ಚಿಕ್ಕಮಗಳೂರು; ಹನುಮಾನ್ ಚಾಲೀಸಾ ಹೇಳಿ ದಾಖಲೆ ಬರೆದ ಹುಡುಗಿ
ಚಿಕ್ಕಮಗಳೂರು, ಜನವರಿ 06: ಚಿಕ್ಕಮಗಳೂರಿನ 13 ವರ್ಷದ ಜಿ. ತನ್ಮಯಿ ವಸಿಷ್ಟ ಎಂಬ ಹುಡುಗಿ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಭಾಜನರಾಗಿದ್ದಾರೆ. 1 ನಿಮಿಷ 10ಸೆಕೆಂಡ್‍ಗಳಲ್ಲಿ ವೇಗವಾಗಿ ಹನುಮಾನ್ ಚಾಲೀಸಾ ಹೇಳುವ ಮೂಲಕ ದಾಖಲೆ ಮಾಡಿದ್ದಾರೆ.
ಕೇಂದ್ರೀಯ ವಿದ್ಯಾಲಯದಲ್ಲಿ 8ನೇ ತರಗತಿ ಓದುತ್ತಿರುವ ಜಿ. ತನ್ಮಯಿ ವಸಿಷ್ಟ ವಿಜಯಪುರದ ಎಲ್. ವಿ. ಗಿರೀಶ್ ಮತ್ತು ಕೃಪಾ ದಂಪತಿಗಳ ಪುತ್ರಿ. ಶ್ಲೋಕ ಹೇಳುವುದು, ಹಾಡು ಹೇಳುವುದು, ಕವನ ರಚಿಸುವುದು ಇತ್ಯಾದಿ ಹವ್ಯಾಸಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ.
1 ನಿಮಿಷ 10ಸೆಕೆಂಡ್‍ಗಳಲ್ಲಿ ವೇಗವಾಗಿ ಹನುಮಾನ್ ಚಾಲೀಸಾ ಹೇಳುವ ತನ್ಮಯಿ ಅವರ ಸಾಧನೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆಗೆ ಸೇರಿದೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಮನೆಯಲ್ಲಿಯೇ ತನ್ಮಯಿ ಅಭ್ಯಾಸ ನಡೆಸುತ್ತಿದ್ದರು.

ಅನೇಕ ಆನ್‍ಲೈನ್ ಸ್ಫರ್ಧೆಗಳಲ್ಲೂ ಸಹ ತನ್ಮಿಯಿ ಭಾಗವಹಿಸಿ ವಿಜೇತರಾಗಿದ್ದಾರೆ. ಚಕ್ರವರ್ತಿ ಸೂಲಿಬೆಲೆ ಅವರು ಲಾಕ್‍ಡೌನ್ ಸಮಯದಲ್ಲಿ ನಡೆಸಿಕೊಟ್ಟ ನಚಿಕೇತ ಮತ್ತು ಸೀತಾ ಸಂಭ್ರಮ ಆನ್‍ಲೈನ್ ಸ್ಫರ್ಧೆಯಲ್ಲಿ ಭಾಗವಹಿಸಿ ಬಹುಮಾನ ಪಡೆದ್ದಾರೆ.

ಚಿಕ್ಕಗಳೂರಿನ ಈ ವಿದ್ಯಾರ್ಥಿಯು ಇಂಡಿಯಾ ಬುಕ್ ಆಫ್ ರೇಕಾರ್ಡ್‍ನಲ್ಲಿ ದಾಖಲೆ ಮಾಡುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾಳೆ. ಜಿ. ತನ್ಮಯಿ ವಸಿಷ್ಟ ಸಾಧನೆಗೆ ಅನೇಕರು ಶುಭಾಶಯಗಳನ್ನು ಹೇಳಿದ್ದಾರೆ.
ಪುಟಾಣಿಯ ಸಾಧನೆ : 2020ರ ಡಿಸೆಂಬರ್‌ನಲ್ಲಿ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಪರಸನಹಳ್ಳಿಯ ಶಾಂತಗೌಡ ಮತ್ತು ವಿದ್ಯಾಶ್ರೀ ದಂಪತಿ ಪುತ್ರಿ ಪ್ರತೀಕ್ಷಾ ಬಿರಾದಾರ ಕರ್ನಾಟಕ ಅಚೀವರ್ಸ್ ಬುಕ್ ಆಫ್ ರೆಕಾರ್ಡ್ ಸೇರಿದ್ದಳು.
ಎರಡು ವರ್ಷ ಐದು ತಿಂಗಳ ಪ್ರತೀಕ್ಷಾ ಭಾರತದ ರಾಜಧಾನಿ, ರಾಷ್ಟ್ರಪತಿ, ಪ್ರಧಾನಮಂತ್ರಿ, ಜ್ಞಾನಪೀಠ ಪ್ರಶಸ್ತಿ ಪಡೆದವರ ಹೆಸರುಗಳನ್ನು ಪಟಪಟನೆ ಹೇಳುವ ಮೂಲಕ ಎಲ್ಲರ ಗಮನ ಸೆಳೆದಿದ್ದಳು.












Click it and Unblock the Notifications