ನಾಗರಪಂಚಮಿ ಸಂಭ್ರಮ: ಚಿಕ್ಕಬಳ್ಳಾಪುರದ ಆದಿಯೋಗಿ ಕೇಂದ್ರದಲ್ಲಿ ವಿಶೇಷ ನಾಗಾರಾಧನೆ
ಚಿಕ್ಕಬಳ್ಳಾಪುರ, ಆಗಸ್ಟ್, 21: ಇಂದು ರಾಜ್ಯದೆಲ್ಲೆಡೆ ನಾಗರ ಪಂಚಮಿ ಸಂಭ್ರಮ ಮನೆ ಮಾಡಿದ್ದು, ದೇವಸ್ಥಾನಗಳಿಗೆ ಭಕ್ತರ ದಂಡೇ ಹರಿದುಬರುತ್ತಿದೆ. ಅಲ್ಲದೆ ನಾಗರ ಕಲ್ಲಿಗೆ ಹಾಲೆರೆಯುವ ಕಾರ್ಯಗಳು ಕೂಡ ಶುರುವಾಗಿವೆ. ಹಿಂದೂ ಪುರಾಣದ ಪ್ರಕಾರ, ವಿಷ್ಣು ಆಧಿಶೇಷ ದೈತ್ಯ ಹಾವಿನ ನೆರಳಿನಲ್ಲಿ ವಿಶ್ರಾಂತಿ ಪಡೆಯುತ್ತಾನೆ. ಶಿವನು ಕುತ್ತಿಗೆಗೆ ವಾಸುಕಿ ಎಂಬ ಸರ್ಪವನ್ನು ಧರಿಸುತ್ತಾನೆ. ಈ ಎಲ್ಲಾ ಭಕ್ತಿ ಪರವಾದ ಹಿನ್ನೆಲೆಯನ್ನು ಹೊಂದಿರುವ ಶಿವನಿಗೆ ಭಕ್ತರು ವಿಶೇಷ ಪೂಜೆಗಳನ್ನು ಸಲ್ಲಿಸಲಿದ್ದಾರೆ.
ಈಶಾ ಪೌಂಡೇಷನ್‌ನ ಆದಿಯೋಗಿ ದ್ಯಾನ ಕೇಂದ್ರದಲ್ಲಿ ಇಂದು (ಆಗಸ್ಟ್ 21) ಸಂಜೆ 5ಕ್ಕೆ ನಾಗಾರಾಧನೆ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಳೆದ ಆಗಸ್ಟ್ 19ರಿಂದ 21ರವರೆಗೆ ಆಹಾರ, ಆಟಿಕೆ ಮತ್ತು ಕರಕುಶಲ ಮಳಿಗೆಗಳ ಸ್ಥಾಪನೆಯೊಂದಿಗೆ ಹಳ್ಳಿ ಜಾತ್ರೆಯ ಸಂಭ್ರಮ ನಿರ್ಮಾಣ ಕಂಡು ಬಂದಿದ್ದು, ಇಂದು ಸದ್ಗುರು ಸನ್ನಿಧಿಯಲ್ಲಿರುವ ನಾಗ ಮಂಟಪದಲ್ಲಿ ಉಡುಪಿಯ ನಾಗವಾಕ್ಷಿಗಳಿಂದ ನಾಗಾರಾಧನೆ ನಡೆಯಲಿದೆ.

ಇದಕ್ಕೂ ಮೊದಲು ಬೆಳಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ ಸರ್ಪ ದೋಷ ನಿವಾರಣೆಗಾಗಿ ಸಾಂಪ್ರದಾಯಿಕವಾದ ಆಶ್ಲೇಷ ಬಲಿ ಪೂಜೆ ಕೈಗೊಳ್ಳಲಾಗಿದೆ.
ದೈವಿಕ ನಾಗನನ್ನು ಸಂಭ್ರಮಿಸುವ ಸಂದರ್ಭದಲ್ಲಿ ಸದ್ಗುರುಗಳು ವಿಶೇಷ ಆರತಿ ಅರ್ಪಿಸುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಭಕ್ತರು ಯೋಗೇಶ್ವರ ಲಿಂಗಕ್ಕೆ ಹಾಲು ಅಭಿಷೇಕ ನೆರವೇರಿಸಬಹುದು. ಅಲ್ಲದೆ ವಿಶೇಷ ಪೂಜೆಗೆ ಅವಕಾಶವನ್ನು ಸಹ ನೀಡಲಾಗಿದೆ.
ಒಂದು ದಿನದ ಪ್ರವಾಸಕ್ಕೆ ಉತ್ತಮ ಆಯ್ಕೆ
ನೀವು ಬೆಂಗಳೂರಿನಿಂದ ಆಧ್ಯಾತ್ಮಿಕತೆ, ಪ್ರಕೃತಿ ಮತ್ತು ಸಾಹಸವನ್ನು ಸಂಯೋಜಿಸುವ ಒಂದು ದಿನದ ಪ್ರವಾಸವನ್ನು ಬಯಸುತ್ತಿರುವವರು ಇಶಾ ಫೌಂಡೇಶನ್ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡಬಹುದು.
ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಸುಂದರವಾದ ಬೆಟ್ಟಗಳು ಮತ್ತು ಹಸಿರಿನಿಂದ ಸುತ್ತುವರಿದ ಪ್ರದೇಶದಲ್ಲಿ ನಾಗ ದೇಗುಲವನ್ನು ಇಶಾ ಫೌಂಡೇಶನ್‌ನ ವತಿಯಿಂದ ಹೊಸ ಕೇಂದ್ರ ನಿರ್ಮಾಣ ಮಾಡಲಾಗಿದೆ. ಇದು 112 ಅಡಿ ಆದಿಯೋಗಿ ಪ್ರತಿಮೆಯನ್ನು ಉಕ್ಕಿನಿಂದ ಮಾಡಲಾಗಿದ್ದು, ಸುಮಾರು 500 ಟನ್ ತೂಕವಿದೆ. ಇದು 34 ಮೀಟರ್ ಎತ್ತರ, 45 ಮೀಟರ್ ಉದ್ದ ಮತ್ತು 25 ಮೀಟರ್ ಅಗಲವಿದೆ. ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ ಇದು ವಿಶ್ವದ ಅತಿದೊಡ್ಡ ಬೆಸ್ಟ್ ಶಿಲ್ಪವಾಗಿದೆ ಎಂದು ಸಹ ವರ್ಣಿಸಲಾಗಿದೆ.
ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಬಳಿಯ ಇಶಾ ಫೌಂಡೇಶನ್‌ಗೆ ತೆರಳಲು ಟ್ರಾಫಿಕ್‌ಗೆ ಅನುಗುಣವಾಗಿ ಸುಮಾರು 1 ಗಂಟೆ 30 ನಿಮಿಷ ತೆಗೆದುಕೊಳ್ಳಬಹುದು. ಇದೆ ಸಂದರ್ಭದಲ್ಲಿ ಹತ್ತಿರದಲ್ಲಿರುವ ನಂದಿ ಗಿರಿಧಾಮ ಹಾಗೂ ಭೋಗ ನಂದೀಶ್ವರ ದೇವಾಲಯಕ್ಕೂ ಭೇಟೀ ನೀಡಬಹುದಾಗಿದೆ.
ಪ್ರತಿನಿತ್ಯ ಸಾವಿರಾರು ಪ್ರವಾಸಿಗರ ಭೇಟಿ
ನಂದಿ ಬೆಟ್ಟ ಅತ್ಯಂತ ಜನಪ್ರಿಯ ಹಾಗೂ ಆಕರ್ಷಣಿಯ ಪ್ರವಾಸಿ ಸ್ಥಳವಾಗಿದ್ದು, ಈ ಗಿರಿಧಾಮವು ಪ್ರೇಮಿಗಳನ್ನು ರೋಮಾಂಚನಗೊಳಿಸುವ ಬಯಲು ಮತ್ತು ಮೋಡಗಳ ವಿಹಂಗಮ ನೋಟವನ್ನು ನೀಡುತ್ತದೆ. ಅಲ್ಲದೆ ನಂದಿಯ ಭೋಗ ನಂದೀಶ್ವರ ದೇವಾಲಯವು ಶಿವ ಮತ್ತು ಅವನ ಪತ್ನಿ ಪಾರ್ವತಿಗೆ ಸಮರ್ಪಿತವಾದ ಪುರಾತನ ದೇವಾಲಯ ಸಂಕೀರ್ಣವನ್ನು ಕಣ್ತುಂಬಿಸಿಕೊಳ್ಳಬಹುದು.
ಒಂದಿಷ್ಟು ಸಲಹೆ, ಸೂಚನೆಗಳು
ಇಶಾ ಫೌಂಡೇಶನ್ ಚಿಕ್ಕಬಳ್ಳಾಪುರಕ್ಕೆ ಭೇಟಿ ನೀಡುವ ಪ್ರವಾಸಿಗರು ನಿಮ್ಮ ಪ್ರವಾಸವನ್ನು ಹೆಚ್ಚು ಆನಂದಿಸಲು ಕೆಲವು ಸಲಹೆಗಳನ್ನು ಪಾಲಿಸಿದರೆ ಉತ್ತಮವಾಗಿದೆ.
1. ಆರಾಮದಾಯಕವಾದ ಬಟ್ಟೆ ಮತ್ತು ಶೂಗಳನ್ನು ಧರಿಸಿ, ನೀವು ಕೇಂದ್ರದ ಸುತ್ತಲೂ ನಡೆಯಬೇಕಾಗುತ್ತದೆ. ಕಪ್ಪು ಅಥವಾ ಗಾಢ ಬಣ್ಣಗಳನ್ನು ಧರಿಸುವುದನ್ನು ತಪ್ಪಿಸಿ, ಅವು ಶಾಖವನ್ನು ಆಕರ್ಷಿಸುತ್ತವೆ.
2. ನೀರಿನ ಬಾಟಲಿಗಳು, ಟೋಪಿಗಳು, ಸನ್‌ಗ್ಲಾಸ್ ಮತ್ತು ಸನ್‌ಸ್ಕ್ರೀನ್ ಅನ್ನು ಒಯ್ಯಿರಿ, ಏಕೆಂದರೆ ಹಗಲಿನಲ್ಲಿ ಬಿಸಿಲಿನ ಧಗೆ ಹೆಚ್ಚಾಗಿರುತ್ತದೆ.
3. ಸ್ಥಳದ ಪವಿತ್ರತೆಯನ್ನು ಗೌರವಿಸಿ ಮತ್ತು ಸ್ವಯಂಸೇವಕರ ಸೂಚನೆಗಳನ್ನು ಅನುಸರಿಸಿ.
4. ಪ್ರತಿಮೆ ಅಥವಾ ದೇಗುಲವನ್ನು ಮುಟ್ಟಬೇಡಿ ಅಥವಾ ಏರಬೇಡಿ.
5. ಎಲ್ಲೆಂದರಲ್ಲಿ ಕಸ ಹಾಕಬೇಡಿ, ಇತರರಿಗೆ ಬೇಸರ ಪಡಿಸುವಂತೆ ಶಬ್ದ ಮಾಡಬೇಡಿ.
6. ನಿಮಗೆ ಸಮಯವಿದ್ದರೆ, ಹತ್ತಿರದ ಸ್ಥಳಗಳಾದ ನಂದಿ ಬೆಟ್ಟ ಮತ್ತು ಭೋಗ ನಂದೀಶ್ವರ ದೇವಸ್ಥಾನಕ್ಕೂ ಭೇಟಿ ನೀಡಬಹುದಾಗಿದೆ.












Click it and Unblock the Notifications