ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವೀಧರರಿಗೆ ಸ್ಕಾಲರ್ ಶಿಪ್-ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ
Scholarship: ಸಾಮಾನ್ಯವಾಗಿ ಸರ್ಕಾರದ ವತಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ಸ್ಕಾಲರ್ ಶಿಪ್ ಅನ್ನು ನೀಡಲಾಗುತ್ತದೆ. ಆದರೆ ಇದೀಗ ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಘೋಷಿಸಿದ್ದಾರೆ. ಹಾಗಾದರೆ ಯಾರಿಗೆ ಎಷ್ಟು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಚಿಕ್ಕಬಳ್ಳಾಪುರ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕ್ಷೇತ್ರದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಘೋಷಿಸಿದ್ದಾರೆ. ಚಿಕ್ಕಬಳ್ಳಾಪುರದ ಕಂದವಾರದ ಬಳಿಯ ಗೃಹ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸ್ಕಾಲರ್ ಶಿಪ್ ನೀಡುವುದಾಗಿ ಘೋಷಣೆ ಮಾಡಿದರು ಎನ್ನುವ ಮಾಹಿತಿ ಲಭ್ಯವಾಗಿದೆ.

ಇನ್ನು ಈ ಸ್ಕಾಲರ್ ಶಿಪ್‌ಗೆ ಪ್ರದೀಪ್ ಈಶ್ವರ್ ಎಂಎಲ್ಎ ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಈ ವಿದ್ಯಾರ್ಥಿವೇತನಕ್ಕೆ ಒಟ್ಟು 5,00,00,000 ರೂಪಾಯಿಗೂ ಹೆಚ್ಚು ಹಣ ಖರ್ಚಾಗಲಿದೆ ಎಂದು ನಿರೀಕ್ಷಸಲಾಗಿದೆ.
ಯಾವ ವಿದ್ಯಾರ್ಥಿಗಳಿಗೆ ಎಷ್ಟು ಹಣ.?
* 10ನೇ (SSLC) ತರಗತಿ- 1,000 ರೂಪಾಯಿ
* ಐಟಿಐ, ಡಿಪ್ಲೋಮಾ- 1,500 ರೂಪಾಯಿ
* ದ್ವಿತೀಯ ಪಿಯುಸಿ- 2,000 ರೂಪಾಯಿ
* ಡಿಗ್ರಿ ಫೈನಲ್ ಇಯರ್ (ಬಿಎ. ಬಿಕಾಮ್, ಬಿಎಸ್ಸಿ, ಬಿಬಿಎ, ವಿಸಿಎ, ಬಿಎಸ್ಡಬ್ಲು, ಎಲ್ಎಲ್ಬಿ)- 2,000 ರೂಪಾಯಿ
* ಸ್ನಾತಕೋತ್ತರ ಫೈನಲ್ ಇಯರ್ (ಎಂಬಿಬಿಎಸ್, ಬಿಇ, ಎಂಎಸ್ಸಿ, ಎಂಎ, ಎಂಕಾಮ್, ಎಂಬಿಎ, ಎಂಎಸ್‌ಡಬ್ಲ್ಯು, ಬಿಎಎಂಎಸ್, ಡೆಂಟಲ್) - 3,000
ಇನ್ನು ಸ್ಕಾಲರ್ ಶಿಪ್‌ಗೆ ನೋಂದಣಿ ಮಾಡಿಕೊಳ್ಳಲು ಕೊನೆಯ ದಿನಾಂಕ ನವೆಂಬರ್ 15, 2024 ಆಗಿದೆ.
ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಎಲ್ಲಾ ಸರ್ಕಾರಿ, ಖಾಸಗಿ ಹಾಗೂ ಐಡೇಡ್ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ಹೆಚ್ಚಿನ ಮಾಹಿತಿಗಾಗಿ 080-24413333, ಸ್ವಾಮ್ಯ- 90084 95576, ಹರೀಶ್- 97430 64840 ಹಾಗೂ www.pradeepeshwarmla.com ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ ಎಂದು ತಿಳಿಸಲಾಗಿದೆ.
ಲ್ಯಾಪ್ ಟಾಪ್ ವಿತರಣೆ: 2023-24ನೇ ಸಾಲಿನಲ್ಲಿ ತಾಲ್ಲೂಕುವಾರು ಅತಿ ಹೆಚ್ಚು ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಹಾಗೂ ಸಮಾನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಯದಾಯಕವಾಗಿ ಲ್ಯಾಪ್ ಟಾಪ್‌ಗಳನ್ನು ವಿತರಿಸುವ ಯೋಜನೆಗೆ ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಫಲಾನುಭವಿ ವಿದ್ಯಾರ್ಥಿಗಳ ಪಟ್ಟಿಯನ್ನು ಉಪನಿರ್ದೇಶಕರು ಶಾಲಾ ಶಿಕ್ಷಣ ಇಲಾಖೆ ಕಛೇರಿಗೆ ಇ-ಮೇಲ್ ಮೂಲಕ ಕಳುಹಿಸಲಾಗಿದೆ.
ಇದೀಗ ಪಟ್ಟಿಯನ್ನು ತಮ್ಮ ವ್ಯಾಪ್ತಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಗೆ ರವಾನಿಸಿ, ಕ್ಷೇತ್ರಶಿಕ್ಷಣಾಧಿಕಾರಿಗಳು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲು ತಿಳಿಸಿದೆ.
* ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ವ್ಯಾಪ್ತಿಯ ಶಾಲಾ ಶಿಕ್ಷಣ ಇಲಾಖೆಯಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಸರ್ಕಾರಿ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯನ್ನು ಕರೆಯುವುದು.
* ಕ್ರಮ ಸಂಖ್ಯೆ 01ರಂತೆ ಕರೆಯಲಾದ ಸಭೆಯಲ್ಲಿ ಮಂಡಲಿ ರವಾನಿಸಿರುವ ಫಲಾನುಭವಿಗಳ ಪಟ್ಟಿಯನ್ನು ಮುಖ್ಯಶಿಕ್ಷಕರು ಪರಿಶೀಲನೆಗೆ ನೀಡುವುದು.
* ಮುಖ್ಯಶಿಕ್ಷಕರ ಪರಿಶೀಲನೆಯ ಹಂತದಲ್ಲಿ ಫಲಾನುಭವಿಗಳ ಪಟ್ಟಿಯಲ್ಲಿ ಯಾವುದಾದರೂ ಅರ್ಹ ಫಲಾನುಭವಿಗಳು ಕೈಬಿಟ್ಟು ಹೋಗಿರುವುದನ್ನು ಗುರುತಿಸಿದ್ದಲ್ಲಿ, ಮುಖ್ಯಶಿಕ್ಷಕರಿಂದ ಅರ್ಹ ವಿದ್ಯಾರ್ಥಿಯ ಎಲ್ಲಾ ವಿವರಗಳನ್ನು ದೃಢಿಕರಣದೊಂದಿಗೆ ಪಡೆಯಬೇಕು. ಹಾಗೂ ಶಾಲಾ ಶಿಕ್ಷಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಸರ್ಕಾರಿ ಶಾಲೆ ಹೊರತುಪಡಿಸಿದಂತೆ ದೇರ ಶಾಲೆಯ ವಿದ್ಯಾರ್ಥಿಗಳು/ಅನರ್ಹ ವಿದ್ಯಾರ್ಥಿಗಳು ಪಟ್ಟಿಯಲ್ಲಿ ಸೇರ್ಪಡೆಗೊಂಡಿದಲ್ಲಿ ಅಂತಹ ವಿದ್ಯಾರ್ಥಿಗಳ ಮಾಹಿತಿಯನ್ನು ಸರ್ಕಾರಿ ಶಾಲೆಗೆ/ತಮ್ಮ ಶಾಲೆಗೆ ಸೇರಿಲ್ಲದಿರುವ ಬಗ್ಗೆ, ದೃಢೀಕರಣವನ್ನು ಪಡೆಯುವುದು.
* ಉಪನಿರ್ದೆಶಕರು ಅವರು ತಮ್ಮ ವ್ಯಾಪ್ತಿಯ ಎಲ್ಲಾ ಕ್ಷೇತ್ರಶಿಕ್ಷಣಾಧಿಕಾರಿಗಳಿಂದ ಮೇಲ್ಕಂಡಂತೆ ವರದಿ ಪಡೆದು, ಕ್ರೋಢಿಕರಿಸಿ ಮಂಡಲಿಗೆ ಅಕ್ಟೋಬರ್ 24, 2024ರೊಳಗೆ ತನ್ನದೆ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ಪ್ರತಿಯನ್ನು ಅಂಚೆ ಮೂಲಕ ಮಂಡಳಿಯ ಹಿರಿಯ ಸಹಾಯಕ ನಿರ್ದೇಶಕರು, ಬಿ ಶಾಖೆ, ಇವರಿಗೆ ಕಳುಹಿಸಲು ಸೂಚನೆ ನೀಡಲಾಗಿದೆ.












Click it and Unblock the Notifications