Get Updates
Get notified of breaking news, exclusive insights, and must-see stories!

ನೀರಿಲ್ಲಾ..... ನೀರಿಲ್ಲಾ...... ನಿಮ್ಮ ನಮ್ಮ ಮನೆಯಲ್ಲಿ ನೀರಿಲ್ಲಾ..... ಎನ್ನುತ್ತಿದ್ದಾರೆ ಮಂದಿ...

ಗುಡಿಬಂಡೆ ಫೆಬ್ರವರಿ 24: ಬೇಸಿಗೆ ಹೆಚ್ಚಳವಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆಯ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ ಶುದ್ಧ ಕುಡಿಯುವ ನೀರಿಗೆ ವ್ಯಾಪಕ ಹಾಹಾಕಾರ ಉಂಟಾಗಿದೆ. ಹೀಗಾಗಿ ತುಂಬಿದ ನೀರಿನ ಕ್ಯಾನುಗಳ ಬೇಡಿಕೆ ಮತ್ತು ಅವುಗಳ ದರವೂ ಸಹ ಹೆಚ್ಚಳವಾಗಿದೆ.

ಚಿಕ್ಕಬಳ್ಳಾಪುರ ಹೇಳಿ ಕೇಳಿ ಶಾಶ್ವತ ನೀರಾವರಿ ಯೋಜನೆಗಳಿಲ್ಲದ ಬರನಾಡು ಎಂದರೆ ತಪ್ಪಾಗಲಾರದು. ಯಾಕೆಂದರೆ ಇಲ್ಲಿ ಅಂತರ್ಜಲ ಮಟ್ಟ ಹೆಚ್ಚಾಳವಾಗಿದ್ದು ಈ ಭಾಗದಲ್ಲಿ ಸಿಗುವ ನೀರು ಯುರೇನಿಯಂ, ಫ್ಲೋರೈಡ್, ನೈಟ್ರೇಟ್ ಜತೆಗೆ ಮಾರಕ ಲವಣಾಂಶಗಳನ್ನು ಹೊಂದಿರುತ್ತದೆ. ಈ ಆತಂಕದಲ್ಲಿ ಜನರು ಶುದ್ದೀಕರಿಸಿದ ವಾಟರ್ ಕ್ಯಾನುಗಳನ್ನು ಹೆಚ್ಚು ಅವಲಂಬಿಸಿದ್ದಾರೆ. ಇದರ ನಡುವೆ ವಿದ್ಯುತ್ ಅಭಾವ, ಬತ್ತಿ ಹೋಗುತ್ತಿರುವ ಕೊಳವೆ ಬಾವಿ ಸೇರಿ ನಾನಾ ಕಾರಣಗಳ ಹಿನ್ನೆಲೆಯಲ್ಲಿ ನಿರೀಕ್ಷೆಗೆ ಅನುಗುಣವಾಗಿ ನೀರು ಲಭ್ಯವಾಗುತ್ತಿಲ್ಲ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

Water crisis in Chikkaballapur: increased demand for cans - hike from Rs 25 to Rs 40

ಕಳೆದ ಕೆಲ ದಿನಗಳ ಹಿಂದೆ ವಾರಕ್ಕೊಮ್ಮೆ ಸರಾಸರಿ 2 ಕ್ಯಾನು ಖರೀದಿಸುತ್ತಿದ್ದ ಜನರು ಹೆಚ್ಚುವರಿಯಾಗಿ 4 ಕ್ಯಾನು ಪೂರೈಕೆಗೆ ಒತ್ತಾಯಿಸುತ್ತಿದ್ದಾರೆ. ಮೊದಲು 25 ರಿಂದ 30 ರೂಗಳಿಗೆ ಸಿಗುತ್ತಿದ್ದ ಕ್ಯಾನ್ ದರ ಈಗ 40 ರೂ.ಗೆ ತಲುಪಿದೆ.

ಕುಡಿಯುವ ನೀರಿಗೆ ಸಮಸ್ಯೆ:

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 13 ಗ್ರಾಮ ಪಂಚಾಯಿತಿಗಳ ಪೈಕಿ 16 ಗ್ರಾಮಗಳಲ್ಲಿ ನೀರಿನ ಸಮಸ್ಯೆಯಿದೆ. ಮುಂದಿನ ದಿನಗಳಲ್ಲಿ 163 ಹಳ್ಳಿಗಳಲ್ಲಿ ಸಮಸ್ಯೆ ಉಂಟಾಗುವ ನಿರೀಕ್ಷೆ ಇದೆ. ಈಗ ಖಾಸಗಿ ಕೊಳವೆ ಬಾವಿಗಳ ಮಾಲೀಕರೊಂದಿಗೆ ಒಪ್ಪಂದ ಮಾಡಿಕೊಂಡು ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ.

Water crisis in Chikkaballapur: increased demand for cans - hike from Rs 25 to Rs 40

ಜಿಲ್ಲೆಯ ನಗರ, ಪಟ್ಟಣ ಪ್ರದೇಶ ವ್ಯಾಪ್ತಿಯಲ್ಲಿ 68,930 ಮನೆಗಳಿವೆ. ಇವರಿಗೆ ದಿನಕ್ಕೆ 43.1 ಎಂಎಲ್‌ಡಿ ನೀರು ಅಗತ್ಯವಿದೆ. ಕೊಳವೆ ಬಾವಿಗಳ ಜತೆಗೆ ಚಿಕ್ಕಬಳ್ಳಾಪುರ ನಗರದಲ್ಲಿ ಜಕ್ಕಲಮಡು, ಚಿಂತಾಮಣಿ ನಗರದಲ್ಲಿ ಕನ್ನಂಪಲ್ಲಿ ಕೆರೆ, ಭಕ್ತರಹಳ್ಳಿ ಅರಸಿಕೆರೆ, ಗುಡಿಬಂಡೆಯಲ್ಲಿ ಅಮಾನಿ ಭೈರಸಾಗರ ಕೆರೆ, ಬಾಗೇಪಲ್ಲಿ ಪಟ್ಟಣಕ್ಕೆ ಚಿತ್ರಾವತಿ ಜಲಾಶಯವು ಕುಡಿಯುವ ನೀರಿನ ಮೂಲವಾಗಿವೆ. ಉಳಿದಂತೆ ಗೌರಿಬಿದನೂರು ಮತ್ತು ಶಿಡ್ಲಘಟ್ಟದಲ್ಲಿ ಕೊಳವೆ ಬಾವಿಗಳನ್ನು ಹೆಚ್ಚಿಗೆ ನೆಚ್ಚಿಕೊಳ್ಳಲಾಗಿದೆ. ನಗರ ಪ್ರದೇಶ ವ್ಯಾಪ್ತಿಯಲ್ಲಿನ 158 ವಾರ್ಡುಗಳ ಪೈಕಿ ಬಹುತೇಕ ವಾರ್ಡುಗಳಲ್ಲಿ ದಿನಕ್ಕೊಮ್ಮೆ ನೀರು ಪೂರೈಕೆಯಾಗುತ್ತಿದೆ.

ದುಡ್ಡು ಕೊಟ್ಟು ಖರೀದಿಸುವ ನೀರಿನ ಕ್ಯಾನ್ ಗಳನ್ನು ನೋಡಿದಾಗ ನೀರು ಶುದ್ದೀಕರಣಗೊಂಡಿದೆಯೇ? ಎಂಬ ಅನುಮಾನ ವ್ಯಕ್ತವಾಗುತ್ತದೆ. ಇದನ್ನು ಪ್ರಶ್ನಿಸಿದಾಗ ಉಢಾಪೆ ಉತ್ತರ ಸಿಗುತ್ತದೆ. ಬೇರೆ ವಿಧಿಯಿಲ್ಲದೇ ಖರೀದಿಸುವಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳಲು ಕಾಲ ಕಾಲಕ್ಕೆ ಪರಿಶೀಲಿಸಬೇಕು ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸದ ಸಿಎಂಸಿ ಬಡಾವಣೆ ಗ್ರಾಹಕ.

ನಿಯಮಗಳ ಉಲ್ಲಂಘನೆ:

ನಿಯಮಾನುಸಾರ ಸಂಬಂಧಪಟ್ಟ ಇಲಾಖೆಯಿಂದ ಕುಡಿಯುವ ನೀರಿನ ಕ್ಯಾನುಗಳ ಮಾರಾಟಕ್ಕೆ ಪರವಾನಗಿ ಹೊಂದಿರಬೇಕು. ಗುಣಮಟ್ಟದ ಖಾತ್ರಿಯ ಮುದ್ರೆಯನ್ನು ಹಾಕಬೇಕು. ಆದರೆ, ಇಲ್ಲಿ ಬಹುತೇಕ ಕಡೆ ನಿಯಮವನ್ನು ಪಾಲಿಸುತ್ತಿಲ್ಲ.

ಕ್ಯಾನುಗಳನ್ನು ಸಮರ್ಪಕವಾಗಿ ತೊಳೆಯುತ್ತಿಲ್ಲ. ಧೂಳಿನಿಂದ ತುಂಬಿ, ಅವುಗಳ ಬಣ್ಣವೇ ಬದಲಾಗಿರುತ್ತದೆ. ಇದನ್ನು ಗ್ರಾಹಕರು ಪ್ರಶ್ನಿಸಿದಾಗ ಮನೆಗೆ ತರುವಾಗ ಗಲೀಜಾಗಿದ್ದು ಒಳಗಿನ ನೀರು ಶುದ್ಧವಾಗಿದೆ ಎಂಬ ಉತ್ತರವನ್ನು ಹೇಳಿ ನುಣುಚಿಕೊಳ್ಳಲಾಗುತ್ತಿದೆ. ಅತಿಯಾಗಿ ತಲೆ ತಿನ್ನುವರಿಗೆ ನೀರು ಪೂರೈಸದೇ ಸತಾಯಿಸಲಾಗುತ್ತದೆ. ಮೊದಲೇ ನೀರಿನ ಅಭಾವದಿಂದ ತತ್ತರಿಸಿರುವ ಅನೇಕರು ಹೊಂದಾಣಿಕೆ ಮಾಡಿಕೊಂಡು ಹೋಗುತ್ತಿದ್ದಾರೆ.

ಅನಾರೋಗ್ಯ ಸಮಸ್ಯೆ:-

ಪ್ರಸ್ತುತ ಬೇಸಿಗೆಯಲ್ಲಿ ತಂಪು ಪಾನೀಯ, ಐಸ್ ಕ್ರೀಂ ಸೇವಿಸುತ್ತಿರುವ ಜನರಲ್ಲಿ ಗಂಟಲು ಬೇನೆ, ಕೆಮ್ಮು, ನೆಗಡಿ, ಹೊಟ್ಟೆನೋವು, ಭೇದಿ ಸೇರಿ ಹಲವು ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಇದಕ್ಕೆ ಶುದ್ದೀಕರಿಸದ ನೀರಿನ ಬಳಕೆಯೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಗುಣಮಟ್ಟದ ಖಾತ್ರಿ ಇಲ್ಲ:-

ಜಿಲ್ಲಾದ್ಯಂತ ನೀರಿಗಾಗಿ ಹಾಹಾಕಾರ ಇರುವುದನ್ನು ಲಾಭವನ್ನಾಗಿ ಪರಿವರ್ತಿಸಿಕೊಳ್ಳಲು ಮುಂದಾಗಿರುವ ಕೆಲ ವ್ಯಾಪಾರಿಗಳು ಕ್ಯಾನುಗಳಿಗೆ ಶುದ್ದೀಕರಿಸದ ನೀರನ್ನು ತುಂಬಿಸಿ ಜನರನ್ನು ವಂಚಿಸುತ್ತಿದ್ದಾರೆ. ಜಿಲ್ಲೆಯ ಆರು ತಾಲೂಕುಗಳಲ್ಲಿ 10 ಕಡೆ ಶುದ್ದೀಕರಿಸಿ ನೀರು ಪೂರೈಸುವ ಘಟಕಗಳಿವೆ ಎನ್ನುವುದು ಅಧಿಕಾರಿಗಳ ಮಾತು. ಮತ್ತೊಂದೆಡೆ ಹಲವೆಡೆ ಅಕ್ರಮವಾಗಿ ಘಟಕಗಳು ಕಾರ್ಯ ನಿರ್ವಹಿಸುತ್ತಿವೆ. ಒಳಗೆ ಕ್ಯಾನುಗಳಿಗೆ ನೇರವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳ ಸಂಪರ್ಕದ ಕೊಳಾಯಿ ಮೂಲಕ ನೀರು ತುಂಬಿಸಲಾಗುತ್ತಿದೆ.

ಇದರಲ್ಲಿ ಬಹುತೇಕ ನೀರು ಸರಬರಾಜುದಾರರ ಪಾತ್ರವೇ ಹೆಚ್ಚಾಗಿದೆ. ಇದರಲ್ಲಿ ಸ್ಥಳೀಯ ಅಧಿಕಾರಿಗಳು ಶಾಮಿಲಾಗಿದ್ದಾರೆ ಎಂದು ಜನ ದೂರುತ್ತಾರೆ. ಅದೇನೇ ಆಗಲಿ ಈ ಬೇಸಿಗೆಯಲ್ಲಿ ಶುದ್ಧವಾದ ನೀರು ಕುಡಿಯುವುದು ಅತ್ಯಗತ್ಯ. ಆದರೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕು. ಹಣದ ಆಸೆಗೆ ಜನರ ಜೀವದ ಜೊತೆಗೆ ಆಟವಾಡಬಾರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+