ಚಿಕ್ಕಬಳ್ಳಾಪುರದಲ್ಲಿ 35 ಡಿಗ್ರಿ ತಲುಪಿದ ಉಷ್ಣಾಂಶ: ಆರೋಗ್ಯಕರ ಸಲಹೆ ಇಲ್ಲಿದೆ..
ಚಿಕ್ಕಬಳ್ಳಾಪುರ ಮಾರ್ಚ್ 18: ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಹಿನ್ನೆಲೆಯಲ್ಲಿ ಹೀಟ್ ವೇವ್ ಸ್ಟೋಕ್ ನಿಂದಾಗಿ (ಶಾಖದ ಹೊಡೆತ) ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆಯಿದೆ. ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ಸಾರ್ವಜನಿಕರು ತಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಲಹೆಗಳನ್ನು ನೀಡಿದೆ.
ಜಿಲ್ಲಾದ್ಯಂತ ಬಿಸಿಲಿನ ಬೇಗೆಗೆ ಜನರು ಪತರುಗುಟ್ಟಿ ಹೋಗಿದ್ದಾರೆ. ಬೆಳಗ್ಗೆ 9 ಗಂಟೆಯಾಗುತ್ತಿದ್ದಂತೆ ಪ್ರಖರ ಬಿಸಿಲಿಗೆ ಜನರು ಹೊರಬರಲು ಆಗುತ್ತಿಲ್ಲ, ಸಂಜೆ ನಂತರ ಸೆಖೆಗೆ ಮನಗಳಲ್ಲಿ ಇರಲು ಆಗುತ್ತಿಲ್ಲ. ಗರಿಷ್ಠ 35. ಕನಿಷ್ಠ 25 ರಷ್ಟು ಉಷ್ಣಾಂಶವಿದ್ದು ಜನರು ಪರಿತಪಿ ಸುವಂತಾಗಿದೆ. ಸಾಕಪ್ಪ ಸಾಕು ಬೇಸಿಗೆ ಸಹವಾಸ ಎನ್ನುವಂತಾಗಿದೆ.

ಜಿಲ್ಲೆಯಲ್ಲಿ ಫೆಬ್ರವರಿ ತಿಂಗಳಿಂದಲೇ ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶಿವರಾತ್ರಿ ನಂತರ ಬಿಸಿಲ ಆರ್ಭಟ ಮತ್ತಷ್ಟು ಹೆಚ್ಚಾಗಿದೆ. ಬಿಸಿಲಿನಿಂದ ಆರೋಗ್ಯ ಸಮಸ್ಯೆ ಉಂಟಾಗುವ ಸಾದ್ಯತೆ ಇರುವುದ ರಿಂದ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
ಸೂರ್ಯನ ಶಾಖದ ಪ್ರಖರ ತೆಯಿದ ಡಿಹೈಡೇಷನ್ (ನಿರ್ಜಲೀಕರಣ), ಸನ್ ಸ್ಟೋಕ್ (ಶಾಖದ ಹೊಡೆತ )ನಿಂದ ತಲೆನೋವು ಸೇರಿ ದಂತೆ ಆನೇಕ ಕಾಯಿಲೆಗಳು ಬರುವ ಸಾಧ್ಯತೆ ಇದೆ.
ಬಿಸಿಲು ಆರ್ಭಟಿಸುತ್ತಿದೆ ಹುಷಾರ್:
ಸದ್ದ ಬಿಸಿನ ಸಮಸ್ಯೆಯಿಂದ ಪಾರಾಗಲು ಹೆಚ್ಚು ನೀರನ್ನು ಕುಡಿಯಬೇಕು, ಮಜ್ಜಿಗೆ, ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಉತ್ತಮ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ 11 ಸಾಮಾನ್ಯ ಕ್ರಮಗಳನ್ನು ಪಾಲಿಸಲೇಬೇಕು. ಇಲ್ಲವಾದಲ್ಲಿ ಬಿಸಿಲಿನಿಂದ ನಾನಾ ಸಮಸ್ಯೆಗಳು ಕಾಡಲಿವೆ.

ಹೊರಗೆ ಬಾರದಿರುವುದೇ ಒಳಿತು:
ಸ್ಥಳೀಯ ಹವಾಮಾನ ಮಾಹಿತಿ ಪಡೆದು ಅದರಂತೆ ದೈನಂದಿನ ಚಟುವಟಕೆಗಳನ್ನು ಯೋಚಿಸಿಕೊಳ್ಳಬೇಕು. ಬೆಳಗ್ಗೆ ದಿಂದ ಸಂಜೆ 4ರ ವರೆಗೆ ಬಿಸಿಲಿನಲ್ಲಿ ಆನವಶ್ಯಕವಾಗಿ ಓಡಾಡಬಾರದು. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯುವುದು ಒಳಿತು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚೆಪಲಿ ಧರಿಸಿ, ಟೀ, ಕಾಫಿ, ಹೆಚ್ಚು ಸಕ್ಕರೆ ಅಂಶ ಹೊಂದಿರುವ ಕಾರ್ಮೋನೇಟೆಡ್ ಪಾನೀಯ ಹಾಗೂ ಮದ್ಯಪಾನ ದಿಂದ ದೂರವಿರುವುದು ಒಳಿತು. ಹೀಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ವಿಪತ್ತು ನಿರ್ವ ಹಣಾ ಪ್ರಾಧಿಕಾರ ನೀಡಿದೆ.
ಸುಡುತ್ತಿದೆ ಬಿಸಿಲು:
ಸೂರ್ಯ ನೆತ್ತಿ ಮೇಲೆ ಬರುತ್ತಿದ್ದಂತೆ ಪ್ರಖರ ಬಿಸಿಲು ಜನರ ಚರ್ಮವನ್ನು ಸುಡುತ್ತಿದೆ. ಎಸಿ ಇಲ್ಲದೆ ಕಾರುಗಳಲ್ಲಿ ಹೋಗಲು ಆಗುತ್ತಿಲ್ಲ. ಬಸ್‌ಗಳಲ್ಲಿ ಸಂಚರಿಸುವುದು ಕಷ್ಟ ಎನ್ನುವಂತಹ ಪರಿಸ್ಥಿತಿ ಇದೆ. ಇನ್ನು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ಸವಾರರಿಗೆ ಬಿಸಿಲಿನ ಶಾಖಾ ಸುಡುತ್ತಿದ್ದು ಸುಸ್ತು ಹೆಚ್ಚಾಗಿದೆ. ಹೀಗಾಗಿ ಪ್ರಖರ ಬಿಸಿಲಿರುವ ಸಮಯದಲ್ಲಿ ವಿನಾಕಾರಣ ನೆರಳನ್ನು ಬಿಟ್ಟು ಹೊರಬಾರದಿರುವುದೇ ಒಳತು. ಜನರು ದೇಹ ತಂಪಾಗಿಸಿಕೊಳ್ಳಲು ಜ್ಯೂಸ್ ಅಂಗಡಿ ಗಳು, ಎಳೆನೀರಿಗೆ ಮುಗಿ ಬೀಳುತ್ತಿದ್ದಾರೆ.
ಮತ್ತೊಂದೆಡೆ ತೀವ್ರ ಮಳೆ ಕೊರತೆಯಿಂದ ನೀರಿನ ಪ್ರಮಾಣವೂ ಕುಸಿದಿದ್ದು ಕುಡಿಯುವ ನೀರಿಗೆ ಸಮಸ್ಯೆ: ಸೈಯಾಗಿದೆ. ಜನ ಜಾನು ವಾರು ಹಲವೆಡೆ ನೀರಿಗಾಗಿ ಪರದಾಡುವಂತಹ ಪರಿ ಸ್ಥಿತಿ ಇದೆ. ಹೀಗಾಗಿ ಬಿಸಿಲ ಬೇಗೆಯಿಂದ ಇನ್ನೆರಡು ತಿಂಗಳವರೆಗೂ ಜನರು ಸುಡುತ್ತಿದೆ ಬಿಸಿಲು: ಸೂರ್ಯ ನೆತ್ತಿ ಮೇಲೆ ಎಚ್ಚರ ವಹಿಸಲೇಬೇಕು. ಇಲ್ಲವಾದಲ್ಲಿ ನಾನಾ ಸಮಸ್ಯೆಗಳು ತಲೆದೋರುವುದು ಶತಸಿದ್ದ.

ಜಾತ್ರೆ ಉತ್ಸವದಲ್ಲಿ ಇರಲಿ ಎಚ್ಚರಿಕೆ :-
ಬೇಸಿಗೆಯಲ್ಲಿಯೇ ಗ್ರಾಮೀಣ ಭಾಗದಲ್ಲಿ ಹಬ್ಬ, ಉತ್ಸವಗಳು ಹೆಚ್ಚು. ಹಬ್ಬದೂಟ ಮಾಡುವಾಗ ಅಗತ್ಯವಾಗಿ ಎಚ್ಚರಿಕೆ ವಹಿಸಬೇಕು. ಅಡುಗೆ ಮಾಡುವ ಜಾಗ, ಪಾತ್ರೆಗಳು ಶುದ್ಧವಾಗಿರಬೇಕು. ಅದಕ್ಕೆ ಬಳಸುವ ನೀರು ಸಹ ಶುದ್ಧವಾಗಿರಬೇಕು. ಗುಣಮಟ್ಟದ ಎಣ್ಣೆ ಬಳಸಬೇಕು. ಎಲ್ಲಕ್ಕಿಂತ ಹೆಚ್ಚಾಗಿ ಶುಚಿತಕ್ಕೆ ಒತ್ತು ನೀಡಬೇಕು ಎಂಬುದು ವೈದ್ಯರ ಸಲಹೆ. ಅಲ್ಲದೇ ಮನೆಗಳ ಸುತ್ತಮುತ್ತಲಿನ ವಾತಾವರಣವನ್ನು ನೈರ್ಮಲ್ಯದಿಂದ ಇಟ್ಟುಕೊಳ್ಳಬೇಕು. ಕೊಳಚೆ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ಸೊಳ್ಳೆಗಳಿಂದ ರಕ್ಷಣೆ ಪಡೆಯಬೇಕು.
ಅಧಿಕಾರಿಗಳು ಹೇಳುವುದೇನು..?
ಪ್ರಸ್ತುತ ಹಾಗೂ ಮುಂಬರುವ ಬೇಸಿಗೆ ದಿನಗಳಲ್ಲಿ ಸೂರ್ಯನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ಶಾಖದ ಹೊಡೆತ (ಹೀಟ್ ಬೇನ್ ಸ್ಟೋಕ್ ) ದಿಂದಾಗಿ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು. ಈ ಹಿನ್ನೆಲೆಯಲ್ಲಿ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಮುಂಜಾಗ್ರತಾ ಕ್ರಮಗಳನ್ನು ಎಲ್ಲ ಸಾರ್ವಜನಿಕರು ಅನುಸರಿಸಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.
ಜಿಲ್ಲೆಯಲ್ಲಿ ದಿನೇ ದಿನೆ ಬಿಸಿಲಿನ ಶಾಖಾ ಹೆಚ್ಚಾಗುತ್ತಿದೆ. ಹೀಗಾಗಿ ಜನರು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಬಿಸಿಲಿನ ಬೇಗೆಯಿಂದ ಆಗಬಹುದಾದ ಸಮಸ್ಯೆಗಳಿಂದ ಪಾರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಉಚಿತ ಆರೋಗ್ಯ ಸಹಾಯವಾಣಿ 104ನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹೇಶ್ ಕುಮಾರ್ ಹೇಳಿದರು.
ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಲಹೆಗಳು:-
• ಸಾರ್ವಜನಿಕರು ಬಿಸಿಲು ದಿನಗಳಲ್ಲಿ ಕೊಡೆ, ಭತ್ರಿ, ಟೋಪಿ, ಹ್ಯಾಟ್, ಟವಲ್ ಬಳಸಬೇಕು.
• ಸಾಧ್ಯವಾದಷ್ಟು ತಂಪಾದ ಸ್ಥಳಗಳಲ್ಲಿ ಉಳಿಯಲು ಪ್ರಯತ್ನಿಸಿ.
• ತೆಳುವಾದ ಸಡಿಲವಾದ ಹತ್ತಿ ಉಡುಪು, ಬಿಳಿ ಬಣ್ಣದ ಬಟ್ಟೆಗಳ ಬಳಕೆ ಒಳ್ಳೆಯದು.
• ಹತ್ತಿ, ಟರ್ಬನ್ ಟೋಪಿ, ಕೂಲಿಂಗ್ ಗ್ಲಾಸ್ ಧರಿಸಬೆಕು.
• ಹಿರಿಯ ನಾಗರಿಕರಿಗೆ, ಮಕ್ಕಳಗೆ ಕುಡಿಯಲು ಹೆಚ್ಚು ಹೆಚ್ಚು ನೀರು ಕೊಡಬೇಕು.
* ಬೆಳಗ್ಗೆ 11 ರಿಂದ ಸಂಜೆ 64 ರವರೆಗೆ ಹೊರಾಂಗಣ ದೈಹಿಕ ಚಟುವಟಿಕೆ ಕಡಿಮೆ ಮಾಡಬೇಕು
*ಸಾಕಷ್ಟು ನೀರು ಕುಡಿಯಿರಿ, ಮಜ್ಜಿಗೆ/ಎಳನೀರು ದ್ರವ ಪದಾರ್ಥಗಳನ್ನು ಉಪಯೋಗಿಸಬೇಕು.
•ಕೊಠಡಿಯ ತಾಪಮಾನ ಕಡಿಮೆ ಮಾಡಲು ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು
• ಹೀಟ್ ಸ್ಟೋಕ್ ಲಕ್ಷಣಗಳನ್ನು ಹೊಂದಿರುವ ವ್ಯಕ್ತಿಯನ್ನು ತಂಪಾದ ಜಾಗಕ್ಕೆ ಸ್ಥಳಾಂತರಿಸಬೇಕು.
*ಶಾಖದ ಹೊಡೆತದಿಂದ ಬಳಲುತ್ತಿರುವ ವ್ಯಕ್ತಿಯ ಕನಿಷ್ಠ ಬಟ್ಟೆ ಇರುವಂತೆ ನೋಡಿಕೊಳ್ಳಬೇಕು.
* ತಣ್ಣೀರಿನಿಂದ ಸ್ಟಾಂಚ್ ಮಾಡಬೇಕು, ಬಸ್ ಪ್ಯಾಕ್ ಗಳನ್ನು ಉಪಯೋಗಿಸಬಹುದು, ವ್ಯಕ್ತಿಯನ್ನು ಎಸ್ ಬ್ಲಾಕ್‌ಗಳ ಮಧ್ಯ ಇಡಬಹುದು.
*ಹೀಟ್ ವೇವ್ ಸ್ಟೋಕ್ ಗೆ ಒಳಗಾದ ವ್ಯಕ್ತಿಯಲ್ಲಿ ಸುಧಾರಣೆ ಕಂಡುಬರದಿದ್ದರೆ ತಕ್ಷಣ ಆಸ್ಪತ್ರೆಗೆ ದಾಖಲಿಸಿ
• ಪ್ರಾಣಿ/ಪಕ್ಷಿಗಳನ್ನು ನೆರಳನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ಕೊಡಬೇಕು.
ಹೆಚ್ಚು ಬಿಸಿಲಿಗೆ ಆಗುವ ಸಮಸ್ಯೆಗಳು:--
• ಸನ್ ಸ್ಟೋಕ್, ಹೀಟ್ ಸ್ಟೋಕ್, ಚರ್ಮ ಕಪ್ಪಾಗುವಿಕೆ, ಚರ್ಮದ ಮೇಲೆ ಗುಳ್ಳೆಗಳು, ದೇಹದ ನಿರ್ಜಲೀಕರಣ
ಪರಿಹಾರೋಪಾಯಗಳು:-
* ಬಿಸಿಲಿಗೆ ಹೆಚ್ಚು ದೇಹವನ್ನು ಒಡ್ಡದಿರುವುದು
*ಹೆಚ್ಚು ಶುದ್ಧನೀರು ಕುಡಿಯುವುದು
* ಗಂಟೆಗೊಮ್ಮೆ ನೀರು ಸೇವಿಸುವುದು ಅಗತ್ಯ
* ಎಳನೀರು, ಮಜ್ಜಿಗೆ, ಪಾನಕದಂತಹ ನೈಸರ್ಗಿಕ ದ್ರವ ಪದಾರ್ಥಗಳ ಸೇವನೆ
*ಸುಲಭವಾಗಿ ಜೀರ್ಣವಾಗುವಂಥ ಆಹಾರ ಪದಾರ್ಥಗಳ ಸೇವನೆ.
* ತೆಳು ಬಣ್ಣದ ಹಾಗೂ ಮೃದುವಾದ ಹತ್ತಿ ಬಟ್ಟೆಗಳನ್ನು ಧರಿಸುವುದು.
*ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರ ಇರುವುದು.












Click it and Unblock the Notifications