• search
  • Live TV
ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕಳೆ ತೆಗೆಯುವಾಗ ಕಾಣಿಸಿಕೊಂಡ 12 ಅಡಿ ಹೆಬ್ಬಾವು

By ಚಿಕ್ಕಮಗಳೂರು ಪ್ರತಿನಿಧಿ
|

ಚಿಕ್ಕಮಗಳೂರು, ಜುಲೈ 25: ಚಿಕ್ಕಮಗಳೂರಿನ ಎನ್.ಆರ್.ಪುರ ತಾಲೂಕಿನ ದಾಸನಗದ್ದೆ ಎಸ್ಟೇಟ್ ನ ಅಡಿಕೆ ತೋಟದಲ್ಲಿ ಕಳೆ ತೆಗೆಯುವ ಸಂದರ್ಭ 12 ಅಡಿ ಉದ್ದದ ಬೃಹತ್ ಹೆಬ್ಬಾವೊಂದು ಕಾಣಿಸಿಕೊಂಡಿದೆ.

ಸಿರಾಜುದ್ದೀನ್ ಎಂಬುವವವರಿಗೆ ಸೇರಿದ ಅಡಿಕೆ ತೋಟದಲ್ಲಿ ಹೆಬ್ಬಾವು ಕಾಣಿಸಿಕೊಂಡಿದ್ದು, ಪ್ರಾಣಿ ನುಂಗಿ ಜೀರ್ಣಿಸಿಕೊಳ್ಳಲು ತೋಟದಲ್ಲಿ ಆಶ್ರಯ ಪಡೆದಿತ್ತು.

 14 ಮೊಟ್ಟೆ ನುಂಗಿ ತೆವಳಲಾಗದೆ ಕೂತಿದ್ದ ನಾಗನ ರಕ್ಷಣೆ 14 ಮೊಟ್ಟೆ ನುಂಗಿ ತೆವಳಲಾಗದೆ ಕೂತಿದ್ದ ನಾಗನ ರಕ್ಷಣೆ

ಹೆಬ್ಬಾವು ಕಂಡು ಭಯಗೊಂಡ ಕಾರ್ಮಿಕರು ಮಾಲೀಕರಿಗೆ ವಿಷಯ ಮುಟ್ಟಿಸಿದ್ದಾರೆ. ತಕ್ಷಣವೇ ಉರಗ ತಜ್ಞ ಹರೀಂದ್ರ ಅವರಿಗೆ ಮಾಲೀಕರು ಮಾಹಿತಿ ನೀಡಿದ್ದಾರೆ.

ಸತತ ಒಂದು ಗಂಟೆಯ ಕಾರ್ಯಾಚರಣೆ ನಂತರ ಹೆಬ್ಬಾವನ್ನು ಸೆರೆಹಿಡಿಯಲಾಯಿತು. ಅರಣ್ಯ ಇಲಾಖೆಯ ಸಿಬ್ಬಂದಿ ನೇತೃತ್ವದಲ್ಲಿ ಹೆಬ್ಬೆ ಮೀಸಲು ಅರಣ್ಯ ಪ್ರದೇಶಕ್ಕೆ ಹರೀಂದ್ರ ಅವರು ಹಾವನ್ನು ಬಿಟ್ಟರು.

English summary
12 foot long python was found in the arecanut field in Dasanagadde Estate of NRPura Taluk in Chikmagalur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X