ಚಿಕ್ಕಬಳ್ಳಾಪುರದಲ್ಲಿ 'ಶಿವೋತ್ಸವ-2023'- ಸರ್ವರಿಗೂ ಸ್ವಾಗತ ಕೋರಿದ ಕೆ.ಸುಧಾಕರ್
ಚಿಕ್ಕಬಳ್ಳಾಪುರದಲ್ಲಿ'ಶಿವೋತ್ಸವ-2023' ಆಯೋಜಿಸಲಾಗಿದ್ದು ಶಿಕ್ಷಣ ಸಚಿವ ಸುಧಾಕರ್ ಸರ್ವರಿಗೂ ಸ್ವಾಗತ ಕೋರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ 'ಶಿವೋತ್ಸವ-2023' ಆಯೋಜಿಸಲಾಗಿದ್ದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸರ್ವರಿಗೂ ಸ್ವಾಗತ ಕೋರಿದ್ದಾರೆ.
ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 18ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ 'ಶಿವೋತ್ಸವ-2023' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪರಶಿವನ ಉತ್ಸವದಲ್ಲಿ ಭಕ್ತರ ಸಮಾಗಮ. ಮಹಾಶಿವರಾತ್ರಿಯ ಪ್ರಯುಕ್ತ ನಿರಂತರ ಕಾರ್ಯಕ್ರಮಗಳು ನಡೆಯಲಿದ್ದು. ಬನ್ನಿ ಪಾಲ್ಗೊಳ್ಳಿ, ಸರ್ವರಿಗೂ ಆದರದ ಸ್ವಾಗತ ಎಂದು ಡಾ.ಕೆ.ಸುಧಾಕರ್ ಟ್ವೀಟ್ ಮಾಡಿದ್ದಾರೆ.
ಮಹಾಶಿವರಾತ್ರಿಯ ಪ್ರಯುಕ್ತ ಫೆಬ್ರವರಿ 18ರಂದು ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗ್ರಾಮದ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂದೀಶ್ವರ ದೇವಸ್ಥಾನದಲ್ಲಿ 'ಶಿವೋತ್ಸವ-2023' ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
— Dr Sudhakar K (@mla_sudhakar) February 16, 2023
ಪರಶಿವನ ಉತ್ಸವದಲ್ಲಿ ಭಕ್ತರ ಸಮಾಗಮ. ಮಹಾಶಿವರಾತ್ರಿಯ ಪ್ರಯುಕ್ತ ನಿರಂತರ ಕಾರ್ಯಕ್ರಮ. ಬನ್ನಿ ಪಾಲ್ಗೊಳ್ಳಿ, ಸರ್ವರಿಗೂ ಆದರದ ಸ್ವಾಗತ. pic.twitter.com/wZOANZCDzp
ಜಿಲ್ಲೆಯಾಗಿ 15 ವಸಂತಗಳ ಸಂಭ್ರಮದಲ್ಲಿರುವ ಚಿಕ್ಕಬಳ್ಳಾಪುರ ಧಾರ್ಮಿಕ, ಐತಿಹಾಸಿಕ, ಶೈಕ್ಷಣಿಕ ಹಾಗೂ ಎಲ್ಲಾ ಮೂಲಸೌಕರ್ಯಗಳನ್ನು ಪಡೆದು ನವ ಕರ್ನಾಟಕದ ನಿರ್ಮಾಣದಲ್ಲಿ ಅತಿ ದೊಡ್ಡ ಬೆಳವಣಿಗೆ ಕಂಡು, ನವ ಭಾರತ ನಿರ್ಮಾಣಕ್ಕೆ ಕೊಡುಗೆ ನೀಡುತ್ತಿದೆ. 20-25 ವರ್ಷಗಳಿಂದ ನೀರಿನ ಬರ ಎದುರಿಸಿದ್ದ ಜಿಲ್ಲೆ ಈಗ ಅಂತರ್ಜಲದ ಮಟ್ಟವನ್ನು ಹೆಚ್ಚಿಸಿಕೊಂಡಿದೆ. ಇಡೀ ಜಿಲ್ಲೆಯ ಕೆರೆಗಳು ತುಂಬಿ ಹಸಿರಿನಿಂದ ಕಂಗೊಳಿಸುತ್ತಿವೆ. ವೈದ್ಯಕೀಯ ಕಾಲೇಜು ಮೂಲಕ ದಶಕಗಳ ಕನಸು ನನಸಾಗಿದೆ. ರೈತರು, ವಿದ್ಯಾರ್ಥಿಗಳು ಹೀಗೆ ಜಿಲ್ಲೆಯ ಎಲ್ಲಾ ವರ್ಗದ ಜನರು ಸಂತಸದಿಂದ ಈ ಬಾರಿ ಶಿವರಾತ್ರಿಯನ್ನು ಆಚರಿಸುತ್ತಿದ್ದಾರೆ.

ಚಿಕ್ಕಬಳ್ಳಾಪುರ ತಾಲೂಕಿನ ನಂದಿಗ್ರಾಮದಲ್ಲಿರುವ ಶ್ರೀ ಭೋಗನಂದೀಶ್ವರ ಸ್ವಾಮಿ ದೇವಾಲಯ ಪುರಾಣ ಪ್ರಸಿದ್ಧವಾದದ್ದು. ಬೆಟ್ಟದ ತಪ್ಪಲಿನ ನಂದಿ ಗ್ರಾಮದಲ್ಲಿರುವ ಭೋಗನಂದೀಶ್ವರ ದೇವಸ್ಥಾನ ಚಿಕ್ಕಬಳ್ಳಾಪುರ ಜಿಲ್ಲೆಯ ಮಹತ್ವದ ದೇವಸ್ಥಾನ. ಭೋಗನಂದೀಶ್ವರ ದರ್ಶನಕ್ಕೆ ಕರ್ನಾಟಕ ಮಾತ್ರವಲ್ಲದೆ ಆಂಧ್ರಪ್ರದೇಶ, ತಮಿಳುನಾಡುಗಳಿಂದಲೂ ಭಕ್ತರು ಆಗಮಿಸುತ್ತಾರೆ.
ಈ ದೇವಸ್ಥಾನ ರಾಜ್ಯ ಸರ್ಕಾರದ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿದೆ. ನಂದಿ ಬೆಟ್ಟ ಕೇಂದ್ರ ಸರ್ಕಾರದ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಭೋಗನಂದೀಶ್ವರ ಮತ್ತು ಯೋಗ ನಂದೀಶ್ವರ ದೇವಸ್ಥಾನಗಳನ್ನು ಅವಳಿ ದೇವಸ್ಥಾಗಳೆಂದು ಹೆಸರಾಗಿವೆ.
ಬೆಟ್ಟದ ಮೇಲೆ ಭೋಗನಂದೀಶ್ವರ ದೇವಸ್ಥಾನವಿದೆ. ಬೆಟ್ಟದ ಕೆಳಗೆ ಯೋಗದಂದೀಶ್ವರ ದೇವಸ್ಥಾನವಿದೆ. ಯೋಗನಂದೀಶ್ವರ ವಿರಾಗಿ. ಆ ಕಾರಣಕ್ಕಾಗಿ ಆ ದೇವಸ್ತಾನದಲ್ಲಿ ಹೆಚ್ಚಿನ ಉತ್ಸವ ಮತ್ತು ಆಚರಣೆಗಳು ನಡೆಯುವುದಿಲ್ಲ. ಆದರೆ ಭೋಗ ನಂದೀಶ್ವರ ದೇವಸ್ಥಾನದಲ್ಲಿ ನಿತ್ಯ ವಿಶೇಷ ಪೂಜೆ, ಅಭಿಷೇಕ ಇತ್ಯಾದಿ ಸೇವೆಗಳು ನಡೆಯುತ್ತವೆ. ವರ್ಷವಿಡೀ ಭಕ್ತರು ದೇವಸ್ಥಾನಕ್ಕೆ ಬರುತ್ತಾರೆ. ಕ್ಷೇತ್ರಕ್ಕೆ ಬರುವ ಬಹುತೇಕ ಭಕ್ತರು ಎರಡೂ ದೇವಸ್ಥಾನಗಳಿಗೆ ಭೇಟಿ ನೀಡುತ್ತಾರೆ.

ಈ ಜಿಲ್ಲೆಯಲ್ಲಿ ಒಂದೂ ನದಿಗಳು ಹರಿಯುವುದಿಲ್ಲ. ಆದರೆ 5 ಪವಿತ್ರ ನದಿಗಳು ಉಗಮವಾಗುತ್ತವೆ. ಪ್ರವಾಸೋದ್ಯಮಕ್ಕೆ ಹೆಸರುವಾಸಿಯಾಗಿದೆ. 2ನೇ ಜಲಿಯನ್ ವಾಲಾಭಾಗ್ ಎಂದು ಕರೆಸಿಕೊಳ್ಳುವ ವಿಧುರಾಶ್ವತ್ಥ ಐತಿಹಾಸಿಕವಾಗಿದೆ. 2 ಭಾರತ ರತ್ನಗಳು ( ಸರ್.ಎಂ. ವಿಶ್ವೇಶ್ವರಯ್ಯ ಮತ್ತು ಪ್ರೋ. ಸಿಎನ್‌ಆರ್ ರಾವ್) ಇದೇ ನಾಡಿನವರು ಎಂಬುದು ಈ ಜಿಲ್ಲೆಯ ಹೆಮ್ಮೆ. ತಪಸ್ವಿಗಳು, ಸಾಧು ಸಂತರು ಮೆಟ್ಟಿದ ಈ ನೆಲ ಫಲಪುಷ್ಪಗಳ ಗಿರಿಧಾಮವಾಗಿದೆ.












Click it and Unblock the Notifications