BPL: ಅನರ್ಹರ ಬಿಪಿಎಲ್ ಕಾರ್ಡ್ ರದ್ದು: ಚಿಕ್ಕಬಳ್ಳಾಪುರದಲ್ಲಿ 8ಸಾವಿರಕ್ಕೂ ಅಧಿಕ ಕಾರ್ಡ್‌ದಾರರಿಗೆ ಸಂಕಷ್ಟ!
ಚಿಕ್ಕಬಳ್ಳಾಪುರ ನವೆಂಬರ್ 21: ಅನರ್ಹರ ರೇಷನ್ ಕಾರ್ಡ್ ರದ್ದು ಮಾಡಲಾಗಿದೆ ಎಂದು ಇಲಾಖೆಯ ಅಧಿಕಾರಿಗಳು ಹಾಗೂ ಸರ್ಕಾರ ಹೇಳುತ್ತಿದೆ. ಇತ್ತ ಬಿಜೆಪಿ ಕಾರ್ಡ್ ರದ್ದುಗೊಂಡವರ ಲಿಸ್ಟ್ ಹಿಡಿದು ಸರ್ವೇ ಮಾಡುತ್ತಿದೆ. ಅರ್ಹರ ಕಾರ್ಡ್ ಕೂಡ ರದ್ದಾಗಿವೆ ಎಂಬ ಆರೋಪವನ್ನು ಮಾಡಲಾಗುತ್ತಿದೆ. ಈ ನಡುವೆ ಜಿಲ್ಲೆಯಲ್ಲಿ ಬರೋಬ್ಬರಿ 8ಸಾವಿರಕ್ಕೂ ಅಧಿಕ ಬಿಪಿಎಲ್ ಕಾರ್ಡ್ ಗಳು ರದ್ದಾಗುವುದು ಖಚಿತ ಎನ್ನುತ್ತಿವೆ ಮೂಲಗಳು.
ಹೌದು... ಕುಟುಂಬ ತಂತ್ರಾಂಶದಡಿ ರಾಜ್ಯಾದ್ಯಂತ ಪಾವತಿದಾರರು, ಸರಕಾರಿ ನೌಕರರು ಹಾಗೂ 1.2 ಲಕ್ಷ ಆದಾಯ ಹೊಂದಿರುವ ಕುಟುಂಬಗಳು ಹೊಂದಿದ್ದ ಲಕ್ಷಾಂತರ ಬಿಪಿಎಲ್ ಪಡಿತರ ಚೀಟಿಗಳನ್ನು ಎಪಿಎಲ್ ಕಾರ್ಡ್‌ಗಳಿಗೆ ಪರಿವರ್ತಿಸುವ ಕಾರ್ಯ ಪ್ರಗತಿಯಲ್ಲಿದೆ. ಜಿಲ್ಲೆಯ ಒಟ್ಟು 8346 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳು ಅನರ್ಹರ ಪಟ್ಟಿಯಲ್ಲಿವೆ.

ಚಿಕ್ಕಬಳ್ಳಾಪುರ ಜಿಲ್ಲಾದ್ಯಂತ ಸುಮಾರು 8 ಸಾವಿರಕ್ಕೂ ಹೆಚ್ಚು ಬಿಪಿಎಲ್ ಪಡಿತರ ಕಾರ್ಡ್‌ಗಳು ಅನರ್ಹರ ಕೈನಲ್ಲಿದ್ದು, ಹಂತ ಹಂತವಾಗಿ ಎಪಿಎಲ್ ಆಗಿ ಪರಿವರ್ತಿಸುವ ಪ್ರಕ್ರಿಯೆಗೆ ಅಧಿಕಾರಿಗಳು ಚಾಲನೆ ನೀಡಿದ ಹಿನ್ನಲೆಯಲ್ಲಿ ಅರ್ಹತೆ ಹೊಂದಿರುವ ಫಲನುಭವಿಗಳು ಸಹ ಬಿಪಿಎಲ್ ಕಾರ್ಡ್ ಕಳೆದುಕೊಂಡಿದ್ದು. ಸರಕಾರಿ ನೌಕರರು, ವಾರ್ಷಿಕ 1.20 ಲಕ್ಷ ಆದಾಯ ಹೊಂದಿರುವವರು ಹಾಗೂ ತೆರಿಗೆ ಪಾವತಿದಾರರು ಹೊಂದಿದ್ದ ರೇಷನ್ ಕಾರ್ಡ್‌ಗಳನ್ನು ಅನರ್ಹಗೊಳಿಸಲಾಗಿದೆ.
ಸರ್ಕಾರದ ಯಾವುದೇ ಯೋಜನೆಗಳಿರಲಿ, ಅವು ಅರ್ಹರಿಗೆ ಮಾತ್ರವೇ ಸಿಗಬೇಕು. ಆದರೆ ರೇಷನ್ ಕಾರ್ಡ್ ವಿಷಯದಲ್ಲಿ ಸಿಕ್ಕಾಪಟ್ಟೆ ದುರುಪಯೋಗ ಆಗಿದೆ. ಅನರ್ಹರು ಒಂದೆಡೆ ಸರ್ಕಾರದ ಯೋಜನೆಗಳ ಲಾಭ ಪಡೆದುಕೊಳ್ಳುತ್ತಲೇ ಇನ್ನೊಂದೆಡೆ 'ಇದರಿಂದ ಬೊಕ್ಕಸಕ್ಕೆ ನಷ್ಟ. ನಮ್ಮ ತೆರಿಗೆ ಹಣ ವ್ಯರ್ಥ' ಅಂತೆಲ್ಲಾ ಮಾತನಾಡುವವರು ಸಹ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ ಎಂಬ ಆರೋಪವು ಇದೆ.

ತೆರಿಗೆ ಪಾವತಿದಾರರು, ಹೆಚ್ಚಿನ ಆದಾಯ ಹೊಂದಿರುವವರು, ಸರಕಾರಿ ನೌಕರರು ಬಿಪಿಎಲ್ ಪಡಿತರ ಚೀಟಿ ಪಡೆದಿದ್ದರೆ ವಾಪಸ್ ಕೊಡಬೇಕು, ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಿಂದ ಆಗಾಗ್ಗೆ ಎಚ್ಚರಿಕೆಯನ್ನೂ ನೀಡಲಾಗಿತ್ತು. ಆದರೆ ಬಹುಪಾಲು ಮಂದಿ ವಾಪಸ್ ಕೊಟ್ಟಿರಲಿಲ್ಲ. ಅಂತಹವರಿಗೆಲ್ಲ ಈಗ ಸರಕಾರ ಶಾಕ್ ನೀಡಿದೆ.
8346 ಕಾರ್ಡ್ ಅನರ್ಹ:
ಜಿಲ್ಲೆಯಲ್ಲಿ ಒಟ್ಟು 8346 ಕಾರ್ಡ್ ಗಳನ್ನು ಅನರ್ಹ ಎಂದು ಗುರುತಿಸಲಾಗಿದೆ. ಅದರಲ್ಲಿ ಚಿಂತಾಮಣಿ ತಾಲೂಕೊಂದರಲ್ಲೇ 2655 ಕಾರ್ಡ್‌ಗಳನ್ನು ರದ್ದುಪಡಿಸಿದ್ದು, ಜಿಲ್ಲೆಯಲ್ಲೇ ಅತ್ಯಧಿಕ ಕಾರ್ಡ್‌ಗಳು ಇವೆ. ನಂತರದ ಸ್ಥಾನಗಳಲ್ಲಿ ಗೌರಿಬಿದನೂರು ತಾಲೂಕಿನಲ್ಲಿ 1932, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1620 ಕಾರ್ಡ್ ಗಳನ್ನು ಆನರ್ಹ ಎಂದು ಗುರುತಿಸಲಾಗಿದೆ. ಶಿಡ್ಲಘಟ್ಟ ತಾಲೂಕಿನಲ್ಲಿ 1536, ಬಾಗೇಪಲ್ಲಿ ತಾಲೂಕಿನಲ್ಲಿ 441, ಗುಡಿಬಂಡೆ ತಾಲೂಕಿನಲ್ಲಿ 162 ಬಿಪಿಎಲ್ ಪಡಿತರ ಕಾಡ್ ೯ಗಳನ್ನು ಅನರ್ಹ ಎಂದು ಗುರುತಿಸಲಾಗಿದ್ದು, ಹಂತ ಹಂತವಾಗಿ ಎಲ್ಲವನ್ನೂ ಎಪಿಎಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯಲಿದೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಗೃಹಲಕ್ಷ್ಮಿ, ಅನ್ನಭಾಗ್ಯ ಸೇರಿದಂತೆ ಬಿಪಿಎಲ್ ಕಾರ್ಡ್ ಹೊಂದಿರುವ ಕುಟುಂಬಗಳಿಗೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಆದ್ದರಿಂದ ರಾಜ್ಯದಲ್ಲಿ ಅನರ್ಹರು ಸಹ ಬಿಪಿಎಲ್ ಕಾರ್ಡ್ ಮಾಡಿಸಿಕೊಳ್ಳುತ್ತಿದ್ದಾರೆ ಎಂಬ ಆರೋಪವಿದೆ.
ಸರಕಾರಿ ನೌಕರರ ಬಳಿಯೂ ಕಾರ್ಡ್ :
ಇನ್ನು ಸರಕಾರಿ ಉದ್ಯೋಗದಲ್ಲಿರುವ ಜಿಲ್ಲೆಯ 83 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಅತಿ ಹೆಚ್ಚು 25, ಚಿಂತಾಮಣಿ ತಾಲೂಕಿನಲ್ಲಿ 21. ಗೌರಿಬಿದನೂರು ತಾಲೂಕಿನಲ್ಲಿ 13, ಬಾಗೇಪಲ್ಲಿ ತಾಲೂಕಿನಲ್ಲಿ 9, ಗುಡಿಬಂಡೆ ತಾಲೂಕಿನಲ್ಲಿ 8 ಹಾಗೂ ಶಿಡ್ಲಘಟ್ಟ ತಾಲೂಕಿನಲ್ಲಿ 7 ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದುಗೊಳಿಸಲಾಗಿದೆ.
ಹೆಚ್ಚು ಆದಾಯ ಹೊಂದಿರುವವರಿಗೂ ಶಾಕ್ :
1.2 ಲಕ್ಷ ರೂ.ಗಿಂತ ಹೆಚ್ಚು ಆದಾಯ ಹೊಂದಿರುವ ಜಿಲ್ಲೆಯ 5973 ಕುಟುಂಗಳ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು 2044, ಗೌರಿಬಿದನೂರು ತಾಲೂಕಿನಲ್ಲಿ 1440, ಶಿಡ್ಲಘಟ್ಟ ತಾಲೂಕಿನಲ್ಲಿ 1142, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 1080, ಬಾಗೇಪಲ್ಲಿ ತಾಲೂಕಿನಲ್ಲಿ 190, ಗುಡಿಬಂಡೆ ತಾಲೂಕಿನ 77 ಕುಟುಂಬಗಳ ಬಿಪಿಎಲ್ ಕಾರ್ಡ್ ಗಳನ್ನು ರದ್ದುಗೊಳಿಸಲಾಗಿದೆ.
ತೆರಿಗೆ ಪಾವತಿದಾರರ ಕಾರ್ಡ್ ರದ್ದು:
ತೆರಿಗೆ ಪಾವತಿಸುವ 2340 ಕುಟುಂಬಗಳ ಬಿಪಿಎಲ್ ಕಾರ್ಡ್ಗಳನ್ನು ಅನರ್ಹಗೊಳಿಸಲಾಗಿದೆ. ಚಿಂತಾಮಣಿ ತಾಲೂಕಿನಲ್ಲಿ ಅತಿ ಹೆಚ್ಚು 607, ಚಿಕ್ಕಬಳ್ಳಾಪುರ ತಾಲೂಕಿನಲ್ಲಿ 527, ಗೌರಿಬಿದನೂರು ತಾಲೂಕಿನ 487, ಶಿಡ್ಲಘಟ್ಟ ತಾಲೂಕಿನಲ್ಲಿ 396, ಬಾಗೇಪಲ್ಲಿ ತಾಲೂಕಿನಲ್ಲಿ 244 ಹಾಗೂ ಗುಡಿಬಂಡೆ ತಾಲೂಕಿನಲ್ಲಿ 79 ಕುಟುಂಬಗಳ ಬಿಪಿಎಲ್ ಕಾಡ್ ್ರಗಳನ್ನು ಅನರ್ಹ ಎಂದು ಗುರುತಿಸಲಾಗಿದೆ.
ಇದು ಕೇವಲ ಮೊದಲ ಹಂತದಲ್ಲಿ ಕುಟುಂಬ ತಂತ್ರಾಂಶ ಆಧರಿಸಿ ಮಾಡಿರುವ ಪ್ರಕ್ರಿಯೆ. ಇನ್ನು ಮುಂದೆ ಯಾವ ಮಾನದಂಡ ಆಧರಿಸಿ ಅನರ್ಹರ ಕೈನಲ್ಲಿರುವ ಬಿಪಿಎಲ್ ಕಾಡ್ ೯ಗಳನ್ನು ವಾಪಸ್ ಪಡೆಯುವ ಯತ್ನ ನಡೆಯುತ್ತದೆಯೋ ಗೊತ್ತಿಲ್ಲ, ಆದರೆ ಈಗ ಆಗಿರುವ ಅನರ್ಹ ಪಕ್ರಿಯೆ ಇನ್ನೂ ಮುಂದುವರಿಯುವುದು ನಿಶ್ಚಿತ.
ಆರಂಭದಿಂದಲೂ ಅನರ್ಹರ ಕೈನಲ್ಲಿ ಪಡಿತರ ಚೀಟಿಗಳು ಇರುವ ಬಗ್ಗೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅನರ್ಹರನ್ನು ಹುಡುಕುವ ಪ್ರಯತ್ನಗಳು ಗಂಭೀರವಾಗಿ ನಡೆದಿರಲಿಲ್ಲ. ಈಗ ಸರಕಾರವೇ ಅನರ್ಹರನ್ನು ಪತ್ತೆ ಹಚ್ಚಿ ಆಯಾ ಜಿಲ್ಲಾ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಗೆ ಪಟ್ಟಿ ಕೊಟ್ಟು ಬಿಪಿಎಲ್ ಪಡಿತರ ಕಾರ್ಡ್‌ಗಳನ್ನು ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಆದರೆ ಸರಕಾರ ಶಿಸ್ತುಕ್ರಮ ಜರುಗಿಸುವ ಬಗ್ಗೆ ಯಾವುದೇ ನಿರ್ದೇಶನಗಳನ್ನು ಕೊಟ್ಟಿಲ್ಲ.
ಯಾವ ಮಾನದಂಡ ಆಧರಿಸಿ ಆದಾಯವನ್ನು ಪತ್ತೆ ಹಚ್ಚಿದ್ದಾರೋ ಗೊತ್ತಿಲ್ಲ, ಎಷ್ಟೋ ಶ್ರೀಮಂತರ ಮನೆಗಳಲ್ಲೂ ಬಿಪಿಎಲ್ ಕಾರ್ಡ್ ಗಳಿವೆ. ಆದರೆ ಹೆಚ್ಚಿನ ಆದಾಯವಿಲ್ಲದಿದ್ದರೂ ಅಂತಹ ಕುಟುಂಬಗಳ ಬಿಪಿಎಲ್ ಕಾರ್ಡ್‌ಗಳನ್ನು ರದ್ದು ಮಾಡಿದ್ದಾರೆ. ಇದೊಂದು ಅವೈಜ್ಞಾನಿಕ ನಿರ್ಧಾರ ಎಂಬುದು ಸಾರ್ವಜನಿಕರ ಆರೋಪವಾಗಿದೆ.
ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಂ. ಸಿ. ಸುಧಾಕರ್ ಪ್ರತಿಕ್ರಿಯೆ ನೀಡಿದ್ದು ಆಧಾರ್ ಕಾರ್ಡ್ ಲಿಂಕ್ ಆಧರಿಸಿ ತೆರಿಗೆ ಪಾವತಿದಾರರು, ಅತಿ ಹೆಚ್ಚು ಆದಾಯ ಹೊಂದಿರುವವರನ್ನು ಪತ್ತೆ ಹಚ್ಚಿ ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಕೆಲವು ಕಡೆ ಮಕ್ಕಳು ಕೆಲಸದಲ್ಲಿದ್ದು ಹೆಚ್ಚಿನ ಆದಾಯ ಪಡೆಯುತ್ತಿರುತ್ತಾರೆ. ಆದರೆ ತಂದೆ-ತಾಯಿ ಕಷ್ಟದಲ್ಲಿ ಇರುತ್ತಾರೆ. ಪಡಿತರ ಚೀಟಿಯಲ್ಲಿ ಅತಿ ಹೆಚ್ಚು ಆದಾಯ ಇರುವವರ ಹೆಸರು ಇದ್ದರೆ ಅಂತಹ ಕಾರ್ಡ್ಗಳೆಲ್ಲ ಅನರ್ಹಗೊಂಡಿವೆ. ಮಕ್ಕಳು ಚೆನ್ನಾಗಿದ್ದರೂ ತಂದೆ-ತಾಯಿ ಕಷ್ಟದಲ್ಲಿರುವ ಪರಿಸ್ಥಿತಿಯೂ ಇದೆ. ಇದರ ಬಗ್ಗೆ ಚರ್ಚಿಸಲಾಗುವುದು ಎಂದಿದ್ದಾರೆ.
ಈ ಕುರಿತು ಆಹಾರ ಇಲಾಖೆಯ ಜಂಟಿ ನಿರ್ದೇಶಕರಾದ ನಾಗರಾಜ ಕೆಳಗಿನಮನಿ ಪ್ರತಿಕ್ರಿಯೆ ನೀಡಿದ್ದು, ರಾಜ್ಯ ಸರಕಾರ ಪಡಿತರ ಚೀಟಿ ಹೊಂದಿರುವ ಅನರ್ಹರ ಪಟ್ಟಿಯನ್ನು ಬಿಡುಗಡೆ ಮಾಡಿದೆ. ನಮ್ಮ ಜಿಲ್ಲೆಯಲ್ಲೂ ಅನರ್ಹರ ಪಟ್ಟಿಯನ್ನು ಕಳುಹಿಸಿಕೊಡಲಾಗಿದೆ. ಹೀಗಾಗಿ ಸರಕಾರದ ಮಾರ್ಗಸೂಚಿಯಂತೆ ಕ್ರಮ ಕೈಗೊಳ್ಳಲಾಗುವುದು. ಮುಂದೆ ಸರಕಾರದ ಸೂಚನೆಯನ್ನು ಆಧರಿಸಿಯೇ ಎಲ್ಲವೂ ನಡೆಯಲಿದೆ ಎನ್ನುತ್ತಾರೆ.
-
ಚಿನ್ನದ ಬೆಲೆ 55,000 ರೂಪಾಯಿ ದಿಢೀರ್ ಒಂದೇ ದಿನ ಭರ್ಜರಿ ಕುಸಿತ, ಇಂದಿನ ಬೆಲೆ ತಿಳಿಯಿರಿ... Gold Price -
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
13,00,000 ಕೋಟಿ ರೂಪಾಯಿ ಹೂಡಿಕೆದಾರರ ಹಣ ಉಡೀಸ್, ಭಾರತೀಯ ಷೇರುಪೇಟೆಯಲ್ಲಿ ಬಿರುಗಾಳಿ... Stock Market -
Traffic Advisory: ಮಾ.21 ರಂಜಾನ್ ಪ್ರಯುಕ್ತ ಬೆಂಗಳೂರಿನ ಈ ರಸ್ತೆಗಳಲ್ಲಿ ಸಂಚಾರ ನಿಷೇಧ, ಪರ್ಯಾಯ ಮಾರ್ಗ -
ಬೆಂಗಳೂರಿನಿಂದ ಬೀದರ್-ಕಲಬುರಗಿಗೆ ವಿಮಾನಸೇವೆ: 23ರೊಳಗೆ ಪ್ರಸ್ತಾವನೆ ಸಲ್ಲಿಸಲು ಸೂಚನೆ -
ಕರ್ನಾಟಕ ಉಪಚುನಾವಣೆ: ದಾವಣಗೆರೆ ದಕ್ಷಿಣ, ಬಾಗಲಕೋಟೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ -
ರೈಲ್ವೆ ಇಲಾಖೆಗೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ಏ.15ರ ಗಡುವು: ಟಿ.ಎ.ನಾರಾಯಣಗೌಡ ಹೇಳಿದ್ದೇನು -
ವೆಜ್ ಬಿರಿಯಾನಿ 50, ಮಟನ್ ಬಿರಿಯಾನಿಗೆ 180 ರೂಪಾಯಿ ರೇಟ್ ಫಿಕ್ಸ್... Tamil Nadu Election -
Gold Price: ಯುಗಾದಿಗೆ ಚಿನ್ನಪ್ರಿಯರಿಗೆ ಶುಭ ಸುದ್ದಿ: ಚಿನ್ನದ ಬೆಲೆಯಲ್ಲಿ ಭರ್ಜರಿ ಇಳಿಕೆ, ಬೆಳ್ಳಿ ದರ 15,000 ರೂ.ಕುಸಿತ -
ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸಹೋದರಿ ಜವರಮ್ಮ ನಿಧನ












Click it and Unblock the Notifications