ಚಿಕ್ಕಮಗಳೂರಿನಲ್ಲಿ INRC Rally ವೇಳೆ ಅವಘಡ: ಚಾಲಕರು ಪಾರು

ಚಿಕ್ಕಮಗಳೂರು, ಡಿಸೆಂಬರ್.02: ರಾಷ್ಟ್ರಮಟ್ಟದ INRC ರಾಲಿ ವೇಳೆ ಅವಘಡ ಸಂಭವಿಸಿರುವ ಘಟನೆ ಶನಿವಾರ ಸಂಜೆ (ಡಿ.01) ನಡೆದಿದೆ.

ವೇಗವಾಗಿ‌ ಚಲಿಸುತ್ತಿದ್ದ ಎರಡು ಕಾರ್ ಗಳು ಕಾಫಿ ಎಸ್ಟೇಟ್ ತಿರುವಿನಲ್ಲಿ ಪಲ್ಟಿಯಾಗಿದ್ದು, ಕಾರ್ ಸಂಪೂರ್ಣ ಜಖಂ ಆಗಿದೆ. ಡ್ರೈವರ್ ಧ್ರುವ ಹಾಗೂ ಕೋ ಡ್ರೈವರ್ ಅರ್ಜುನ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಮತ್ತೊಂದು ತಿರುವಿನಲ್ಲಿ ಜಿಪ್ಸಿ ಪಲ್ಟಿಯಾಗಿರುವ ಘಟನೆ ಚಂದ್ರಾಪುರ ಏಸ್ಟೇಟ್ ಬಳಿ ನಡೆದಿದೆ. ಕಾಫಿ ಡೇ ಪ್ರಾಯೋಜಕತ್ವದಲ್ಲಿ ರಾಲಿ ನಡೆಯುತ್ತಿದ್ದು, Inrc ನಾಲ್ಕನೇ ಸುತ್ತಿನ ಎರಡನೇ ದಿನದ ರಾಲಿವೇಳೆ ಅವಘಡ ಸಂಭವಿಸಿದೆ.

Accident occurred at the national level inrc rally

ಕಾಫಿ ಕಣಿವೆಯ‌ ತಿರುವು ರಸ್ತೆಗಳಲ್ಲಿ 80 ಕಿ.ಮೀ.ವ್ಯಾಪ್ತಿಯಲ್ಲಿ ಈ ರಾಲಿ ನಡೆಯುತ್ತಿತ್ತು. ಅಂದಹಾಗೆ ಜಖಂ ಆದ ಕಾರ್ ಅನ್ನೇ ಮತ್ತೆ‌ ಓಡಿಸಿ ಸ್ಪರ್ಧಾಳುಗಳು ಗುರಿ ತಲುಪಿರುವುದು ವಿಶೇಷ.

ಇನ್ನೊಂದೆಡೆ ಐದು ಬಾರಿ ಜಯಗಳಿಸಿದ್ದ ಅಂತರರಾಷ್ಟ್ರೀಯ ಖ್ಯಾತಿ ಡ್ರೈವರ್ ಗೌರವ್ ಗಿಲ್ ಸೋಲು ಅನುಭವಿಸಿದ್ದಾರೆ. ರಾಲಿ ವೇಳೆ ಕಾರ್ ನಲ್ಲಿ ಕಾಣಿಸಿಕೊಂಡ ತೊಂದರೆಯಿಂದ ಗೌರವ್ ಗಿಲ್ ಸೋಲನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+