ಗರಿಗೆದರಿದ ಸಚಿವ ಸ್ಥಾನ ಲೆಕ್ಕಾಚಾರ: ಸುಬ್ಬಾರೆಡ್ಡಿ, ಸುಧಾಕರ್‌ಗೆ ಒಲಿಯುವುದೆ ಮಂತ್ರಿ ಪಟ್ಟ
ಚಿಕ್ಕಬಳ್ಳಾಪುರ, ಮೇ 16: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಕಾಂಗ್ರೆಸ್ ಪಡೆದುಕೊಂಡಿದ್ದು, ನೂತನವಾಗಿ ರಚನೆಯಾಗಲಿರುವ ಕಾಂಗ್ರೆಸ್ ಪಕ್ಷದ ಸರಕಾರದಲ್ಲಿ ಜಿಲ್ಲೆಯ ಚಿಂತಾಮಣಿ ಕ್ಷೇತ್ರದ ಶಾಸಕ ಹಿರಿಯ ಹಾಗೂ ಅನುಭವಿ ರಾಜಕಾರಣಿ ಡಾ.ಎಂ.ಸಿ.ಸುಧಾಕರ್ ಹಾಗೂ ಸತತ ಮೂರನೇ ಬಾರಿ ಆಯ್ಕೆಯಾಗಿರುವ ಬಾಗೇಪಲ್ಲಿ ಕ್ಷೇತ್ರದ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಸಚಿವ ಸ್ಥಾನಕ್ಕಾಗಿ ಲೆಕ್ಕಾಚಾರಗಳು ಗರಿಗೆದರಿವೆ.
ಕರ್ನಾಟಕ ವಿಧಾನಸಭಾ ಚುನಾವಣಾ ಫಲಿತಾಂಶ ಹೊರ ಬೀಳುತ್ತಿದ್ದಂತೆ ಜಿಲ್ಲೆಯ ಅತ್ಯಂತ ಹಿರಿಯ ರಾಜಕಾರಣಿ ಗೌರಿಬಿದನೂರಿನ ಎನ್.ಎಚ್. ಶಿವಶಂಕರರೆಡ್ಡಿ ಗೆಲುವು ಸಾಧಿಸಿದ್ದರೆ ಬಹುತೇಕ ಸಚಿವ ಸ್ಥಾನ ಅವರ ಪಾಲಾಗುತ್ತಿತ್ತು ಆದರೆ ಅವರು ಸೋಲು ಕಂಡಿರುವುದರಿಂದ, ಹ್ಯಾಟ್ರಿಕ್ ಗೆಲುವನ್ನು ಸಾಧಿಸಿರುವ ಬಾಗೇಪಲ್ಲಿ ಕ್ಷೇತ್ರದ ಶಾಸಕರು ಈ ಬಾರಿ ತಮಗೂ ಸಚಿವ ಸ್ಥಾನ ಸಿಗುವ ಭರವಸೆ ವ್ಯಕ್ತಪಡಿಸಿದ್ದಾರೆ.

ಮೂರು ಬಾರಿ ಗೆಲುವು ಕಂಡ ಚಿಂತಾಮಣಿಯ ಡಾ. ಎಂ.ಸಿ.ಸುಧಾಕರ್ ಮತ್ತು ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಪ್ರಬಲ ಆಕಾಂಕ್ಷಿಗಳು. ಈ ಚುನಾವಣೆಯಲ್ಲಿ ಗೆದ್ದ ಕಾಂಗ್ರೆಸ್ ಶಾಸಕರ ಪೈಕಿ ಸೀನಿಯರ್ ಇನ್ನು ಮೊದಲ ಬಾರಿಗೆ ಆಯ್ಕೆಯಾಗಿರುವುದರಿಂದ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಹೆಸರನ್ನು ಪರಿಗಣನೆಗೆ ತೆಗೆದುಕೊಳ್ಳುವ ಸಾಧ್ಯತೆ ಕಡಿಮೆ ಎಂಬ ಮಾತುಗಳು ಕೇಳಿಬರುತ್ತಿವೆ.
ಎನ್.ಎಚ್.ಎಸ್‌ಗೆ ಕೈ ತಪ್ಪಿದ ಅವಕಾಶ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಚುನಾವಣೆಗೆ ನಿಂತ ಶಾಸಕರ ಪೈಕಿ ಎನ್.ಎಚ್.ಶಿವಶಂಕರರೆಡ್ಡಿ ಅತ್ಯಂತ ಹಿರಿಯರು ಹಾಗೂ ಅಪಾರ ಅನುಭವಸ್ಥ ರಾಜಕಾರಣಿ, ಈ ಹಿಂದೆ 5 ಬಾರಿ ಸತತವಾಗಿ ಈ ಕ್ಷೇತ್ರದಿಂದ ಜಯಶೀಲರಾಗಿದ್ದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ ಮತ್ತು ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಆಡಳಿತಾವಧಿಯಲ್ಲಿ ಕೃಷಿ ಸಚಿವರಾಗಿ ಕಾರ್ಯ ನಿರ್ವಹಿಸಿದರು. ಆದರೆ, 6 ಬಾರಿನ ಸ್ಪರ್ಧೆಯಲ್ಲಿ ಜನರು ಕೈ ಹಿಡಿಯಲಿಲ್ಲ.

ಒಂದು ವೇಳೆ ಈ ಬಾರಿಯೂ ಜಯ ಗಳಿಸಿದ್ದರೆ ಮತ್ತೊಮ್ಮೆ ಸಚಿವರಾಗುತ್ತಿದ್ದರು. ಕಾಂಗ್ರೆಸ್‌ಗೆ ಬಾರಿ ಬಹುಮತ ಸಿಕ್ಕಿದೆ. ಇದರಿಂದ ಜಿಲ್ಲೆಯ ಉಸ್ತುವಾರಿ ಹಾಗೂ ಒಳ್ಳೆಯ ಸ್ಥಾನಮಾನ ಸಿಗುವಲ್ಲಿ ಯಾವುದೇ ಅನುಮಾನವಿರುತ್ತಿರಲಿಲ್ಲ. ಕ್ಷೇತ್ರದ ಜನರು ಪ್ರಬಲ ಸಚಿವ ಆಕಾಂಕ್ಷಿ ನಾಯಕನನ್ನು ಕಳೆದುಕೊಂಡಿದೆ. ಆದರೂ ಸಹ ಕಾಂಗ್ರೆಸ್ ಪಕ್ಷ ಸರಳ ಬಹುಮತ ಪಡೆದಿದ್ದು ಮುಂದಿನ ದಿನಗಳಲ್ಲಿ ಶಿವಶಂಕರ ರೆಡ್ಡಿ ಯವರನ್ನು ಎಂ.ಎಲ್.ಸಿ ಆಥವಾ ಇತರೆ ನಿಗಮ ಮಂಡಳಿ ಸ್ಥಾನವು ಸಿಕ್ಕೇ ಸಿಗುತ್ತದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಪಕ್ಷೇತರ ಅಭ್ಯರ್ಥಿ ಕಾಂಗ್ರೆಸ್‌ಗೆ ಬೆಂಬಲ
ಈ ಬಾರಿ ಗೌರಿಬಿದನೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಚ್.ಪುಟ್ಟಸ್ವಾಮಿಗೌಡ ಗೆದ್ದಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಬಿ.ಎನ್.ಬಚ್ಚೇಗೌಡರ ಮಗ, ಹೊಸಕೋಟೆ ಶಾಸಕ ಶರತ್ ಬಚ್ಚೇಗೌಡ ಪುಟ್ಟಸ್ವಾಮಿಗೌಡರ ಅಳಿಯನಾಗಿದ್ದು, ಇವರ ಮೂಲಕ ಆಡಳಿತರೂಢ ಕೈ ಪಕ್ಷವನ್ನು ಬೆಂಬಲಿಸುವ ಮಾತು ಹೇಳಿದರೂ ಈ ಭಾಗದವರಿಗೆ ಸಚಿವ ಸ್ಥಾನ ಸಿಗುವುದಿಲ್ಲ ಎನ್ನುವುದು ಖಚಿತ ಒಂದು ವೇಳೆ ಮನಸ್ಸು ಮಾಡಿದರೂ ಕ್ಷೇತ್ರದಲ್ಲಿ ಈಗಾಗಲೇ ಮಣ್ಣು ಮುಕ್ಕಿಸಿಕೊಂಡಿರುವ ಶಿವಶಂಕರರೆಡ್ಡಿ ಒಪ್ಪಿಗೆ ಸೂಚಿಸುವರೆ ? ಖಂಡಿತಾ ಒಪ್ಪುವ ಸಾಧ್ಯತೆ ತೀರ ಕಡಿಮೆ ಎನ್ನಲಾಗಿತ್ತಿದೆ.

ಸಚಿವ ಸ್ಥಾನದ ಆಕಾಂಕ್ಷಿಗಳಿವರು
ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರರಲ್ಲಿ ಕಾಂಗ್ರೆಸ್ ಗೆದ್ದಿದ್ದು, ಡಾ.ಎಂ.ಸಿ.ಸುಧಾಕರ್ ಮತ್ತು ಎಸ್.ಎನ್.ಸುಬ್ಬಾರೆಡ್ಡಿ ಬಹಿರಂಗವಾಗಿ ಗುಟ್ಟು ಬಿಟ್ಟು ಕೊಡದಿದ್ದರೂ ಪರಸ್ಪರ ಈಗಾಗಲೇ ಆಂತರಿಕವಾಗಿ ವರಿಷ್ಠರ ಮೂಲಕ ಒತ್ತಡ ಹೇರುವ ಕೆಲಸವನ್ನು ಶುರುವಿಟ್ಟುಕೊಂಡಿದ್ದಾರೆ. ಇದರಲ್ಲಿ ಚಿಂತಾಮಣಿ ಕಡೆಯಿಂದಲೇ ಹೆಚ್ಚಿನ ಪಟ್ಟು ಹಾಕಲಾಗುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಕೆಲವೆಡೆ ಸ್ವತಃ ವೈದ್ಯರೂ ಆಗಿರುವ ಚಿಂತಾಮಣಿ ಶಾಸಕರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜವಾಬ್ದಾರಿ ವಹಿಸಲಾಗುತ್ತದೆ.
ಎಐಸಿಸಿ ಮಟ್ಟದಲ್ಲಿ ಒಳ್ಳೆಯ ಒಲವು, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಸೇರಿದಂತೆ ಹಿರಿಯ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹಿನ್ನೆಲೆಯಲ್ಲಿ ಸಚಿವ ಸ್ಥಾನ ನೀಡುವಿಕೆಯ ಗ್ರೀನ್ ಸ್ಟಿಗಲ್ ಸಿಗುತ್ತದೆ. ಮೊದಲು ಮುಖ್ಯಮಂತ್ರಿ ಸ್ಥಾನಕ್ಕೆ ಶಾಸಕಾಂಗವು ಸ್ವಪಕ್ಷೀಯ ಪ್ರಭಾವಿ ನಾಯಕರನ್ನು ಆಯ್ಕೆ ಮಾಡಿದ ಬಳಿಕ ಸಚಿವ ಸಂಪುಟ ರಚನೆಯ ಕಡೆಗೆ ಗಮನಹರಿಸಲಾಗುತ್ತದೆ. ಇದೇ ವೇಳೆ ಕಾಂಗ್ರೆಸ್ ಭದ್ರಕೋಟೆಯಾಗಿರುವ ಜಿಲ್ಲೆಯಲ್ಲಿ ಪಕ್ಷದ ಮತ್ತಷ್ಟು ಸಂಘಟನೆಗೆ ಸಚಿವಗಾದಿ ಸಿಗುತ್ತದೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅನಿವಾರ್ಯ
ಡಾ.ಕೆ.ಸುಧಾಕರ್ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುತ್ತಿದ್ದಂತೆ ಜಿಲ್ಲೆಯಲ್ಲಿ ಚಿಕ್ಕಬಳ್ಳಾಪುರ, ಬಾಗೇಪಲ್ಲಿ, ಚಿಂತಾಮಣಿಯಲ್ಲಿ ಗಮನಾರ್ಹ ಮತಗಳನ್ನು ಚುನಾವಣೆಯಲ್ಲಿ ಯಾವುದೇ ಶಾಸಕ ಸ್ಥಾನ ಸಿಗದೇ ಇರಬಹುದು. ಆದರೆ ಜಿಲ್ಲೆಯಲ್ಲಿ ಬಲಗೊಂಡಿರುವುದು ಸ್ಪಷ್ಟ. ಹೀಗಾಗಿ ಜಿಲ್ಲೆಗೆ ಸಚಿವ ಸ್ಥಾನ ಕೊಟ್ಟು ಹಿಡಿತ ಸಾಧಿ ಸುವುದು ಕಾಂಗ್ರೆಸ್‌ಗೆ ಅನಿವಾರ್ಯ ಕೂಡ. ವೃತ್ತಿಯಲ್ಲಿ ವೈದ್ಯರಾಗಿರುವ ಡಾ.ಎಂ.ಸಿ.ಸುಧಾಕರ್, ಅವರಿಗೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಖಾತೆ ಸಚಿವ ಸ್ಥಾನದ ನಿರೀಕ್ಷೆಯಲ್ಲಿ ಅಭಿಮಾನಿಗಳಿದ್ದಾರೆ.












Click it and Unblock the Notifications