ಮುಸ್ಲಿಂ ಮತದಾನ ಹೆಚ್ಚಾದರೆ ರಾಹುಲ್ ಗಾಂಧಿ ಪಿಎಂ ಕನ್ಫರ್ಮ್

ಚಿಕ್ಕಬಳ್ಳಾಪುರ, ಫೆ 19: ಈ ರಾಜ್ಯದ ಕೆಲವು ಮುಖಂಡರು ನನಗೇನೂ ಗೊತ್ತಿಲ್ಲ, ನಾನೊಬ್ಬ ಅಪ್ರಬುದ್ದ ಎಂದು ತಿಳಿದುಕೊಂಡಿದ್ದಾರೆ. ಹೌದು, ನಾನೊಬ್ಬ ಹೆಬ್ಬೆಟ್ಟು ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ.

ಜಿಲ್ಲೆಯ ಬಾಗೇಪಲ್ಲಿಯಲ್ಲಿ ಶಾದಿಮಹಲ್ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಆಹಾರ ಮತ್ತು ನಾಗರೀಕ ಪೂರೈಕೆ ಖಾತೆಯ ಸಚಿವ ಜಮೀರ್, ಮುಂದಿನ ಚುನಾವಣೆಯಲ್ಲಿ ಒಂದು ವೇಳೆ ಶೇ. 90ರಷ್ಟು ಮುಸ್ಲಿಂ ಬಾಂಧವರು ಮತ ಚಲಾಯಿಸಿದರೆ, ರಾಹುಲ್ ಗಾಂಧಿ ಮುಂದಿನ ಪ್ರಧಾನಿಯಾಗುವುದು ಕನ್ಫರ್ಮ್ ಎಂದು ಜಮೀರ್ ಹೇಳಿದರು.

ಆದರೆ, ಮುಸ್ಲಿಮರು ಪೂರ್ಣ ಪ್ರಮಾಣದಲ್ಲಿ ಮತ ಚಲಾಯಿಸುವುದಿಲ್ಲ. ಅರ್ದಕರ್ಧ ಜನ ವೋಟ್ ಮಾಡುತ್ತಾರೆ. ನೀವೆಲ್ಲಾ ಮತಚಲಾಯಿಸಲು ಮುಂದೆ ಬರಬೇಕು. ಆಗ ಮಾತ್ರ, ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯ ಎಂದು ಜಮೀರ್ ಅಭಿಪ್ರಾಯ ಪಟ್ಟಿದ್ದಾರೆ.

If Muslim turnout increases in LS election, Rahul Gandhi will become PM

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿಯಲಿದ್ದಾರೋ ಅಥವಾ ಕಾಂಗ್ರೆಸ್ಸಿನವರೋ ಎನ್ನುವ ಗೊಂದಲದ ನಡುವೆ, ಮುಂದಿನ ಚುನಾವಣೆಯಲ್ಲಿ ನೀವೆಲ್ಲಾ ಕಾಂಗ್ರೆಸ್ ಅಭ್ಯರ್ಥಿ ವೀರಪ್ಪ ಮೊಯ್ಲಿಗೆ ಮತ ಚಲಾಯಿಸಬೇಕೆಂದು ಜಮೀರ್ ಮನವಿ ಮಾಡಿದ್ದಾರೆ.

ಪುಲ್ವಾಮಾ ಘಟನೆಯಲ್ಲಿ ಯಾವ ಜಾತಿಯವನಿದ್ದ, ಯಾವ ಕೋಮಿನವನಿದ್ದ ಎಂದು ನೋಡುವ ಬದಲು, ಹುತಾತ್ಮರಾದರವೆಲ್ಲಾ ಭಾರತೀಯರು ಎನ್ನುವುದನ್ನು ಮೊದಲು ಅರಿತುಕೊಳ್ಳಬೇಕು ಎಂದು ಜಮೀರ್ ಬುದ್ದಿಮಾತು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+