Get Updates
Get notified of breaking news, exclusive insights, and must-see stories!

ಈಡೇರದ ಉಪನ್ಯಾಸಕರ ಬೇಡಿಕೆ: ಸೇವಾ ಭದ್ರತೆಗೆ ಒತ್ತಾಯಿಸಿ ಅಹೋರಾತ್ರಿ ಧರಣಿ!

ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ, ವೇತನ ಹೆಚ್ಚಳ, ಹುದ್ದೆ ಕಾಯಂಗೊಳಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ರಾಜ್ಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ 4000 ಸಾವಿರಕ್ಕೂ ಅಧಿಕ ಸದಸ್ಯರು ಡಿ.22ರಂದು ಬೆಂಗಳೂರಿನ ಗಾಂಧಿ ಭವನದ, ಬಾಬು ಸಭಾಂಗಣದಲ್ಲಿ ರಾಜ್ಯಮಟ್ಟದ ಸಮಾವೇಶವನ್ನು ಆಯೋಜಿಸಲಾಗಿದೆ.

ಬಲತ್ಕಾರದ ದುಡಿಮೆಯೇ ಜೀತ ಪದ್ಧತಿ, ಅನಿವಾರ್ಯತೆಯನ್ನೇ ಬಂಡವಾಳ ಮಾಡಿಕೊಂಡು ದುಡಿಸಿಕೊಳ್ಳುವುದು ಆಧುನಿಕ ಜೀತ ಪದ್ಧತಿ...' 'ಅತಿಥಿ'ಗಳ ಸತ್ಕಾರಕ್ಕೆ ರಾಜ್ಯ ಸರ್ಕಾರ ಮೀನಮೇಷ ಎಣಿಸುತ್ತದೆ.

Unfulfilled demand of Chikkaballapur lecturers: Ahoratri dharna demanding service security!

ಸರ್ಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಉದ್ಯೋಗದ ಅನಿವಾರ್ಯತೆಯೇ ಎಲ್ಲ ಸರಕಾರಗಳ ಪಾಲಿಗೆ ಬಂಡವಾಳವಾಗಿಬಿಟ್ಟಿದೆ. ಇದೊಂದು ಆಧುನಿಕ ಜೀತಪದ್ಧತಿ ಎಂದು ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಕರಾಗಿ ಕಡಿಮೆ ಸಂಬಳಕ್ಕೆ ದುಡಿಯುತ್ತಿರುವ ಸಾವಿರಾರು ಆತಿಥಿ ಉಪನ್ಯಾಸಕರ ಆರೋಪವಾಗಿದೆ.

ಸರಕಾರಿ ಪದವಿ ಪೂರ್ವ ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಉಪನ್ಯಾಸಕರಿಲ್ಲ. ಕಾಲಕಾಲಕ್ಕೆ ನೇಮಕಾತಿಯನ್ನೂ ನಡೆಸಿಲ್ಲ. ಹೀಗಾಗಿ, ಈ ಕೊರತೆ ನೀಗಿಸಲು ಅತಿಥಿ ಉಪನ್ಯಾಸಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸೇವಾನುಭವದ ಆಧಾರದ ಮೇಲೂ ಇವರನ್ನು ಕಾಯಂ ಮಾಡಿಕೊಂಡಿಲ್ಲ. ಕಡಿಮೆ ಸಂಬಳಕ್ಕೆ ಹೆಚ್ಚು ದುಡಿಮೆ ಮಾಡಿಸಿಕೊಳ್ಳಲು 'ಅತಿಥಿ' ಹೆಸರಿನಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿರುವುದಕ್ಕೆ ಉಪನ್ಯಾಸಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

Unfulfilled demand of Chikkaballapur lecturers: Ahoratri dharna demanding service security!

ಹೀಗಾಗಿ, ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹಲವು ವರ್ಷಗಳಿಂದ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಒತ್ತಾಯ ಹಾಗೂ ಪ್ರತಿಭಟನೆ ಮಾಡುತ್ತಲೇ ಬರುತ್ತಿದ್ದಾರೆ, ಇವರ ಸಾಲಿಗೆ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಸಹ ರಾಜ್ಯ ಮಟ್ಟದ ಸಮಾವೇಶದ ಮೂಲಕ ಸರಕಾರ, ಇಲಾಖೆ ಹಾಗೂ ಶಿಕ್ಷಣ ಸಚಿವರ ಗಮನ ಸೆಳೆದು ತದನಂತರ ಮುಂದಿನ ನಡೆಯನ್ನು ನಿರ್ಧರಿಸಲು ಮುಂದಾಗಿದ್ದಾರೆ.

ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 8 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಿವೆ. ಜಿಲ್ಲಾಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿ ಮುನಿಸಿಪಾಲ್ ಕಾಲೇಜಿನಲ್ಲಿ 69, ಮಹಿಳಾ ಕಾಲೇಜಿನಲ್ಲಿ 23, ಗುಡಿಬಂಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ 7, ಬಾಗೇಪಲ್ಲಿ ಕಾಲೇಜಿನಲ್ಲಿ 7, ಗೌರಿಬಿದನೂರು ಕಾಲೇಜಿನಲ್ಲಿ 25, ಶಿಡ್ಲಘಟ್ಟ ಕಾಲೇಜಿನಲ್ಲಿ 15, ಚಿಂತಾಮಣಿ ಮಹಿಳಾ ಕಾಲೇಜಿನಲ್ಲಿ 75, ಬಾಲಕರ ಕಾಲೇಜಿನಲ್ಲಿ 25ಜನ ಅತಿಥಿ ಉಪನ್ಯಾಸಕರು ಸೇರಿದಂತೆ ಒಟ್ಟಾರೆ ಯಾಗಿ ಜಿಲ್ಲೆಯ ಎಲ್ಲೆಡೆ 246 ಜನ ಚಿಕ್ಕಬಳ್ಳಾಪುರ ಜಿಲ್ಲೆಯೊಂದರಲ್ಲೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಸಂಬಳ ಎಷ್ಟು?

ಈ ಪೈಕಿ 5 ವರ್ಷಕ್ಕಿಂತ ಹೆಚ್ಚು ಅನುಭವ ಇರುವ, ಯುಜಿಸಿ ಅರ್ಹತೆ ಹೊಂದಿರುವವರಿಗೆ 32 ಸಾವಿರ ರೂ., 5 ವರ್ಷ ಒಳಪಟ್ಟು ಯುಜಿಸಿ ಅರ್ಹತೆ ಹೊಂದಿದ್ದರೆ 30 ಸಾವಿರ ರೂ.. 5 ವರ್ಷ ಮೇಲ್ಪಟ್ಟು ಯುಜಿಸಿ ಅರ್ಹತೆ ಇಲ್ಲದಿದ್ದರೆ 28 ಸಾವಿರ ರೂ., 5 ವರ್ಷ ಒಳಪಟ್ಟು ಯುಜಿಸಿ ಅರ್ಹತೆ ಇಲ್ಲದಿದ್ದರೆ 26 ಸಾವಿರ ರೂ. ಸಂಬಳ ನೀಡಲಾಗುತ್ತಿದೆ.

ರಾಜ್ಯ ಸರ್ಕಾರದ ನಿಯಾಮವಳಿ ಪ್ರಕಾರ, ಕಾಲೇಜಿನ ಎಲ್ಲ ಕೆಲಸವನ್ನು ನಿರ್ವಹಣೆ ಮಾಡುತ್ತಿರುವ ಅತಿಥಿ ಉಪನ್ಯಾಸಕರು ಕಾಯಂ ಉಪನ್ಯಾಸಕರಷ್ಟೇ ಶ್ರಮವಹಿಸಿ ದುಡಿಯುತ್ತಿದ್ದಾರೆ. ಇಷ್ಟಾದರೂ ಕಾಯಂಗೊಳಿಸದೆ ಇರುವುದು ಸೇವೆಯಲ್ಲಿ ಅಭದ್ರತೆಯನ್ನುಂಟು ಮಾಡಿದೆ. ಈ ಹಿನ್ನೆಲೆಯಲ್ಲಿ ಧರಣಿ ನಡೆಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಹೋರಾಟವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದ್ದಾರೆ.

ತರಗತಿ ಬಹಿಷ್ಕಾರ..

ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟ ಡಿ.15ರಿಂದ ತರಗತಿ ಬಹಿಷ್ಕರಿಸಿ ಪ್ರತಿಭಟನೆ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದ ಸರ್ಕಾರವೆಂದು ಹೇಳಿಕೊಳ್ಳುವ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿರುವಂತೆ ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸಬೇಕೆಂದು ಆಗ್ರಹಿಸಿದೆ.

ಪಿಯು 'ಅತಿಥಿ'ಗಳು ಪ್ರತಿಭಟನೆ ಹಾದಿ ಹಿಡಿಯುತ್ತಾರ?

ರಾಜ್ಯ ಮಟ್ಟದ ಸಮಾವೇಶ ನಡೆಸಿ ಮುಂದಿನ ನಡೆಯನ್ನು ನಿರ್ಧಾರ ಮಾಡಲು ತೀರ್ಮಾನಿಸಿರುವ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರು ಒಂದು ವೇಳೆ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದಂತೆ ನಿರ್ಣಯ ಮಾಡಿದರೆ ಸರಕಾರಿ ಕಾಲೇಜುಗಳ ಬಡ ವಿದ್ಯಾರ್ಥಿಗಳಿಗೆ ಅದರಲ್ಲೂ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ತೊಂದರೆಯಾಗಲಿದೆ.

ಅನೇಕ ಪ್ರಥಮ ದರ್ಜೆ ಕಾಲೇಜುಗಳಲ್ಲಿ ತರಗತಿಗಳೇ ನಡೆಯುತ್ತಿಲ್ಲ :- ಈಗಾಗಲೇ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಇದ್ದಾರೆ. ಈ ರೀತಿ ಎಲ್ಲೆಲ್ಲಿ ಅತಿಥಿ ಉಪನ್ಯಾಸಕರು ಕೆಲಸ ಮಾಡುತ್ತಿದ್ದಾರೋ ಅವರೆಲ್ಲರೂ ತರಗತಿ ಬಿಟ್ಟಿದ್ದು ಶೈಕ್ಷಣಿಕ ಚಟುವಟಿಕೆಗಳು ಕುಂಠಿತಗೊಂಡಿದೆ.

ಸರ್ಕಾರದ ನಿಯಮಾವಳಿ ಪ್ರಕಾರ ನಾವು ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇವೆ. ಆದರೆ ಸೇವಾ ಭದ್ರತೆ ನೀಡದೆ ಮಲತಾಯಿ ದೋರಣೆ ತಾಳಲಾಗುತ್ತಿದೆ. ವೇತನ ಹೆಚ್ಚಳ, ರಜಾ ಸೌಲಭ್ಯ, ಯುಜಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು, ವರ್ಷದ 12 ತಿಂಗಳೂ ವೇತನ, ಪ್ರತಿ ವರ್ಷ ಕೌನ್ಸಿಲಿಂಗ್ ಮಾಡದೇ ಹಾಲಿ ಕರ್ತವ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನೇ ಮುಂದುವರೆಸುವುದು ಸೇರಿದಂತೆ ಇನ್ನಿತರ ಸೌಲಭ್ಯಗಳನ್ನು ಒದಗಿಸುವ ತನಕ ಅನಿರ್ದಿಷ್ಟ ಅವಧಿ ಪ್ರತಿಭಟನೆ ಮಾಡುತ್ತೇವೆ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಕ್ಕೂಟದ ಅಧ್ಯಕ್ಷ ಆರೀಕೆರೆ ಮುನಿರಾಜು ಹೇಳಿದರು.

ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ವಾರದಲ್ಲಿ 10 ಗಂಟೆ ಕಾರ್ಯಭಾರ ನೀಡಲಾಗಿದೆ, ಕೆಲವು ಕಾಲೇಜುಗಳಲ್ಲಿ 10 ಗಂಟೆಗೂ ಹೆಚ್ಚು ಕಾರ್ಯಭಾರ ನೀಡುತ್ತಿದ್ದಾರೆ. ಗೌರವಧನವನ್ನೂ ಕಡಿಮೆ ನೀಡುತ್ತಿದ್ದಾರೆ. ಕೂಲಿ ಕೆಲಸ ಮಾಡುವವರಿಗೂ ದಿನಕ್ಕೆ 800 ರೂ. ಸಿಗುತ್ತಿದೆ. ಎರಡು ಮೂರು ಪದವಿ ಪಡೆದಿರುವ ಅತಿಥಿ ಉಪನ್ಯಾಸಕರಿಗೆ ದಿನಕ್ಕೆ 400ರೂಪಾಯಿ ಸಂಬಳ ಸಿಗುತ್ತಿದೆ. ರಾಜ್ಯ ಸರ್ಕಾರ ಪ್ರಣಾಳಿಕೆಯಲ್ಲಿ ಭರವಸೆ ನೀಡಿರುವಂತೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ನೀಡಲಿ, ವೇತನ ಹೆಚ್ಚಳ ಮಾಡಲಿ ಗೌರಿಬಿದನೂರಿನ ಪದವಿ ಪೂರ್ವ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ರಾಮಾಂಜಿನಪ್ಪ ಒತ್ತಾಯಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+