ಬೆಂಗಳೂರಿನಲ್ಲಿರುವ ಜನರನ್ನು ಕಳುಹಿಸಿಕೊಡಿ: ಬಿಜೆಪಿ ಶಾಸಕ ಮನವಿ

ಚಿಕ್ಕಮಗಳೂರು, ಮಾರ್ಚ್ 30: ಬೆಂಗಳೂರಿನಲ್ಲಿರುವ ಕ್ಷೇತ್ರದ ಜನರನ್ನು ಊರಿಗೆ ಕಳುಹಿಸಿಕೊಡಿ ಎಂದು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಲ್ಲಿ ಮೂಡಿಗೆರೆ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಮನವಿ ಮಾಡಿಕೊಂಡಿದ್ದಾರೆ.

ವಿಡಿಯೋ ಮಾಡುವುದರ ಮೂಲಕ ಮುಖ್ಯಮಂತ್ರಿಗೆ ಒತ್ತಡ ಹಾಕಿರುವ ಶಾಸಕ, ""ದಯವಿಟ್ಟು ಮೂಡಿಗೆರೆ ಕ್ಷೇತ್ರದ ಯುವಕ-ಯುವತಿಯರನ್ನು ಊರಿಗೆ ಕಳುಹಿಸಿಕೊಡಿ, ಅಮಾಯಕರ ಮೇಲೆ ಪೊಲೀಸರ ದೌರ್ಜನ್ಯ ಹೆಚ್ಚಾಗಿದೆ ಎಂದಿದ್ದಾರೆ.''

ಇದೀಗ ಬೆಂಗಳೂರಿನಲ್ಲಿ ಅವರೆಲ್ಲರೂ ಕೆಲಸವಿಲ್ಲದೇ ಸಂಕಷ್ಟದಲ್ಲಿದ್ದಾರೆ, ಸರ್ಕಾರ ತೆಗೆದುಕೊಂಡ ತೀರ್ಮಾನದಿಂದ ಅನೇಕ ಜನರ ಬದುಕು ಬೀದಿಗೆ ಬಿದ್ದಿದೆ. ಉತ್ತರ ಪ್ರದೇಶ, ದೆಹಲಿ ಸರ್ಕಾರಗಳು ತೆಗೆದುಕೊಂಡ ನಿರ್ಧಾರವನ್ನು ನೀವು ಪಾಲಿಸಿ ಎಂದಿದ್ದಾರೆ.

BJP MLA Appeals To Send Mudigere People From Bengaluru

ಚುನಾವಣಾ ಸಂದರ್ಭದಲ್ಲಿ ಬೆಂಗಳೂರಿನಿಂದ ನನಗೆ ವೋಟ್ ಹಾಕಲು ಯುವಕ-ಯುವತಿಯರು ಬಂದಿದ್ದರು, ಈಗ ಅವರ ಕ್ಷೇಮ ನನಗೆ ಮುಖ್ಯ. ಹಾಗಾಗಿ ದಯವಿಟ್ಟು ವೈದ್ಯಕೀಯ ಪರೀಕ್ಷೆ ಮಾಡಿಸಿ ಜನರನ್ನು ಹಳ್ಳಿಗಳಿಗೆ ಕಳುಹಿಸಿಕೊಡಿ ಎಂದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+