Get Updates
Get notified of breaking news, exclusive insights, and must-see stories!

ಸರ್ಕಾರಿ ಶಾಲೆಯ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ: ಜ್ಞಾನ ಹರಡಿದ ಕಲೆ, ವಿಜ್ಞಾನ ವಸ್ತು ಪ್ರದರ್ಶನ

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಗುಡಿಬಂಡೆ ತಾಲೂಕಿನ ವಿವಿಧ ಖಾಸಗಿ ಹಾಗೂ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಆಕರ್ಷಣೀಯ ಚಿತ್ತಾರಗಳನ್ನು ತಯಾರಿಸಿ ಪೋಷಕರ ಹಾಗೂ ನೋಡುಗರು ನಿಬ್ಬರಗಾಗುವಂತೆ ಮೋಡಿ ಮಾಡಿದರು.

ಚಿಕ್ಕಬಳ್ಳಾಪುರ, ಮಾರ್ಚ್ 1: ಭಾರತದ ಹೆಮ್ಮೆಯ ವಿಜ್ಞಾನಿ ಸರ್.ಸಿ.ವಿ.ರಾಮನ್ ರವರ ಅಭೂತಪೂರ್ವ ಸಾಧನೆಯ ಸವಿನೆನಪಿಗಾಗಿ ಆಚರಿಸಲಾಗುವ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಪ್ರಯುಕ್ತ ಗುಡಿಬಂಡೆ ತಾಲೂಕಿನ ವಿವಿಧ ಖಾಸಗಿ ಹಾಗೂ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಆಕರ್ಷಣೀಯ ಚಿತ್ತಾರಗಳನ್ನು ತಯಾರಿಸಿ ಪೋಷಕರ ಹಾಗೂ ನೋಡುಗರು ನಿಬ್ಬರಗಾಗುವಂತೆ ಮೋಡಿ ಮಾಡಿದರು.

ಹಳೆ ಕಾಲದ ಮಣ್ಣಿನ ಮನೆ ಬಳಕೆ ಬಸ್ಸುಗಳು, ಸೋಲಾರ ವಿದ್ಯುತ್‌ ದ್ವೀಪ, ಮಳೆ ನೀರು ಕೊಯ್ಲುಸಂಗ್ರಹಣೆ, ವಾಹನ ಪಾರ್ಕಿಂಗ್ ವ್ಯವಸ್ಥೆ, ಮನುಷ್ಯನ ದೇಹದ ಆಕಾರ, ಸೋಲಾರ ಸಿಸ್ಟಮ್‌, ಸಿಲಿಕಾನ್‌ ಸಿಟಿ ಚಿತ್ರಣ, ಅರಣ್ಯ ಪ್ರದೇಶ, ನಿಸರ್ಗ, ಗ್ರಾಮೀಣ ಜನರ ಸಂಸ್ಕೃತಿ ಹೀಗೆ ಅನೇಕ ವಿಭಿನ್ನ ಆಕೃತಿಗಳು ವಸ್ತು ಪ್ರದರ್ಶನದಲ್ಲಿ ಆಕರ್ಷಿಣೀಯ ವಸ್ತುಗಳಾಗಿದ್ದವು.

Science Exhibition In Gudibande taluk Government School

ಗುಡಿಬಂಡೆ ಪಟ್ಟಣದ ಶ್ರೀಸಾಯಿ ವಿದ್ಯಾನಿಕೇತನ್, ಎಲ್ಲೋಡು ಸರ್ಕಾರಿ ಪ್ರೌಢಶಾಲೆ, ಸೋಮೇನಹಳ್ಳಿ ಇಂದಿರಾಗಾಂಧಿ ವಸತಿ ಶಾಲೆ, ಕೊಂಡರೆಡ್ಡಿಹಳ್ಳಿ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ, ಮಂಡಿಕಲ್ ರಾಮಯ್ಯ ಇಂಗ್ಲೀಷ್ ಮಾಧ್ಯಮ ಶಾಲೆ, ಬೀಚಗಾನಹಳ್ಳಿ ಕಸ್ತೂರಿಬಾ ಶಾಲೆಗಳಲ್ಲಿ 2022-23ರ ಶೈಕ್ಷಣಿಕ ವರ್ಷದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು.

ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಏರ್ಪಡಿಸಲಾಗಿದ್ದ ಕಲೆ, ಚಿತ್ರಕಲೆ, ವಿಜ್ಞಾನ ಮತ್ತು ಭಾಷೆಗಳ ವಸ್ತು ಪ್ರದರ್ಶನಗಳಲ್ಲಿ ಮಕ್ಕಳು ತಮ್ಮೊಳಗಿನ ಸುಪ್ತ ಪ್ರತಿಭೆಯನ್ನು ಹೊರಹಾಕಿದರು. ಕಾರ್ಯಕ್ರಮದಲ್ಲಿ ಆಕರ್ಷಕ ವಸ್ತುಗಳು ಪಾಲಕರು, ವಿಜ್ಞಾನಾಸಕ್ತರು ಹಾಗೂ ಸಾರ್ವಜನಿಕರ ಗಮನ ಸೆಳೆದವು.

Science Exhibition In Gudibande taluk Government School

ವಿಜ್ಞಾನ, ಗಣಿತ, ಕನ್ನಡ, ಹಿಂದಿ, ಇಂಗ್ಲೀಷ್‌, ಸಮಾಜ ವಿಜ್ಞಾನ ಮತ್ತು ಕಲಾ ಹಾಗೂ ಭಾಷಾ ವಸ್ತು ಪ್ರದರ್ಶನ ನೀಡುವುದರ ಜೊತೆ ವಸ್ತುಗಳ ಬಗ್ಗೆ ವಿದ್ಯಾರ್ಥಿಗಳು ಪಟ ಪಟನೆ ಮಾಹಿತಿ ನೀಡುತ್ತಿದ್ದರು. 1ನೇ ತರಗತಿಯಿಂದ 8ನೇ ತರಗತಿ ಮಕ್ಕಳು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ವಿಜ್ಞಾನ, ಕಲೆ ವಸ್ತುಗಳ ಪ್ರದರ್ಶನ

ಕಚ್ಚಾ ವಸ್ತುಗಳಿಂದ ಡೈನೋಮಿಟರ್‌, ಸೋಲಾರ್‌ ಸಿಸ್ಟಮ್‌, ಗಾಳಿ ಯಂತ್ರದ ಮೂಲಕ ವಿದ್ಯುತ್‌ ಉತ್ಪಾದನೆ, ಎಲೆಕ್ಟ್ರಾನಿಕ್‌ ಲೈಟಿಂಗ್‌ ಮಾಡಲ್‌, ವೇಸ್ಟ್‌ ನೀರನ್ನು ಶುದ್ಧಿಕರಿಸುವ ಯಂತ್ರ ಸೇರಿದಂತೆ ನಾನಾ ರೀತಿಯ ಕಚ್ಚಾ ವಸ್ತುಗಳನ್ನು ಉಪಯೋಗಿಸಿಕೊಂಡು ತಯಾರಿಸಿ, ಅವುಗಳ ಬಗ್ಗೆ ಮಾಹಿತಿ ನೀಡುವ ಮೂಲಕ ವಿದ್ಯಾರ್ಥಿಗಳು ಸೈ ಎನಿಸಿಕೊಂಡಿದ್ದಾರೆ.

ವಸ್ತುವಿನ ದೂರ ಎತ್ತರ ಅಳೆಯುವ ರೇಡಿಯೋಮಿಟರ್‌, ಪೈಂಥಾಗೋರಸ್‌ ನಿಯಮ, ಆಕೃತಿಯ ಮಾದರಿಗಳು, ಸೂತ್ರಗಳು, ಗಣಿಯಾರ, ಲಂಬಕೋನ, ಸೇರಿದಂತೆ ಗಣಿತಕ್ಕೆ ಸಂಬಂಧಿಸಿ ಸುಮಾರು 50 ಕ್ಕೂ ಹೆಚ್ಚು ಕಚ್ಚಾ ವಸ್ತುಗಳಿಂದ ತಯಾರಿಸಿದ ಮಾಡಲ್‌ಗಳನ್ನು ಪ್ರದರ್ಶನ ಮಾಡಿದರು.

ವಿಜ್ಞಾನ ಮತ್ತು ಕಲಾ ಪ್ರದರ್ಶನದಲ್ಲಿ ಆಕರ್ಷಿಣೀಯ ಚಿತ್ರಗಳು ಸಾರ್ವಜನಿಕರನ್ನು ಆಕರ್ಷಿಸಿದರೆ. ಇನ್ನೂ ಕನ್ನಡ ಭಾಷೆಯ ಕವಿಗಳು, ವಿದ್ವಾಂಸರ ಪರಿಚಯ ಕನ್ನಡ ವ್ಯಾಕರಣದ ಪದಗಳ ಬಳಕೆ ಕುರಿತು ಮಕ್ಕಳು ಅಚ್ಚುಕಟ್ಟಾಗಿ ಬರೆದಿದ್ದರು. ಸಾಧನೆ ಮಾಡಿದ ಸಾಧಕರ ಫೋಟೋ ಮತ್ತು ಅವರ ಪರಿಚಯ ಪ್ರದರ್ಶನದಲ್ಲಿಮಾಡಿಕೊಂಡಿದ್ದಾರೆ. ಬೆಳಗ್ಗೆಯಿಂದ ಸಂಜೆಯವರೆಗೂ ಸಾವಿರಾರು ನಾಗರಿಕರು, ಪಾಲಕರು, ವಿದ್ಯಾರ್ಥಿಗಳು ವಸ್ತು ಪ್ರದರ್ಶನವನ್ನು ಆಸಕ್ತಿಯಿಂದ ವೀಕ್ಷಿಸಿ ಮಾಹಿತಿ ಪಡೆದುಕೊಂಡರು.

ಈ ಬಗ್ಗೆ ಗುಡಿಬಂಡೆ ತಾಲೂಕು ಎಲ್ಲೋಡು ಸರಕಾರಿ ಪ್ರೌಢಶಾಲೆಯ ವಿಜ್ಞಾನ ಶಿಕ್ಷಕ ವಿ. ನರಸಿಂಹಮೂರ್ತಿ ಮಾತನಾಡಿ "ಮಕ್ಕಳ ಮನಸ್ಸು ಬಹುಬೇಗ ಆಸಕ್ತಿ ಮತ್ತು ಕುತೂಹಲಕ್ಕೆ ಒಳಗಾಗುತ್ತದೆ. ಪಠ್ಯದ ವಿಷಯಗಳು ಎಷ್ಠೇ ಬಾರಿ ಓದಿದರೂ ಸುಲಭವಾಗಿ ಅರ್ಥವಾಗುವುದಿಲ್ಲ ಆದರೆ ಇಂತಹ ಪ್ರದರ್ಶನಗಳು ಸುಲಭ ವಿಷಯ ಗ್ರಹಿಕೆಗೆ ಸಹಕಾರಿಯಾಗುತ್ತದೆ. ವಸ್ತು ಪ್ರದರ್ಶನದ ಹಿಂದೆ ಪೋಷಕರು, ಮಕ್ಕಳು ಹಾಗೂ ಶಿಕ್ಷಕರ ಆಸಕ್ತಿ ಇದೆ ಮತ್ತು ಈ ವಸ್ತು ಪ್ರದರ್ಶನ ಶಿಕ್ಷಣದ ಒಂದು ಭಾಗವಾಗಿ ರೂಪುಗೊಂಡಿದೆ ಎಂದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+