Water Crises: ಅಂತರ್ಜಲ ಮಟ್ಟ ಕುಸಿತ: ಈ ತಾಲೂಕಿನ 30ಕ್ಕೂ ಅಧಿಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ
ಗುಡಿಬಂಡೆ ಮಾರ್ಚ್ 14: ಬೇಸಿಗೆಯ ಬಿರು ಬಿಸಿಲು ದಿನೇ ದಿನೆ ಏರಿಕೆ ಕಾಣುತ್ತಿದ್ದು, ತಾಲೂಕಿನ ಬಹುತೇಕ ಕಡೆಗಳಲ್ಲಿ ನೀರಿನ ಬವಣೆ ಕಂಡುಬಂದಿದೆ. ಎರಡು ವರ್ಷಗಳಿಂದ ಮುಂಗಾರು ಮಳೆಯ ಅಭಾವ, ಅವಧಿಗೂ ಮುನ್ನವೇ ನೀರಿನ ಒರತೆ ಕ್ಷೀಣಿಸಿದ ಪರಿಣಾಮ ಈ ಬಾರಿ ಜನ ನೀರಿಗಾಗಿ ಪರದಾಡುವ ಸ್ಥಿತಿ ಎದುರಾಗಿದ್ದು, ಕೊಡ ಹಿಡಿದು ಜನ ಪರದಾಡುವಂತಾಗಿದೆ.
ಸಮುದ್ರದ ನಂಟಿದ್ದರೂ ಉಪ್ಪಿಗೆ ಬರ ಎಂಬ ನಾಣ್ಣುಡಿಯಂತೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಅತಿ ದೊಡ್ಡ ಕೆರೆಗಳಲ್ಲಿ ಒಂದಾದ, ಭಾರತದ ಭೂಪಟವನ್ನು ಹೋಲುವ ಅಮಾನಿ ಬೈರಸಾಗರ ಕೆರೆ ತೀರದಲ್ಲಿರುವ ಗುಡಿಬಂಡೆ ಪಟ್ಟಣದ ಜನತೆಗೆ ಅಗತ್ಯವಿರುವಷ್ಟು ನೀರಿಲ್ಲದ ಕಾರಣ ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದೆ. ಆದರೆ ಅಧಿಕಾರಿಗಳು ಮಾತ್ರ ಯಾವ ವಾರ್ಡ್ ನಲ್ಲೂ ಸಮಸ್ಯೆ ಆಗಿಲ್ಲ, ಸಾರ್ವಜನಿಕರು ದೂರು ಕೊಟ್ಟಿಲ್ಲ ಎಂಬ ಉತ್ತರ ನೀಡುತ್ತಿದ್ದೂ, ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿನಿತ್ಯವೂ ಒಂದಲ್ಲ ಒಂದು ವಾರ್ಡಿನವರು ಕುಡಿಯುವ ನೀರಿನ ಕೊರತೆಯ ಬಗ್ಗೆ ಪ್ರಶ್ನೆ ಮಾಡುತ್ತಿರುವುದು ನೋಡಿದರೆ ಅಧಿಕಾರಿಗಳ ಹಾಗೂ ಜನಪ್ರತಿನಿದಿಗಳ ನಿರ್ಲಕ್ಷತೆ ಎದ್ದು ಕಾಣುತ್ತಿದೆ.

ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆಯಾಗದ ಕಾರಣ ಗುಡಿಬಂಡೆ ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಬೇಸಿಗೆ ಮುನ್ನವೇ ಉಂಟಾಗಿದೆ. ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದಂತೆ ಕೇಂದ್ರ ಸರಕಾರ ಜೆಜೆಎಂ ಯೋಜನೆ ಅನುಷ್ಠಾನಗೊಳಿಸಿದೆ. ಆದರೆ ಇದರಿಂದ ಜನರಿಗೆ ಯಾವುದೇ ಅನುಕೂಲವಾಗಿಲ್ಲ, ರಸ್ತೆಗಳು, ಚರಂಡಿ ಹಾಳಾಗ, ಎಲ್ಲೆಂದರಲ್ಲಿ ಗುಂಡಿಗಳನ್ನು ತೋಡಿ ಹಾಗೆ ಬಿಟ್ಟಿದ್ದು ಜನರ ಶಾಂತಿ ನೆಮ್ಮದಿ ಹದಗೆಡಿಸಿದೆ.
ಪಟ್ಟಣದ ನಿವಾಸಿಗಳಿಗೆ ಕುಡಿಯುವ ನೀರಿನ ಬಿಸಿ ತಟ್ಟಿದೆ:-
ಗುಡಿಬಂಡೆ ಪಟ್ಟಣದಲ್ಲಿ ಅಂದಾಜು 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು ಒಟ್ಟು ೧೧ ವಾರ್ಡ್ ಗಳನ್ನು ಹೊಂದಿರುವ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಬೇಕಾಗುವಷ್ಟು ನಿರೋದಗಿಸುವಲ್ಲಿ ಪಟ್ಟಣ ಪಂಚಾಯತಿಯಿಂದ ಸಾಧ್ಯವಾಗುತ್ತಿಲ್ಲ, ನೀರಿಗಾಗಿ ವಾರಗಟ್ಟಲೆ ಕಾಯುವ ಸ್ಥಿತಿ ಬಂದಿದ್ದು, ಕೆಲವು ಕಡೆ ನಿರೀಕ್ಷಿತ ಪ್ರಮಾಣದಲ್ಲಿ ನೀರು ಸಿಗುತ್ತಿಲ್ಲ, ಸಾವಿರಾರು ಹಣ ಕೊಟ್ಟು ಟ್ಯಾಂಕರ್ ನೀರನ್ನು ಹಾಕಿಸಿ ಕೊಳ್ಳುವಂತಾಗಿದ್ದು, ಹಿಡಿ ಶಾಪ ಹಾಕುತ್ತ ನೀರಿಗಾಗಿ ಸಾರ್ವಜನಿಕರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಟ್ಯಾಂಕರ್ ನೀರಿಗೆ ಮೊರೆ:-
ಪಟ್ಟಣ ಪ್ರದೇಶದಲ್ಲಿ ವಾಡಿಕೆಯಲ್ಲಿದ್ದ ಟ್ಯಾಂಕರ್ ನೀರಿನ ಬಳಕೆ ಇತ್ತೀಚಿನ ವರ್ಷಗಳಲ್ಲಿ ಗ್ರಾಮೀಣ ಭಾಗದಲ್ಲೂ ಕಾಣಿಸಿಕೊಳ್ಳಳು ಆರಂಭವಾಗಿದೆ. ಪಟ್ಟಣಕ್ಕೆ ಹೋಲಿಸಿದರೆ, ನೂರು ನೂರೈವತ್ತು ರೂಪಾಯಿ ಕಡಿಮೆಗೆ ಹಳ್ಳಿಗಳಲ್ಲೂ ಟ್ಯಾಂಕರ್ ನೀರನ್ನು ಪೂರೈಸುವ ಪರಿಪಾಠ ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ.
ಸದ್ಯದ ಮಟ್ಟಿಗೆ ನೀರಿನ ಸಮಸ್ಯೆ ಬಿಗಡಾಯಿಸಿಲ್ಲ:
ಗುಡಿಬಂಡೆ ಪಟ್ಟಣಕ್ಕೆ ಕೊಳವೆ ಬಾವಿ ಹಾಗೂ ಅಮಾನಿ ಬೈರಸಾಗರ ಕೆರೆಯಿಂದ ಕೆಲವು ಕಡೆ ದಿನಬಿಟ್ಟು ದಿನ, 3 ದಿನಕ್ಕೊಮ್ಮೆ, ವಾರಕ್ಕೊಮ್ಮೆ ಹೀಗೆ ಹೊಂದಾಣಿಕೆ ಮಾಡಿ ಹೆಚ್ಚಿನ ಸಮಸ್ಯೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ. ಆದರೆ ಅಮಾನಿ ಬೈರ ಸಾಗರ ಕೆರೆಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ನೀರಿನ ಸಮಸ್ಯೆಯಾದರೆ ಅಚ್ಚರಿ ಇಲ್ಲ.
ಕುಡಿಯುವ ನೀರಿನ ಸಮಸ್ಯೆ ಉದ್ಭವಿಸ ಬಹುದಾದ ಸಮಸ್ಯಾತ್ಮಕ ಗ್ರಾಮಗಳಿವು:-
ಬೀಚಗನಹಳ್ಳಿ ಗ್ರಾಪಂ 6, ಹಂಪಸಂದ್ರ ಗ್ರಾಪಂ ವ್ಯಾಪ್ತಿಯಲ್ಲಿ 6, ದಪ್ಪರ್ತಿ ಗ್ರಾಪಂ ನಲ್ಲಿ 2, ವರ್ಲಕೊಂಡ ಗ್ರಾಪಂ 4, ಸೋಮೇನಹಳ್ಳಿ ಗ್ರಾಪಂ 2,ತಿರುಮಣಿ ಗ್ರಾಪಂ 3. ಉಲ್ಲೋಡು ಗ್ರಾಪಂ ಚಿನ್ನಹಳ್ಳಿ ಹಾಗೂ ಎಲ್ಲೋಡು ಗ್ರಾಪಂ 3 ಗ್ರಾಮಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಆಗಬಹುದೆಂದು ಗುರುತಿಸಲಾಗಿದೆ.
ಈ ಗ್ರಾಮಗಳಲ್ಲಿ ಸಂಪೂರ್ಣ ಬತ್ತಿವೆ:
ವರಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಬತ್ತಲಹಳ್ಳಿ, ಹಂಪಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಂಜೀವರಾಯನಹಳ್ಳಿ ಹಾಗೂ ಅಧಿನಾರಾಯಣಹಳ್ಳಿ ಯಲ್ಲಿ ಸಂಪೂರ್ಣ ನೀರು ಬತ್ತಿಹೋಗಿದ್ದು ಅಕ್ಕ ಪಕ್ಕದ ಗ್ರಾಮಗಳಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ.

ಈ ಬಗ್ಗೆ ಮಾತನಾಡಿದ ಬೊಮ್ಮಗಾನಹಳ್ಳಿಯ ರೈತ ಚಿಕ್ಕಸುಬ್ಬರಾಯಪ್ಪ, 'ಈ ಬಾರಿ ಮಳೆ ಇಲ್ಲದೆ ಬೆಳೆಯೂ ಬಂದಿಲ್ಲ. ಒಳ್ಳೆ ಮಳೆಯಾದಾಗ ಜಾನುವಾರುಗಳಿಗೆ ಕೆರೆ, ಹಳ್ಳಗಳಲ್ಲಿ ನೀರು ಕುಡಿಸುವುದು ಸೇರಿ ಅಗತ್ಯ ಕೆಲಸಗಳಿಗೆ ಅನುಕೂಲವಾಗುತ್ತಿತ್ತು. ಆದರೆ, ಈ ಸಲ ಮಳೆಯಾಗದೇ ಕೆರೆಗಳು ತುಂಬಲೇ ಇಲ್ಲ. ಇದ್ದ ಸ್ವಲ್ಪ ನೀರು ಕೂಡ ಬೇಸಿಗೆ ಆರಂಭಕ್ಕೂ ಮುನ್ನವೇ ಖಾಲಿ ಆಗಿದೆ. ಬೋರ್ ವೆಲ್‌ಗಳಲ್ಲಿ ಕೂಡ ನೀರು ಕಡಿಮೆಯಾಗಿದ್ದು, ಬೆಳೆ ತೆಗೆಯುವುದಿರಲಿ, ಇರುವ ಜಾನುವಾರುಗಳನ್ನು ಉಳಿಸಿಕೊಳ್ಳುವುದು ಸವಾಲಾಗಿದೆ' ಎಂದರು.
ಗುಡಿಬಂಡೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಸಬಾ ಶಿರಿನ್, ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಯಾರು ದೂರು ಕೊಟ್ಟಿಲ್ಲ, ಸಮಸ್ಯೆ ಉಂಟಾಗಿದ್ದರೆ ಕೂಡಲೇ ಬಗೆ ಹರಿಸತ್ತೇನೆ, 11ನೇ ವಾರ್ಡಿನಲ್ಲಿ ಸ್ವಲ್ಪ ಸಮಸ್ಯೆ ಆಗಿದೆ, ಉಳಿದ ಕಡೆ ಎರಡು ಮೂರು ದಿನಗಳಿಗೆ ಒಮ್ಮೆ ನೀರು ಪೂರೈಕೆ ಮಾಡುತ್ತಿದ್ದೇವೆ ಎಂದರು.
ಸದ್ಯಕ್ಕೆ ಮೂರು ಗ್ರಾಮಗಳಲ್ಲಿ ಕೊಳವೆ ಬಾವಿಗಳಲ್ಲಿ ನೀರು ನಿಂತುಹೋಗಿದ್ದು ಸಮಸ್ಯೆ ನಿವಾರಿಸುತ್ತೇವೆ , ನೀರಿನ ಕೊರತೆ ಉಂಟಾಗಬಹುದಾದ 31 ಗ್ರಾಮಗಳ ಪಟ್ಟಿ ಮಾಡಿ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ ಹಾಗೂ ಕೊಳವೆ ಬಾವಿ ಕೊರಿಸಲು ಅನುದಾನ ಬಿಡುಗಡೆ ಗೊಳಿಸಲು ಮನವಿ ಮಾಡಲಾಗಿದೆ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗ ಗುಡಿಬಂಡೆ ಎಇಇ ನವೀನ್ ಹೇಳಿದರು.
ಗುಡಿಬಂಡೆ ತಾಲೂಕಿನಲ್ಲಿ ಒಟ್ಟು 123 ಗ್ರಾಮಗಳಿದ್ದು, ಒಟ್ಟು 97 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ. ಆದರೆ ಇವುಗಳಲ್ಲಿ 80ಕ್ಕೂ ಹೆಚ್ಚು ಘಟಕಗಳು ಕಾರ್ಯ ನಿರ್ವಹಿಸುತ್ತಿದ್ದೂ, ಉಳಿದವು ಗುತ್ತಿಗೆದಾರರ ನಿರ್ಲಕ್ಷ, ನಿರ್ವಹಣೆ ಕೊರತೆ ಸೇರಿದಂತೆ ಇನ್ನಿತರೇ ವಿವಿಧ ಕಾರಣಗಳಿಂದ ನೆಪತ್ಯಕ್ಕೆ ಸರಿದಿದ್ದು ಬೆದರು ಗೂಬೆಗಳಂತೆ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕಗಳಾಗಿ ಜನರಿಗೆ ಅನುಪಯುಕ್ತವಾಗಿವೆ.
ಗುಡಿಬಂಡೆ ತಾಲೂಕಿನ 123 ಗ್ರಾಮಗಳಲ್ಲಿ ಒಟ್ಟು 127 ಕೊಳವೆ ಬಾವಿಗಳನ್ನು ಕೊರೆಸಲಾಗಿದ್ದು, 118 ಕೊಳವೆ ಬಾವಿಗಳು ಕಾರ್ಯನಿರ್ವಹಿಸುತ್ತಿವೆ. ಇವುಗಳಲ್ಲಿ ಕೆಲವು ಕಡೆ ನೀರಿನ ಲಭ್ಯತೆ ಪ್ರಮಾಣ ಕಡಿಮೆಯಿದ್ದು ಅಂತಹ ಸಮಸ್ಯಾತ್ಮಕ ಗ್ರಾಮಗಳಲ್ಲಿ ದಿನ ಬಿಟ್ಟು ದಿನ ನೀರನ್ನು ಪೂರೈಕೆ ಮಾಡಲಾಗುತ್ತಿದೆ. 8 ಗ್ರಾಮಗಳಲ್ಲಿ ಬೋರ್ ವೇಲ್ ನಿಂತು ಹೋಗಿದ್ದು ಈ ಗ್ರಾಮಗಳ ಅಕ್ಕ ಪಕ್ಕದ ಗ್ರಾಮಗಳಿಂದ ನೀರನ್ನು ಸರಬರಾಜು ಮಾಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ











Click it and Unblock the Notifications