತರ
18. ಮಣಿಕಂಠ- ಬಿಜೆಪಿ
19. ಶಹಾಬಾದ್ ಅಲಂ ಖಾನ್- ಕಾಂಗ್ರೆಸ್
20. ತಬಸ್ಸುಮ್ ಭಾನು- ಕಾಂಗ್ರೆಸ್
21. ವಿಪುಲ್ ಜೈನ್- ಬಿಜೆಪಿ
22. ಸಿ.ಎನ್. ಸಲ್ಮಾ- ಕಾಂಗ್ರೆಸ್
23. ಮಂಜುಳಾ ಶ್ರೀನಿವಾಸ್- ಎಸ್‌ಡಿಪಿಐ
24. ಗುರುಮಲ್ಲಪ್ಪ- ಕಾಂಗ್ರೆಸ್
25. ಲಕ್ಷ್ಮಣ್- ಕಾಂಗ್ರೆಸ್
26. ವರಸಿದ್ಧಿ ವೇಣುಗೋಪಾಲ್- ಬಿಜೆಪಿ
27. ಟಿ ರಾಜಶೇಖರ್- ಬಿಜೆಪಿ
28. ರಾಜು- ಬಿಜೆಪಿ
29. ಅಮೃತೇಶ್ ಚನ್ನಕೇಶವ- ಬಿಜೆಪಿ
30. ಗೌಸಿಯಾ ಖಾನ್- ಕಾಂಗ್ರೆಸ್
31. ದೀಪಾ ರವಿ- ಬಿಜೆಪಿ
32. ಭವ್ಯ ಮಂಜುನಾಥ್- ಬಿಜೆಪಿ
33. ಲಕ್ಷ್ಮಣ್- ಕಾಂಗ್ರೆಸ್
34. ಮಂಜುಳಾ- ಕಾಂಗ್ರೆಸ್
35. ಲಲಿತಾಬಾಯಿ- ಬಿಜೆಪಿ

ರಾಜ್ಯದ ಒಟ್ಟು ಫಲಿತಾಂಶ ಏನಿದೆ?
ರಾಜ್ಯದ ಒಟ್ಟು 19 ಪುರಸಭೆಗಳ 441 ಸ್ಥಾನಗಳ ಪೈಕಿ ಕಾಂಗ್ರೆಸ್- 201, ಬಿಜೆಪಿ- 176, ಜೆಡಿಎಸ್- 21 ಮತ್ತು 43 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

Chikkamagaluru Nagarasabha Election Result 2021: BJP Gets Majority

ಕಾಂಗ್ರೆಸ್ ಪಕ್ಷ ಮೇಲುಗೈ
ರಾಜ್ಯದ ಒಟ್ಟು 34 ಪಟ್ಟಣ ಪಂಚಾಯತ್‌ಗಳ 577 ಸ್ಥಾನಗಳ ಪೈಕಿ ಕಾಂಗ್ರೆಸ್- 236, ಬಿಜೆಪಿ- 194, ಜೆಡಿಎಸ್- 12 ಮತ್ತು 135 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

5 ನಗರಸಭೆಗಳ ಚುನಾವಣಾ ಫಲಿತಾಂಶದ ಒಟ್ಟು 166 ಸ್ಥಾನಗಳ ಪೈಕಿ ಬಿಜೆಪಿಯ- 67, ಕಾಂಗ್ರೆಸ್‌ನ 61, ಜೆಡಿಎಸ್‌ನ 12 ಮತ್ತು 26 ಪಕ್ಷೇತರ ಅಭ್ಯರ್ಥಿಗಳು ಜಯ ಗಳಿಸಿದ್ದಾರೆ.

English summary
The BJP has won 18 seats in the 35 wards of Chikkamagaluru Municipality election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X