Bhadra Dam: ಜೂನ್ 10ರಂದು ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ?
Bhadra Dam: ರಾಜ್ಯಕ್ಕೆ ಅವಧಿಗೂ ಮುನ್ನ ಮುಂಗಾರು ಎಂಟ್ರಿ ಕೊಟ್ಟ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಹಾಗೆಯೇ ಹಲವು ಕೆರೆ-ಕಟ್ಟೆಗಳು ತುಂಬಿ ಹರಿದಿದ್ದವು. ಕೆಲ ಜಲಾಶಯಗಳಿಗೂ ಸಹ ಅಲ್ಪ ಪ್ರಮಾಣದಲ್ಲಿ ನೀರು ಹರಿದುಬಂದಿತ್ತು. ಹಾಗಾದರೆ ಇಂದು (ಜೂನ್ 10) ಭದ್ರಾ ಜಲಾಶಯದ ನೀರಿನ ಮಟ್ಟ ಎಷ್ಟಿದೆ ಎನ್ನುವ ಮಾಹಿತಿಯನ್ನು ಅಂಕಿಅಂಶಗಳ ಸಹಿತ ಇಲ್ಲಿ ನೀಡಲಾಗಿದೆ ತಿಳಿಯಿರಿ.
ಅವಧಿಗೂ ಮುನ್ನ ಎಂಟ್ರಿ ಕೊಟ್ಟ ಮುಂಗಾರಿನ ಆರ್ಭಟ ಇದೀಗ ಸಂಪೂರ್ಣವಾಗಿ ನಿಂತು ಹೋಗಿಬಿಟ್ಟಿದೆ. ಕೆಲವೇ ಜಿಲ್ಲೆಗಳಲ್ಲಿ ಮಾತ್ರ ಸಾಧಾರಣ ಮಳೆ ಆಗುತ್ತಿದೆ ಬಿಟ್ಟರೆ ಬಹುತೇಕ ಭಾಗಗಳಲ್ಲಿ ಬಿಸಿಲಿನ ವಾತಾವರಣವೇ ಮುಂದುವರೆದಿದೆ. ಈಗಾಗಲೇ ಮುಂಗಾರು ಆರ್ಭಟಿಸಿದ ಪರಿಣಾಮ ಆರಂಭದಲ್ಲಿ ಭದ್ರಾ ಜಲಾಶಯಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಹರಿದುಬಂದಿತ್ತು. ಮತ್ತೆ ಮಳೆ ಆರ್ಭಟಿಸಿದರೆ ಮಾತ್ರ ಮತ್ತೆ ಒಳಹರಿವು ಹೆಚ್ಚಳ ಆಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಮುಂಗಾರು ಮಳೆ ಸಂಪೂರ್ಣವಾಗಿ ತಗ್ಗಿಬಿಟ್ಟಿದೆ. ಇದರಿಂದ ಭದ್ರಾ ಜಲಾಶಯದ ಒಳ ಹರಿವಿನಲ್ಲಿ ಕುಸಿತವಾಗಿದೆ. ಜೂನ್ 10 ಮಂಗಳವಾರ ಬೆಳಗ್ಗೆ ವೇಳೆಗೆ ಒಳ ಹರಿವು 974 ಕ್ಯೂಸೆಕ್‌ನಷ್ಟಿದೆ. ಮೇ ತಿಂಗಳ ಕೊನೆಯಲ್ಲಿ ಸತತವಾಗಿ ಸುರಿದ ಮಳೆಯಿಂದ ಒಳ ಹರಿವು 8,000 ಕ್ಯೂಸೆಕ್ ದಾಟಿತ್ತು. ಆದರೆ, ಮುಂಗಾರು ಏಂಟ್ರಿ ಬಳಿಕ ಇದೀಗ ಮಳೆ ಪ್ರಮಾಣ ಇಳಿಕೆ ಆಗಿದೆ. ಹವಾಮಾನ ಇಲಾಖೆ ಪ್ರಕಾರ, ಮುಂದಿನ ದಿನಗಳಲ್ಲಿ ಮಳೆ ಚುರುಕು ಪಡೆದರೆ ಮತ್ತೆ ಒಳಹರಿವು ಹೆಚ್ಚಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಜಲಾಶಯದ ಪ್ರಸ್ತುತ ನೀರಿನ ಮಟ್ಟ: ಭದ್ರಾ ಡ್ಯಾನ ಇದೀಗ ಪ್ರಸ್ತುತ ನೀರಿನ ಮಟ್ಟ 143.2 ಅಡಿ ಇದ್ದು, ಒಳ ಹರಿವು 974 ಕ್ಯೂಸೆಕ್ ಇದೆ. ಕಳೆದ ವರ್ಷ ಇದೇ ದಿನ 117.5 ಅಡಿ ಇತ್ತು. ಕಳೆದ ವಾರ ಬಿಡುವು ನೀಡಿದ್ದ ಮಳೆ ಈ ವಾರ ಮತ್ತೆ ಆರ್ಭಟಿಸಲಿದೆ ಎಂದು ಹವಾಮಾನ ಇಲಖೆಯಿಂದ ಮುನ್ಸೂಚನೆ ಇದೆ.
ಕಳೆದ ವರ್ಷ ಜೂನ್ ಆರಂಭದಲ್ಲೇ ಮುಂಗಾರು ಎಂಟ್ರಿ ಕೊಟ್ಟು ಭಾರೀ ಮಳೆ ಸುರಿದ ಪರಿಣಾಮ ಬಹುತೇಕ ಜಿಲ್ಲೆಗಳಲ್ಲಿ ಕೆರೆ-ಕಟ್ಟೆಗಳು, ನದಿಗಳು ಪ್ರಮುಖ ಜಲಾಶಯಗಳು ತುಂಬಿ ಹರಿದಿದ್ದವು. ಅಲ್ಲದೆ, ದೊಡ್ಡ ಅವಾಂತರಗಳು ಕೂಡ ಸಂಭವಿಸಿದ್ದವು. ಮತ್ತೊಂದೆಡೆ ಮಳೆ ರೈತರ ಮುಖದಲ್ಲಿ ಮಂದಹಾಸ ಮೂಡಿಸಿತ್ತು. ಇನ್ನೂ ಈ ವರ್ಷ 2025ರಲ್ಲಿ ಅವಧಿಗೂ ಮುನ್ನ ಮೇ ಕೊನೆಯಲ್ಲಿ ಮುಂಗಾರು ಎಂಟ್ರಿ ಕೊಟ್ಟ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿದಿತ್ತು.
ಆದರೆ, ಇದೀಗ ಮುಂಗಾರು ಮಳೆ ಆರ್ಭಟ ತಗ್ಗಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಒಂದು ವೇಳೆ ಹವಾಮಾನ ಇಲಾಖೆ ಮುನ್ಸೂನೆಯಂತೆ ಭಾರೀ ಮಳೆಯಾದ್ರೆ, ಕಳೆದ ವರ್ಷದಂತೆ ಈ ಬಾರಿಯೂ ಜಲಮೂಲಗಳು ತುಂಬುವುದಲ್ಲದೆ, ಇಷ್ಟು ದಿನ ಬಿರು ಬಿರುಬಿಸಿಲಿಗೆ ಬೇಸತ್ತಿದ್ದ ಜನರ ಮನ ತಣ್ಣಗಾದಂತಾಗಲಿದೆ.












Click it and Unblock the Notifications