ಚಿಕ್ಕಬಳ್ಳಾಪುರ: ಬಚ್ಚೇಗೌಡ ನಿವೃತ್ತಿ- ಬಿಜೆಪಿಯಿಂದ "ಲೋಕ" ಸಮರಕ್ಕೆ ಸಜ್ಜಾದರೇ ಡಾ.ಕೆ.ಸುಧಾಕರ್?

ಚಿಕ್ಕಬಳ್ಳಾಪುರ, ಸೆಪ್ಟೆಂಬರ್‌, 09: ಕಳೆದ ಬಾರಿ ಚಿಕ್ಕಬಳ್ಳಾಪುರ ಲೋಕಸಭೆ ಕ್ಷೇತ್ರದಲ್ಲಿ ಗೆಲುವಿನ ಶಿಕಾರಿ ಮಾಡಿದ್ದ ಕಮಲ ಪಾಳಯ ಈ ಬಾರಿಯೂ ಮತ್ತದೇ ವಿಶ್ವಾಸ ವ್ಯಕ್ತಪಡಿತ್ತಿದ್ದು, ಈ ಬಾರಿ ಮತ್ತೆ ಬಿಜೆಪಿ ಅತ್ಯಧಿಕ ಮತಗಳ ಅಂತದಲ್ಲಿ ಗೆಲ್ಲುವ ರಣತಂತ್ರ ರೂಪಿಸುವಲ್ಲಿ ನಿರತರಾಗಿದೆ.

ವಿಪರ್ಯಾಸ ಎಂದರೆ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಹೆಚ್ಚಿನ ಶಾಸಕರನ್ನು ಹೊಂದಿರುವ ಈ ಕ್ಷೇತ್ರದಲ್ಲಿ ಮೋದಿ ಅಲೆ ಮತ್ತೊಮ್ಮೆ ಕೆಲಸ ಮಾಡುವ ವಿಶ್ವಾಸದಲ್ಲಿ ಶಾಸಕರು, ಮಾಜಿ ಶಾಸಕರು ಹಾಗೂ ಸ್ಥಳೀಯ ಮುಖಂಡರಿದ್ದಾರೆ.

K.Sudhakar is ready to contest in Lok Sabha election from BJP?

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದಿಂದ ಅಭ್ಯರ್ಥಿಯಾಗುವ ಸಾಧ್ಯತೆಯ ವಿಚಾರದಲ್ಲಿ ಮಾಜಿ ಸಚಿವ ಡಾ.ಕೆ.ಸುಧಾಕರ್ ಅವರ ಹೆಸರು ಮುಂಚೂಣಿಗೆ ಬಂದಿದೆ. 2024ರ ಲೋಕಸಭೆ ಸಮರಕ್ಕೆ ಪಕ್ಷದ ವರಿಷ್ಠರು ತನಗೆ ಟಿಕೆಟ್ ನೀಡುವುದಿಲ್ಲ ಹಾಗೆಯೇ ತಾನು ಚುನಾವಣೆಗೆ ಸ್ಪರ್ಧೆ ನಡೆಸುವುದು ಇಲ್ಲ. ತಾನು ಚುನಾವಣಾ ನಿವೃತ್ತಿ ಹೊಂದುವುದಾಗಿ ಈಗಾಗಲೇ ಸಂಸದ ಬಿ.ಎನ್‌.ಬಚ್ಚೇಗೌಡ ಸ್ಪಷ್ಟಪಡಿಸಿದ್ದಾರೆ. ಇದರ ನಡುವೆ ಬಿಜೆಪಿಯಲ್ಲಿ ಹೊಸ ಆಕಾಂಕ್ಷಿಗಳು ಮುಂಚೂಣಿಗೆ ಬಂದಿದ್ದಾರೆ.

ಇದರಲ್ಲಿ ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆ ಸೇರಿದಂತೆ ಬೆಂಗಳೂರು ಗ್ರಾಮಾಂತರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪಕ್ಷವನ್ನು ಪ್ರಭಲವಾಗಿ ಕಟ್ಟುವ ಜೊತೆಗೆ ಹಲವು ನಾಯಕರೊಂದಿಗೆ ಉತ್ತಮ ಒಡನಾಟ ಹಾಗೂ ಹಿಡಿತ ಹೊಂದಿರುವ ಡಾ. ಕೆ. ಸುಧಾಕರ್ ಹೆಸರು ಲೋಕಸಭಾ ಚುನಾವಣೆಗೆ ಕೇಳಿಬರುತ್ತಿದೆ. ಇದರ ನಡುವೆ ಬಿಜೆಪಿಯಲ್ಲಿ ಹೊಸ ಆಕಾಂಕ್ಷಿಗಳು ಮುಂಚೂಣಿಗೆ ಬಂದಿದ್ದಾರೆ. ಅವರೆಲ್ಲರಿಗಿಂತ ಡಾ. ಕೆ. ಸುಧಾಕರ್ ರವರು ಪ್ರಭಲ ಆಕಾಂಕ್ಷಿಯಾಗಿದ್ದು, ಬಲ್ಲ ಮೂಲಗಳ ಪ್ರಕಾರ ಒಂದು ಸುತ್ತಿನ ಸಮೀಕ್ಷೆ ಸಹ ನಡೆದಿದೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಮಾಜಿ ಸಿಎಂ, ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಸಂಸದರ ನೇತೃತ್ವದಲ್ಲಿ ಇತ್ತೀಚಿಗೆ ಸಭೆ ನಡೆದಿದ್ದು, ಡಾ.ಕೆ.ಸುಧಾಕರ್ ಜೊತೆಗೆ ಕಳೆದ ವಿಧಾನಸಭಾ ಚುನಾವಣಿಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳಾದ ಸೀಕಲ್ ರಾಮಚಂದ್ರಗೌಡ, ವೇಣುಗೋಪಾಲ್, ಶಶಿಧರ್, ಮುನಿರಾಜು, ಜಿಲ್ಲಾ ಬಿಜೆಪಿ ನಾನಾ ಅಧ್ಯಕ್ಷ ಎಂ.ರಾಮಲಿಂಗಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.

ಈ ಸಭೆಯಲ್ಲಿ ಪ್ರಮುಖವಾಗಿ ಮುಂಬರುವ ಚಿಕ್ಕಬಳ್ಳಾಪುರ ಲೋಕಸಭೆ ಮತ್ತು ಆಗ್ನೇಯ ಶಿಕ್ಷಕರ ಚುನಾವಣಿಯ ವಿಚಾರವಾಗಿ ಮಹತ್ತರ ಚರ್ಚೆಗಳಾಗಿವೆ. ಈ ಎರಡೂ ಕಡೆ ಪಕ್ಷದವರು ಅಧಿಕಾರದಲ್ಲಿದ್ದು, ಹಾಗೆಯೇ ಮತ್ತೆ ಗೆಲುವು ಸಾಧಿಸಬೇಕಾಗಿದೆ. ಈ ನಿಟ್ಟಿನಲ್ಲಿ ಆಯಾ ವ್ಯಾಪ್ತಿಯಲ್ಲಿ ಪಕ್ಷ ಸಂಘಟನೆ ನಡೆಸಲು ಸೂಚಿಸಲಾಗಿದೆ.

ಬಿಜೆಪಿ ಬಿಡಲ್ಲ ಕಾಂಗ್ರೆಸ್ ಸೇರಲ್ಲ ಡಾ. ಕೆ. ಸುಧಾಕರ್

ಮೊದಲು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಾಣುತ್ತಿದ್ದಂತೆ ಸುಧಾಕ‌ರ್ ಮತ್ತೆ ಮಾತೃಪಕ್ಷ ಕಾಂಗ್ರೆಸ್‌ಗೆ ಜಿಗಿಯಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಇದಕ್ಕೆ ಪುಷ್ಟಿ ನೀಡುವಂತೆ ಅಲ್ಲಲ್ಲಿ ಗೌಪ್ಯ ಸಭೆಗಳು ನಡೆದಿದ್ದವು, ಹಾಗೆಯೇ ರಾಜ್ಯಮಟ್ಟದ ಕಾಂಗ್ರೆಸ್ ನಾಯಕರು ಗ್ರೀನ್ ಸಿಗ್ನಲ್ ಕೊಡಲು ಮನಸ್ಸು ಹೊಂದಿದ್ದರು.

ಇದೇ ವೇಳೆ ಸ್ಥಳೀಯ ಶಾಸಕರು ಮತ್ತು ಮುಖಂಡರ ಅಭಿಪ್ರಾಯದ ಮೇಲೆ ನಿರ್ಧಾರ ಕೈಗೊಳ್ಳುವ ಬೆಳವಣಿಗೆಯಲ್ಲಿ ತೊಡಕಾಯಿತು ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ನಡುವೆ ಸ್ವತಃ ಮಾಜಿ ಸಚಿವರೇ ಜನರಲ್ಲಿ ಮೂಡಿದ್ದ ಗೊಂದಲಕ್ಕೆ ತೆರೆ ಎಳೆದಿದ್ದು, ಯಾವುದೇ ಕಾರಣಕ್ಕೂ ಬಿಜೆಪಿ ಬಿಡುವುದಿಲ್ಲ. ಪಕ್ಷ ಸಂಘಟಿಸಿ, ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುವುದು ಎಂದು ಘೋಷಿಸಿದ್ದರು.

ಅದರಂತೆಯೇ ಪಕ್ಷದ ಚಟುವಟಿಕೆಯನ್ನು ಬಿರುಸುಗೊಳಿಸಿದ್ದಾರೆ. ಇತ್ತೀಚೆಗೆ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಆಯ್ಕೆಯಾದ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಗ್ರಾಮ ಪಂಚಾಯತಿ ಉಪಾಧ್ಯಕ್ಷರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಇದೀಗ ರೈತ ವಿರೋಧಿ ಧೋರಣೆಗಳನ್ನು ಖಂಡಿಸಿ, ಹೋರಾಟಕ್ಕೆ ಮುಂದಾಗಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಡಾ.ಕೆ. ಸುಧಾಕರ್ ಅವರನ್ನು ಲೋಕಸಭಾ ಚುನಾವಣೆಯ ಸಮರಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿಸಲು ಪ್ರಸ್ತುತ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಮುಖಂಡರಲ್ಲಿ ಹೆಚ್ಚಿನ ಒಲವು ವ್ಯಕ್ತವಾಗುತ್ತಿದೆ. ಇದಕ್ಕೆ ಬೆಂಗಳೂರು ಗಾಮಾಂತರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರದ ಮುಖಂಡರು ಸಹ ಸಹಮತ ವ್ಯಕ್ತಪಡಿಸಿದ್ದು, ಮಾಜಿ ಶಾಸಕರು ಸಹ ಒಲವು ತೋರಿಸಿದ್ದಾರೆಂದು ಬಲ್ಲ ಮೂಲಗಳು ತಿಳಿಸಿವೆ.

ಪ್ರಮುಖ ಅಂಶಗಳು ಹೀಗಿವೆ

1. ಒಟ್ಟು 8 ವಿಧಾನಸಭಾ ಕ್ಷೇತ್ರಗಳ ಪೈಕಿ 2ರಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವು.

2. ಹೊಸಕೋಟೆ, ಚಿಕ್ಕಬಳ್ಳಾಪುರ, ಬಾಗೆಪಲ್ಲಿಯಲ್ಲಿ ಬಿಜೆಪಿ ಸಶಕ್ತ.

3. ದೇವನಹಳ್ಳಿ ಹಾಗೂ ನಾಗಮಂಗಲ ಕ್ಷೇತ್ರದಲ್ಲಿ ಬಿಜೆಪಿಗೆ ತೃಪ್ತಿದಾಯಕ ಅಂಶಗಳಿದ್ದು, ಈ ಕಾರಣಗಳಿಂದಾಗಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸದಲ್ಲಿ ಟಿಕೆಟ್ ಆಕಾಂಕ್ಷಿಗಳಿದ್ದು, ಇನ್ನೂ ಹಲವು ಹೆಸರುಗಳು ಸೇರ್ಪಡೆಯಾಗುವ ಸೂಚನೆಗಳು ಸಹ ಕಂಡುಬರುತ್ತಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+