Budget 2024: ಬಜೆಟ್ ಮೇಲೆ ಎಲ್ಲರ ಚಿತ್ತ: ಸಿಎಂ ಗಮನ ಸೆಳೆದ ಜನಪ್ರತಿನಿಧಿಗಳು- ಈ ಬಾರಿ ಚಿಕ್ಕಬಳ್ಳಾಪುರ ನಿರೀಕ್ಷೆ ಈಡೇರುವುದೇ?

ಚಿಕ್ಕಬಳ್ಳಾಪುರ ಫೆಬ್ರವರಿ 15: ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆಯ ಆಶಯದಂತೆ ಇಲ್ಲಿಯ ತನಕ ಇಲ್ಲಿಂದ ಆಯ್ಕೆಯಾಗಿ ಹೋದ ಎಲ್ಲಾ ಜನಪ್ರತಿನಿದಿಗಳು ತಮ್ಮ ಕ್ಷೇತ್ರವಾರು ಅಗತ್ಯ ಯೋಜನೆಗಳ ಪಟ್ಟಿಯನ್ನು ಸಿದ್ದಪಡಿಸಿ ಸರಕಾರದ ಗಮನಕ್ಕೆ ತರುವ ಮೂಲಕ ಒಂದಿಷ್ಟು ಹೊಸ ಹೊಸ ಯೋಜನೆಗಳ ಘೋಷಣೆಗೆ ಶ್ರಮ ವಹಿಸಿ ಬಂಪರ್ ಕೊಡುಗೆಗಳನ್ನು ನೀಡುವಲ್ಲಿ ಇದುವರೆಗೂ ಯಶಸ್ಸುಯಾಗಿದ್ದಾರೆ.

ಬಜೆಟ್ ಘೋಷಣೆಯಲ್ಲಿ ಜಿಲ್ಲೆಗೆ ಸಿಕ್ಕ ಹೊಸ ಯೋಜನೆಗಳಲ್ಲಿ ಕೆಲವು ಅನುಷ್ಠಾನ ಗೊಂಡರೆ, ಕೆಲವು ಆಮೆ ಗತಿಯಲ್ಲಿ ಸಾಗುತ್ತಿದ್ದೂ, ಇನ್ನು ಕೆಲ ಘೋಷಣೆಗಳು ಅನುದಾನದ ಕೊರತೆಯಿಂದ ಹಾಗೆ ಉಳಿದಿವೆ ಇದರ ನಡುವೆ ರಾಜ್ಯ ಸರಕಾರ ಬಜೆಟ್ ಮಂಡನೆಯಲ್ಲಿ ಮತ್ತಷ್ಟು ಅಭಿವೃದ್ಧಿಗೆ ಪೂರಕ ಎನಿಸುವ ಹೊಸ ಹೊಸ ಘೋಷಣೆಗಳ ನಿರೀಕ್ಷೆಯಲ್ಲಿ ಈ ಭಾಗದ ಜನ ಹಾಗೂ ಜನಪ್ರತಿನಿದಿಗಳು ಕಾಯುತ್ತಿದ್ದಾರೆ.

Everyones eyes on the budget: will the expectation of Chikkaballapur be fulfilled this time?

ಇದೆಲ್ಲವೂ ಈ ಹಿಂದಿಂನ ಬಜೆಟ್ ಗಳತ್ತ ಕಣ್ಣು ಹಾಯಿಸಿದಾಗ ತಿಳಿಯುವ ವಿಚಾರಗಳು, ಈ ಹಿಂದಿನ ಬಜೆಟ್ ಗಳ ಮೂಲಕ ಘೋಷಣೆಯಾದ ಕೆಲ ಯೋಜನೆಗಳನ್ನು ಸರಕಾರ ಮರೆತು ಹೋಗಿದ್ದರೆ, ಜನ ಅದರ ನಿರೀಕ್ಷೆಯನ್ನು ಬಿಟ್ಟಿದ್ದಾರೆ.

ಈ ಹಿಂದೆ ಮಂಡಿಸಲದ 2018-19 ರಿಂದ 2021-2022 ರ ಬಜೆಟ್ ಗಳಲ್ಲಿ ಈ ಭಾಗದ ಅಭಿವೃದ್ಧಿಗೆ ಚಿಕ್ಕಬಳ್ಳಾ ಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಉತ್ಪಾದನಾ ಉದ್ಯಮ ಸ್ಥಾಪನೆಗೆ ಶ್ರಮ, ಡಿಜಿಟಲ್ ಪಾಸ್ಟಿಮಿಯರ್, ಸ್ಕ್ಯಾನಿಂಗ್ ಸೆಂಟರ್ ಸ್ಥಾಪನೆ, ಕ್ರೀಡಾ ವಸತಿ ನಿಲಯ ಸ್ಥಾಪನೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ತುಮಕೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ 234 ಕೆರೆಗಳಿಗೆ ಬೆಂಗಳೂರು ನಗರದ ವೃಷಾಭವತಿ ಕಣಿವೆಯಿಂದ ದ್ವಿತೀಯ ಹಂತದಲ್ಲಿ ಸಂಸ್ಕರಿಸಿದ 30 ಎಂಎಲ್‌ ಡಿ ನೀರು ತುಂಬಿಸುವ ಯೋಜನೆ ಅನುಷ್ಠಾನ ಸೇರಿದಂತೆ ಹಲವು ಮಹತ್ವದ ಯೋಜನೆಗಳು ಈಡೇರಿಲ್ಲ. ದ್ರಾಕ್ಷಿಗೆ ಸೂಕ್ತ ಮಾರುಕಟ್ಟೆಗೆ ನಂದಿಯಲ್ಲಿ ವೈನ್ ತಯಾರಿಕ ಘಟಕ, ರೇಷ್ಮೆ ಕ್ಲಸ್ಟ‌ರ್ ಸ್ಥಾಪನೆ ಮತ್ತು ನಂದಿ ಅಭಿವೃದ್ಧಿ ಪ್ರಾಧಿಕಾರ ರಚನೆಯು ಹಳೇ ಘೋಷಣೆಗಳಾಗಿ ಬಿಟ್ಟಿವೆ.

ಹತ್ತು ಹಲವು ನಿರೀಕ್ಷೆಗಳು :-

ರಾಜ್ಯ ಮತ್ತು ಕೇಂದ್ರ ಸರಕಾರಗಳ ಪ್ರತಿ ಬಜೆಟ್ ಮಂಡನೆ ವೇಳೆ ಮೂಡುವ ನಿರೀಕ್ಷೆಗಳಂತೆ ಈ ಬಾರಿಯೂ ಶಾಶ್ವತ ನದಿ ನಾಲೆಗಳನ್ನು ಹೊಂದಿಲ್ಲದ ಚಿಕ್ಕಬಳ್ಳಾಪುರ ಜಿಲ್ಲೆಯ ಜನರಲ್ಲಿ ಭರ ಪೂರ ಕೊಡುಗೆಗಳ ಕುತೂಹಲವನ್ನು ಇಟ್ಟುಕೊಂಡಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಫೆ.16ರಂದು ಮಂಡಿಸುತ್ತಿರುವ ರಾಜ್ಯ ಬಜೆಟ್ ನಡುವೆ ಜಿಲ್ಲೆಗೆ ಪ್ರಸಕ್ತ ಸಾಲಿನ ಹೊಸದರಲ್ಲಿ ಸಿಗುವ ಕೊಡುಗೆಗಳ ನಿರೀಕ್ಷೆಯ ಬಗ್ಗೆ ಚರ್ಚೆಯಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಚಿಂತಾಮಣಿಯಲ್ಲಿ ಇಂಜಿನಿಯರಿಂಗ್ ಕಾಲೇಜು ನಿರ್ಮಾಣ, ಕೈಗಾರಿಕಾಭಿವೃದ್ಧಿಗೆ ವಿಶೇಷ ಅನುದಾನ, ಕ್ರೀಡಾಂಗಣಗಳ ಮೇಲ್ದರ್ಜೆಗೇರಿಸುವಿಕೆ, ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಮಾರುಕಟ್ಟೆಗಳ ಸ್ಥಾಪನೆ ಸೇರಿದಂತೆ ಹಲವು ಕೆಲಸಗಳ ಮಂಜೂರಾತಿಯ ಬಗ್ಗೆ ಸಿಎಂ ಗಮನ ಸೆಳೆದಿದ್ದಾರೆ.

ಜಿಲ್ಲೆಯ ಶಾಸಕರ ಪ್ರಮುಖ ಬೇಡಿಕೆಗಳೇನು?

ಚಿಕ್ಕಬಳ್ಳಾಪುರ ಶಾಸಕ ಪ್ರದೀಪ್ ಈಶ್ವರ್ ರವರು ಕ್ಷೇತ್ರದಲ್ಲಿನ ಅನಾಥ ಮಕ್ಕಳಿಗೆ ಆಶ್ರಯ, ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರೋತ್ಸಾಹದಾಯಕ ಕಾರ್ಯಕ್ರಮಗಳ ಜಾರಿ, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಬಾಗೇಪಲ್ಲಿ ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ಕೈಗಾರಿಕೆಗಳ ಸ್ಥಾಪನೆಗೆ ಹಾಗೂ ಬಾಕಿ ಉಳಿದ ಕಾಮಗರಿಗಳನ್ನು ಪೂರ್ಣಗೂಳಿಸುವ ಕಡೆ ಒಲವು ತೋರಿದ್ದಾರೆ ಜೊತೆಗೆ ಗೌರಿಬಿದನೂರು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಕ್ಷೇತ್ರದಲ್ಲಿ ಬಾಕಿ ಇರುವ ಯೋಜನೆಗಳ ಪೂರ್ಣಕ್ಕೆ ಅಗತ್ಯ ಅನುದಾನಕ್ಕೆ ಮನವಿ ಸಲ್ಲಿಸಿದ್ದಾರೆ ಎನ್ನುವುದು ತಿಳಿದು ಬಂದಿದೆ. ಉಳಿದಂತೆ ಜಿಲ್ಲೆಯ ಪ್ರವಾಸಿ ತಾಣಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತ್ಯೇಕ ನಂದಿ ಪ್ರಾಧಿಕಾರ ರಚನೆಗೆ ಒತ್ತು ಸಿಗಲಿ ಎಂಬ ಆಶಯ ಅವರದ್ದಾಗಿದೆ.

Everyones eyes on the budget: will the expectation of Chikkaballapur be fulfilled this time?

ಗುಡಿ ಕೈಗಾರಿಕೆ ಮತ್ತು ಬೃಹತ್ ಕೈಗಾರಿಕೆಗಳ ಸ್ಥಾಪನೆಗೆ ಸಿಗಲಿ ಒತ್ತು :-

ಸ್ಥಳೀಯವಾಗಿ ಕೃಷಿ, ರೇಷ್ಮೆ, ಹಾಲು ಸೇರಿ ವಿವಿಧ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಒದಗಿಸುವಿಕೆ, ನೀರಾವರಿ ಯೋಜನೆಗಳ ಇಂತ ಅನುಷ್ಠಾನದ ನಾನಾ ಬೇಡಿಕೆಗಳು ಈಡೇರಬೇಕಾಗಿವೆ. ಈಗಾಗಲೇ ಮಂಚೇನಹಳ್ಳಿ ಮತ್ತು ಚೇಳೂರು ತಾಲೂಕುಗಳನ್ನಾಗಿ ಘೋಷಣೆ ಮಾಡಲಾಗಿದೆ. ಆದರೆ, ತಾಲೂಕು ಮಟ್ಟದ ಹೊಸ ಆಡಳಿತ ವ್ಯವಸ್ಥೆ, ಆಡಳಿತ ಸೌಧ ಮತ್ತು ವಿವಿಧ ಇಲಾಖೆಯ ಕಚೇರಿಗಳ ಕಟ್ಟಡಗಳು ನಿರ್ಮಾಣ, ತಾಲೂಕುಗಳ ಅಭಿವೃದ್ಧಿಗೆ ವಿಶೇಷ ಅನುದಾನದ ನಿರೀಕ್ಷೆ ಇದೆ. ತಿಡ್ಲಘಟ್ಟ ತಾಲೂಕಿನ ಸಾದಲಿ ಹೋಬಳಿಯನ್ನು ಹೊಸ ತಾಲೂಕನ್ನಾಗಿ ಘೋಷಿಸಬೇಕೆಂಬ ಒತ್ತಾಯ ಕೇಳಿ ಬರುತ್ತಲೇ ಇದೆ.

ಎಚ್ ಎನ್ ವ್ಯಾಲಿ ನೀರು ಶುದ್ದೀಕರಣಕ್ಕೆ ಸಿಗಲಿ ಅಧ್ಯತೆ :- ಎಚ್.ಎನ್.ವ್ಯಾಲಿ ಯೋಜನೆಯ ಮೂಲಕ ಕೆರೆಗಳಿಗೆ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಪೂರೈಸಲಾಗುತ್ತಿದೆ. ಆದರೆ, ಮೂರನೇ ಹಂತದ ಶುದ್ದೀಕರಣ ಅಗತ್ಯವಿದೆ. ದಶಕದಿಂದಲೂ ಎತ್ತಿನಹೊಳೆ ಯೋಜನೆ ಕಾಮಗಾರಿ ಕುಂಠಿತಗೊಂಡಿದೆ. ಪ್ರಸ್ತುತ ಗ್ಯಾರಂಟಿ ಭರವಸೆಗಳ ಈಡೇರಿಕೆಗೆ ಆರ್ಥಿಕ ಸಂಪನ್ಮೂಲ ಕ್ರೋಡೀಕರಣಕ್ಕೆ ಹೆಣಗಾಡುತ್ತಿರುವ ಹಿನ್ನೆಲೆಯಲ್ಲಿ ಕಳೆದ ಸಾಲಿನಂತೆ ಈ ಬಾರಿಯೂ ಸರ್ಕಾರದಿಂದ ಹೆಚ್ಚಿನ ಅನುದಾನ ಮಂಜೂರಾತಿಗಿಂತಲೂ ಜಿಲ್ಲೆಗೆ ಸುಧಾರಾತ್ಮಕ ಯೋಜನೆಗಳನ್ನು ಘೋಷಿಸುವಿಕೆಗೆ ಸೀಮಿತವಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಒಟ್ಟಾರೆ ಪ್ರಮುಖ ಬೇಡಿಕೆಗಳು:-

• ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರವನ್ನು ಉಪ ನಗರವನ್ನಾಗಿ ಘೋಷಣೆ.

*ನಗರ, ಪಟ್ಟಣ ಪ್ರದೇಶಗಳ ಅಭಿವೃದ್ಧಿಗೆ ವಿಶೇಷ ಪ್ಯಾಕೇಜ್.

* ವೈನ್ ಯಾರ್ಡ್ ಸ್ಥಾಪನೆ.

* ಪ್ರವಾಸೋದ್ಯಮ ಅಭಿವೃದ್ಧಿ.

* ಚೇಳೂರು ಮತ್ತು ಮಂಚೇನಹಳ್ಳಿ ತಾಲೂಕು ಅಭಿವೃದ್ಧಿ.

• ಸಮಗ್ರ ಶಾಶ್ವತ ನೀರಾವರಿ ಯೋಜನೆ.

* ಕೈಗಾರಿಕಾ ವಲಯಗಳಿಗೆ ವಿಶೇಷ ಆದ್ಯತೆ.

* ಕೆರೆಗಳ ಅಭಿವೃದ್ಧಿ, ಅಂತರ್ಜಲ ಮಟ್ಟ ಸುಧಾರಣೆಗೆ ವಿಶೇಷ ಅನುದಾನ.

* ಸಾದಲಿ ಹೊಸ ತಾಲೂಕು ಘೋಷಣೆ.

ಖುಷಿ ಕೊಟ್ಟ ಬಜೆಟ್:-

ಈ ಹಿಂದಿನ ಕೆಲ ಬಜೆಟ್‌ ಮಂಡನೆಯಲ್ಲಿ ಮಾಡಲಾಗಿದ್ದ ಘೋಷಣೆಗಳು ಈಡೇರಿರುವುದು ಸಧ್ಯ ಸಮಾಧಾನಕರ ಸಂಗತಿ. ಈ ಹಿಂದೆj ಜಿಲ್ಲಾ ಕೇಂದ್ರಕ್ಕೆ 50 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್, 863 ಕೋಟಿ ವೆಚ್ಚದಲ್ಲಿ ಎಚ್.ಎನ್.ವ್ಯಾಲಿ ನೀರಾವರಿ ಯೋಜನೆ, ಮೆಡಿಕಲ್ ಕಾಲೇಜು ಅಭಿವೃದ್ಧಿ, ಚಿಂತಾಮಣಿಗೆ ಎಆರ್‌ಟಿಒ ಕಚೇರಿ ಸ್ಥಾಪನೆ, ಗೌರಿಬಿದನೂರು ತಾಲೂಕಿನ ಹೊಸೂರಿನ 200 ಎಕರೆ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ವಿಜ್ಞಾನ ಕೇಂದ್ರ ನಿರ್ಮಾಣ ಸೇರಿದಂತೆ ಹಲವು ಘೋಷಣೆಗಳು ಈಡೇರಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+