ಜನತಾ ಕರ್ಫ್ಯೂಗೆ ಚಿಕ್ಕಮಗಳೂರು ಜಿಲ್ಲೆ ಶಾಸಕರ ಬೆಂಬಲ
ಚಿಕ್ಕಮಗಳೂರು, ಮಾರ್ಚ್ 22: ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಇಂದು ಕರೆ ನೀಡಿರುವ ಜನತಾ ಕರ್ಫ್ಯೂ ಗೆ ಚಿಕ್ಕಮಗಳೂರು ಜಿಲ್ಲೆಯ ಶಾಸಕರು ಬೆಂಬಲ ನೀಡಿದ್ದಾರೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರ ಜಿಲ್ಲೆಯ ತರೀಕೆರೆ ಕ್ಷೇತ್ರದ ಶಾಸಕ ಡಿ.ಎಸ್ ಸುರೇಶ್ ತಮ್ಮ ತಾವೇ ಮನೆಯಲ್ಲಿ ಅಡುಗೆ ಮಾಡುವ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಈ ಮೂಲಕ ಜನ ಸಾಮಾನ್ಯರಿಗೂ ಮನೆಯಲ್ಲಿಯೇ ಇರುವಂತೆ ಸೂಚಿಸಿದ್ದಾರೆ. ಬೆಳಿಗ್ಗೆಯಿಂದಲೇ ಮನೆಯಲ್ಲಿಯಿರುವ ಶಾಸಕ ಸುರೇಶ್, ಬೆಳಿಗ್ಗೆ ಉಪಹಾರವಾಗಿ ಪುರಿಯನ್ನು ತಾವೇ ಬೇಯಿಸಿ ಮಕ್ಕಳಿಗೆ ಬಡಿಸಿದ್ದಾರೆ.

ಈ ಮೂಲಕ ಕ್ಷೇತ್ರದ ಜನರಿಗೆ ತಾವೂ ಸಹ ಮನೆಯಲ್ಲಿಯೇ ಇದ್ದು, ಕುಟುಂಬದ ಜೊತೆ ಕಾಲ ಕಳೆಯುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಇನ್ನು ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ತಮ್ಮ ನೆಚ್ಚಿನ ನಾಯಿಯ ಜೊತೆ ಸಮಯ ಕಳೆದರು. ಇನ್ನು ಸಚಿವ ಸಿ.ಟಿ ರವಿ ಸೈಕಲ್ ಸವಾರಿ ಮಾಡಿ, ಜನತಾ ಕರ್ಫ್ಯೂಗೆ ಬೆಂಬಲ ನೀಡಿದರು.











Click it and Unblock the Notifications