• search
 • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

"ಸಿದ್ದರಾಮಯ್ಯ ರಾತ್ರಿ ಬಿದ್ದ ಕನಸನ್ನು ಬೆಳಗ್ಗೆ ಬಂದು ಹೇಳುತ್ತಾರೆ"

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜನವರಿ 18: " ಸಿದ್ದರಾಮಯ್ಯ ಅವರಿಗೆ ದಿನಾ ಕನಸು ಬೀಳುತ್ತೆ. ರಾತ್ರಿ ಬಿದ್ದ ಕನಸನ್ನು ಬೆಳಗ್ಗೆ ಬಂದು ಹೇಳುತ್ತಾರೆ" ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದರು.

ಸೋಮವಾರ ಚಿಕ್ಕಮಗಳೂರಿನಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ಮಾಧ್ಯಮಗಳ ಜೊತೆ ಮಾತನಾಡಿದರು. "ಸಿದ್ದರಾಮಯ್ಯನವರದ್ದು ಜಿನ್ನಾ ವಾದ ಆಗುತ್ತೆ ಗಾಂಧಿ ವಾದ ಆಗಲ್ಲ. ಒಮ್ಮೆ ನಾನೂ ಹಿಂದೂ ಅಂತಾರೆ. ಆಮೇಲೆ ನನಗೂ ಹಿಂದೂಗೂ ಸಂಬಂಧವಿಲ್ಲ ಅಂತಾರೆ" ಎಂದು ಟೀಕಿಸಿದರು.

ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ! ನಾಯಕತ್ವ ಬದಲಾವಣೆ ಹೊಸ ಗಡುವು ಕೊಟ್ಟ ಸಿದ್ದರಾಮಯ್ಯ!

"ಒಮ್ಮೊಮ್ಮೆ ನಂದು ಗಾಂಧಿ ಹಿಂದುತ್ವ ಅಂತಾರೆ. ಗಾಂಧಿ ದನದ ಮಾಂಸ ತಿನ್ನಿ ಅಂತ ಹೇಳಿದ್ದರೆ?. ಗಾಂಧಿ ಗೋ ಹತ್ಯೆ ನಿಷೇಧ ಬಯಸಿದವರು. ಗೋ ಮಾಂಸ ತಿನ್ನುವೆ ಅನ್ನುವ ಅವರದ್ದು ಗಾಂಧಿ ಹಿಂದುತ್ವ ಹೇಗಾಗುತ್ತದೆ?" ಎಂದು ಸಿ. ಟಿ. ರವಿ ಪ್ರಶ್ನಿಸಿದರು.

ದುರ್ಬಲ ಮುಖ್ಯಮಂತ್ರಿಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ: ಸಿದ್ದರಾಮಯ್ಯದುರ್ಬಲ ಮುಖ್ಯಮಂತ್ರಿಗೆ ಮಾತ್ರ ಬ್ಲಾಕ್ ಮೇಲ್ ಮಾಡ್ತಾರೆ: ಸಿದ್ದರಾಮಯ್ಯ

"ಸಿದ್ದರಾಮಯ್ಯ ಯಾವಾಗ ಆರ್. ಎಸ್. ಎಸ್. ಗೆ ಬಂದರು ಗೊತ್ತಿಲ್ಲ. ಆರ್. ಎಸ್. ಎಸ್. ಮೂಲ ತಿಳಿಯಬೇಕಾದರೆ ಇಲ್ಲಿಗೆ ಬರಬೇಕು. ಮೊದಲು ಆರ್. ಎಸ್. ಎಸ್. ಗೆ ಬರಲಿ ಆ ಮೇಲೆ ಮೂಲ ತಿಳಿಯಲಿ. ಕೆಲವು ವೇಳೆ ಅವರಿಗೆ ಅವರ ಮೂಲದ ಬಗ್ಗೆ ಅನುಮಾನ ಬರುತ್ತೆ" ಎಂದರು.

ಬಿಎಸ್‌ವೈ ಇನ್ನು ಸ್ವಲ್ಪ ದಿನ ಮುಂದುವರಿಯುತ್ತಾರೆ; ಉಲ್ಟಾ ಹೊಡೆದ ಸಿದ್ದರಾಮಯ್ಯಬಿಎಸ್‌ವೈ ಇನ್ನು ಸ್ವಲ್ಪ ದಿನ ಮುಂದುವರಿಯುತ್ತಾರೆ; ಉಲ್ಟಾ ಹೊಡೆದ ಸಿದ್ದರಾಮಯ್ಯ

"ಸಿದ್ದರಾಮಯ್ಯಗೆ ಬಹಳ ಸಲ ತಮ್ಮ ಮೂಲದ್ದೇ ಸಂಶಯ ಕಾಡಿರುತ್ತದೆ. ಅಪ್ಪಟ ರಾಷ್ಟ್ರಭಕ್ತನಿಗೆ ಆರ್. ಎಸ್. ಎಸ್. ಮೂಲ ಗೊತ್ತಾಗೋದು. ಜಾತಿವಾದಿ, ವೋಟ್ ಬ್ಯಾಂಕ್ ರಾಜಕಾರಣ ಮಾಡುವವರಿಗೆ ಆರ್. ಎಸ್. ಎಸ್. ಮೂಲ ಗೊತ್ತಾಗಲ್ಲ"ಎಂದು ಸಿ. ಟಿ. ರವಿ ಹೇಳಿದರು.

   karkala , nippani , ಬೆಳಗಾವಿ ಮಹಾರಾಷ್ಟ್ರ ಗೆ ಸೇರಬೇಕಂತೆ !! | Oneindia Kannada

   ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಭಾನುವಾರ ಮೈಸೂರಿನಲ್ಲಿ ಮಾತನಾಡಿದ್ದರು. "ಏಪ್ರಿಲ್ ಬಳಿಕ ಯಡಿಯೂರಪ್ಪನನ್ನು ತೆಗೆಯುತ್ತಾರೆ. ನನಗೆ ಆರ್. ಎಸ್. ಎಸ್. ಮೂಲಗಳಿಂದ ಮಾಹಿತಿ ಇದೆ" ಎಂದು ಹೇಳಿದ್ದರು.

   English summary
   All statements of opposition leader of Karnataka Siddaramaiah is dream. What will come to his dream he will be said in morning said general secretary of BJP C. T. Ravi.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X