ನಂದಿ ಬೆಟ್ಟ ಪ್ರವಾಸ ಇನ್ನು ದುಬಾರಿ, ಎರಡು ಪಟ್ಟು ಶುಲ್ಕ

ಬೆಂಗಳೂರು, ಡಿಸೆಂಬರ್ 7: ಜಿಎಸ್‌ಟಿ ಲಾಲ್‌ಬಾಗ್‌ ಬಳಿಕ ನಂದಿ ಬೆಟ್ಟಕ್ಕೂ ತಟ್ಟಿದೆ. ನಂದಿ ಬೆಟ್ಟದಲ್ಲಿ ಕಾರು ಪಾರ್ಕಿಂಗ್ ಮಾಡಬೇಕಾದರೆ 175 ರೂ ತೆರಲೇ ಬೇಕಾಗಿದೆ.

ತೋಟಗಾರಿಕಾ ಇಲಾಖೆಯು ವಿವಿಧ ಪ್ರವಾಸಿ ತಾಣಗಳ ಶುಲ್ಕವನ್ನು ದ್ವಿಗುಣಗೊಳಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಈಗಾಗಲೇ ಲಾಲ್‌ಬಾಗ್‌ನ ಪ್ರವೇಶ ಶುಲ್ಕ ಹಾಗೂ ಪಾರ್ಕಿಂಗ್ ಶುಲ್ಕವನ್ನು ಹೆಚ್ಚಳ ಮಾಡಿದ್ದು, ಇದೀಗ ನಂದಿಬೆಟ್ಟದ ಶುಲ್ಕ ಹೆಚ್ಚಳಕ್ಕೆ ಮುಂದಾಗಿದೆ. ಈ ಮೊದಲು 10 ರೂ.ಪ್ರವೇಶ ಶುಲ್ಕವಿತ್ತು ಅದನ್ನು 20ಕ್ಕೆ ಏರಿಸಲಾಗಿದೆ.

ದ್ವಿಚಕ್ರ ವಾಹನಗಳ ನಿಲುಗಡೆಯ ಶುಲ್ಕ 20 ರೂನಿಂದ 30ರೂಗೆ ಹೆಚ್ಚಳ ಮಾಡಲಾಗಿದೆ. ಕಾರು ಪಾರ್ಕಿಂಗ್ ಶುಲ್ಕ 100 ರೂನಿಂದ 125 ರೂಗೆ ಏರಿಕೆಯಾಗಿದೆ. ಪರಿಷ್ಕರಣಾ ಶುಲ್ಕವನ್ನು ಪಡೆಯಲು ಟೆಂಡರ್ ಆಹ್ವಾನಿಸಲಾಗಿದೆ. ಬೆಂಗಳೂರಿನಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ನಂದಿಬೆಟ್ಟಕ್ಕೆ ವಾರಕ್ಕೆ 8 ಸಾವಿರ ಮಂದಿ ಭೇಟಿ ನೀಡುತ್ತಾರೆ.

Nandi Hills entry and parking fee set to increase

ಇಷ್ಟೇ ಅಲ್ಲದೆ ಬ್ಯಾಟರಿ ಚಾಲಿತ ವಾಹನಗಳ ವ್ಯವಸ್ಥೆಯನ್ನೂ ಮಾಡಲಾಗುತ್ತಿದೆ.. ನಂದಿ ಬೆಟ್ಟಕ್ಕೆ ಬರುವವರು ಎಲ್ಲರೂ ಬೆಟ್ಟದ ತುದಿವರೆಗೆ ವಾಹನಗಳನ್ನು ತರಬೇಕೆಂದೇನಿಲ್ಲ ಶೀಘ್ರ ಈ ವ್ಯವಸ್ಥೆಯೂ ಜಾರಿಗೆ ಬರಲಿದೆ.

ಒಂದು ಸಾವಿರ ವರ್ಷದ ಹಳೆಯ ದೇಗುಲ, ಒಂದು ಸಾವಿರ ವರ್ಷಗಳ ಹಿಂದಿನ ನಂದಿ ದೇವಾಲಯ ಬೆಟ್ಟದ ಮೇಲೆ ಇರುವುದರಿಂದ ನಂದಿ ಬೆಟ್ಟ ಎಂಬ ಹೆಸರು ಬಂದಿದೆ. ಪುರಾತನ ಕಾಲದ ಶಿವ ಮತ್ತು ಪಾರ್ವತಿಯರ ದೇವಾಲಯ ಈ ಬೆಟ್ಟವನ್ನು ಮತ್ತಷ್ಟು ಸುಂದರಗೊಳಿಸಿದೆ. ಯೋಗ ನಂದೀಶ್ವರನೆಂಬ ತಪಸ್ವಿಯು ತಪಸ್ಸು ಮಾಡಿದ ನಂತರ ಬೆಟ್ಟಕ್ಕೆ ಈ ಹೆಸರು ಬಂತೆಂದು ಇನ್ನೊಂದು ಕಥೆ ಹೇಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+