ಗ್ರಾಮ ಸಂಪರ್ಕ ರಸ್ತೆ ಕಲ್ಪಿಸಲು ಒತ್ತಾಯ: ದೊಡ್ಡಬಳ್ಳಾಪುರದಲ್ಲಿ ಲೋಕಸಭಾ ಚುನಾವಣೆ ಬಹಿಷ್ಕರದ ಎಚ್ಚರಿಕೆ!

ದೊಡ್ಡಬಳ್ಳಾಪುರ ಮಾರ್ಚ್ 24: ದೊಡ್ಡಬಳ್ಳಾಪುರ ತಾಲೂಕಿನ ಚಿಕ್ಕ ತುಮಕೂರು, ಮಾಜರಹೊಸಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ಸ್ಥಳೀಯವಾಗಿ ಸಂಪರ್ಕ ರಸ್ತೆ ಕಲ್ಪಿಸುವಂತೆ ಅಗ್ರಹಿಸಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಿದರು.

ನಗರ ಭಾಗದಿಂದ ಚಿಕ್ಕತುಮಕೂರು ಗ್ರಾಮಕ್ಕೆ ಸೇರುವ ಸಂಪರ್ಕ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು ಸದರಿ ರಸ್ತೆಯನ್ನು ಗ್ರಾಮಸ್ಥರ ಅನುಕೂಲಕ್ಕೆ ನಿರ್ಮಿಸಿಕೊಡುವಂತೆ ಸ್ಥಳೀಯ ಮುಖಂಡರು ಹಾಗೂ ಹಲವು ರೈತ ಮುಖಂಡರ ನೇತೃತ್ವದಲ್ಲಿ ಹೆದ್ದಾರಿ ತಡೆ ಮಾಡುವ ಮೂಲಕ ಪ್ರತಿಭಟನೆ ನೆಡೆಸಲಾಯಿತು.

Lok Sabha election boycott warning in Doddaballapur

ಈ ಸಂದರ್ಭದಲ್ಲಿ ಬಮುಲ್ ನಿರ್ದೇಶಕರಾದ ಬಿ ಸಿ ಆನಂದ್ ಮಾತನಾಡಿ ಸ್ಥಳೀಯವಾಗಿ ಸಂಪರ್ಕ ರಸ್ತೆಯ ಅವಶ್ಯಕತೆ ಹೆಚ್ಚಾಗಿದ್ದು . ಈ ರಸ್ತೆ ನಿರ್ಮಾಣ ಮಾಡುವುದರಿಂದ ಸಾವಿರಾರು ರೈತರಿಗೆ ಅನುಕೂಲವಾಗಲಿದೆ. ಆದರೆ ಸ್ಥಳೀಯ ಕೆಲ ಕಿಡಿಗೇಡಿಗಳು ರಸ್ತೆ ನಿರ್ಮಾಣ ಪ್ರಧಿಕಾರಕ್ಕೆ ಸುಳ್ಳು ಮಾಹಿತಿ ರವಾನಿಸುವ ಮೂಲಕ ಪ್ರಾಧಿಕಾರದ ದಿಕ್ಕು ತಪ್ಪಿಸಿದ್ದಾರೆ.

ಸ್ಥಳೀಯ ಎಲ್ಲಾ ಗ್ರಾಮಸ್ಥರು ರಸ್ತೆ ತಡೆ ಮಾಡುವ ಮೂಲಕ ಗ್ರಾಮಗಳಿಗೆ ಸಂಪರ್ಕ ರಸ್ತೆಯ ಅವಶ್ಯಕತೆ ಎಷ್ಟಿದೆ ಎಂಬುದನ್ನು ಕುರಿತು ಪ್ರಾಧಿಕಾರಕ್ಕೆ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದೇವೆ. ಪ್ರಾಧಿಕಾರಾದ ಮುಖ್ಯಸ್ಥರು ಸಂಪರ್ಕ ರಸ್ತೆ ನಿರ್ಮಿಸುವ ಭರವಸೆ ನೀಡಿರುವ ಹಿನ್ನಲೆ ನಮ್ಮ ಈ ಹೋರಾಟವನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದು ತಿಳಿಸಿದರು.

ಇನ್ನು ಈ ಕುರಿತು ಸ್ಥಳೀಯ ಮುಖಂಡರಾದ ಆದಿತ್ಯ ನಾಗೇಶ್ ಮಾತನಾಡಿ ನಗರದಿಂದ ಚಿಕ್ಕ ತುಮಕೂರು ಮಾರ್ಗದ ರಸ್ತೆಯನ್ನು ಹೆದ್ದಾರಿ ಪ್ರಾಧಿಕಾರ ಬಂದ್ ಮಾಡಿದ್ದು.ಪ್ರತಿದಿನ ಈ ಮಾರ್ಗವಾಗಿ 3000ಕ್ಕೂ ಅಧಿಕ ಸಾರ್ವಜನಿಕರು ಸಂಚಾರ ನೆಡೆಸುತ್ತಾರೆ . ಸ್ಥಳೀಯವಾಗಿ ಸಂಚಾರ ನೆಡೆಸಲು ಈ ರಸ್ತೆ ಅನಾನುಕೂಲವಾಗಿದ್ದು ಈ ಸಂಬಂಧ ಇಂದು ರಸ್ತೆ ತಡೆ ಮಾಡಿ ಪ್ರತಿಭಟಿಸಿದ್ದೇವೆ.

Lok Sabha election boycott warning in Doddaballapur

ಪ್ರಾಧಿಕಾರದ ಅಧಿಕಾರಿಗಳು ಕಾಮಗಾರಿಯನ್ನು ಶೀಘ್ರದಲ್ಲಿ ಪ್ರಾರಂಬಿಸುವ ಭರವಸೆ ನೀಡಿದ್ದು, ಅಧಿಕಾರಿಗಳ ಮನವಿಗೆ ಸ್ಪಂದಿಸುವ ಮೂಲಕ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದೇವೆ. ಕಾಮಗಾರಿ ಪೂರ್ಣಗೊಳಿಸದ ಪಕ್ಷದಲ್ಲಿ ಉಗ್ರಹೋರಾಟ ಮಾಡಲಾಗುವುದು ಎಂದರು ಹಾಗೂ ಎರಡು ಪಂಚಾಯಿತಿಗಳ ಗ್ರಾಮಸ್ಥರು ಲೋಕಸಭಾ ಚುನಾವಣೆಯನ್ನು ಬಹಿಸ್ಕರಿಸುವ ಎಚ್ಚರಿಕೆ ನೀಡಿದರು.

ಗ್ರಾಮಾಂತರ ಪೊಲೀಸ್ ವೃತ್ತ ನೀರಿಕ್ಷಕರಾದ ಸಾದಿಕ್ ಪಾಷಾ ನೇತೃತ್ವದ ತಂಡ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಯಿತು.

They staged a protest by blocking the highway demanding the construction of a link road in Doddaballapur.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+