Get Updates
Get notified of breaking news, exclusive insights, and must-see stories!

ಪ್ಲಾಸ್ಟಿಕ್‌ ಮುಕ್ತ ಚಿಕ್ಕಬಳ್ಳಾಪುರಕ್ಕೆ ಸಾರ್ವಜನಿಕರಿಂದ ಸಿಗದ ಸಹಕಾರ: ಅಧಿಕಾರಿಗಳ ನಡೆಗೆ ವ್ಯಾಪಾರಸ್ಥರ ಅಸಮಾಧಾನ

ಚಿಕ್ಕಬಳ್ಳಾಪುರ, ನವೆಂಬರ್‌ 10: ಸರ್ಕಾರದ ಮಾರ್ಗಸೂಚಿ ಅನುಸಾರ 50 ಮೈಕ್ರಾನ್‌ಗಿಂತ ಮೇಲಿರುವ ಪ್ಲಾಸ್ಟಿಕ್‌ ಬಳಕೆಗೆ ಅವಕಾಶವಿದ್ದು, ಜನಸಮಾನ್ಯರೇ ಜಾಗೃತರಾಗಿ ಏಕಬಳಕೆ ಪ್ಲಾಸ್ಟಿಕ್‌ ನಿಷೇಧಕ್ಕೆ ಸಹಕರಿಸಬೇಕು ಎಂದು ಹಲವು ವರ್ಷಗಳಿಂದ ಜನಸಾಮಾನ್ಯರಲ್ಲಿ ಮನವಿ ಮಾಡುತ್ತಿದ್ದರು.

ಆದರೆ ಯಾವುದೇ ಬದಲಾವಣೆಯು ಆಗದಿರುವುದರಿಂದ ಚಿಕ್ಕಬಳ್ಳಾಪುರ ಜಿಲ್ಲಾ ಉಸ್ತುವಾರಿ ಸಚಿವರೇ ಅಖಾಡಕ್ಕೆ ಇಳಿದು ಅಧಿಕಾರಿಗಳ ಸಹಕಾರದ ಮೂಲಕ ಪ್ಲಾಸ್ಟಿಕ್ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿದ್ದಾರೆ.

public-not-support-plastic-free

ಪ್ಲಾಸ್ಟಿಕ್ ಮುಕ್ತ, ಚಿಕ್ಕಬಳ್ಳಾಪುರ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕ‌ ಅವರ ನೇತೃತ್ವದಲ್ಲಿ ಜಿಲ್ಲಾಡಳಿತ ನೂತನ ಅಭಿಯಾನ ಹಮ್ಮಿಕೊಂಡಿದೆ. ಎಲ್ಲ ಐದೂ ಕ್ಷೇತ್ರಗಳ ಶಾಸಕರ ಸಹಮತದೊಂದಿಗೆ ಜಿಲ್ಲಾದ್ಯಂತ ಜಾರಿಗೆ ತೀರ್ಮಾನಿಸಲಾಗಿದೆ. ಆದರೆ, ಅಂದುಕೊಂಡಂತೆ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಮಾಡುವುದೇ ಈಗ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನ.1ರಿಂದಲೇ ಜಿಲ್ಲಾದ್ಯಂತ ಪ್ಲಾಸ್ಟಿಕ್‌ ಮುಕ್ತ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. ದೊಡ್ಡಎಲ್ ಇಡಿ ಪರದೆಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆಯುತ್ತಿದೆ. ವಿಶೇಷ ಎಂದರೆ ಈ ಯೋಜನೆ ಯಶಸ್ವಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ 0.6. ಶಿವಕುಮಾರ್ ಅವರು ಕೂಡಾ ಅಭಿಯಾನಕ್ಕೆ ಸಹಕಾರ ಕೋರಿದ್ದಾರೆ. ದೊಡ್ಡ ಮಟ್ಟದಲ್ಲಿ ಅಭಿಯಾನಕ್ಕೆ ಚಾಲನೆ ನೀಡ ಲಾಗಿದ್ದು, ಶತಾಯಗತಾಯ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಮಾಡಲು ಕಂಕಣತೊಡಲಾಗಿದೆ.

ಜಿಲ್ಲೆಯ ಎಲ್ಲೆಡೆ ಜಾಗೃತಿ

ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಂ.ಸಿ. ಸುಧಾಕರ್ ಜಿಲ್ಲೆಗೆ ಮೊದಲು ಭೇಟಿ ನೀಡಿದ ವೇಳೆಯೇ ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಜಿಲ್ಲೆ ಮಾಡುವ ಸಂಕಲ್ಪ ತೊಟ್ಟಿದ್ದರು. ಆಗಿನಿಂದಲೇ ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಒಂದಿಲ್ಲೊಂದು ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇವೆ. ನಗರಸಭೆ, ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ಬಳಕೆ ನಿಷೇಧ ಮಾಡಿ ಆದೇಶ ಹೊರಡಿಸಿ ಅಂಗಡಿಗಳ ಮುಂದೆ ಅಂಟಿಸಲಾಗಿದೆ. ಆದರೂ ಪ್ಲಾಸ್ಟಿಕ್ ಪೆಂಡಭೂತ ಮಾತ್ರ ಬಿಟ್ಟು ಹೋಗುತ್ತಿಲ್ಲ.

ಪ್ಲಾಸ್ಟಿಕ್ ಮುಕ್ತಕ್ಕೆ ಬರೀ ಖರ್ಚು

ಪ್ಲಾಸ್ಟಿಕ್ ಮುಕ್ತ ಚಿಕ್ಕಬಳ್ಳಾಪುರ ಅಭಿಯಾನದ ಅಂಗವಾಗಿ ನಿತ್ಯ ಕಸ ಸಾಗಿಸುವ ವಾಹನಗಳಲ್ಲಿ ಮೈಕ್ ಗಳನ್ನು ಅಳವಡಿಸಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಎಲ್‌ಇಡಿ ಪರದೆಗಳಿರುವ ವಾಹನಗಳ ಮೂಲಕ ಜಾಗೃತಿ ಮೂಡಿಸಲಾಗುತ್ತಿದೆ. ಅಂಗಡಿಗಳಿಗೆ ನೋಟಿಸ್ ಕೊಟ್ಟು ಅಲ್ಲಲ್ಲಿ ಪೋಸ್ಟರ್‌ಗಳನ್ನು ಅಂಟಿಸಿಲಾಗಿದೆ. ಅಂಗಡಿಗಳ ಮೇಲೆ ದಾಳಿ ಮಾಡಿ ಸಾವಿರಾರು ರೂ. ದಂಡ ವಸೂಲಿ ಮಾಡಲಾಗಿದೆ. ಆದರೆ, ಪ್ಲಾಸ್ಟಿಕ್ ಉತ್ಪನ್ನಗಳ ಬಳಕೆ, ಕದ್ದುಮುಚ್ಚಿ ನಡೆಯುತ್ತಲೇ ಇದೆ.

ಜಿಲ್ಲಾಡಳಿತದಿಂದ ಅಂಗಡಿಗಳಲ್ಲಿ ನಿಷೇಧ ಮಾಡುವುದು ಮಾತ್ರವಲ್ಲ, ಮನೆಗಳಲ್ಲಿರುವ ಪ್ಲಾಸ್ಟಿಕ್‌ನ್ನು ಹೊರ ತೆಗೆಸುವ ಕೆಲಸ ಮಾಡಲಾಗಿತ್ತು. ಈ ಅಭಿಯಾನದಲ್ಲಿ 5 ಸಾವಿರ ಟನ್ ಪ್ಲಾಸ್ಟಿಕ್ ಹೊರ ತೆಗೆಯುವ ಕೆಲಸ ನಡೆದಿದೆ. ಈಗ ಪ್ಲಾಸ್ಟಿಕ್ ಮುಕ್ತ ಅಭಿಯಾನಕ್ಕೆ ಜಿಲ್ಲಾಡಳಿತ ಚಾಲನೆ ಕೊಟ್ಟಿದೆ. ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದ ಜಾಗಗಳನ್ನು ಬ್ಲಾಕ್ ಸ್ಲಾಟ್‌ಗಳೆಂದು ಗುರುತಿಸಿ, ಸಿಸಿ ಕ್ಯಾಮೆರಾ ಅಳವಡಿಸುವ ಕಾರ್ಯವೂ ಕೆಲವೆಡೆ ನಡೆದಿವೆ. ಇನ್ನೊಂದೆಡೆ ಇಡೀ ದಿನ ಸಚಿವರು, ಶಾಸಕರು ಪ್ಲಾಸಿಕ್ ಬಳಕೆಯಿಂದ ಆಗುವ ತೊಂದರೆಗಳ ಬಗ್ಗೆ ತಿಳಿಹೇಳುವ ಕೆಲಸ ಮಾಡಲಿದ್ದಾರೆ.

ಸಾರ್ವಜನಿಕರ ವಾದ ಏನು?

ಮಾಲಿನ್ಯ ನಿಯಂತ್ರಣ ಮಂಡಳಿಯವರು ಸರ್ಕಾರದ ನಿಯಮಾವಳಿ ಮೀರಿ ಪ್ಲಾಸ್ಟಿಕ್‌ ಉತ್ಪಾದಿಸುವ ಮೂಲ ಕಾರ್ಖಾನೆಗಳನ್ನು ನಿರ್ಬಂಧಿಸಬೇಕು. ಅಂತಹುಗಳಿಗೆ ಮೂಗುದಾರ ಹಾಕಬೇಕು. ಕಳ್ಳಮಾರ್ಗವಾಗಿ ಪರ ರಾಜ್ಯಗಳಿಂದ ತರುವ ದಾಸ್ತಾನುದಾರರನ್ನು ಪತ್ತೆ ಮಾಡಿ ತಡೆಗಟ್ಟಬೇಕು. ಕೋವಿಡ್‌ನಿಂದ ಈಗತಾನೇ ವ್ಯಾಪಾರಿಗಳು ಸುಧಾರಿಸುತ್ತಿದ್ದಾರೆ.

ಇಂತಹ ಸಮಯದಲ್ಲಿ ಪ್ಲಾಸ್ಟಿಕ್‌ ಬ್ಯಾನ್‌ ನೆಪದಲ್ಲಿ ಸಣ್ಣ-ಪುಟ್ಟ ಅಂಗಡಿಕಾರರು, ಹೊಟೇಲ್‌ನವರಿಗೆ ಕಿರುಕುಳ ಸರಿಯಲ್ಲ. ಏಕಬಳಕೆ ಪ್ಲಾಸ್ಟಿಕ್‌ ನಿಷೇಧ ಜವಾಬ್ದಾರಿ ಅಧಿಕಾರಿಗಳಿಗೆ ಸೀಮಿತವಲ್ಲ. ವ್ಯಾಪಾರಿಗಳು ಮತ್ತು ಉದ್ಯಮಿಗಳಲ್ಲಿ ಈ ಕುರಿತು ಜಾಗೃತಿ ಮೂಡಬೇಕು. ಆಗ ಮಾತ್ರ ಪ್ಲಾಸ್ಟಿಕ್‌ ಬಳಕೆ ಸಂಪೂರ್ಣ ತಡೆ ಸಾಧ್ಯ ಎಂಬುದು ವ್ಯಾಪಾರಸ್ಥರು ಹಾಗೂ ಸಾರ್ವಜನಿಕರ ವಾದವಾಗಿದೆ.

ಇನ್ನು ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮಾತನಾಡಿ, "ಪ್ಲಾಸ್ಟಿಕ್‌ ಮುಕ್ತ ಅಭಿಯಾನವನ್ನು ಜಿಲ್ಲಾದ್ಯಂತ ಜಾರಿಗೊಳಿಸಿದ್ದೇವೆ. ನಾನಾ ಮಾರ್ಗಗಳ ಮೂಲಕ ಕಡಿವಾಣ ಹಾಕಲು ಯೋಜನೆಗಳನ್ನು ಹಾಕಿಕೊಂಡಿ ದೇವೆ. ಮೊದಲು ಪ್ಲಾಸ್ಟಿಕ್ ತಯಾರಿಕಾ ಕಾರ್ಖಾನೆ ಮುಚ್ಚಿಸಿ ಎಂಬ ಆಗ್ರಹ. ಆಫ್ಯಾಕ್ಟರಿಗಳನ್ನು ಮಚ್ಚಿಸುವ ಅಧಿಕಾರ ಕೇಂದ್ರ ಸರ್ಕಾರದ್ದಾಗಿದೆ. ನಾವು ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲು ಹೊರಟಿದ್ದೇವೆ. ಜನರು ಈ ಬಗ್ಗೆ ಸಹಕರಿಸ ಬೇಕಿದೆ. ನಗರ ಗಳು ಮಾತ್ರವಲ್ಲ. ಗ್ರಾಮೀಣ ಪ್ರದೇಶ ದಲ್ಲಿ ಯಶಸ್ವಿಯಾಗಿ ಅನುಷ್ಠಾನಕ್ಕೆ ತರಲು ನಿರ್ಧರಿಸಿದ್ದೇವೆ" ಎಂದು ತಿಳಿಸಿದ್ದಾರೆ.

'ಪ್ಲಾಸ್ಟಿಕ್‌ ನಿಷೇಧ ಮಾಡಿದರೆ ಸಾಲದು. ಮೊದಲು ಪ್ಲಾಸ್ಟಿಕ್ ಉತ್ಪನ್ನಗಳನ್ನು ತಯಾರು ಮಾಡುವ ಫ್ಯಾಕ್ಟರಿಗಳನ್ನು ಮುಚ್ಚಲಿ, ಪ್ಲಾಸ್ಟಿಕ್‌ ಗೆ ಪರ್ಯಾಯವಾಗಿ ಅಗ್ಗದ ದರದಲ್ಲಿ ಉತ್ಪನ್ನಗಳು ಸಿಗುವಂತೆ ಮಾಡಲಿ, ಅದನ್ನು ಬಿಟ್ಟು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಲಾಸ್ಟಿಕ್ ಉತ್ಪನ್ನಗಳನ್ನು ತಂದು ಮಾರುವ ನಮ್ಮ ಮೇಲೆ ದಂಡ ವಿಧಿಸುವುದು ಸರಿಯಲ್ಲ. ಪ್ಲಾಸ್ಟಿಕ್ ತಯಾರಿಕೆಗೆ ಅವಕಾಶ ಕೊಡುವವರೂ ಇವರೇ..ಪ್ಲಾಸ್ಟಿಕ್ ಬಳಸಬೇಡಿ ಎನ್ನುವುದು ಇವರೇ.. ಇವರ ನಿರ್ಧಾರಗಳೇ ಅರ್ಥವಾಗುತ್ತಿಲ್ಲ' ಎಂದು ವ್ಯಾಪಾರಸ್ಥರು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+