ವೈ.ಎಸ್.ವಿ ದತ್ತಾಗೆ ಚುನಾವಣಾ ವೆಚ್ಚಕ್ಕಾಗಿ 101 ರೂಪಾಯಿ ನೀಡಿದ ಅಭಿಮಾನಿ
ಕಡೂರು ತಾಲೂಕಿನ ಮಾಜಿ ಶಾಸಕ ವೈ.ಎಸ್.ವಿ ದತ್ತಾ ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂಪಾಯಿ ಹಣ ನೀಡಿ ಶುಭಕೋರಿದ್ದಾರೆ.
ಚಿಕ್ಕಮಗಳೂರು, ಮಾರ್ಚ್, 14: ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನ ಮಾಜಿ ಶಾಸಕ ವೈಎಸ್‌ವಿ ದತ್ತಾ ಅವರಿಗೆ ಚುನಾವಣೆ ಖರ್ಚಿಗಾಗಿ ಅಭಿಮಾನಿಯೊಬ್ಬ 101 ರೂಪಾಯಿ ಹಣ ನೀಡಿ ಶುಭಕೋರಿದ್ದಾರೆ. ವೈಎಸ್‌ವಿ ದತ್ತಾ ಅವರು ಕಳೆದ ಎರಡು ತಿಂಗಳ ಹಿಂದೆ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದು, ಇದೀಗ ಕಡೂರಿನ ಕಾಂಗ್ರೆಸ್ ಅಭ್ಯರ್ಥಿ ಎಂದೇ ಬಿಂಬಿತವಾಗಿದ್ದಾರೆ. ಹಾಗಾಗಿ, ಕಡೂರು ತಾಲೂಕಿನ ಗಿರಿಯಾಪುರ ಮೂಲದ ವ್ಯಕ್ತಿಯೊಬ್ಬರು 101 ರೂಪಾಯಿ ದಾನ ನೀಡಿ ಚುನಾವಣೆಗೆ ಶುಭಕೋರಿದ್ದಾರೆ.
ವೈ.ಎಸ್.ವಿ ದತ್ತಾಗೆ ಹಣ ನೀಡಿದ ಅಭಿಮಾನಿ
ಕ್ಷೇತ್ರ ಹಾಗೂ ಮತದಾರರ ಮೇಲೆ ನಿಮಗೆ ಇದ್ದ ಪ್ರೀತಿ, ಕಾಳಜಿ, ಅಭಿಮಾನ ಹಾಗೂ ನೀವು ಮಾಡಿದ ಅಭಿವೃದ್ಧಿ ನೆನಪಿನಲ್ಲಿ ಉಳಿಯುವಂತಹದ್ದಾಗಿದೆ. ಆಳ್ವಾಸ್ ನುಡಿಸಿರಿಯಲ್ಲಿ ಅಖಂಡ ಕರ್ನಾಟಕದ ವಿಷಯವಾಗಿ ನೀವು ಬಿತ್ತರಿಸಿದ ನಾಡಿನ ಅಖಂಡತೆಯ ವಿಚಾರಗಳು ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದಿವೆ. ನಿಮಗಿರುವ ಮಳೆ ನೀರು ಶೇಖರಣೆ ಹಾಗೂ ಪ್ರಕೃತಿ ಉಳಿಸುವ ಪರಿಕಲ್ಪನೆ ಜನರನ್ನು ಆಕರ್ಷಿಸಿದೆ ಎಂದರು.

101 ರೂಪಾಯಿ ಹಣ ನೀಡಿ ಶುಭಹಾರೈಕೆ
ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ನಿಮ್ಮ ವ್ಯಕ್ತಿತ್ವದ ಜೊತೆ ಜರಿದ್ದಾರೆ. ನಿಮಗೆ ಜನಸಾಮಾನ್ಯರ ಸಮಸ್ಯೆಯನ್ನು ಬಗೆಹರಿಸುವ ಹೊಸ ಜವಾಬ್ದಾರಿ ಇದೆ. ಅದನ್ನು ನಿರ್ವಹಿಸುತ್ತೀರಾ ಎಂದು ನಂಬಿದ್ದೇವೆ. ನಾನು ಆರ್ಥಿಕವಾಗಿ ಶಕ್ತಿವಂತನಲ್ಲ. ಹಾಗಾಗಿ, ನಿಮಗೆ ಚಿಕ್ಕ ಕಾಣಿಕೆ ನೀಡಿದ್ದೇನೆ. ನಮ್ಮ ಮನೆಯವರ ಎಲ್ಲಾ ಮತಗಳು ನಿಮಗೆ ಹಾಕಿಸುತ್ತೇನೆ. ಸಮಾನ ಮನಸ್ಕರಾದ ಜೊತೆ ಮಾತನಾಡಿ ತಮ್ಮ ಕೈ ಬಲಗೊಳ್ಳಲು ಸಹಕರಿಸುತ್ತೇವೆ ಎಂದು ಪತ್ರ ಬರೆದು, 101 ರೂಪಾಯಿ ಹಣ ನೀಡಿ ಶುಭಹಾರೈಸಿದ್ದಾರೆ.
ಕಾಫಿನಾಡಿನಲ್ಲಿ ರಂಗೇರಿದ ಚುನಾವಣಾ ಕಣ
ಕಾಫಿನಾಡಿನಲ್ಲಿ ವಿಧಾನಸಭೆ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಆಡಳಿತ ಪಕ್ಷದ ಟಿಕೆಟ್ ಆಕಾಂಕ್ಷಿಗಳು ವಿವಿಧ ಕ್ಷೇತ್ರಗಳ ಅಲ್ಲಲ್ಲಿ ಸೀರೆ ಹಂಚುವ ಮೂಲಕ ಮತದಾರನ್ನು ತಮ್ಮತ್ತ ಸೆಳೆದುಕೊಳ್ಳುವ ತಂತ್ರಗಾರಿಕೆಯನ್ನು ಮಾಡುತ್ತಿದ್ದಾರೆ.

ಹಾಗೆಯೇ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ.ರಾಜೇಗೌಡ ನಾನೇನು ಕಮ್ಮಿ ಇಲ್ಲ ಎಂಬಂತೆ ತಮ್ಮ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಮತದಾರರಿಗೆ ಕುಕ್ಕರ್ ಹಂಚಿಕೆ ಮಾಡಲು ಮುಂದಾಗಿದ್ದಾರೆ. ಕುಕ್ಕರ್ ಹಂಚಿಕೆ ಮಾಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.












Click it and Unblock the Notifications