ಚಿಕ್ಕಬಳ್ಳಾಪುರ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಬಳ್ಳಾಪುರದ ಕಲಾಭವನ, 8 ವರ್ಷವಾದರೂ ಮುಗಿಯದ ಕಾಮಗಾರಿ; ಅನೈತಿಕ ಚಟುವಟಿಕೆಗಳಿಗೆ ದಾರಿ

|
Google Oneindia Kannada News

ಚಿಕ್ಕಬಳ್ಳಾಪುರ, ಜೂ. 10: ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕಾಗಿದ್ದ ಕಲಾಭವನ 8 ವರ್ಷವಾದರೂ ಕಾಮಗಾರಿ ಪೂರ್ಣವಾಗದೇ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

ಬಿಬಿ ರಸ್ತೆಯಲ್ಲಿ 2.4 ಎಕರೆ ವಿಸ್ತೀರ್ಣದಲ್ಲಿ ಕಲಾಭವನ ಕಾಮಗಾರಿ 2014ರಲ್ಲಿ ಆರಂಭವಾಯಿತು. ಒಂದು ಸಾವಿರ ಮಂದಿಗೆ ಆಸನಗಳ ವ್ಯವಸ್ಥೆ ಸೇರಿದಂತೆ ಸುಸಜ್ಜಿತ ಕಲಾಭವನ ಮತ್ತು ರಂಗಮಂದಿರ ನಿರ್ಮಿಸಬೇಕು ಎನ್ನುವ ಸದಾಶಯದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಒಟ್ಟು 12.5 ಕೋಟಿ ರೂ ಕಾಮಗಾರಿಗೆ ಮಂಜೂರಾಯಿತು.

ಕಲ್ಯಾಣ ಮಂಟಪದಿಂದ ಪ್ರಿಯಕರನ ಜೊತೆ ವಧು ಪರಾರಿ, ವರ ಕಂಗಾಲುಕಲ್ಯಾಣ ಮಂಟಪದಿಂದ ಪ್ರಿಯಕರನ ಜೊತೆ ವಧು ಪರಾರಿ, ವರ ಕಂಗಾಲು

ಕಟ್ಟಡದೊಳಗೆ ಪ್ರವೇಶಿಸಿದರೆ ಮಳೆಗಾಳಿಗೆ ಕಸಕಡ್ಡಿಗಳು ತುಂಬಿವೆ. ಇಡೀ ಆವರಣದಲ್ಲಿ ಆಳೆತ್ತರದ ಗಿಡಗಂಟಿಗಳು ಬೆಳೆದಿವೆ. ಕಾಮಗಾರಿ ನಡೆಯುವಾಗ ಸುತ್ತಲೂ ಅಳವಡಿಸಿದ್ದ ಶೀಟ್ ಗಳು ತೆರವಾಗಿವೆ. ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕಾಗಿದ್ದ ಮತ್ತು ಈಗಾಗಲೇ ಚಟುವಟಿಕೆಗಳಿಂದ ಕೂಡಿರಬೇಕಾಗಿದ್ದ ಕಲಾಭವನ ಅನಾಥಕಟ್ಟಡವಾಗಿದೆ. ಕಟ್ಟಡದಲ್ಲಿ ಮದ್ಯದ ಬಾಟಲಿಗಳು, ಬಟ್ಟೆಗಳು, ಚಾಪೆಗಳು ಕಾಣುತ್ತವೆ. ಕಲಾಭವನ ಅನೈತಿಕ ಚಟುವಟಿಕೆಗಳ ತಾಣವಾಗಿದೆ.

Kalabhavana in Chikkaballapura Becomes Place For Immoral Activities

ಕಲಾಭವನ ಅನಾಥ: ಗ್ರಾಮಸ್ಥರಲ್ಲಿ ಬೇಸರ- ಅಸಮಾಧಾನಕ್ಕೆ ಕಾರಣ

ಮೊದಲ ಹಂತದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 1ಕೋಟಿ ರೂ ಮತ್ತು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ 5 ಕೋಟಿ ರೂ ಬಿಡುಗಡೆ ಮತ್ತು 2021ರ ಮಾರ್ಚ್ ನಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮತ್ತೆ1ಕೋಟಿ ರೂ ಬಿಡುಗಡೆ ಆಗಿದೆ. ಸಿವಿಲ್ ಕಾಮಗಾರಿಗಳು ಪೂರ್ಣವಾಗಿವೆ. ಹವಾನಿಯಂತ್ರಕ ವ್ಯವಸ್ಥೆ, ವಿದ್ಯುತ್, ಧ್ವನಿ ಮತ್ತು ಬೆಳಕು, ವೇದಿಕೆ ಇತ್ಯಾದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. ಕರ್ನಾಟಕ ಗೃಹಮಂಡಳಿಗೆ ಕಾಮಗಾರಿಯ ಜವಾಬ್ದಾರಿವಹಿಸಲಾಗಿದೆ, ಆದರೆ ಕಾಮಗಾರಿ ಪೂರ್ಣಗೊಳಿಸಲು ಜಿಲ್ಲಾ ವಿಶೇಷ ಅಭಿವೃದ್ಧಿ ಯೋಜನೆಯಿಂದ ಹಣ ಪೂರ್ಣವಾಗಿ ಬಿಡುಗಡೆಯೇ ಆಗಿಲ್ಲ. ಈ ಕಾರಣದಿಂದ ಕಲಾಭವನ ಅನಾಥವಾಗಿದೆ.

ಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆಚಿಕ್ಕಬಳ್ಳಾಪುರಕ್ಕೆ ಇಎಸ್ಐ ಆಸ್ಪತ್ರೆ; ಕೇಂದ್ರದ ಒಪ್ಪಿಗೆ

ಎಂಟು ವರ್ಷವಾದರೂ ಕಟ್ಟಡ ಕಾಮಗಾರಿ ಪೂರ್ಣವಾಗಿ ಸಾಂಸ್ಕೃತಿಕ ಕಲವರ ಆರಂಭವಾಗದಿರುವುದು ಗ್ರಾಮಸ್ಥರಲ್ಲಿ ಬೇಸರ ಮತ್ತು ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಬಹುದು.

ಭೂತ ಬಂಗಲೆಯಂತೆ ಕಾಣುತ್ತಿದೆ ಕಲಾಭವನ!

ಬರೋಬರಿ ಎಂಟು ವರ್ಷಗಳು ಪೂರ್ಣವಾಯಿತು. ಆದರೂ ಕಾಮಗಾರಿ ಮಾತ್ರ ಮುಗಿದಿಲ್ಲ. ಹೀಗೆ ಅರೆ ಬರೆಯಾಗಿ ನಿರ್ಮಾಣವಾಗಿರುವ ಕಟ್ಟಡ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ರಾತ್ರಿ ವೇಳೆ ಪುಂಡರ ಅಡ್ಡೆ ಆಗುತ್ತದೆ. ಕಟ್ಟಡ ಕಾಮಗಾರಿ ವೇಳೆ ಸುತ್ತಲು ಅಳವಡಿಸಿದ್ದ ತಗಡಿನ ಶೀಟ್ ಗಳು ರವಾಗಿವೆ. ಬಿಬಿ ರಸ್ತೆಯಲ್ಲಿ ಸಾಗುವ ಜನರಿಗೆ ಇದು ಭೂತ ಬಂಗಲೇಯಂತೆ ಕಾಣುತ್ತಿದೆ!

Kalabhavana in Chikkaballapura Becomes Place For Immoral Activities

ಇದು ಜಿಲ್ಲೆಯ ಸಾಂಸ್ಕೃತಿಕ ಚಟುವಟಿಕೆಗಳ ಕೇಂದ್ರವಾಗಬೇಕು ಎನ್ನುವ ಉದ್ದೇಶದಿಂದ ನಗರದ ಬಿಬಿ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಕಲಾಭವನದ ಸ್ಥಿತಿ. ಭವನದ ಕಾಮಗಾರಿ 8 ವರ್ಷವಾದರೂ ಪೂರ್ಣವಾಗಿಲ್ಲ, ಕಾಮಗಾರಿಯ ಆಮೆನಡಿಗೆ ಜಿಲ್ಲೆಯ ಸಾಂಸ್ಕೃತಿಕ ಮತ್ತು ಕಲಾಪ್ರಿಯರಲ್ಲಿ ಬೇಸರಕ್ಕೆ ಕಾರಣವಾಗಿದೆ.

(ಒನ್‌ಇಂಡಿಯಾ ಸುದ್ದಿ)

English summary
Kalabhava, supposed to be the center for cultural activities has turned out to spot for immoral activities in Chikkaballapura. It is under-construction from past 8 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X