Get Updates
Get notified of breaking news, exclusive insights, and must-see stories!

ಚಿಕ್ಕಬಳ್ಳಾಪುರ: ಕೆ.ಸುಧಾಕರ್ ಭವಿಷ್ಯದ ಉತ್ತಮ ನಾಯಕ ಎಂದ ವಸತಿ ಸಚಿವ ಸೋಮಣ್ಣ

ಚಿಕ್ಕಬಳ್ಳಾಪುರ, ಜನವರಿ, 11: ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 15 ವರ್ಷ ಕಳೆದಿದೆ. ಸುಧಾಕರ್ ಶಾಸಕರಾಗಿ 10 ವರ್ಷದ ಅವಧಿಯಲ್ಲಿ ಜಿಲ್ಲೆ 50 ವರ್ಷಗಳ ಅಭಿವೃದ್ಧಿ ಕಂಡಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಕೊಂಡಾಡಿದರು.

ಮಕರ ಸಂಕ್ರಾಂತಿ ವಿಶೇಷ ಪುಟ

ಚಿಕ್ಕಬಳ್ಳಾಪುರ ಉತ್ಸವದ 4ನೇ ದಿನದ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಬರಡು ನಾಡು ಎಂಬ ಖ್ಯಾತಿಗೆ ಪಾತ್ರವಾಗಿದ್ದ ಚಿಕ್ಕಬಳ್ಳಾಪುರವನ್ನು ಮಲೆನಾಡಿಗೆ ಸಮನಾಗಿ ಮಾಡಿದ ಕೀರ್ತಿ ಸುಧಾಕರ್‌ ಅವರಿಗೆ ಸಲ್ಲುತ್ತದೆ. ಇಂತಹ ನಾಯಕನನ್ನು ಪಡೆದ ಚಿಕ್ಕಬಳ್ಳಾಪುರ ಜಿಲ್ಲೆಯ ಜನತೆ ಧನ್ಯರು ಎಂದು ಬಣ್ಣಿಸಿದರು. ಸುಧಾಕರ್ ಚಿಕ್ಕಬಳ್ಳಾಪುರಕ್ಕೆ ಮಾತ್ರ ಶಾಸಕರಾಗಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಜೊತೆಗೆ ಕೋಲಾರದ ಶಾಸಕರೂ ಆಗಿದ್ದಾರೆ. ಇವರು ಇತಿಹಾಸದಲ್ಲಿ ಉಳಿಯುವ ಶಾಸಕರಾಗಿದ್ದಾರೆ. ಸರ್.ಎಂ. ವಿಶ್ವೇಶ್ವರಯ್ಯ, ಸಿ.ಎನ್.ಆರ್. ರಾವ್, ಎಚ್. ನರಸಿಂಹಯ್ಯ ಅವರು ಈ ಜಿಲ್ಲೆಯಲ್ಲಿ ಜನಿಸಿ ಶಾಶ್ವತವಾಗಿ ಉಳಿದಿರುವ ಮಾದರಿಯಲ್ಲಿಯೇ ಸುಧಾಕರ್ ಹೆಸರು ಕೂಡ ಶಾಶ್ವತವಾಗಿ ಉಳಿಯುವ ಕೆಲಸ ಮಾಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

2023ರ ನಂತರ ಸುಧಾಕರ್ ಅವರು ಭವಿಷ್ಯದ ನಾಯಕರಾಗಿ ಹೊರಹೊಮ್ಮಲಿದ್ದಾರೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತನ್ನದೇ ದೃಷ್ಟಿಕೋನದ ಮೂಲಕ ಕೋವಿಡ್ ಸಂದರ್ಭದಲ್ಲಿ ಸಮರ್ಪಕವಾಗಿ ನಿಭಾಯಿಸಿದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಶಕ್ತಿ ನೀಡಿ, ರಾಜ್ಯದಲ್ಲಿಯೇ ಶಾಶ್ವತವಾಗಿ ಉಳಿಯುವ ಅಭಿವೃದ್ಧಿ ಕೆಲಸಗಳನ್ನು ಮಾಡಲಿದ್ದಾರೆ. ಸುಧಾಕರ್ ವ್ಯಕ್ತಿಯಲ್ಲ ಅವರೊಂದು ಶಕ್ತಿಯಾಗಿದ್ದಾರೆ. ಚಿಕ್ಕಬಳ್ಳಾಪುರದಲ್ಲಿ ನಡೆಯುತ್ತಿರುವುದು ಉತ್ಸವ ಅಲ್ಲ, ಬೃಹತ್ ಜಾತ್ರೆ. ರಾಜ್ಯದ 224 ಕ್ಷೇತ್ರಗಳಲ್ಲಿಯೂ ಸುಧಾಕರ್ ಬಂದು ತಮ್ಮದೇ ಆದ ಅಭಿವೃದ್ಧಿ ಬೀರಲಿದ್ದಾರೆ ಎಂದು ಭವಿಷ್ಯ ನುಡಿದರು.

 ರೈತರ ಬಾಳಿಗೆ ನೆರವಾಗಿದ್ದಾರೆ

ರೈತರ ಬಾಳಿಗೆ ನೆರವಾಗಿದ್ದಾರೆ

ಜನರ ಜೀವನ ಮಟ್ಟ ಸುಧಾರಿಸಿ, ಪ್ರಕೃತಿಯಿಂದ ಆಗಿರುವ ಅನಾಹುತವನ್ನು ತಪ್ಪಿಸಿದ್ದಾರೆ. ಪ್ರಕೃತಿಯನ್ನೇ ರೈತರ ಬಾಳಿಗೆ ತಂದುಕೊಡುವ ಕೆಲಸವನ್ನು ಸುಧಾಕರ್ ಮಾಡಿದ್ದಾರೆ. ಬಡವರಿಗೆ ಮನೆ, ನಿವೇಶನಗಳು, ವೈದ್ಯಕೀಯ, ಇಂಜಿನಿಯರಿಂಗ್ ಕಾಲೇಜುಗಳ ಅಭಿವೃದ್ಧಿ, ಬಡವನಲ್ಲಿಯೂ ಶಕ್ತಿ ಇದೆ ಎಂಬುದನ್ನು ಅವರು ತೋರಿಸಿಕೊಟ್ಟಿದ್ದಾರೆ. ಅಧಿಕಾರ ಸಾಮಾನ್ಯರಿಗೆ ಎಂಬುದನ್ನು ತೋರಿಸಿದ ಕೀರ್ತಿ ಸುಧಾಕರ್ ಅವರಿಗೆ ಸಲ್ಲುತ್ತದೆ. ಅವರಿಗೆ ಅಭಾರಿಯಾಗಿರಬೇಕು. ಇಂತಹವರು ಹತ್ತಾರು ವರ್ಷಗಳ ಕಾಲ ರಾಜಕೀಯದಲ್ಲಿ ಇರಬೇಕು ಎಂದು ಹಾರೈಸಿದರು.

 ಸುಧಾಕರ್‌ನನ್ನ ಹೊಗಳಿದ ವಿ. ಸೋಮಣ್ಣ

ಸುಧಾಕರ್‌ನನ್ನ ಹೊಗಳಿದ ವಿ. ಸೋಮಣ್ಣ

ಕೆಲಸಗಾರರಿಗೆ ಪಕ್ಷ, ಜಾತಿ ಇರಬಾರದು. ಇವರಿಗೆ ಐದಾರು ಜಿಲ್ಲೆ ನೀಡಿದರೂ ನಿಭಾಯಿಸುವ ಶಕ್ತಿ ಇದೆ. ಊಹೆಗೂ ನಿಲುಕದ ವಿಚಾರಗಳನ್ನು ಸಾಮಾನ್ಯರಿಗೆ ಅರ್ಥೈಸುವ ಕೆಲಸವನ್ನು ಮಾಡಿದ್ದಾರೆ. ಸುಧಾಕರ್‌ ಅವರ ದೂರದೃಷ್ಟಿಯ ಚಿಂತನೆಗೆ ಅಭಿನಂದನೆ. ಡಬಲ್ ಇಂಜಿನ್ ಸರ್ಕಾರ ಏನು ಮಾಡಿದೆ ಎಂದು ಕೇಳುವವರಿಗೆ ಉತ್ತರ ಚಿಕ್ಕಬಳ್ಳಾಪುರ ಉತ್ಸವದಲ್ಲಿ ದೊರೆಯಲಿದೆ ಎಂದು ಹೇಳಿದರು.

 ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ

ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ

ಮೆಟ್ರೋದಲ್ಲಿ ನಡೆದಿರುವ ಅವಘಡದ ಬಗ್ಗೆ ಈಗಾಗಲೇ ತನಿಖೆ ನಡೆಸಲಾಗುತ್ತಿದೆ. ವಿಷಯ ತಿಳಿಯುತ್ತಿದ್ದಂತೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿದ್ದಾರೆ. ತಾಂತ್ರಿಕವಾಗಿ ಏನು ತೊಂದರೆಯಾಗಿದೆ ಅನ್ನುವುದನ್ನು ನೋಡಿ ನಿರ್ಲಕ್ಷ್ಯವಹಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ.
ಮೆಟ್ರೋದಲ್ಲಿ ಈವರೆಗೆ ಅವಘಡ ಆಗಿರಲಿಲ್ಲ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿಗಳು ತನಿಖೆಗೆ ಆದೇಶ ಮಾಡಿದ್ದಾರೆ ಎಂದು ತಿಳಿಸಿದರು.

 ಆರೋಪಿಗಳ ವಿರುದ್ಧ ಸೂಕ್ತ ಕ್ರಮ

ಆರೋಪಿಗಳ ವಿರುದ್ಧ ಸೂಕ್ತ ಕ್ರಮ

ಅಬಕಾರಿ ಸಚಿವ ಗೋಪಾಲಯ್ಯ ಮಾತನಾಡಿ, ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಅವರು ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ನಿವೇಶನ ಹಂಚಿಕೆ ಸೇರಿದಂತೆ ಯಾರೂ ಮಾಡದ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಹೆತ್ತವರಿಗೆ ಒಳ್ಳೆಯ ಹೆಸರು ತರುವ ಕೆಲಸವನ್ನು ಮಾಡಿದ್ದಾರೆ ಎಂದರು. ಹಾಗೆಯೇ ಗೃಹ ಸಚಿವ ಆರಗ ಜ್ಞಾನೇಂದ್ರ ಮಾತನಾಡಿ, ಸ್ಯಾಂಟ್ರೋ ರವಿಯಂತಹ ವ್ಯಕ್ತಿಗಳನ್ನು ಬೇರು ಸಮೇತ ಕಿತ್ತೆಸೆಯಲಾಗುವುದು ಎಂದು ತಿಳಿಸಿದರು. ಈಗಾಗಲೇ ಆರೋಪಿಗೆ ಸಹಕರಿಸಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಅನ್ನು ಅಮಾನತು ಮಾಡಲಾಗಿದೆ. ಅಪರಾಧಿಗಳನ್ನು ಬಿಡಲ್ಲ, ಅವರನ್ನಯ ಬೇರು ಸಮೇತ ಕಿತ್ತು ಹಾಕುತ್ತೇವೆ. ಅಂತಹ ವ್ಯಕ್ತಿಗಳು ಓಡಾಡಲೇ ಬಾರದು ಎಂದರು.

 ಕೋವಿಡ್‌ನಿಂದ ಪಾರು ಮಾಡಿದ್ದಾರೆ

ಕೋವಿಡ್‌ನಿಂದ ಪಾರು ಮಾಡಿದ್ದಾರೆ

ಮಹಾಮಾರಿ ಕೊರೊನ ಎರಡನೇ ಅಲೆ ಸಂದರ್ಭದಲ್ಲಿ ನನ್ನನ್ನು ರಕ್ಷಣೆ ಮಾಡಿದವರು ಸುಧಾಕರ್ ಅವರು. ಇದಕ್ಕೆ ಅವರಿಗೆ ಅಬಾರಿಯಾಗಿದ್ದೇನೆ. ಕರ್ನಾಟಕವನ್ನು ಕೋವಿಡ್‌ನಿಂದ ಪಾರು ಮಾಡಿದ ವ್ಯಕ್ತಿ ಸುಧಾಕರ್‌ ಆಗಿದ್ದಾರೆ. ಮತ್ತು ನೀರಾವರಿ ಯೋಜನೆಗಳ ಅನುಷ್ಠಾನ ಸೇರಿದಂತೆ ಇವರ ಅಭಿವೃದ್ಧಿ ಅನುಕರಣೀಯವಾಗಿದೆ. ಸುಧಾಕರ್‌ ಚಿಂತನೆ, ಕಾರ್ಯಪ್ರವೃತ್ತಿ, ದಕ್ಷತೆ ಉತ್ಸವದಲ್ಲಿ ಮೇಳೈಸಿದೆ ಎಂದು ಬಣ್ಣಿಸಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+